Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಎರಡೇ ವಾರದಲ್ಲಿ ತೂಕ ಇಳಿಸಿ ಮೆಚ್ಚಿನ ಬಟ್ಟೆ ತೊಡಬಹುದು

ದೇಹದಲ್ಲಿ ಕೂತಿರುವ ಅನಗತ್ಯ ಕೊಬ್ಬನ್ನು ಎರಡೇ ವಾರದಲ್ಲಿ ಸ್ವಲ್ಪ ಮಟ್ಟಿಗಾದರೂ ಕರಗಿಸುವುದು ಸಾಧ್ಯವಿದೆ. ಅದು ಹೇಗೆಂದು ಮುಂದೆ ತಿಳಿಯಿರಿ.
ಎರಡು ವಾರದಲ್ಲಿ ಡ್ರೆಸ್ ಸೈಝ್ ಕಡಿಮೆ ಮಾಡುವ ಈ ಡಯಟ್ ಪಾಲಿಸಿ
1. ತೂಕ ಪರೀಕ್ಷೆ: ಮೊದಲು ನಿಮ್ಮ ತೂಕವನ್ನು ಪರೀಕ್ಷಿಸಿ, ದೇಹದ ಯಾವ ಭಾಗದಲ್ಲಿ ಹೆಚ್ಚು ಕೊಬ್ಬು ಸೇರಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳಿ. ಸೊಂಟ, ಹೊಟ್ಟೆ, ಹಿಂಭಾಗ, ತೋಳು, ಹೀಗೆ ಯಾವ ಕಡೆ ಹೆಚ್ಚಿದೆ ಎಂದು ಮೊದಲು ತಿಳಿದುಕೊಂಡರೆ ಕೊಬ್ಬು ಕರಗಿಸುವುದು ಸುಲಭ.
2. ಕೇವಲ ಪ್ರೊಟೀನ್ ಆಹಾರ: ಕರಿದ ಪದಾರ್ಥಗಳನ್ನು ತಿನ್ನುವ ಬದಲು ಕೇವಲ ಹಣ್ಣು, ತರಕಾರಿಗಳನ್ನಷ್ಟೇ ಸೇವಿಸಲು ಪ್ರಯತ್ನಿಸಿ. ಹಸಿವನ್ನು ನಿಯಂತ್ರಿಸಲು ಪ್ರೊಟೀನ್ ಹೆಚ್ಚಿರುವ ಆಹಾರ ಸೇವಿಸಿದರೆ ಸಾಕು.
3. ಸ್ವೀಟ್ ಗೆ ನೋ ಎನ್ನಿ: ಸ್ವೀಟ್, ಅನ್ನ, ಅಕ್ಕಿ ಹಿಟ್ಟು ಮತ್ತು ಇನ್ನಿತರ ಕ್ಯಾಲೊರಿ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಮಧ್ಯಾಹ್ನವೂ ಲಘು ಆಹಾರದ ಸೇವನೆಯಷ್ಟೇ ಸಾಕು.
4. ನಿಗದಿತ ಸಮಯಕ್ಕೆ ಆಹಾರ ಸೇವನೆ: ಉಟದ ಸಮಯವನ್ನು ಬದಲಾಯಿಸುವುದರಿಂದ ತೂಕ ಹೆಚ್ಚಳವಾಗುತ್ತದೆ. ಆದ್ದರಿಂದ ಬೆಳಗ್ಗಿನ ತಿಂಡಿ, ಊಟಕ್ಕೆಂದು ನಿಗದಿತ ಸಮಯವನ್ನು ಮೀಸಲಿಡಿ ಮತ್ತು ರಾತ್ರಿ ಮಲಗುವ 3-4 ಗಂಟೆಗಳ ಮುಂಚಿತವಾಗಿ ಊಟವನ್ನು ಮಾಡಿ ಮುಗಿಸಿರಬೇಕು.
5. ಬ್ರೇಕ್ ಫಾಸ್ಟ್ ಚೆನ್ನಾಗಿರಲಿ: ದಿನವಿಡೀ ಚೈತನ್ಯದಿಂದಿರಲು ಬ್ರೇಕ್ ಫಾಸ್ಟ್ ಗೆ ಒಳ್ಳೆಯ ಆಹಾರವನ್ನು ಸೇವಿಸಿ. ಕಡಿಮೆ ಕೊಬ್ಬಿನಂಶವಿರುವ ಮೊಸರು, ಚೀಸ್ ಮತ್ತು ಹಾಲು ಅಥವಾ ಹಣ್ಣಿನ ಜ್ಯೂಸ್ (ಡಯಟ್ ಗೆ ಉಪಯೋಗವಾಗುವಂತಿರಬೇಕು) ಉತ್ತಮ.
6. ಬಿಸಿ ನೀರಿನೊಂದಿಗೆ ನಿಂಬೆರಸ: ದೇಹದಲ್ಲಿರುವ ಹೆಚ್ಚು ಕ್ಯಾಲೊರಿ ಹೋಗಿಸಲು ಬಿಸಿನೀರಿನೊಂದಿಗೆ ನಿಂಬೆರಸ ಸೇವಿಸಿರಿ. ಬಿಸಿ ನೀರು ದೇಹದ ತೂಕವನ್ನು ಇಳಿಸಲು ಸಹಕಾರಿ. ಅದರಲ್ಲೂ ಹೊಟ್ಟೆ ಮತ್ತು ತೋಳಿನಲ್ಲಿನ ಬೊಜ್ಜನ್ನು ಇದು ಬೇಗನೆ ನಿವಾರಿಸುತ್ತದೆ.
7. ವ್ಯಾಯಾಮವೂ ಬೇಕು: ನೀವು ತೂಕ ಇಳಿಸಿಕೊಳ್ಳಲು ಪಣ ತೊಟ್ಟಿದ್ದೀರ ಎಂದಾದರೆ ವ್ಯಾಯಾಮ ತುಂಬಾ ಮುಖ್ಯ. ದಿನಕ್ಕೆ ಎರಡು ಬಾರಿ ನಡಿಗೆಯೊಂದಿಗೆ ಏರೋಬಿಕ್ಸ್ ಇದ್ದರೆ ಫಲಿತಾಂಶವನ್ನು ಬೇಗ ಫಲಿತಾಂಶ ಕಂಡುಕೊಳ್ಳಬಹುದು.
8. ಮದ್ಯ ಸೇವನೆ ತ್ಯಜಿಸಿ: ಮದ್ಯ ಸೇವನೆ ಮತ್ತು ಇನ್ನಿತರ ಕಾರ್ಬೊನೇಟೆಡ್ ಪಾನೀಯದ ಸೇವನೆಯನ್ನು ತ್ಯಜಿಸಬೇಕು. ಇದರ ಬದಲಾಗಿ ಆರೋಗ್ಯಕರ ಹಣ್ಣಿನ ಜ್ಯೂಸ್ ಸೇವನೆ ಮತ್ತು ಬಿಸಿ ನೀರಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಲಾಭ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications