Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಣ್ಣಗಾಗಲು ತಿಂಗಳಲ್ಲಿ ಒಮ್ಮೆ ಮಾಡಿದರೆ ಸಾಕು ಜಿ ಎಮ್ ಡಯೆಟ್

ಈ ರೀತಿಯ ಡಯೆಟ್ ನಿಂದ ಬೇಗನೆ ದೇಹದ ತೂಕ 3-4 ಕೆಜಿ ಕಡಿಮೆಯಾಗುವುದಲ್ಲದೆ, ಚಟುವಟಿಕೆಯಿಂದ ಇರಬಹುದಾಗಿದೆ.ಈ ರೀತಿಯ ಡಯೆಟ್ ವಾರದ ಡಯೆಟ್ ಆಗಿದ್ದು ಇದನ್ನು ಹಾಗೆ ಮುಂದುವರೆಸಬಾರದು. ಈ ಡಯೆಟ್ 7 ದಿನಗಳು ಮಾಡಬೇಕಾಗಿದ್ದು ಅದನ್ನು ತಿಂಗಳಿಗೆ ಒಮ್ಮೆ ಮಾಡಬಹುದಾಗಿದೆ.
*1ನೇ ದಿನ: ಮೊದಲ ದಿನದಲ್ಲಿ ಹಣ್ಣುಗಳನ್ನು ಬಿಟ್ಟು ಬೇರೆ ಏನನ್ನು ತಿನ್ನಬಾರದು. ಹಣ್ಣುಗಳಲ್ಲಿ ಬಾಳೆಹಣ್ಣನ್ನು ಬಿಟ್ಟು ಉಳಿದ ಹಣ್ಣುಗಳನ್ನು ಎಷ್ಟು ಬೇಕದರೂ ತಿನ್ನಬಹುದು. ಅದರಲ್ಲೂ ವಾಟರ್ ಮೆಲನ್ (ಕಲ್ಲಂಗಡಿ)ನಲ್ಲಿ ಅಧಿಕ ನೀರಿನಂಶವಿರುವುದರಿಂದ ಇದು ದೇಹಕ್ಕೆ ಬೇಕಾದ ನೀರಿನಂಶವನ್ನು ಪೂರೈಸುತ್ತದೆ.
*2ನೆ ದಿನ: ಎರಡನೆ ದಿನ ನಿಮಗೆ ಇಷ್ಟವಾದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬಹುದು, ಆದರೆ ಬೆಳಗಿನ ಆಹಾರದಲ್ಲಿ ಒಂದು ಆಲೂಗೆಡ್ಡೆಯನ್ನು ಸೇವಿಸಬೇಕು. ಏಕೆಂದರೆ ಇದು ದೇಹಕ್ಕೆ ಬೇಕಾದ ಕಾರ್ಬೋಹೈಡ್ರೇಟ್ ಅಂಶವನ್ನು ಪೂರೈಸುತ್ತದೆ. ಈ ದಿನ ಸಹ ಬಾಳೆಹಣ್ಣು ತಿನ್ನಬಾರದು.
*3ನೇ ದಿನ:3ನೇ ದಿನದಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನಂಶ ಕರಗಲು ಪ್ರಾರಂಭಿಸುತ್ತದೆ. ಈ ದಿನ ನಾರಿನಂಶ ಅಧಿಕವಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಈ ದಿನ ಆಲೂಗೆಡ್ಡೆ ತಿನ್ನಬಾರದು.
*4ನೇ ದಿನ : 4ನೇ ದಿನದಲ್ಲಿ ಬಾಳೆಹಣ್ಣಿನ ದಿನ! 3 ಲೋಟ ಹಾಲು ಮತ್ತು ಬಾಳೆಹಣ್ಣನ್ನು ಎಷ್ಟು ಬೇಕಾದರೂ ಸೇವಿಸಬಹುದು. ಈ ಬಾಳೆಹಣ್ಣು ಸೇವನೆ ದೇಹಕ್ಕೆ ಅಗತ್ಯವಾದ ನ್ಯೂಟ್ರಿಷಿಯನ್ ಅನ್ನು ಪೂರೈಸುತ್ತದೆ.
*5ನೇ ದಿನ: ನಾಲ್ಕು ದಿನದ ಬಳಿಕ ನೀವು ಮಾಂಸವನ್ನು ತಿನ್ನಬಹುದಾಗಿದೆ. ಆದರೆ ಇದು ತಿನ್ನುವ ಮೊದಲು 5 ಹಣ್ಣಾದ ಟೊಮೆಟೊವನ್ನು ಬೇಯಸದೆ ತಿಂದರೆ ಒಳ್ಳೆಯದು. ನಂತರ ಅದನ್ನು ಚಿಕ್ಕನ್ ಜೊತೆ ತಿನ್ನಬಹುದು, ಆದರೆ ಚಿಕ್ಕನ್ ಅನ್ನು ಮಿತಿಯಲ್ಲಿ ತಿನ್ನಬೇಕು.
*6ನೇ ದಿನ: 6ನೇ ದಿನವು ಚಿಕ್ಕನ್ ದಿನವಾಗಿದೆ. ಚಿಕ್ಕನ್ ಅನ್ನು ತರಕಾರಿಯ ಜೊತೆ ಸೇವಿಸಬೇಕು. ಆದರೆ ಚಿಕ್ಕನ್ ತಯಾರಿಸುವಾಗ ಒಂದು ಚಮಚಕ್ಕಿಂತ ಅಧಿಕ ಎಣ್ಣೆ ಹಾಕಬಾರದು.
*7ನೇ ದಿನ: 7ನೇ ದಿನದ ಆಹಾರವನ್ನು ನಿಮ್ಮ ಆಹಾರ ಪದ್ಧತಿಯಂತೆ ಅಂದರೆ ಅನ್ನ, ರೊಟ್ಟಿ ಚಿಕ್ಕನ್ ಜೊತೆ ತಿನ್ನಬಹುದು. ಆದರೆ ಆಹಾರದಲ್ಲಿ ಅಧಿಕ ನಾರಿನಂಶವಿರುವ ಪದಾರ್ಥ ಅಂದರೆ ಬೀನ್ಸ್, ಕೆಂಪಕ್ಕಿಯ ಅನ್ನವನ್ನು ಸೇವಿಸಬೇಕು.
ಈ ಡಯೆಟ್ ಬೇಗನೆ ತೂಕವನ್ನು ಕಳೆದುಕೊಳ್ಳಲು ಸಹಾಯಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
