Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಭಾರತೀಯ ಡಯೆಟ್ ನಿಂದ ತೆಳ್ಳಗಿನ ಮೈಕಟ್ಟು

ಹರಿಬರಿಯಿಂದ ಓಡುತ್ತಿರುವ ಜನರಿಗೆ ಫಾಸ್ಟ್ ಪುಡ್ ತುಂಬಾ ಪ್ರಿಯವಾಗಿ ಬಿಟ್ಟಿದೆ. ಮ್ಯಾಗಿ, ನೂಡಲ್ಸ್ ಎಂದು ಬೆಳಗಿನ ತಿಂಡಿಗೆ, ಅಲ್ಲದೆ ಫೀಜಾ, ಬರ್ಗರ್ ಇಂತಹವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದೆ ಹೆಮ್ಮೆಯ ವಿಷಯವಾಗಿ ಬಿಟ್ಟಿದೆ.
ಇಂತಹ ಇಂತಹ ಆಹಾರಕ್ರಮ ದೇಹದಲ್ಲಿ ಬೊಜ್ಜುವನ್ನು ಹೆಚ್ಚು ಮಾಡುತ್ತೆ, ಅದನ್ನು ತಡೆಲು ನಂತರ ಡಯೆಟ್ ಬೇರೆ. ಆದರೆ ಭಾರತೀಯ ಆಹಾರ ಪ್ರದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಅಗ್ಯತವಾದ ಪೋಷಕಾಂಶದ ಜೊತೆಗೆ ದೇಹದ ತೂಕವನ್ನು ಮಿತವಾಗಿ ಇಡಬಹುದಾಗಿದೆ.
ದೇಹದಲ್ಲಿರುವ ಬೊಜ್ಜನ್ನು ಭಾರತಿಯ ಆಹಾರಕ್ರಮಗಳನ್ನು ಪಾಲಿಸಿ ಕಡಿಮೆ ಮಾಡಿಮೆ ಮಾಡಿ ಕೊಳ್ಳಬಹುದಾಗಿದೆ. ತೆಳ್ಳಗಿನ ಮೈಮಾಟ ಬೇಕೆ ಹಾಗಾದರೆ ಈ ಕೆಳಗಿನ ಭಾರತೀಯ ಆಹಾರಕ್ರಮವನ್ನು ಪಾಲಿಸಬಹುದಾಗಿದೆ.
1. ತೂಕವನ್ನು ಕಡಿಮೆ ಮಾಡಬೇಕೆಂದರೆ ಕಾರ್ಬೋಹೈಡ್ರೇಟ್ ಇಲ್ಲದ ಆಹಾರವನ್ನು ಸೇವಿಸಿ ಎಂಬುದು ಡಯೆಟ್ ನ ಒಂದು ಮುಖ್ಯ ಅಂಶಗಳಲ್ಲಿ ಒಂದು. ಭಾರತದ ಪ್ರಮುಖ ಆಹಾರಗಳಾದ ಗೋಧಿ, ದಾಲಿಯಾ, ಕೆಂಪಕ್ಕಿ ಮತ್ತು ಕೆಲ ಧಾನ್ಯಗಳಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಹೆಚ್ಚು ಇರುವುದರ ಜೊತೆ ಅಧಿಕ ನಾರಿನಂಶ ಕೂಡ ಇರುತ್ತದೆ.ಇದನ್ನು ಸೇವಿಸಿದರೆ ಇದು ದೇಹದ ತೂಕ ಕಡಿಮೆಯಾಗಲು ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ತುಂಬಾ ಸಹಾಯಕಾರಿಯಾಗಿದೆ.
2. ಅಧಿಕ ಫ್ರೋಟೀನ್ ಅಂಶದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದಾಗಿದೆ. ಏಕೆಂದರೆ ಕೆಲವು ತರಕಾರಿಳಾದ ರಾಜ್ಮ ಅಥವಾ ಕಿಡ್ನಿ ಬೀನ್ಸ್, ತೊಗರಿಬೇಳೆ, ಉದ್ದಿನ ಬೇಳೆ ಇವುಗಳಲ್ಲಿ ಪ್ರೋಟೀನ್ ಅಂಶದ ಜೊತೆ ನಾರಿನ ಅಂಶ ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಇವುಗಳನ್ನು ಸೇವಿಸುವುದರಿಂದ ತೂಕ ಕಡಿಮೆ ಆಗುತ್ತದೆ. ಅಲ್ಲದೆ ನಾರಿನಂಸವಿರುವ ತರಕಾರಿ ಮತ್ತು ಸೊಪ್ಪುಗಳನ್ನು ಪ್ರತಿ ನಿತ್ಯ ಸೇವಿಸುವುದು ದೇಹದ ತೂಕವನ್ನು ಮಿತವಾಗಿ ಇಡಲು ತುಂಬಾ ಒಳ್ಳೆಯದು.
3. ಕೆಲವು ಹಣ್ಣುಗಳ ಸೇವನೆಯಿಂದ ದಪ್ಪಗಾಗುವುದು, ಉದಾಹರಣೆಗೆ ಮಾವಿನ ಹಣ್ಣು, ಬಾಳೆಹಣ್ಣು ಆದ್ದರಿಂದ ಅದನ್ನು ಹೆಚ್ಚು ತಿನ್ನದಿರುವುದು ಒಳ್ಳೆಯದು.
4. ಅಡುಗೆಯನ್ನು ತಯಾರಿಸುವಾಗ ಅಧಿಕ ಎಣ್ಣೆ ಮತ್ತು ಖಾರ ಹಾಕದೆ ಮಾಡುವುದು ಒಳ್ಳೆಯದು.
5. ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವುದಾದರೆ ಪಾಯಸ , ಹೋಳಿಗೆ ಹೀಗೆ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು.
ಹೀಗೆ ನಮ್ಮ ದಿನ ನಿತ್ಯದ ಅಡುಗೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಸುಂದರ ಮತ್ತು ಸದೃಢವಾದ ಮೈಕಟ್ಟನ್ನು ಹೊಂದಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
