Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾರಿನ ಪದಾರ್ಥ ತಿನ್ನಿರಿ, ಬಳುಕುವ ಬಳ್ಳಿಯಾಗಿರಿ

ಆದರೂ, ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಯಾವುದೂ ಅಸಾಧ್ಯವಲ್ಲ. ಬೆಳಗಿನ ಜಾವ ವ್ಯಾಯಾಮ ಮಾಡಿರಿ, ಆಹಾರಕ್ರಮ ಕಟ್ಟುನಿಟ್ಟಾಗಿರಲಿ, ದೇಹವನ್ನು ಅಚ್ಚುಕಟ್ಟಾಗಿಟ್ಟುಕೊಳ್ಳಲು ಅಗತ್ಯವಾಗಿರುವ ಹಣ್ಣುಹಂಪಲುಗಳನ್ನು ಸಾಕಷ್ಟು ತಿನ್ನಿರಿ.
ಅಂತಹ ಆಹಾರಗಳಲ್ಲಿ ನಾರಿನಂಶ ಇರುವ ತಿನಿಸುಗಳು ನಿತ್ಯದ ಊಟದಲ್ಲಿ ಹೆಚ್ಚಾಗಿರಲಿ. ಇವುಗಳಿಂದ ದೇಹಕ್ಕೆ ಶಕ್ತಿ ಬರುವುದು ಮಾತ್ರವಲ್ಲ, ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಮಲಬದ್ಧತೆ, ರಕ್ತದೊತ್ತಡ, ಮಧುಮೇಹ, ಹೃದ್ರೋಗದ ತೊಂದರೆಯಿದ್ದವರು ಸಹ ಈ ಆಹಾರಕ್ರಮ ಪಾಲಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಈ ಆಹಾರಕ್ರಮದಲ್ಲಿ ದಿನಕ್ಕೆ 30-40ಗ್ರಾಂ ನಾರಿನಂಶ ಆಹಾರದಲ್ಲಿ ಸೇರುವಂತಹ ಅಹಾರವನ್ನು ಸೇವಿಸಬೇಕಾಗುತ್ತದೆ.
1. ಬೆಳಗ್ಗೆ ಎದ್ದು ನಾರಿನಂಶವಿರುವ ಆಹಾರ(ನೆನೆಸಿಟ್ಟ ಕಾಳುಗಳು)ವನ್ನು ಸೇವಿಸಬೇಕು. ಬೆಳಗ್ಗೆ ಇದರ ಜೊತೆ ಕುದಿಸಿದ ಒಂದು ಲೋಟ ಹಾಲನ್ನು ಸಹ ಕುಡಿಯಬೇಕು. ಮಧ್ಯಾಹ್ನದ ಊಟಕ್ಕೆ ತರಕಾರಿ ಸಲಾಡ್ ಸಹ ಜೊತೆಯಲ್ಲಿ ಇರಲಿ. ರಾತ್ರಿ ಊಟಕ್ಕೆ ಬೇಯಿಸಿದ ಆಲುಗೆಡ್ಡೆ, ಹಣ್ಣುಗಳು ಮತ್ತು ಹಾಲನ್ನು ಸೇವಿಸಿ. ಈ ರೀತಿ ಆಹಾರಕ್ರಮವನ್ನು ಪಾಲಿಸುವಾಗ ಟೀ ಮತ್ತು ಕಾಫಿ ಕುಡಿಯಬಾರದು.
2. ಆಹಾರಕ್ಕೆ ಪಾಲಿಷ್ ಅಕ್ಕಿಯ ಅನ್ನದ ಬದಲು ಕೆಂಪಕ್ಕಿಯ ಅನ್ನವನ್ನು ಸೇವಿಸಿ. ನಾರಿನಂಶವಿರುವ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ತೆಗೆದುಕೊಳ್ಳಿ. ಈ ರೀತಿಯ ನಾರಿನಂಶದ ಆಹಾರವನ್ನು ಸೇವಿಸುವಾಗ ಗಮನಿಸಬೇಕದ ಅಂಶವೆಂದರೆ ಪ್ರತಿದಿನ 1000 ಕ್ಯಾಲೋರಿಗಿಂತ ಅಧಿಕ ಆಹಾರವನ್ನು ಸೇವಿಸಬಾರದು. ಈ ರೀತಿಯ ಆಹಾರಕ್ರಮವನ್ನು ಪಾಲಿಸುವಾಗ ಸಾಕಷ್ಟು ನೀರು ಕುಡಿಯಬೇಕು.
ಅಧಿಕ ನಾರಿನಂಶವಿರುವ ಆಹಾರಗಳೆಂದರೆ:
ಹಣ್ಣುಗಳು : ಸೇಬು, ದ್ರಾಕ್ಷಿ, ಬಾಳೆಹಣ್ಣು, ಒಣಹಣ್ಣುಗಳು, ಬೆಣ್ಣೆಹಣ್ಣು(ಅವಕಾಡೊ)
ತರಕಾರಿಗಳು : ಕ್ಯಾರೆಟ್, ಎಲ್ಲಾ ರೀತಿಯ ಸೊಪ್ಪುಗಳು, ಜೋಳ, ಬೀನ್ಸ್, ಆಲುಗೆಡ್ಡೆ, ಮೂಲಂಗಿ.
ದವಸ ಧಾನ್ಯಗಳು : ಓಟ್ಸ್, ಕೆಂಪಕ್ಕಿ ಇವುಗಳಲ್ಲಿ ನಾರಿನಂಶ ಅಧಿಕವಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
