Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಝೀರೊ ಫಿಗರ್ ಗಳೆಲ್ಲಾ ಈ ವ್ಯಾಯಾಮ ಮಾಡ್ತಾರಂತೆ

ಮುಖ ಮತ್ತು ಕುತ್ತಿಗೆಯಲ್ಲಿ ತುಂಬಿಕೊಂಡ ಬೊಜ್ಜು ನಿಮ್ಮನ್ನು ಸ್ವಲ್ಪ ದಪ್ಪಗೆ ಕಾಣುವಂತೆ ಮಾಡುತ್ತೆ. ಆದರೆ ಕುತ್ತಿಗೆಯಲ್ಲಿನ ಎಲುಬು ಕಾಣುವಂತೆ ಮಾಡಿದರೆ ನಿಮ್ಮ ದೇಹವೂ ಸ್ಲಿಮ್ ಆಗುತ್ತೆ. ಕುತ್ತಿಗೆಯ ಎಲುಬು ಕಾಣಲು ಮತ್ತು ದೇಹದ ಬೊಜ್ಜು ಕರಗಲು ಸಹಾಯ ಮಾಡುವ ಕೆಲವು ವ್ಯಾಯಾಮವನ್ನು ಇಲ್ಲಿ ನೀಡಲಾಗಿದೆ.
ಬೊಜ್ಜು ಕರಗಿಸುವ ಕೆಲವು ವ್ಯಾಯಾಮ:
1. ನಿಮ್ಮ ಕುತ್ತಿಗೆ ಅಥವಾ ಭುಜದ ಎಲುಬು ಕಾಣುವಂತೆ ಮಾಡುವುದರಲ್ಲೇ ದೇಹದ ಬೊಜ್ಜು ಕಡಿಮೆಯಾಗುವ ಸಂಕೇತ ಅಡಗಿದೆ. ಇದಕ್ಕಾಗಿ ಪುಶ್ ಅಪ್ ಮತ್ತು ಡಂಬಲ್ ವ್ಯಾಯಾಮ ಮಾಡಿದರೆ ಮುಖದಲ್ಲಿ, ಭುಜದ ಮೇಲ್ಭಾಗದಲ್ಲಿ, ಕುತ್ತಿಗೆ ಭಾಗದಲ್ಲಿ ಬೊಜ್ಜು ಕರಗಲು ಸುಲಭವಾಗುತ್ತದೆ.
2. ಪ್ರತಿನಿತ್ಯ 30-45 ನಿಮಿಷ ಜಾಗಿಂಗ್ ಅಥವಾ ಓಡಿದರೂ ಬೊಜ್ಜಿನೊಂದಿಗೆ, ದೇಹದ ಮೇಲ್ಭಾಗವೂ ಕರಗುತ್ತದೆ.
3. ಮಲಗಿಕೊಂಡು ನಿಮ್ಮ ಕೈಗಳನ್ನು ತಲೆಯ ಹಿಂಭಾಗಕ್ಕೆ ಕಟ್ಟಿ, ಮಂಡಿಯನ್ನು ಮಡಚಿ, ನಿಮ್ಮ ದೇಹದ ಮುಂಭಾಗ ಮಂಡಿಗೆ ತಾಗುವಂತೆ ಮಾಡಿ ಈ ಭಂಗಿಯಲ್ಲಿ 8-10 ಸೆಕೆಂಡ್ ಇರಬೇಕು. ಮತ್ತೆ ನಿಧಾನವಾಗಿ ಮಲಗಿಕೊಂಡು ರಿಲ್ಯಾಕ್ಸ್ ಆದ ನಂತರ 10 ಬಾರಿ ಹೀಗೆ ಮಾಡಬೇಕು. ಈ ವ್ಯಾಯಾಮವನ್ನು ನಿರಂತವಾಗಿ ಮಾಡಿದರೆ ಬೊಜ್ಜು ಕರಗಿಸುವ ನಿಮ್ಮ ಉದ್ದೇಶ ಕೈಗೂಡುತ್ತದೆ.
4. ಸ್ವಿಮ್ಮಿಂಗ್ ಮಾಡುವುದು ಕೂಡ ಕುತ್ತಿಗೆಯ ಎಲುಬು ಕಾಣಿಸಿಕೊಳ್ಳುವಂತೆ ಮಾಡುವ ಸುಲಭ ವ್ಯಾಯಾಮ. ದಿನನಿತ್ಯ ಸ್ವಿಮ್ ಮಾಡಿದರೆ ಎದೆಯ ಎಲುಬೂ ಬಾಗುವಂತೆ ಮಾಡಿ ಕೊಬ್ಬು ಕರಗುತ್ತದೆ.
5. ಭುಜಗಳನ್ನು ಮೇಲಕ್ಕೆ ಎತ್ತಿ 4-5 ಸೆಕೆಂಡ್ ಹಾಗೆಯೇ ಇರಿಸಬೇಕು. ಮಧ್ಯೆ ಮಧ್ಯೆ ವಿಶ್ರಮಿಸಿ 10 ಬಾರಿ ಹೀಗೆ ಮಾಡಿದರೆ ಕ್ರಮೇಣ ಬೊಜ್ಜು ಕರಗುತ್ತದೆ.
6. ಎರಡೂ ಕೈಗಳನ್ನು ಹಿಂದಕ್ಕೆ ಹಾಕಿ ದೇಹದ ಮುಂಭಾಗವನ್ನು ಬಾಗಿಸಬೇಕು. ಇದೇ ಭಂಗಿಯಲ್ಲಿ 5-8 ಸೆಕೆಂಡ್ ಇದ್ದು, 10-15 ಬಾರಿ ಮಾಡಿದರೆ ಬೊಜ್ಜು ಕಡಿಮೆಯಾಗುತ್ತದೆ.
7. ನೇರವಾಗಿ ನಿಂತು ಡಂಬಲ್ಸ್ ಹಿಡಿದು ಒಂದೊಂದು ಕೈಗಳಿಂದಲೂ 5 ಬಾರಿ ಮೇಲಕ್ಕೆ ಎತ್ತಬೇಕು. ಆದರೆ ಈ ವ್ಯಾಯಾಮ ಮಾಡುವಾಗ ಜಾಗ್ರತೆಯಿಂದಿರಬೇಕು. ಪ್ರಾರಂಭದಲ್ಲಿ 4-5 ಬಾರಿ ಮಾಡಿ ನಂತರ 10 ಬಾರಿಗೆ ಏರಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಎದೆ ನೋವು ಕಾಣಿಸಿಕೊಳ್ಳಬಹುದು.
8. ನಿಮ್ಮ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳಿರಲಿ. ಎಣ್ಣೆ ಮತ್ತು ಜಂಕ್ ಪದಾರ್ಥದ ಸೇವನೆ ಕಡಿಮೆ ಮಾಡಿ ದಿನಕ್ಕೆ 8-10 ಲೋಟ ನೀರು ಕುಡಿದರೆ ದೇಹವೂ ಆರೋಗ್ಯಕರವಾಗಿರುತ್ತೆ, ಬೊಜ್ಜೂ ಸೇರಿಕೊಳ್ಳುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
