Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಇದ್ದಕ್ಕಿದ್ದಂತೆ ತೂಕ ಇಳಿದರೆ ಖುಷಿ ಪಡಬೇಡಿ..

ಇದ್ದಕ್ಕಿದ್ದಂತೆ ತೂಕ ಇಳಿದು ಹೋದರೆ ಏನು ಕಾರಣ?
1. ಹಾರ್ಮೋನಿನ ಸಮಸ್ಯೆ: ಹಾರ್ಮೋನಿನಲ್ಲಿ ಏರುಪೇರಾಗುವುದು ದೇಹ ಕೃಶವಾಗುವುದಕ್ಕೆ ಕಾರಣ. ದೇಹದ ಕಾರ್ಯನಿರ್ವಹಣೆ ಮಾಡುವ ಹಾರ್ಮೋನಿನಲ್ಲಿ ಏರಿಳಿಕೆಯಾದರೆ ದೇಹದಲ್ಲಿರುವ ಕ್ಯಾಲೊರಿ ಅತಿಯಾಗಿ ಕರಗಿಹೋಗಿ ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳಬಹುದು.
2. ಹೃದಯ, ಕಿಡ್ನಿ, ಶ್ವಾಸಕೋಶದ ಸಮಸ್ಯೆ: ಹೃದಯ ಮತ್ತು ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ತೂಕ ಕುಗ್ಗಿಹೋಗುತ್ತದೆ. ಇದರಿಂದ ದೇಹಕ್ಕೆ ಸಮರ್ಥವಾಗಿ ಕೆಲಸ ನಿರ್ವಹಿಸಲು ಅವಶ್ಯಕವಾದ ಶಕ್ತಿ ಪೂರೈಸಲು ಸಾಧ್ಯವಾಗದೆ ಇದ್ದಕ್ಕಿದ್ದಂತೆ ತೂಕ ಕಡಿಮೆಗೊಂಡು ವಾಕಳಿಕೆ, ವಾಂತಿ, ಮತ್ತು ಪ್ರೊಟೀನ್ ಕಡಿಮೆಯಾಗಿ ದೇಹ ಸಣ್ಣಗಾಗಲು ಆರಂಭವಾಗುತ್ತದೆ.
3.ಸೋಂಕು: ದೇಹದ ಒಳಗೆ ಸೋಂಕು ಉಂಟಾದರೆ ಅದನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಕೆಲವು ಫಂಗಸ್ ಸೋಂಕು ತಗುಲಿದರೆ ದೇಹದ ರೋಗ ನಿರೋಧಕ ಶಕ್ತಿಯನ್ನೂ ಅತಿಯಾಗಿ ಕುಂದಿಸುತ್ತದೆ. ಇದು ದೇಹದಲ್ಲಿರುವ ಹೆಚ್ಚು ಕ್ಯಾಲೊರಿ ಕರಗುವಂತೆ ಮಾಡಿ ಇದ್ದಕ್ಕಿದ್ದಂತೆ ದೇಹ ಸಪೂರಗೊಳ್ಳುವಂತೆ ಮಾಡುತ್ತದೆ. ಜೀರ್ಣಕ್ರಿಯೆಗೆ ಸಮಸ್ಯೆಯೇ ಇದಕ್ಕೆ ಮೂಲ ಕಾರಣವಾಗಿರುತ್ತದೆ.
4. ಕ್ಯಾನ್ಸರ್: ಕ್ಯಾನ್ಸರ್ ಬರುವ ಮೊದಲ ಸೂಚನೆಯೇ ತೂಕ ಇದ್ದಕ್ಕಿದ್ದಂತೆ ಇಳಿಮುಖವಾಗುವುದು. ಕ್ಯಾನ್ಸರ್ ಗಡ್ಡೆ ದೇಹದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ದೇಹದ ಶಕ್ತಿಯನ್ನೂ ತೆಗೆದುಕೊಳ್ಳುತ್ತದೆ. ಈ ಗಡ್ಡೆ ಹೆಚ್ಚಾಗುತ್ತಿದ್ದಂತೆ ದೇಹವೂ ಕೃಶಗೊಳ್ಳುತ್ತಾ ಸಾಗುತ್ತದೆ.
ನೀವೂ ಕೂಡ ಅಸ್ವಾಭಾವಿಕವಾಗಿ ತೂಕ ಕಳೆದುಕೊಂಡಿದ್ದರೆ, ನಿಮ್ಮ ತೂಕದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಕಾಣಿಸಿಕೊಂಡರೆ ವೈದ್ಯರನ್ನು ತಕ್ಷಣವೇ ಕಂಡು ಸಮಸ್ಯೆಯ ಮೂಲವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
