Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ದುಡಿಯುವ ಮಹಿಳೆಯರೆ ನಿಮ್ಮ ಡಯಟ್ ಹೀಗಿರಲಿ

ಒಳ್ಳೆಯ ಪೋಷಕಾಂಶಗಳ ಕೊರೆತೆಯಿಂದ ಮಲಬದ್ಧತೆ, ಅಜೀರ್ಣ, ಅಲರ್ಜಿ, ತಲೆನೋವು, ಮುಟ್ಟುವಿನ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಕ್ರಮಬದ್ಧವಾದ ಆಹಾರ ಪದ್ಧತಿಯು ಮಹಿಳೆಯರನ್ನು ಆರೋಗ್ಯವಂತರಾಗಿ, ಶಕ್ತಿವಂತರಾಗಿ ಇರುವಂತೆ ಮಾಡುತ್ತದೆ. ಒಳ್ಳೆಯ ಆಹಾರ ಕ್ರಮದಿಂದ ಚರ್ಮದಲ್ಲಿ ಹೊಳಪು ಬರುತ್ತದೆ, ಕೂದಲೂ ಆರೋಗ್ಯದಿಂದ ಕೂಡಿರುತ್ತದೆ.
ಮಹಿಳೆಯರು ಪೌಷ್ಠಿಕ ಆಹಾರಕ್ಕಾಗಿ ಪಾಲಿಸಬೇಕಾದ ಕ್ರಮಗಳು
1 ಬೆಳಿಗ್ಗೆ ಒಂದು ಲೋಟ ಕಲ್ಲಂಗಡಿ ಅಥವಾ ಬಟರ್ ಫ್ರೂಟ್ (ಬೆಣ್ಣೆ ಹಣ್ಣು) ಹೀಗೆ ಹಣ್ಣುಗಳ ಜ್ಯೂಸ್ ಕುಡಿಯುವದರೊಂದಿಗೆ ನಿಮ್ಮ ದಿನಚರಿ ಆರಂಭಿಸಿ. ಫ್ರೂಟ್ ಸಲಾಡ್ ಹೀಗೆ ಹಣ್ಣಿನ ಅಂಶಗಳನ್ನು ಬ್ರೇಕ್ ಫಾಸ್ಟ್ ಆಗಿ ತೆಗೆದು ಕೊಳ್ಳಿ.
2 ಹಗುರವಾದ ಆಹಾರಗಳ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗಿದ್ದು ನಿಮ್ಮನ್ನು ಉಲ್ಲಾಸಭರಿತರಾಗಿ ಇಡುತ್ತದೆ. ಪ್ರತಿನಿತ್ಯ ಬೆಳಿಗ್ಗೆ ತೆಳುವಾದ ಒಂದು ಲೋಟ ಹಾಲನ್ನು ಬೇಕಾದರೂ ಸೇವಿಸಬಹುದು.
3 ನಂತರ ಟೀ ಸಮಯದಲ್ಲಿ ಒಣ ಹಣ್ಣುಗಳನ್ನು ಟೀ ಜೊತೆ ಸೇವಿಸಿ. ವೆಜಿಟೇಬಲ್ ಸ್ಯಾಂಡ್ ವಿಚ್ ಮತ್ತು ಜ್ಯೂಸ್, ಎಳೆನೀರು ಸೇವನೆಯು ಕೂಡ ಆರೋಗ್ಯಕ್ಕೆ ಒಳ್ಳೆಯದು.
4 ಮಧ್ಯಾಹ್ನದ ಊಟದಲ್ಲಿ ಹೆಚ್ಚು ದವಸ ಧಾನ್ಯಗಳಿರುವ ಆಹಾರವನ್ನು ಬಳಸಿ. ಸೊಪ್ಪುಗಳ ಸೇವನೆ ಸಹ ಆರೋಗ್ಯಕ್ಕೆ ಒಳ್ಳೆಯದು.
5 ಸಾಯಂಕಾಲದ ಟೀ ಸಮಯದಲ್ಲಿ ಕುರುಕಲು ತಿಂಡಿಗಳ ಬದಲು ಬಿಸ್ಕೆಟ್, ಬೆಣ್ಣೆಯ ಜೊತೆ ಬ್ರೆಡ್ ಸ್ಯಾಂಡ್ ವಿಚ್ ಈ ರೀತಿ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವುದನ್ನು ತಡೆಯಬಹುದು.
6. ರಾತ್ರಿಯ ಊಟಕ್ಕೆ ಅತೀ ಹೆಚ್ಚು ಪೋಷಕಾಂಶಗಳಿರುವ ಆಹಾರಗಳನ್ನು ಬಳಸಿ. ಚಪಾತಿ, ಬೇಳೆ ಸಾರು, ತರಕಾರಿಗಳು ಹಾಗೂ ತರಕಾರಿಯ ಸೂಪ್ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
7. ರಾತ್ರಿ ಊಟವನ್ನು ಮಲಗುವ 3-4 ಗಂಟೆಗಳ ಮೊದಲು ಸೇವಿಸಿ.
ದುಡಿಯುವ ಮಹಿಳೆಯು ಈ ರೀತಿಯ ಆಹಾರ ಕ್ರಮವನ್ನು ಪಾಲಿಸಿದರೆ, ಆರೋಗ್ಯದ ಜೊತೆಗೆ ಕೆಲಸ ಮಾಡುವ ಉತ್ಸಾಹ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
