Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸ್ವತಃ ಮನೆಕೆಲಸ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ

ಮನೆಕೆಲಸಗಳನ್ನು ಮಾಡುವುದು ಸಿಂಪಲ್ ವ್ಯಾಯಾಮವೂ ಕೂಡ ಆಗುತ್ತದೆ. ಅದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ:
* ಅಡುಗೆ ಮನೆ ಶುದ್ಧಗೊಳಿಸುವುದು: ಸ್ಟೌವ್ ಮತ್ತು ಇನ್ನಿತರ ವಸ್ತುಗಳನ್ನು ಉಜ್ಜುವುದು ಅಂಗೈಗೆ ಒಳ್ಳೆಯ ವ್ಯಾಯಾಮದಂತೆ. ಪಾತ್ರೆ ತೊಳೆಯುವುದೂ ಕೂಡ ಬೆರಳುಗಳಿಗೆ ದೊರೆಯುವ ಉತ್ತಮ ವ್ಯಾಯಾಮವಾಗುವುದಂತೆ.
* ಮನೆ ಒರೆಸುವುದು: ಅಡುಗೆ ಮನೆ, ವರಂಡಾ ರೂಂ ಗಳು ಎಲ್ಲದರ ನೆಲವನ್ನು ಒರೆಸಿ. ನೆಲ ಒರೆಸುವ ಕೋಲನ್ನು ಉಪಯೋಗಿಸದಿರಿ. ಬಗ್ಗಿ ಕೈಗಳಲ್ಲೋ ಅಥವಾ ಬ್ರಶ್ ನಲ್ಲೋ ಒರೆಸಿ. ಕೈಗಳನ್ನು ಚಾಚುತ್ತ ನೆಲ ಒರೆಸಿದರೆ ನಿಮ್ಮ ತೋಳುಗಳಿಗಲ್ಲದೆ ತೊಡೆಗೂ ಕೂಡ ವ್ಯಾಯಾಮವಾದಂತಾಗುತ್ತದೆ. ಮೈ ಬಗ್ಗಿಸಿ ಒರೆಸುವುದರಿಂದ ಹೊಟ್ಟೆಯೂ ಕೂಡ ಕರಗುತ್ತದೆ.
* ಬಟ್ಟೆ ಒಗೆಯುವುದು ಮತ್ತು ಐರನ್ ಮಾಡುವುದು: ಬಟ್ಟೆಗಳನ್ನು ಕೈಗಳಿಂದಲೇ ಒಗೆಯುವುದು ದೇಹಕ್ಕೆ ಒಳ್ಳೆಯ ವ್ಯಾಯಾವಾದಂತೆ. ಬಟ್ಟೆಗಳನ್ನು ಒಗೆಯುವುದು ನಿಮ್ಮಿಂದ ಸಾಧ್ಯವಾಗದಿದ್ದರೆ ಅದನ್ನು ಜಾಲಿಸುವುದು ಮತ್ತು ಒಣಗಿ ಹಾಕುವುದಾದರೂ ಮಾಡಬಹುದು. ಎದ್ದು ಬಗ್ಗಿ ಮಾಡುವುದು ಸೊಂಟಕ್ಕೆ ಒಳ್ಳೆಯ ವ್ಯಾಯಾಮವಾಗುತ್ತದೆ. ಬಟ್ಟೆಗಳನ್ನು ಒಣಗಿಹಾಕುವುದರಿಂದ ದೇಹ ಹಗುರಗೊಳ್ಳಲು ಸಹಾಯ ಮಾಡುತ್ತದೆ. ಐರನ್ ಮಾಡುವುದರಿಂದ ಭುಜ, ಕುತ್ತಿಗೆಗೆ ವ್ಯಾಯಾಮ ಒದಗಿಸುತ್ತದೆ.
* ಬೆಡ್ ಶೀಟ್ ಬದಲಾಯಿಸುವುದು: ಇದು ತುಂಬಾ ಸರಳವಾದ ವಿಧಾನ. ಹಳೆಯ ಬೆಡ್ ಶೀಟ್ ಗಳನ್ನು ತೆಗೆಯುವುದು, ಒದರುವುದು, ಬೆಡ್ ಶೀಟ್ ಹಾಸುವುದು, ಅದನ್ನು ಸರಿಗೊಳಿಸುವುದು ಇಂತಹ ಚಿಕ್ಕ ಕೆಲಸಗಳೂ ಸಹ ದೇಹದ ಮೇಲ್ಬಾಗಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ.
* ಕಿಟಕಿ, ಬಾಗಿಲುಗಳನ್ನು ಶುಚಿಗೊಳಿಸಿ: ಈ ಕೆಲಸವನ್ನು ಮಾಡಲು ಕೈಗಳು ಬಳಕೆಯಾಗುವುದೂ ಕೂಡ ವ್ಯಾಯಾಮದಂತೆ. ಕಿಟಕಿ ಒರೆಸಲು ಸ್ಟೂಲ್ ಹತ್ತಿ ಇಳಿದು ಮಾಡುವುದರಿಂದ ದೇಹಕ್ಕೆ ವ್ಯಾಯಾಮವಾಗುತ್ತದೆ.
ಪ್ರತಿನಿತ್ಯವೂ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂದೇನಿಲ್ಲ. ಇದರಲ್ಲಿ ಅರ್ಧದಷ್ಟು ಕೆಲಸ ಮಾಡಿದರೂ ಸಾಕು, ದೇಹಕ್ಕೆ ಅವಶ್ಯವಾದಷ್ಟು ವ್ಯಾಯಾಮ ದೊರೆತಂತಾಗುತ್ತದೆ. ಮನೆ ಚೆನ್ನಾಗಿ ಕಾಣುವುದರೊಂದಿಗೆ ದೇಹಾರೋಗ್ಯವೂ ಸಿಗುತ್ತದೆ ಎಂದರೆ ಏಕೆ ಈ ಸಲಹೆಗಳನ್ನು ಪಾಲಿಸಬಾರದು?.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
