Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ದಿನಾ ಮೊಟ್ಟೆ ತಿಂದರೆ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆಯೇ?
ತುಂಬಾ ಜನರಿಗೆ ದಿನಕ್ಕೊಂದು ಮೊಟ್ಟೆ ತಿನ್ನುವ ಅಭ್ಯಾಸ ಇರುತ್ತದೆ, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ಒಳ್ಳೆಯದು ಎಂದು ಹೇಳಲಾಗುವುದು. ಇನ್ನು ಜಿಮ್‌ಗೆ ಹೋಗುವವರು, ತುಂಬಾ ವರ್ಕೌಟ್ ಮಾಡುವವರು ಪ್ರತಿದಿನ ಮೊಟ್ಟೆ ಸೇವಿಸುತ್ತಾರೆ.
ಮೊಟ್ಟೆಯಲ್ಲಿರುವ ಪ್ರೊಟೀನ್ ಹಾಗೂ ಇತರ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರತಿದಿನ ಮೊಟ್ಟೆ ಸೇವಿಸುವವರಿಗೆ ಒಂದು ಶಾಂಕಿಂಗ್ ವಿಷಯ ಅದೇನೆಂದರೆ ದಿನಾ ಮೊಟ್ಟೆ ತಿಂದರೆ ಮಧುಮೇಹದ ಸಾಧ್ಯತೆ ಹೆಚ್ಚುವುದು ಎಂದು ಅಧ್ಯಯನ ವರದಿ ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಅಧ್ಯಯನ ವರದಿ ಏನು ಹೇಳಿದೆ?
ಚೈನಾ ಮೆಡಿಕಲ್ ಯೂನಿವರ್ಸಿಟಿ ಹಾಗೂ ಕತಾರ್ ಯೂನಿವರ್ಸಿಟಿಯಲ್ಲಿ 1991ರಿಂದ 2009ರವರೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಂಶೋಧನೆ ವರದಿ ಪ್ರಕಾರ ಯಾರು ಪ್ರತಿದಿನ ಮೊಟ್ಟೆ ತಿನ್ನುವವರಿಗೆ ಮಧುಮೇಹದ ಅಪಾಯ ಹೆಚ್ಚು ಎಂದು ತಿಳಿದು ಬಂದಿದೆ, ಅದರಲ್ಲೂ ಮಹಿಳೆಯರಿಗೆ ಪುರುಷರಿಗಿಂತ ಶೇ.60 ಮಧುಮೇಹದ ಸಾಧ್ಯತೆ ಹೆಚ್ಚು.

ಮಧುಮೇಹ ಹೆಚ್ಚುವುದರಲ್ಲಿ ಆಹಾರಕ್ರಮವೂ ಪ್ರಮುಖವಾಗಿದೆ
ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ, ನಮ್ಮ ಆಹಾರಕ್ರಮದ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವುದರಿಂದ ಟೈಪ್ 2 ಮಧುಮೇಹ ಬರುವುದನ್ನು ತಪ್ಪಿಸಬಹುದು. ಚೀನಾದಲ್ಲಿ ಹೆಚ್ಚಿನವರು ಕೆಲವು ದಶಕಗಳಿಂದ ಮೂಲ ಆಹಾರಕ್ರಮದಿಂದ ದೂರ ಸರಿದು ಸಂಸ್ಕರಿಸಿದ ಆಹಾರ, ಮಾಂಸ, ಹಾವು ಮುಂತಾದ ಕೊಬ್ಬಿನ ಆಹಾರಗಳ ಸೇವನೆ ಮಾಡುತ್ತಿದ್ದಾರೆ, ತರಕಾರಿಗಳು ಆಹಾರಕ್ರಮದಲ್ಲಿ ಕಡಿಮೆಯಾಗಿದೆ, ಇದರಿಂದ ಮಧುಮೇಹದಂಥ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.

ಮಧುಮೇಹ ಮತ್ತು ಮೊಟ್ಟೆ ಸೇವನೆ
1991ರಿಂದ-2009ರವರೆಗೆ ನಡೆಸಿದ ಅಧ್ಯಯನ ವರದಿಯಲ್ಲಿ ಚೀನಾದಲ್ಲಿ ಮೊಟ್ಟೆ ಸೇವನೆ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ಆ ಅಧ್ಯಯನ ವರದಿ ಹೇಳಿದೆ. ಮೊಟ್ಟೆಗೂ ಮಧುಮೇಹಕ್ಕೂ ಸಂಬಂಧವಿದೆಯೇ ಎಂಬುವುದರ ಕುರಿತು ಅನೇಕ ಚರ್ಚೆಗಳು ನಡೆಯುತ್ತಲೇ ಇವೆ, ಆದರೆ ಮೊಟ್ಟೆ ತಿಂದಾಗ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾಗುವುದು. ಯಾರು ಪ್ರತಿದಿನ ಸಾಕಷ್ಟು ಮೊಟ್ಟೆ ತಿನ್ನುತ್ತಾರೋ ಅವರಲ್ಲಿ ಮಧುಮೇಹದ ಸಾಧ್ಯತೆ ಶೇ.60ರಷ್ಟು ಹೆಚ್ಚಿದೆ.

ಹೆಚ್ಚು ಮೊಟ್ಟೆ ಮತ್ತು ಅಥವಾ ಪ್ರತಿನಿತ್ಯ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಹಾನಿಯೇ?
ಹೆಚ್ಚು ಮೊಟ್ಟೆ ಮತ್ತು ಅಥವಾ ಪ್ರತಿನಿತ್ಯ ಮೊಟ್ಟೆ ತಿಂದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಪ್ರತಿದಿನ ಅಥವಾ ಹೆಚ್ಚು ಮೊಟ್ಟೆ ತಿನ್ನುವುದರಿಂದ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಿದೆ. ಯಾರು ಪ್ರತಿನಿತ್ಯ ಮೊಟ್ಟೆ ತಿನ್ನುತ್ತಾರೋ ಅವರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ಆದರೆ ಇದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಆಗ ಬೇಕಾಗಿದೆ.



Click it and Unblock the Notifications