Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಮಧುಮೇಹ ತಗ್ಗಿಸುವ ಅಡುಗೆಮನೆಯ ನಾಲ್ಕು ಸಾಂಬಾರ ಪದಾರ್ಥಗಳು
ಮಧುಮೇಹಿಗಳು ಯಾವಾಗಲೂ ತುಂಬಾ ಕಠಿಣ ಆಹಾರ ಕ್ರಮ ಪಾಲಿಸಿಕೊಂಡು ಹೋದರೆ ಆಗ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಸಾಮಾನ್ಯ ಜೀವನ ಸಾಗಿಸಬಹುದು. ಮುಖ್ಯವಾಗಿ ಆಹಾರ ಪಥ್ಯವು ಅತೀ ಅಗತ್ಯವಾಗಿರುವುದು. ಇದರೊಂದಿಗೆ ವ್ಯಾಯಾಮ, ಔಷಧಿ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು. ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವ ಬಗ್ಗೆ ಮಧುಮೇಹಿಗಳಿಗೆ ಸರಿಯಾಗಿ ತಿಳಿದಿರಬೇಕು. ಮಧುಮೇಹಿಗಳು ತಿನ್ನುವಂತಹ ಪ್ರತಿಯೊಂದು ಆಹಾರದಲ್ಲೂ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆಯಾ ಎಂದು ತಿಳಿಯಬೇಕು.

ಔಷಧಿಯ ಜತೆಗೆ ಕೆಲವೊಂದು ಇತರ ವಿಧಾನಗಳಿಂದಲೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಭಾರತೀಯರ ಅಡುಗೆ ಮನೆ ಎನ್ನುವುದು ಹಲವಾರು ಗಿಡಮೂಲಿಕೆ ಹಾಗೂ ಸಾಮಗ್ರಿಗಳಿಂದ ತುಂಬಿರುವುದು. ಇದೇ ಕಾರಣದಿಂದ ಕೆಲವೊಂದು ಔಷಧೀಯ ಗುಣವುಳ್ಳ ಗಿಡಮೂಲಿಕೆ ಅಥವಾ ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಮಧುಮಹೇವನ್ನು ನಿಯಂತ್ರಿಸಬಹುದು. ಇದು ಯಾವ ರೀತಿಯಲ್ಲಿ ಪರಿಣಾಮಕಾರಿ ಹಾಗೂ ಲಾಭಕಾರಿಯಾಗಿ ಇರಲಿದೆ ಎಂದು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಮಧುಮೇಹಿಗಳು ಇದನ್ನು ಬಳಸಿಕೊಂಡು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಅರಿಶಿನ
ಅರಿಶಿನವು ಅತ್ಯುತ್ತಮ ಸಾಂಬಾರ ಪದಾರ್ಥವಾಗಿದೆ. ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ವಿವಿಧ ಅಧ್ಯಯನಗಳಿಂದ ಅರಶಿನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅರಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಮಧುಮೇಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅರಶಿನ ಹಾಲು, ಅರಶಿನ ಚಹಾ ಅಥವಾ ಅರಿಶಿನ ನೀರು ಕುಡಿಯಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಖಾದ್ಯಕ್ಕೆ ಒಳ್ಳೆಯ ರುಚಿ ನೀಡುವುದು ಮಾತ್ರವಲ್ಲದೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ನೆರವಾಗುವುದು. ಬೆಳ್ಳುಳ್ಳಿಯನ್ನು ವಿವಿಧ ಖಾದ್ಯಗಳಿಗೆ ಬಳಸಿಕೊಳ್ಳಬಹುದು. ಒಂದು ಲೋಟ ನೀರಿನೊಂದಿಗೆ ಒಂದು ಎಸಲು ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಸೇವಿಸಬಹುದು.

ಲವಂಗ
ಲವಂಗದ ಸುವಾಸನೆಯಿಂದ ಹಲವಾರು ಖಾದ್ಯಗಳ ರುಚಿಯು ಹೆಚ್ಚಾಗುವುದು ಮತ್ತು ಚಾದಲ್ಲೂ ಇದನ್ನು ಬಳಸಲಾಗುತ್ತದೆ. ಇದು ಇನ್ಸುಲಿನ್ ಉತ್ಪತ್ತಿಗೆ ನೆರವಾಗುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮಪಡಿಸುವುದು. ಲವಂಗವನ್ನು ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬೇಕು ಮತ್ತು ಇದರಿಂದ ಸಿಗುವಂತಹ ಆರೋಗ್ಯ ಲಾಭವನ್ನು ಪಡೆಯಬಹುದು. ಇದು ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಬಾಯಿಯ ಆರೋಗ್ಯಕ್ಕೂ ಒಳ್ಳೆಯದು.

ದಾಲ್ಚಿನ್ನಿ
ಖಾದ್ಯಗಳಿಗೆ ರುಚಿ ಹಾಗು ಸುವಾಸನೆ ಹೆಚ್ಚಿಸುವ ಮತ್ತೊಂದು ಸಾಂಬಾರ ಪದಾರ್ಥವು ದಾಲ್ಚಿನಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು ಮತ್ತು ಇನ್ಸುಲಿನ್ ನ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು. ದಾಲ್ಚಿನ್ನಿಯನ್ನು ವಿವಿಧ ವಿಧಾನಗಳಿಂದ ಸೇವಿಸಬಹುದು. ದಾಲ್ಚಿನಿಯನ್ನು ಚಾ, ಉಪಾಹಾರ ಮತ್ತು ಸ್ಮೂಥಿಗೆ ಸೇರಿಸಿಕೊಳ್ಳಬಹುದು. ದಾಲ್ಚಿನಿ ಚಾ ಕುಡಿದರೆ ಅದರಿಂದ ಅತ್ಯಧಿಕ ಲಾಭ ಸಿಗುವುದು.



Click it and Unblock the Notifications