Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!
ಮಧುಮೇಹ ಎನ್ನುವುದು ಈಗ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣವೇ ನಮ್ಮ ಜೀವನಶೈಲಿ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 30 ಲಕ್ಷ ಜನರು ಮಧುಮೇಹ ರೋಗಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಮಧುಮೇಹ ಈ ಮಟ್ಟದಲ್ಲಿ ಜನರನ್ನು ವ್ಯಾಪಿಸಿರುವುದು ಅತ್ಯಂತ ಆಘಾತಕಾರಿ ಸಂಗತಿ ಮತ್ತು ಇದು ಎಲ್ಲರಲ್ಲೂ ಕಳವಳ ಮೂಡಿಸಿದೆ. ಅಲ್ಲದೆ ಇಂದಿನ ಜನಾಂಗಕ್ಕೆ ಇಂದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ.
ಸಾಮಾನ್ಯವಾಗಿ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುವುದೇ ಈ ಮಧುಮೇಹ. ಇದರಲ್ಲಿ ಒಂದನೇ ಹಂತ ಮತ್ತು ಎರಡನೇ ಹಂತ ಎನ್ನುವ ಎರಡು ರೀತಿಯ ಸಕ್ಕರೆ ಕಾಯಿಲೆಯಿದೆ. ಶೇ.90ರಷ್ಟು ಜನರಲ್ಲಿ 2ನೇ ಹಂತದ ಸಕ್ಕರೆ ಕಾಯಿಲೆ ಕಂಡುಬರುವುದು.
ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಇನ್ಸುಲಿನ್ ಉತ್ಪಾದನೆ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಮಧುಮೇಹ ಹೊಂದಿರುವ ದೇಹವು ಬೇಕಾದಷ್ಟು ಇನ್ಸುಲಿನ್ ಉತ್ಪಾದನೆ ಮಾಡಲು ವಿಫಲವಾಗುತ್ತದೆ. ಆಗ ಮಧುಮೇಹವನ್ನು ದೇಹವನ್ನು ಆವರಿಸುತ್ತದೆ. ಮಧುಮೇಹದ ಹಂತವನ್ನು ನೋಡಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ವೈದ್ಯರು ನಿರ್ಧರಿಸುತ್ತಾರೆ.

ಮಧುಮೇಹಕ್ಕೆ ಚಿಕಿತ್ಸೆ ನೀಡುವಾಗ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಚಿಕಿತ್ಸೆಯಲ್ಲಿ ಇನ್ಸುಲಿನ್, ವ್ಯಾಯಾಮ, ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಗಂಭೀರ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಇಂತಹ ಚಿಕಿತ್ಸೆಗಳು ಅಷ್ಟು ಹಿತವಲ್ಲದ, ವೆಚ್ಚದಾಯಕ ಮತ್ತು ನೋವಿನದ್ದಾಗಿದೆ.
ಪ್ರತೀ ದಿನ ಮಾತ್ರೆಗಳನ್ನು ನುಂಗಲು ಅಥವಾ ಗಂಭೀರ ಪರಿಸ್ಥಿತಿಯಲ್ಲಿ ಇಂಜೆಕ್ಷನ್ ಚುಚ್ಚಿಕೊಳ್ಳಲು ಯಾರೂ ಬಯಸುವುದಿಲ್ಲ. ಆದರೆ ಮಧುಮೇಹಕ್ಕೆ ಈ ಚಿಕಿತ್ಸೆಗಳು ಅಲ್ಲದೆ ಹಿಂದಿನಿಂದ ಕೆಲವೊಂದು ಆಹಾರ ಕ್ರಮಗಳನ್ನು ಬಳಸಿಕೊಂಡು ಇದನ್ನು ನಿಯಂತ್ರಿಸಿದ್ದು ಇದೆ. ಹಾಗಲಕಾಯಿ, ಗ್ರೀನ್ ಟೀ ಮಧುಮೇಹವನ್ನು ನಿಯಂತ್ರಿಸುವ ಪ್ರಮುಖ ಆಹಾರಗಳು. ಇವೇ ಮಧುಮೇಹದ ಮೊದಲ ಸೂಚನೆಗಳು ನಿರ್ಲಕ್ಷಿಸಬೇಡಿ
ಆದರೆ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸುವಂತಹ ಸಾಮರ್ಥ್ಯವುಳ್ಳ ಒಂದು ಆಹಾರವೆಂದರೆ ಅದು ಮೆಂತ್ಯೆ. ಇದನ್ನು ಆಹಾರದಲ್ಲಿ ಬಳಸುವುದರೊಂದಿಗೆ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಮೆಂತೆ ಮಧುಮೇಹವನ್ನು ಗುಣಪಡಿಸುತ್ತಿದೆಯಾ ಎನ್ನುವ ಚರ್ಚೆಯ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಉತ್ತರಗಳನ್ನು ನೀಡಲಿದೆ.
ಮೆಂತೆ ಕಾಳುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಲು ಹೇಗೆ ನೆರವಾಗುತ್ತದೆ?
ಮೆಂತೆ ಕಾಳಿನಲ್ಲಿ ಕರಗಬಲ್ಲ ನಾರಿನಾಂಶ ಮತ್ತು ಇತರ ಕೆಲವೊಂದು ರಾಸಾಯನಿಕಗಳು ಜೀರ್ಣ ಕ್ರಿಯೆ ಮತ್ತು ಕಾರ್ಬೋಹೈಡ್ರೆಡ್ ಹೀರುವಿಕೆಯನ್ನು ನಿಧಾನವಾಗಿಸುತ್ತದೆ. ಕೆಲವೊಂದು ಅಧ್ಯಯನಗಳಿಂದ ಮೆಂತ್ಯೆ ಕಾಳುಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿ ಅದನ್ನು ನಿಯಂತ್ರದಲ್ಲಿಡುತ್ತದೆ ಎಂದು ಸಾಬೀತಾಗಿದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
ಆಹಾರ ಕ್ರಮಕ್ಕೆ ಮೆಂತೆ ಕಾಳುಗಳನ್ನು ಸೇರಿಸುವುದು ಹೇಗೆ?
ಒಂದು ಕಪ್ ನೀರಿನಲ್ಲಿ ಮೆಂತೆ ಕಾಳುಗಳನ್ನು ನೆನೆಸಲು ಹಾಕಿ. ಇದರ ಬಳಿಕ ಅದನ್ನು ಬೇಯಿಸಿ. ಅದರ ನೀರನ್ನು ಕುಡಿಯಿರಿ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಗಣನೀಯವಾಗಿ ಕಡಿಮೆಯಾಗುವುದು.
ಮೆಂತೆ ಕಾಳುಗಳನ್ನು ತಿನ್ನುವುದು ಸುರಕ್ಷಿತವೇ?
ಮಧುಮೇಹವನ್ನು ನಿಯಂತ್ರಿಸಲು ಮೆಂತೆಯನ್ನು ದಿನಕ್ಕೆ ಒಂದು ಗ್ರಾಂನಷ್ಟು ತಿನ್ನಬೇಕು. ಪ್ರತೀ ದಿನ ಒಂದು ಗ್ರಾಂನಷ್ಟು ಮಾತ್ರ ಸೇವನೆ ಮಾಡಿ. ಇಲ್ಲವಾದರೆ ಬೇರೆ ಅಡ್ಡ ಪರಿಣಾಮಗಳು ಉಂಟಾಗಬಹುದು. ನಿಮಗೆ ಪ್ರಮಾಣದ ಬಗ್ಗೆ ಖಚಿತತೆ ಇಲ್ಲವೆಂದದಾದರೆ ತಜ್ಞರ ಸಲಹೆ ಪಡೆಯಿರಿ. ಮೆಂತೆಯ ಚಿಕಿತ್ಸೆಯೊಂದಿಗೆ ಸರಿಯಾದ ಜೀವನಕ್ರಮ, ವ್ಯಾಯಮ ಮತ್ತು ನಮ್ಮ ಬಗ್ಗೆ ಸರಿಯಾಗಿ ಗಮನಹರಿಸಿದರೆ ಮಧುಮೇಹ ಬೇಗನೆ ನಿಯಂತ್ರಣಕ್ಕೆ ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

