Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ನಮಗೆ ಇನ್ಸುಲಿನ್ ಹೇಗೆ ಸಿಗುತ್ತದೆ?

ಇನ್ಸುಲಿನ್ ಎಂದರೇನು?
ಇನ್ಸುಲಿನ್ ಎಂಬುದು ಜಠರದ ಗ್ರಂಥಿ ಪ್ಯಾಂಕ್ರಿಯಾಸ್ ನಿಂದ ಉತ್ಪತ್ತಿಯಾಗುವ ಒಂದು ಬಗೆಯ ಹಾರ್ಮೋನ್. ನಾವು ಆಹಾರ ಸೇವಿಸಿದ ಮೇಲೆ ಆಹಾರದಲ್ಲಿನ ಗ್ಲುಕೋಸ್ ಜಠರ ಹಾಗೂ ರಕ್ತವನ್ನು ಸೇರುತ್ತದೆ. ಆಮೇಲೆ ಕೋಶಗಳನ್ನು ಸೇರುವ ಗ್ಲುಕೋಸ್ ದೇಹಕ್ಕೆ ಶಕ್ತಿ ಉದಗಿಸುತ್ತದೆ . ಈ ಕಾರ್ಯಕ್ಕೆ ಗ್ಲುಕೋಸ್ ಗೆ ಇನ್ಸುಲಿನ್ ಸಹಾಯ ಮಾಡುತ್ತದೆ. ಟೈಪ್ 1 ಮಧುಮೇಹ ಉಳ್ಳವರಲ್ಲಿ ಪ್ಯಾಂಕ್ರಿಯಾಸ್ ಗ್ರಂಥಿ ಇನ್ಸುಲಿನ್ ಉತ್ಪಾದನೆಯನ್ನೇ ಮಾಡುವುದಿಲ್ಲ ಹಾಗೂ ಟೈಪ್ 2 ಮಧುಮೇಹದಲ್ಲಿ ಇನ್ಸುಲಿನ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಇನ್ಸುಲಿನ್ ಪ್ರಮಾಣದಲ್ಲಿ ಏರಿಳಿತದಲ್ಲಿ ಕಂಡುಬರುತ್ತದೆ.
ನಮಗೆ ಇನ್ಸುಲಿನ್ ಹೇಗೆ ಸಿಗುತ್ತದೆ?
ಒಂದಾನೊಂದು ಕಾಲದಲ್ಲಿ ಇನ್ಸುಲಿನ್ ಪಡೆಯಲು ಕಸಾಯಿಖಾನೆ ಉಪಯೋಗಕ್ಕೆ ಬರುತ್ತಿತ್ತು. ಸತ್ತ ಪ್ರಾಣಿಗಳ ಪ್ಯಾಂಕ್ರಿಯಾಸ್ ನಿಂದ ಪಡೆಯಲಾಗುತ್ತದೆ. ನಾವು ಈಗ ಸುಸಜ್ಜಿತ ಪ್ರಯೋಗಾಲಯ(DNA recombinant)ಗಳಲ್ಲಿ ಇನ್ಸುಲಿನ್ ತಯಾರಿಸುತ್ತಿದ್ದೇವೆ. ಇದು ಯಾವುದೇ ಪ್ರಾಣಿ ಅಥವಾ ಮನುಷ್ಯರ ದೇಹಕ್ಕೆ ಸಂಬಂಧಿಸಿರುವುದಿಲ್ಲ. ಪಶು(bovine), ಹಂದಿ(porcine) ಹಾಗೂ ಮನುಷ್ಯ(human)ರ ಇನ್ಸುಲಿನ್ ಆಕಾರದಲ್ಲಿ ಸಾಮ್ಯತೆ ಇರುವುದರಿಂದ ಈ ಹಿಂದೆ ಇನ್ಸುಲಿನ್ ಉತ್ಪಾದನೆಯಲ್ಲಿ ಪ್ರಾಣಿಗಳ ಬಳಕೆಯಾಗುತ್ತಿತ್ತು. ಆದರೆ, ಈಗ ಲ್ಯಾಬ್ ಗಳಲ್ಲಿ ಇನ್ಸುಲಿನ್ ತಯಾರಿಸುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳ ಭೀರಿ ಇರುವುದಿಲ್ಲ.
ಯಾವ ಬಗೆ ಡಯಾಬಿಟಿಸ್ ರೋಗಿಗಳಿಗೆ ಇನ್ಸುಲಿನ್ ಸೂಕ್ತ?
ಟೈಪ್ 1 ಡಯಾಬಿಟಿಸ್ ರೋಗಿಗಳಿಗೆ ಜೀವಿಸಲು ಇನ್ಸುಲಿನ್ ಬೇಕೇ ಬೇಕು. ಟೈಪ್ 2 ಡಯಾಬಿಟಿಸ್ ಗೆ ಅಗತ್ಯವಿದ್ದಾಗ ಬಳಸಲು ವೈದ್ಯರು ಸೂಚಿಸುತ್ತಾರೆ. ಗರ್ಭಿಣಿಯರಿಗೆ, ಶಸ್ತ್ರಚಿಕಿತ್ಸೆಗೆ ಮುನ್ನ ಅಥವಾ ಶಸ್ತ್ರಚಿಕಿತ್ಸೆಯ ನಂತರ, ಸೋಂಕಿನಿಂದ ಬಳಲುತ್ತಿರುವವರಿಗೆ ಹಾಗೂ ಆಹಾರ ಸೇವನೆ ಕಷ್ಟವಾಗುವ ಸಂದರ್ಭದಲ್ಲಿ ಮಾತ್ರ ಇನ್ಸುಲಿನ್ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಮಾತ್ರೆಗಳು ಕಾರ್ಯನಿರ್ವಹಿಸದಿದ್ದಾಗ, ಡಯಾಬಿಟಿಸ್ ನಿಯಂತ್ರಣಕ್ಕೆ ಇನ್ಸುಲಿನ್ ಬಳಕೆ ಅಗತ್ಯ.
ಟೈಪ್ 2 ಮಧುಮೇಹಿಗಳಿಗೆ ಮಾತ್ರೆಗಳಿಗಿಂತ ಇನ್ಸುಲಿನ್ ಸೂಕ್ತವೇ?
ಇದು, ತುಂಬಾ ಕುತೂಹಲಕಾರಿ ಪ್ರಶ್ನೆ. ಇನ್ಸುಲಿನ್ ನಿಂದ ಅನೇಕಾನೇಕ ಉಪಯೋಗಗಳಿವೆ. ಮಾತ್ರೆಗಳಿಗಿಂತ ನೈಸರ್ಗಿಕವಾದ ಇನ್ಸುಲಿನ್ ಬಳಕೆಗೆ ಆದ್ಯತೆ ನೀಡಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ, ಆರಂಭದಿಂದಲೇ ಇನ್ಸುಲಿನ್ ಬಳಕೆ ಅಥವಾ ಆರಂಭದ ಕೆಲ ದಿನಗಳ ಕಾಲ ಇನ್ಸುಲಿನ್ ಬಳಕೆ ಮಾಡುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುವುದಲ್ಲದೆ, ಪ್ಯಾಂಕ್ರಿಯಾಸ್ ನ ಕಾರ್ಯಕ್ಷಮತೆ ಕೂಡಾ ಹೆಚ್ಚಾಗುವುದ್ದು ಎಂದು ತಿಳಿದು ಬಂದಿದೆ. ಆದರೆ,ಇಂದಿನವರೆಗೂ ಇರುವ ಒಂದೇ ತೊಂದರೆ ಎಂದರೆ, ಇನ್ಸುಲಿನ್ ಅನ್ನು ಚುಚ್ಚುಮದ್ದು(ಇಂಜೆಕ್ಷನ್) ಮೂಲಕವೇ ತೆಗೆದುಕೊಳ್ಳಬೇಕು.
ಪ್ರಾಯಶಃ ಟೈಪ್ 2 ಮಧುಮೇಹಿಗಳಿಗೆ ಮಾತ್ರೆಗಳು ಕಾರ್ಯ ನಿರ್ವಹಿಸುವುದು ನಿಲ್ಲಿಸುತ್ತದೆ ಹಾಗೂ ಇನ್ಸುಲಿನ್ ಅವಶ್ಯಕವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications