Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹ ಎಂದರೇನು? ನನಗೇ ಏಕೆ?

ನಮ್ಮ ಆರೋಗ್ಯ ಭಾಗ್ಯ ಅಂಕಣದಲ್ಲಿ ಮಧುಮೇಹದ ಬಗೆಗೆ ತಜ್ಞ ವೈದ್ಯ ರು ಬರೆಯುವ ಮಾಹಿತಿ ಮಾಲೆಯನ್ನು ಆರಂಭಿಸಲಾಗಿದೆ. ಸಕ್ಕರೆಯ ಕಾಯಿಲೆಯ ಅನೇಕ ಮುಖಗಳನ್ನು ಅನಾವರಣಗೊಳಿಸುವ ಈ ಸರಣಿ ನಮ್ಮ ಓದುಗರಿಗೆ, ಅವರ ಕುಟುಂಬಕ್ಕೆ, ಬಂಧುವರ್ಗಕ್ಕೆ ಪ್ರಯೋಜನವಾಗುತ್ತದೆ ಎಂಬ ಆಶಯ ನಮ್ಮದು- ಸಂಪಾದಕ
ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ರೋಗ ತುಂಬಾ ಹಳೆ ಕಾಯಿಲೆ. ಮಾನವಕುಲವನ್ನು ನೂರಾರು ವರ್ಷಕಾಲ ಬಾಧಿಸಿದ ಈ ಕಾಯಿಲೆ ಬಗ್ಗೆ ಸಂಸ್ಕೃತದಲ್ಲಿ ಪ್ರಾಚೀನ ದಾಖಲೆಗಳಿವೆ. 'ಡಯಾಬಿಟಿಸ್' ಎಂದರೆ ಇಳಿಗೊಳವೆ ಹಾಗೂ ಮೆಲಿಟಸ್(Mellitus) ಎಂದರೆ ಸಿಹಿ. ಪ್ರತಿದಿನ ಡಯಾಬಿಟಿಸ್ ಅಥವಾ ಡಯಾಬಿಟಿಸ್ ಮೆಲಿಟಸ್ ಪದಗಳು ಅದಲು ಬದಲಾಗಿ ಬಳಸಲ್ಪಡುತ್ತಿವೆ.
ಡಯಾಬಿಟಿಸ್ ಹೇಗೆ ಬರುತ್ತದೆ?
ಮನುಷ್ಯರ ಹೊಟ್ಟೆಯಲ್ಲಿರುವ ಪ್ಯಾಂಕ್ರಿಯಾಸ್ ಗ್ರಂಥಿಯು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ನಾವು ಆಹಾರ ಸೇವಿಸಿದಾಗ, ಇನ್ನೊಂದು ರೂಪವಾದ ಗ್ಲೂಕೋಸ್ ಉತ್ಪತ್ತಿಯಾಗಿ, ರಕ್ತದೊಡನೆ ಬೆರೆಯುತ್ತದೆ. ಇನ್ಸುಲಿನ್ ಸಹಾಯದಿಂದ ದೇಹದ ಜೀವಕೋಶಗಳನ್ನು ಗ್ಲೂಕೋಸ್ ತಲುಪುತ್ತದೆ. ಈ ಮೂಲಕ ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷದಿಂದ ಬರುವ ಕಾಯಿಲೆ. ಸಾಮಾನ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಒದಗಿಸುವಲ್ಲಿ ಪ್ಯಾಂಕ್ರಿಯಾಸ್ ವಿಫಲವಾದರೆ ಅಥವಾ ಇನ್ಸುಲಿನ್ ತನ್ನ ಕಾರ್ಯನಿರ್ವಹಿಸುವಲ್ಲಿ ವೈಫಲ್ಯ ಕಂಡರೆ ಡಯಾಬಿಟಿಸ್ ಬರುತ್ತದೆ.
ಡಯಾಬಿಟಿಸ್ : ನನಗೇ ಏಕೆ?
ನನ್ನ ಕುಟುಂಬದಲ್ಲಿ ಹಿಂದೆ ಯಾರಿಗೂ ಈ ಕಾಯಿಲೆ ಇದ್ದಿಲ್ಲವಾದರೂ ನನಗೆ ಮಧುಮೇಹ ಹೇಗೆ ಬಂತು? ಇದು ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ. ಆದರೆ, ಇದು ಬಹುಮುಖ್ಯವಾದ ಪ್ರಶ್ನೆ ಕೂಡಾ. ಮಧುಮೇಹ ವಿಷಯದಲ್ಲಿ ಏಷ್ಯನ್ನರಾದವರ ಕೌಟುಂಬಿಕ ಚರಿತ್ರೆ ಬಹುಮುಖ್ಯ. ವಂಶವಾಹಿಯಾಗಿ ಸಕ್ಕರೆ ಕಾಯಿಲೆ ಮುಂದಿನ ಪೀಳಿಗೆಗೆ ತಗುಲುವ ಎಲ್ಲಾ ಅಪಾಯಗಳಿವೆ.
ನಿಮ್ಮ ತಪ್ಪಿಲ್ಲದೆ ಇದ್ದರೂ ನೀವು ಮಧುಮೇಹಕ್ಕೆ ತುತ್ತಾಗಿರಬಹುದು. ನಿಮ್ಮ ಕುಟುಂಬದಲ್ಲಿ ಹಿಂದೆ ಯಾರಿಗಾದರೂ ಈ ಕಾಯಿಲೆಯಿದ್ದು, ನಿಮಗೆ ಈಗ ತಗುಲಿರಬಹುದು. ಭಾರತದಲ್ಲಿ ಶೇ.6ರಷ್ಟು ಹಳ್ಳಿವಾಸಿಗಳು ಹಾಗೂ ಶೇ. 14ರಷ್ಟು ನಗರವಾಸಿಗಳು ಡಯಾಬಿಟಿಸ್ ಗೆ ತುತ್ತಾಗಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ವಿಶ್ವದಾದ್ಯಂತ ಡಯಾಬಿಟಿಸ್ ರೋಗ ವ್ಯಾಪಕವಾಗಿ ಬೆಳೆಯುತ್ತಿದೆ. ಇದರಲ್ಲಿ ಏಷ್ಯನ್ನರೇ ಅಧಿಕವಾಗಿದ್ದಾರೆ. ಪಾಶ್ಚಾತ್ಯರಿಗೆ ಹೋಲಿಸಿದರೆ, ನಾವು ಎಳೆಪ್ರಾಯದಲ್ಲೇ(ಸುಮಾರು 10 ವರ್ಷ ಮುಂಚಿತವಾಗಿ) ಡಯಾಬಿಟಿಸ್ ಗೆ ತುತ್ತಾಗುತ್ತಿದ್ದೇವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
