ಗೋಮೂತ್ರಕ್ಕೆ ಪರವಾನಗಿ ನೀಡಿಲ್ಲ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆ

ಗೋಮೂತ್ರದಲ್ಲಿ ಆರೋಗ್ಯಕರ ಅಂಶವಿದೆ ಎಂದು ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಒಂದಾಗಿದೆ. ಕೆಲವು ಆಯುರ್ವೇದ ಔಷಧದಲ್ಲೂ ಗೋಮೂತ್ರ ಬಳಕೆಯಲ್ಲಿದೆ, ಆದ್ರೆ ಇದು ವೈಜ್ಞಾನಿಕವಾಗಿ ಮಾತ್ರ ಇದು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಹೀಗಿದ್ದರೂ ಗೋಮೂತ್ರ ಪವಿತ್ರ ಎಂದು ನಂಬಲಾಗಿದೆ.

ಗವ್ಯಮ್ ಪವಿತ್ರಮ್ ಚ ರಸಯನಮ್ ಕ ಪಥ್ಯಮ್ ಚ ಹೃದ್ಯಮ್ ಬಲಮ್ ಬುದ್ಧಿ ಸ್ಯತ
ಆಯುಹ್ ಪ್ರದಮ್ ರಕ್ತ್ ವಿಕರ್ ಹರಿ ತ್ರಿದೋಶ್ ಹೃದ್ರೊಗ್ ವಿಶಪಹಮ್ ಸ್ಯತ

Cow Urine Not Licensed Food Safety And Quality Authority Clarifies

ಈ ಶ್ಲೋಕದ ಮೂಲಕ ಗೋಮೂತ್ರದ ಪ್ರಾಮುಖ್ಯತೆಯ ಬಗ್ಗೆ ವೇದಗಳಲ್ಲೂ ತಿಳಿಸಲಾಗಿದೆ. ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಹಿಂದಿನ ಜನ್ಮದ ಫಲವನ್ನು ಇಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ಗೋಮೂತ್ರದಲ್ಲಿ ಗಂಗೆ ನೆಲೆಸಿರುತ್ತಾಳೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಗಂಗೆ ಪಾಪನಾಶಿನಿಯಾಗಿದ್ದಾಳೆ. ಗೋಮೂತ್ರ ಸೇವನೆಯ ಮೂಲಕ ಗಂಗೆಯು ಹಿಂದಿನ ಜನ್ಮದ ಪಾಪಫಲ ಮತ್ತು ವಿವಿಧ ರೋಗಗಳಿಂದ ರಕ್ಷಿಸುತ್ತಾಳೆ ಎಂದು ಪುರಾಣಗಳಲ್ಲಿ ತಿಳಿಸಲಾಗುತ್ತದೆ.

ಆದ್ರೆ ಗೋಮೂತ್ರ ಮಾರಾಟಕ್ಕೆ ಅಧಿಕೃತವಾಗಿ ಇಂದಿಗೂ ಪರವಾನಗಿ ಸಿಕ್ಕಿಲ್ಲ. ಆದ್ರೆ ಇಲ್ಲೊಂದು ಕಡೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪರವಾನಗಿ ನೀಡಿರುವ ಗೋಮೂತ್ರ ಎಂದು ಫೋಟೋವೊಂದನ್ನು ಹರಿಬಿಡಲಾಗಿತ್ತು.

ವಾಟ್ಸಾಪ್‌ನಲ್ಲಿ ಈ ರೀತಿಯ ಫೋಟೋವೊಂದು ಹರಿದಾಡಿದ್ದು, ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆಯೊಂದನ್ನ ನೀಡಿದೆ. ಇದು ನಕಲಿ ಜಾಹೀರಾತು ಈ ರೀತಿ ನಾವು ಗೋಮೂತ್ರಕ್ಕೆ ಪರವಾನಗಿ ನೀಡಿಲ್ಲ ಎಂದು ಇಲಾಖೆ ತಿಳಿಸಿದೆ. ಫೋಟೋದಲ್ಲಿ FSSAI ಪರವಾನಗಿ ನೀಡಿರುವ ಗೋಮೂತ್ರದ ಬಾಟಲಿ ಇದು ಎಂದು ಹಂಚಿಕೊಳ್ಳಲಾಗಿದೆ.

"ಎಚ್ಚರಿಕೆ!!! ಇದು ಕೆಲವು WhatsApp ಮತ್ತು ಡಿಜಿಟಲ್ ಮಾಧ್ಯಮ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದೆ. ಇದು ನಕಲಿ! ಪರವಾನಗಿ ಸಂಖ್ಯೆಯನ್ನು FSSAI ನಿಂದ ನೀಡಲಾಗಿಲ್ಲ" ಎಂದು ಆರೋಗ್ಯ ಸಚಿವಾಲಯವು ತನ್ನ WhatsApp ಚಾನೆಲ್ ಮೂಲಕ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

FSSAI ಅಥವಾ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಆಹಾರದ ಗುಣಮಟ್ಟವನ್ನು ನಿಯಂತ್ರಿಸುವ ದೇಶದ ಅತ್ಯುನ್ನತ ಸಂಸ್ಥೆಯಾಗಿದೆ. ಈ ಸಂಸ್ಥೆಯಿಂದ ಪರವಾನಗಿ ಪಡೆದಿರುವ ವಸ್ತುಗಳು ಮಾತ್ರ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮತಿ ಪಡೆದಂತೆ. ಈ ಇಲಾಖೆ ಪರವಾನಗಿ ನೀಡದಿದ್ದರೆ ಅಥವಾ ಆ ಉತ್ಪನ್ನವನ್ನು ತಿರಸ್ಕರಿಸಿದರೆ ಅದು ಮಾರಾಟ ಮಾಡುವಂತಿಲ್ಲ.

ಗೋಮೂತ್ರವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಮತ್ತು ಸೇವನೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುದು ಪುರಾಣದಲ್ಲಿ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಆದರೆ ಅದರ ಸತ್ಯವೇ ಬೇರೆ ಇದೆ. ಗೋಮೂತ್ರವು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಟಾಕ್ಸಿನ್‌ಗಳನ್ನು ಹೊಂದಿರುತ್ತದೆ, ಇದು ಸರಿಯಾದ ಶುದ್ಧೀಕರಣವಿಲ್ಲದೆ ಸೇವಿಸಿದರೆ ಸೋಂಕುಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಗೋಮೂತ್ರ ಶುದ್ಧೀಕರಣಕ್ಕೆ ಆಯುರ್ವೇದದಲ್ಲಿ ಮಂತ್ರವಿದೆ. ಜೊತೆಗೆ ಅದನ್ನು ಹಲವು ವಿಧಾನದ ಮೂಲಕ ಶುದ್ಧ ಮಾಡಲಾಗುತ್ತದೆ. ಆದರೆ ನೇರವಾಗಿ ಗೋಮೂತ್ರ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ದೃಢವಾಗಿದೆ.

ಗೋಮೂತ್ರವು ಫಲವತ್ತತೆ ಮತ್ತು ಲೈಂಗಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಕೆಲವರು ನಂಬುತ್ತಾರೆ. ಮತ್ತೊಮ್ಮೆ, ಈ ಸಮರ್ಥನೆಗಳನ್ನು ಬೆಂಬಲಿಸಲು ವೈಜ್ಞಾನಿಕ ಪುರಾವೆಗಳ ಕೊರತೆಯಿದೆ. ಇಂತಹ ಉದ್ದೇಶಗಳಿಗಾಗಿ ಗೋಮೂತ್ರವನ್ನು ಅವಲಂಬಿಸುವುದರಿಂದ ಪರಿಣಾಮಕಾರಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ವಿಳಂಬವಾಗಬಹುದು.
ಗೋಮೂತ್ರವನ್ನು ಕೆಲವು ಸಾಂಪ್ರದಾಯಿಕ ಆಚರಣೆಗಳಲ್ಲಿ ಬಳಸಲಾಗುತ್ತಿದ್ದು, ಕೆಲವು ನಂಜುನಿರೋಧಕ ಗುಣಗಳನ್ನು ಹೊಂದಿರಬಹುದು ಆದರೆ ಅದನ್ನು ಸಾಬೀತು ಮಾಡುವುದು ಮುಖ್ಯವಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Cow Urine Not Licensed: Food Safety And Quality Authority Clarifies

Even today, the sale of cow urine has not been officially licensed. On the other hand, a photo of cow urine licensed by the Food Safety and Standards Authority of India (FSSAI) was leaked.
Story first published: Tuesday, May 21, 2024, 11:00 [IST]
X
Desktop Bottom Promotion