Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Coconut Sugar Benefits: ಸಾಮಾನ್ಯ ಸಕ್ಕರೆಗಿಂತ ತೆಂಗಿನಕಾಯಿ ಸಕ್ಕರೆ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನವಿದ್ಯಾ?
ಸಿಹಿ ತಿಂಡಿ ಎಂದರೆ ಸಾಕು ನಾವೆಲ್ಲಾ ಬಾಯಿ ಚಪ್ಪರಿಸಿ ತಿನ್ನುತ್ತೇವೆ. ಆದರೆ ಅತಿಯಾಗಿ ಸಕ್ಕರೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಸಕ್ಕರೆ ಸೇವನೆಯು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗೆಂದ ಮಾತ್ರಕ್ಕೆ ಒಂದೇ ಸಮನೆ ಸಕ್ಕರೆ ತಿನ್ನೋದನ್ನು ತ್ಯಜಿಸುವುದು ಕಷ್ಟ. ಸಕ್ಕರೆ ವಿಷಕಾರಿ ಅಂತ ಗೊತ್ತಿದ್ದರೂ ಅನಿವಾರ್ಯವಾಗಿ ಹೆಚ್ಚಿನ ಜನ ಅದನ್ನೇ ಸೇವಿಸ್ತಿದ್ದಾರೆ.

ಕಬ್ಬಿನ ರಸದಿಂದ ತಯಾರಿಸಿದ ಸಕ್ಕರೆಯನ್ನು ಸಾಮಾನ್ಯ ಸಕ್ಕರೆ ಎಂದು ಕರೆಯಲಾಗುತ್ತದೆ. ಅದರ ಗ್ಲೈಸೆಮಿಕ್ ಇಂಡೆಕ್ಸ್ ಮೌಲ್ಯವು 60 ರಷ್ಟಿದೆ. ಇದು ತುಂಬಾನೇ ಅಪಾಯಕಾರಿ. ಇದು ನೇರವಾಗಿ ಮಧುಮೇಹ, ಇನ್ಸುಲಿನ್ ಪ್ರತಿರೋಧ ಮತ್ತು ಕೊಬ್ಬಿನ ಯಕೃತ್ತಿನ ಅಪಾಯವನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಕಾರಣ, ಇದು ಯಾವುದೇ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವುದಿಲ್ಲ.
ಸಕ್ಕರೆ ಸೇವಿಸಲೇಬೇಕು ಎನ್ನುವವರು ಸಕ್ಕರೆಗೆ ಬದಲಾಗಿ ತೆಂಗಿನಕಾಯಿ ಸಕ್ಕರೆಯನ್ನು ಸೇವನೆ ಮಾಡ್ಬಹುದು. ಇದು ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಅಷ್ಟಕ್ಕೂ ತೆಂಗಿನಕಾಯಿ ಸಕ್ಕರೆ ಆರೋಗ್ಯಕರವೇ? ಇದರಿಂದ ಯಾವ ರೀತಿ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.
ತೆಂಗಿನಕಾಯಿ ಸಕ್ಕರೆಯನ್ನು ತಯಾರಿಸೋದು ಹೇಗೆ?
ಹೆಚ್ಚಿನವರಿಗೆ ತೆಂಗಿನಕಾಯಿ ಸಕ್ಕರೆ ಬಗ್ಗೆ ಗೊತ್ತಿರ್ಲಿಕ್ಕಿಲ್ಲ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅಂತ ಹೇಳಲಾಗುತ್ತದೆ. ಅಷ್ಟಕ್ಕೂ ಇದನ್ನು ತಯಾರಿಸೋದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಇದನ್ನು ತೆಂಗಿನ ಕಾಯಿಯ ತುರಿಯಿಂದ ತಯಾರು ಮಾಡಲಾಗುತ್ತದೆ. ತೆಂಗಿನಕಾಯಿ ತುರಿಯ ರಸವನ್ನು ತೆಗೆದು ಅದನ್ನು ಆವಿಯಾಗುವರೆಗೂ ಹುರಿಯಲಾಗುತ್ತದೆ. ನಂತರ ಅದು ಹರಳುಗಳ ರೂಪಕ್ಕೆ ತಿರುಗುತ್ತದೆ. ಇದನ್ನೇ ತೆಂಗಿನಕಾಯಿ ಸಕ್ಕರೆ ಎಂದು ಕರೆಯಲಾಗುತ್ತದೆ.
ತೆಂಗಿನ ಕಾಯಿ ಸಕ್ಕರೆ ಕಡಿಮೆ ಜಿಐ ಹೊಂದಿದೆ!
ತೆಂಗಿನಕಾಯಿ ಸಕ್ಕರೆಯ ಗ್ಲೈಸೆಮಿಕ್ ಸೂಚ್ಯಂಕವು(ಜಿಐ) 35 ರಿಂದ 54 ರ ನಡುವೆ ಇರಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇದು ಸಾಮಾನ್ಯ ಸಕ್ಕರೆಗಿಂತ ಕಡಿಮೆ GI ಹೊಂದಿರುವ ಆಹಾರವಾಗಿದೆ. ತೆಂಗಿನಕಾಯಿ ಸಕ್ಕರೆ ಸೇವನೆ ಮಾಡೋದ್ರಿಂದ ಇದು ಮಧುಮೇಹದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ?
ತೆಂಗಿನಕಾಯಿ ಸಕ್ಕರೆಯು ಇನ್ಯುಲಿನ್ ಎಂಬ ಕರಗಬಲ್ಲ ಫೈಬರ್ ಅನ್ನು ಹೊಂದಿರುತ್ತದೆ. ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ನಿಧಾನಗೊಳಿಸುತ್ತದೆ. ಅಸಿಟೇಟ್, ಬ್ಯುಟೈರೇಟ್ ಮತ್ತು ಪ್ರೊಪಿನೇಟ್‌ನಂತಹ ಸಣ್ಣ ಸರಪಳಿ ಕೊಬ್ಬಿನಾಮ್ಲಗಳ ಸಂಶ್ಲೇಷಣೆಗೆ ಇದು ಅಗತ್ಯವಾಗಿರುತ್ತದೆ. ಆದರೆ ಮಧುಮೇಹ ಇರುವವರು ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ತೆಂಗಿನಕಾಯಿ ಸಕ್ಕರೆಯಿಂದ ಪೌಷ್ಟಿಕಾಂಶವನ್ನು ಪಡೆಯಬಹುದು!
ತೆಂಗಿನಕಾಯಿ ಸಕ್ಕರೆಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಸತು, ಕಬ್ಬಿಣ, ಪೊಟ್ಯಾಸಿಯಮ್, ರಂಜಕ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಿವೆ. ಇವುಗಳ ಜೊತೆಗೆ ಸಣ್ಣ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು, ಪಾಲಿಫಿನಾಲ್‌ಗಳು ಇವೆ. ಅದಕ್ಕಾಗಿಯೇ ಇದನ್ನು ಸಾಮಾನ್ಯ ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ.
ತೆಂಗಿನಕಾಯಿ ಸಕ್ಕರೆ ಆರೋಗ್ಯಕರವಾಗಿದ್ಯಾ?
ತೆಂಗಿನಕಾಯಿ ಸಕ್ಕರೆ ಸಾಮಾನ್ಯ ಸಕ್ಕರೆಗಿಂತ ಸಂಪೂರ್ಣವಾಗಿ ಆರೋಗ್ಯಕರ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಹಾಗಂತ ಮಿತಿಮೀರಿ ಆ ಸಕ್ಕರೆಯನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಅತಿಯಾದ್ರೆ ಅಮೃತವೂ ವಿಷವಾಗುತ್ತಂತೆ. ಹೀಗಾಗಿ ಯಾವುದೇ ಆಹಾರವಾದರೂ ಸಮತೋಲಿತವಾಗಿಯೇ ಅದನ್ನು ಸೇವನೆ ಮಾಡಬೇಕು. ಹೀಗಾಗಿ ನೀವು ಯಾವುದೇ ಆರೋಗ್ಯಕರ ಸಕ್ಕರೆಯನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








