Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಾಲರ: ಇಬ್ಬರಲ್ಲಿ ಪತ್ತೆ, 47 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು, ಇದರ ಲಕ್ಷಣಗಳೇನು? ಬೆಂಗಳೂರಿಗರೇ ಜಾಗ್ರತೆ!
ಬೆಂಗಳೂರಿನಲ್ಲಿ ನೀರಿನ ಅಭಾವವಿದೆ, ಇದರ ಜೊತೆಗೆ ಕಾಲರ ರೋಗ ಪತ್ತೆಯಾಗಿದೆ. ಬೆಂಗಳೂರಿನ BMCRIನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರ ಪತ್ತೆಯಾಗಿದೆ. ಇನ್ನು 47 ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದು ಆತಂಕ ಹೆಚ್ಚಿಸಿದೆ.
47 ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಬೇಧಿ, ನಿರ್ಜಲೀಕರಣ, ವಾಂತಿ ಈ ಬಗೆಯ ಸಮಸ್ಯೆ ಕಂಡು ಬಂದಿದೆ. ಈ ವರ್ಷ ಬೆಂಗಳೂರಿನಲ್ಲಿ 6 ಜನರಲ್ಲಿ ಕಾಲರ ಪತ್ತೆಯಾಗಿದೆ. ಮಲ್ಲೇಶ್ವರಂನ ಬಾಯ್ಸ್ ಪಿಜಿಯಲ್ಲಿಯೂ ಕಾಲರ ರೋಗ ಪತ್ತೆಯಾಗಿತ್ತು. ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆವಹಿಸಿದೆ.

ಕಾಲರ ಹರಡಲು ಪ್ರಮುಖ ಕಾರಣಗಳು
- ಮುನ್ಸಿಪಾಲಿಟಿ ನೀರು ಕುಡಿಯುವುದು:ಈ ಸಮಯದಲ್ಲಿ ನೀರನ್ನು ಹಾಗೆಯೇ ಕುಡಿಯಬೇಡಿ, ಕುದಿಸಿ ಆರಿಸಿ ಕುಡಿಯುವುದು ಸುರಕ್ಷಿತ
- ಮುನ್ಸಿಪಾಲಿಟಿ ನೀರಿನಿಂದ ಐಸ್ ಮಾಡುವುದು: ಇನ್ನು ಹೊರಗಡೆಯಿಂದ ಜ್ಯೂಸ್ ಕುಡಿಯುರಿ, ಅವರು ಜ್ಯೂಸ್ ಹಾಕುವ ಐಸ್ ಯಾವ ನೀರಿನಿಂದ ಮಾಡಿದ್ದು ಎಂಬುವುದು ನಮಗೆ ಗೊತ್ತಿರುವುದಿಲ್ಲ, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
- ಬೀದಿ ಬದಿಯ ಆಹಾರ ಸೇವನೆ: ಈ ಸಮಯದಲ್ಲಿ ಬೀದಿ ಬದಿಯ ಆಹಾರ ಸೇವಿಸಬೇಡಿ, ಕಲುಷಿತ ನೀರಿನಲ್ಲಿ ಮಾಡಿರುವ ಆಹಾರವಾದರೆ ನಿಮ್ಮ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ.
- ಕಲುಷಿತ ನೀರಿನಲ್ಲಿ ಬೆಳೆದ ತರಕಾರಿ: ಹಲವು ಕಡೆ ಕಲುಷಿತ ನೀರಿನಲ್ಲಿ ತರಕಾರಿ ಬೆಳೆಯಲಾಗುವುದು, ಈ ತರಕಾರಿಗಳು, ಅಲ್ಲಿ ಬೆಳೆದಿರುವ ಸೊಪ್ಪು ಇವುಗಳನ್ನು ತಿನ್ನುವುದರಿಂದ ಕಾಲರ ಹರಡುವುದು
- ಮೀನು, ಮಾಂಸ ಸರಿಯಾಗಿ ಬೇಯಿಸದೆ ತಿನ್ನುವುದು: ಮಾಂಸಾಹಾರವನ್ನು ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ.
ಕಾಲರದ ಲಕ್ಷಣಗಳು
- ಜೋರಾದ ಎದೆಬಡಿತ:ಎದೆಬಡಿತ ಜೋರಾಗಿ ಉಸಿರಾಟದಲ್ಲಿ ವ್ಯತ್ಯಾಸ ಉಂಟಾಗುವುದು.
- ತ್ವಚೆಯಲ್ಲಿ ಸಡಿಲವಾಗುವುದು: ನಿಮಗೆ ತುಂಬಾ ಸುಸ್ತಾದಂತೆ ಅನಿಸುವುದು
- ಕಫ ಬರುವುದು, ಶೀತ: ಶೀತ, ತುಂಬಾನೇ ಕಫದ ಸಮಸ್ಯೆ ಉಂಟಾಗುವುದು
- ಕಡಿಮೆ ರಕ್ತದೊತ್ತಡ: ಬೇಧಿ ತುಂಬಾನೇ ಆಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ರಕ್ತದೊತ್ತಡ ತುಂಬಾನೇ ಕಡಿಮೆಯಾದರೆ ಕಷ್ಟ, ಆದ್ದರಿಂದ ವಾಂತಿ, ಬೇಧಿ ಕಂಡು ಬಂದಾಗ ಆಸ್ಪತ್ರೆಗೆ ಹೋಗಬೇಕು,
- ಬಾಯಾರಿಕೆ
ಕಾಲರ ಲಕ್ಷಣಗಳು ಕಂಡು ಬಂದ ತಕ್ಷಣ ಏನು ಮಾಡಬೇಕು?
- ವಾಂತಿ-ಬೇಧಿ ಕಂಡು ಬಂದ ತಕ್ಷಣ ವೈದ್ಯರಿಗೆ ತೋರಿಸಿ
- ಚೆನ್ನಾಗಿ ನೀರು ಕುಡಿಯಬೇಕು, ಎಳನೀರು, ದ್ರವಾಹಾರ ಸೇವಿಸಬೇಕು.
- ಬೇಧಿ ಹಾಕುತ್ತಿದ್ದರೆ ನೀರನ್ನು ಕುದಿಸಿ ಅದು ಸ್ವಲ್ಪ ಆರಿದ ಮೇಲೆ ಅದಕ್ಕೆ 1 ಚಮಚ ಉಪ್ಪು 2 ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ.
- ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದರೆ ಗ್ಲುಕೋಸ್ ಹಾಕಿಸಬೇಕು.
ಕಾಲರ ತಡೆಗಟ್ಟಲು ಏನು ಮಾಡಬೇಕು?
ಕಾಲರ ರೋಗದ ತಡೆಗಟ್ಟಲು ಲಸಿಕೆ ಇದೆ. ಕಾಲರ ರೋಗ ತಡೆಗಟ್ಟಲು ಮುಖ್ಯವಾಗಿ ಕುಡಿಯುವ ನೀರಿನ ಕಡೆಗೆ ಗಮನಹರಿಸಬೇಕು.
ಕುಡಿಯುವ ನೀರಿನ ಬಗ್ಗೆ ಜಾಗ್ರತೆವಹಿಸಬೇಕು, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು: ನೀರನ್ನು ಹಾಗೆಯೇ ಕುಡಿಯುವುದರಿಂದ ಕಾಲರ ಹರಡುವುದು, ಕುದಿಸಿದ ನೀರು ಹೆಚ್ಚು ಸುರಕ್ಷಿತ
ತಿನ್ನುವ ಆಹಾರದ ಕಡೆಗೆ ಗಮನಹರಿಸಬೇಕು: ಯಾವ ನೀರಿನಲ್ಲಿ ಮಾಡಿರುತ್ತದೆ ಎಂದು ಗೊತ್ತಾಗುವುದಿಲ್ಲ
ಐಸ್ ಮಾಡುವಾಗ ಶುದ್ಧವಾದ ನೀರಿನ ಕಡೆಗೆ ಗಮನಹರಿಸಬೇಕು.
ಬಾಯಿ ಮುಕ್ಕಳಿಸುವಾಗ ಕೂಡ ಜಾಗ್ರತೆವಹಿಸಿ
ಹೂ, ಹಣ್ಣುಗಳನ್ನು ತೊಳೆದು ಬಳಸಿ
ಹೂವು, ಹಣ್ಣುಗಳನ್ನು ಹಸಿ ತಿನ್ನಬೇಡಿ
ಹಣ್ಣುಗಳು ಹಾಗೂ ತರಕಾರಿಗಳ ಸಿಪ್ಪೆ ಸುಲಿದು ತಿನ್ನಿ
ಹಾಲನ್ನು ಕಾಯಿಸದೆ ಕುಡಿಯಬೇಡಿ
ಮಾಂಸವನ್ನು ಚೆನ್ನಾಗಿ ಬೇಯಿಸಿ
ಏಕೆಂದರೆ ಈ ಕಾಲರ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದು, ಆದ್ದರಿಂದ ಈ ಸಮಯದಲ್ಲಿ ತುಂಬಾನೇ ಜಾಗ್ರತೆವಹಿಸಿ, ಹೊರಗಡೆ ಅದರಲ್ಲೂ ಬೀದಿಬದಿಯ ಆಹಾರ ತಿನ್ನಲು ಹೋಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications