Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಚ್‌ಪಿವಿ ಚುಚ್ಚುಮದ್ದು: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಅಸ್ತ್ರ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಜನವರಿ ತಿಂಗಳನ್ನು ಸರ್ವಿಕಲ್ ಕ್ಯಾನ್ಸರ್ ಅರಿವು ಮಾಸವಾಗಿ ಆಚರಿಸಲಾಗುವುದು. ಹೆಚ್‌ಪಿವಿ ಚುಚ್ಚುಮದ್ದು ಎಲ್ಲರಿಗೂ ದೊರೆಯುವಂತೆ ಮಾಡಿ, ರೋಗ ಪತ್ತೆ ಪರೀಕ್ಷೆ, ಕ್ಯಾನ್ಸರ್ ಪೂರ್ವ ಚಿಕಿತ್ಸೆ ಮತ್ತು ಸರ್ವಿಕಲ್ ಕ್ಯಾನ್ಸರ್ ನಿರ್ವಹಣೆಯ ಮೂಲಕ ಇದನ್ನು ನಿಭಾಯಿಸುವಂತೆ ಜಾಗ್ರತೆ ಮೂಡಿಸಲು ಈ ತಿಂಗಳನ್ನು ಆಚರಿಸಲಾಗುವುದು.
ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿರುವ ಗರ್ಭಕಂಠದ ಕ್ಯಾನ್ಸರ್ (ಸರ್ವಿಕಲ್ ಕ್ಯಾನ್ಸರ್) ಜಾಗತಿಕವಾಗಿಯೂ ನಿಭಾಯಿಸಲು ದೀರ್ಘಕಾಲದ ಹೆಣಗಾಟ ನಡೆಯುತ್ತಿದೆ. ಪ್ರತೀ ವರ್ಷ ಈ ಕಾಯಿಲೆಯಿಂದ ಸಾವಿರಾರು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹ್ಯೂನ್ ಪಾಪಿಲ್ಲೋಮಾ ವೈರಸ್ (ಎಚ್‌ಪಿವಿ) ಚುಚ್ಚುಮದ್ದಿನ ಆವಿಷ್ಕಾರದಿಂದಾಗಿ ಸರ್ವಿಕಲ್ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ, ಈ ಚುಚ್ಚು ಮದ್ದು ಸರ್ವಿಕಲ್ ಅಥವಾ ಗರ್ಭಕಂಠದ ಕ್ಯಾನ್ಸರ್‌ನಿಂದ ಜನರನ್ನು ಪಾರು ಪಾಡಲು ಸಹಕಾರಿಯಾಗಿದೆ.

ಎಚ್‌ಪಿವಿ ಚುಚ್ಚುಮದ್ದು
ಈ ಚುಚ್ಚುಮದ್ದು ಕೇವಲ ರೋಗಪ್ರತಿರೋಧಕ ಮಾತ್ರವಲ್ಲ, ಮನುಕುಲವನ್ನು ದೀರ್ಘಕಾಲದಿಂದ ಕಾಡುತ್ತಿರುವ ರೋಗದ ಇತಿಹಾಸದಲ್ಲಿಯೇ ದೊಡ್ಡ ತಿರುವು ತರುವ ನಿರೀಕ್ಷೆ ಇದೆ. ಎಚ್‌ಪಿವಿ ಚಚ್ಚುಮದ್ದಿನ ಪ್ರಯೋಗಗಳು ಗಣನೀಯವಾಗಿ ಯಶಸ್ವಿಯಾಗಿದೆ. ಶೇಕಡ 90ರಷ್ಟು ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳನ್ನು ಇದು ತಡೆಯಲು ಶಕ್ತವಾಗಿದೆ. ಕ್ಯಾನ್ಸರ್ ವಿರುದ್ಧದ ಜಾಗತಿಕ ಹೋರಾಟಕ್ಕೆ ಬಲತುಂಬಿದೆ. ವ್ಯಕ್ತಿಗತವಾಗಿ ಮಾತ್ರವಲ್ಲದೇ ಸಾಮೂಹಿಕವಾಗಿಯೂ ಕ್ಯಾಂಪ್‌ಗಳ ಮೂಲಕ ಚುಚ್ಚುಮದ್ದು ನೀಡುವುದರಿಂದ ಕ್ಯಾನ್ಸರ್ ಪ್ರಕರಣಗಳು ಹರಡುವುದನ್ನು ತಡೆಯಬಹುದು.
ಭಾರತದಲ್ಲಿ ಈ ಲಸಿಕೆ ಲಭ್ಯವಿದೆಯೇ?
ಭಾರತದಲ್ಲಿಯೂ ಪ್ರಸ್ತುತ ಮೂರು ಬಗೆಯ ಎಚ್‌ಪಿವಿ ಚುಚ್ಚುಮದ್ದುಗಳು ದೊರೆಯುತ್ತಿವೆ. ಇತ್ತೀಚೆಗೆ ಭಾರತೀಯ ಸರಕಾರ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಯೋಗದಲ್ಲಿ ಸರ್ವಾವ್ಯಾಕ್ ಎಂಬ ಚುಚ್ಚುಮದ್ದುವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ವಿಕಲ್ ಕ್ಯಾನ್ಸರ್‌ಗೆ ಶೇ 70ರಷ್ಟು ಕಾರಣವಾಗುವ ಎಚ್‌ಪಿವಿ 16 ಮತ್ತು18 ಸೇರಿದಂತೆ ನಾಲ್ಕು ಬಗೆಯ ಎಚ್‌ಪಿವಿ ಮಾದರಿ ವೈರಸ್ ನಾಶಪಡಿಸುವ ಸಾಮರ್ಥ್ಯ ಸರ್ವಾವ್ಯಾಕ್ ಹೊಂದಿದೆ.
ಸರ್ವಿಕಲ್ ಕ್ಯಾನ್ಸರ್ ತಡೆಗಟ್ಟಬಹುದು. ಇದಕ್ಕೆ ಸೂಕ್ತ ಚಿಕಿತ್ಸೆಯೂ ಇದೆ. ಗುಣಮಟ್ಟದ ಜೀವನಶೈಲಿ ಮತ್ತು ಸಕಾಲಿಕವಾಗಿ ತಪಾಸಣೆಯ ಮೂಲಕ ಇದನ್ನು ಪತ್ತೆ ಹಚ್ಚುವ ಮೂಲಕ ಇದನ್ನು ನಿಭಾಯಿಸಬಹುದು.
ಗರ್ಭ ಕಂಠದ ಕ್ಯಾನ್ಸರ್‌ಗೆ ಕಾರಣವೇನು?
ಮನುಷ್ಯನ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಹ್ಯೂಮನ್ ಪಾಪಿಲೋಮಾವೈರಸ್ ಅಥವಾ ಎಚ್‌ಪಿವಿ ಹೆಚ್ಚು ಸಾಮಾನ್ಯವಾಗಿ ಕಾಣಿಸುವ ವೈರಸ್. ಎಚ್‌ಪಿವಿ ಸೋಂಕು ಯಾವುದೇ ಹಸ್ತಕ್ಷೇಪವಿಲ್ಲದೇ ಕೆಲವೇ ತಿಂಗಳಲ್ಲಿ ಕಣ್ಮರೆಯಾದರೂ ಕೆಲವೊಂದು ಪ್ರಕರಣಗಳಲ್ಲಿ ಎಚ್‌ಪಿವಿ ಸೋಂಕು ದೇಹದಲ್ಲಿಯೇ ಉಳಿದು ಸರ್ವಿಕಲ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಲೈಂಗಿಕ ಸಂಪರ್ಕದಿಂದ ಹರಡುವ ಕ್ಯಾನ್ಸರ್ ಇದಾಗಿದೆ. ಇದನ್ನು ತಡೆಗಟ್ಟಬಹುದಾದರೂ ಅರಿವಿನ ಕೊರತೆಯಿಂದಾಗಿ ವಿಶ್ವಾದ್ಯಂತ ವಿಶೇಷವಾಗಿ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಸಾವಿರಾರು ಮಹಿಳೆಯರು ಇದರಿಂದ ತೊಂದರೆಗೊಳಗಾಗುತ್ತಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಪ್ರತಿ ವರ್ಷ ಸುಮಾರು 12,000 ಮಹಿಳೆಯರಲ್ಲಿ ಸರ್ವಿಕಲ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಚಿಕಿತ್ಸೆಯ ಬಳಿಕವೂ ಸುಮಾರು 4,000 ಮಹಿಳೆಯರು ಮರಣ ಹೊಂದುತ್ತಿದ್ದಾರೆ. ಅಂದಾಜು ಶೇ 80ರಷ್ಟು ಮಹಿಳೆಯರು ಒಂದಲ್ಲ ಒಂದು ಹಂತದಲ್ಲಿ ಎಚ್‌ಪಿವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೆಲವರಲ್ಲಿ ಕ್ಯಾನ್ಸರ್ ಬೆಳೆಯುತ್ತದೆ.
ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಅಧಿಕವಾಗಿ ಕಂಡು ಬರಲು ಕಾರಣವೇನು?
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ 30 ವರ್ಷ ವಯಸ್ಸು ಮೇಲ್ಪಟ್ಟ ಮಹಿಳೆಯರು ಪ್ರತಿ ಐದರಿಂದ ಹತ್ತು ವರ್ಷಗಳಿಗೊಮ್ಮೆ ಸರ್ವಿಕಲ್ ಕ್ಯಾನ್ಸರ್ ತಪಾಸಣೆಗೆ ಒಳಪಡಬೇಕು. ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯ ಮೂಲಕ ತಡೆಗಟ್ಟಲು ಇದು ಸಹಕಾರಿಯಾಗುತ್ತದೆ. ಆದರೆ ಈ ಮಾನದಂಡಗಳನ್ನು ಜಾರಿಗೆ ತರುವುದು ಕಷ್ಟವಾಗುತ್ತಿದೆ. ವಿಶೇಷವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಮಹಿಳೆಯರ ಸಾವಿಗೆ ಸರ್ವಿಕಲ್ ಕ್ಯಾನ್ಸರ್ ಎರಡನೇ ಅತಿದೊಡ್ಡ ಕಾರಣವೆಂದು ವಿಶ್ಲೇಷಿಸಲಾಗಿದೆ. ಪ್ರತಿವರ್ಷ ಸುಮಾರು 70,000 ಮಹಿಳೆಯರು ಇದರಿಂದ ಮರಣ ಹೊಂದುತ್ತಿದ್ದಾರೆ. ಕ್ಯಾನ್ಸರ್ ತಪಾಸಣೆಗೆ ಒಳಪಡುವ 30-49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರ ಪ್ರಮಾಣ ಕೇವಲ ಎರಡರಷ್ಟು ಮಾತ್ರ ಇದೆ. ಹಾಗಾಗಿ ದೇಶದಲ್ಲಿ ಸರ್ವಿಕಲ್ ಕ್ಯಾನ್ಸರ್ ಪ್ರಮಾಣ ಮಾರಣಾಂತಿಕವಾಗಿದೆ.
ಎಚ್‌ಪಿವಿ ಚುಚ್ಚುಮದ್ದು ಮಹಿಳೆಯರ ಜೀವ ರಕ್ಷಣೆ ಮಾಡುತ್ತದೆ
30 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ 5 ಅಥವಾ 10 ವರ್ಷಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು. ಈ ಚುಚ್ಚುಮದ್ದು ಮಹಿಳೆಯ ಶರೀರದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಎಚ್‌ಪಿವಿ ವಿರುದ್ಧ ಹೋರಾಡಲು ಜೀವಕಣಗಳನ್ನು ಸೃಷ್ಟಿಸುತ್ತದೆ. ಇದರಿಂದ ಸರ್ವಿಕಲ್ ಕ್ಯಾನ್ಸರ್ ಬೆಳೆಯುವುದನ್ನು ತಡೆಯುತ್ತದೆ. ನೇಕ ರಾಷ್ಟ್ರಗಳಲ್ಲಿ ಚುಚ್ಚುಮದ್ದು ಬಳಕೆಯಿಂದಾಗಿ ಸರ್ವಿಕಲ್ ಕ್ಯಾನ್ಸರ್ ಮರಣಗಳು ಇಳಿಮುಖವಾಗಿವೆ. ಭಾರತದಲ್ಲಿಯೂ ಈ ಲಸಿಕೆ ಬಡ ಮಹಿಳೆಗೂ ದೊರೆಯುವಂತಾಗಬೇಕು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬೇಕಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications