Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸ್ಟ್ರಿಕ್ಟ್ ಡಯಟ್ ಪಾಲಿಸಿ ನನ್ನ ಪತ್ನಿ ಕ್ಯಾನ್ಸರ್ ಮುಕ್ತರಾದರು ಎಂದ ಸಿಧು: ವೈದ್ಯರ ಈ ಪ್ರಶ್ನೆಗೆ ಉತ್ತರ ಕೊಡುತ್ತಾರಾ?
ಹಿಂದಿಯ ಪ್ರಸಿದ್ಧ ಶೋ ಕಾಮಿಡಿ ನೈಟ್ ವಿಥ್ ಕಪಿಲ್ ಶೋ ನೋಡುತ್ತಿದ್ದವರಿಗೆ ನವಜೋತ್ ಸಿಂಗ್ ಸಿಧು ಪರಿಚಯವಿರಬಹುದು, ಈಗ ಅವರ ಪ್ರಮುಖವಾದ ವಿಚಾರ ಹೇಳುವ ಮೂಲಕ ತುಂಬಾನೇ ಸುದ್ದಿಯಲ್ಲಿದ್ದಾರೆ. ಅವರು ಹೇಳಿರುವ ವಿಷಯ ಡಾಕ್ಟರ್‌ಗಳ ಮಧ್ಯ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ.
ವಿಷಯ ಏನಪ್ಪಾ ಎಂದರೆ ಸಿಧು ಅವರ ಪತ್ನಿಗೆ ಕ್ಯಾನ್ಸರ್ ಬಂದಿತ್ತು, ಆದರೆ ಆಹಾರಶೈಲಿ ಮೂಲಕ ಅವರೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ಸಿಧು ಬಹಿರಂಗವಾಗಿ ಹೇಳಿದ್ದಾರೆ, ಇದೀಗ ಈ ವಿಷಯದ ಬಗ್ಗೆ ವೈದ್ಯರುಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರು ಈ ವಿಷಯದ ಬಗ್ಗೆ ಪರ-ವಿರೋಧ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಸಾಮಾಜಿಕ ತಾಣದಲ್ಲಿಗ ಗುರುತಿಸಿಕೊಂಡಿರುವ TheLiverDoc ಸಿಧುಜೀ ನಿಮ್ಮ ಪತ್ನಿ ಕ್ಯಾನ್ಸರ್‌ನಿಂದ ಗುಣಮುಖವಾಗಿರುವುದು ಸಂತೋಷ, ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯ ಆರೋಗ್ಯ ಸಿಗಲಿ ಎಂದುಹಾರೈಸುತ್ತೇವೆ.
ಆದರೆ ವಿಜ್ಞಾನ ಹಾಗೂ ಆರೋಗ್ಯದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಯಂತೆ ವರ್ತಿಸುವುದನ್ನು ನಿಲ್ಲಿಸಿ, ನೀವೀಗ ಎಮೋಷನಲ್ ಆಗಿದ್ದೀರ, ಹಾಗಾಗಿ ಎಮೋಷನಲ್‌ನಿಂದಾಗಿ ನೀವು ಬ್ಲೈಂಡ್ ಆಗಿದ್ದೀರಿ, ಯಾವುದೇ ಡಯಟ್ ಆಗಲಿ ಅಥವಾ ಆಯುರ್ವೇದಿಕ್ ಹರ್ಬ್ಸ್ ಆಗಲಿ ಕ್ಯಾನ್ಸರ್ ಗುಣಪಡಿಸುತ್ತೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಮೂರ್ಖರಂತೆ ಡಯಟ್ ಬಗ್ಗೆ ಹೇಳಿ ಜನರನ್ನು ದಾರಿ ತಪ್ಪಿಸಬೇಡಿ, ನೀವು ಈಗ ಹೇಳಿರುವ ವಿಷಯದಿಂದ ಜನರು ನಿಜವಾದ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಹುದು.
ವೈದ್ಯರು ರೋಗಿ ಹಾಗೂ ಮನೆಯವರಿಗೆ ಆ ಕಾಯಿಲೆಯ ತೀವ್ರತೆ ಬಗ್ಗೆ ಹೇಳಿ ರೋಗಿ ಮತ್ತು ಮನೆಯವರನ್ನು ಪರಿಸ್ಥಿತಿಗೆ ಮಾನಸಿಕವಾಗಿ ತಯಾರು ಮಾಡುತ್ತಾರೆ. ಹಾಗಂತ ಅವರು ಸುಮ್ಮನೆ ಕೂರುವುದಿಲ್ಲ, ರೋಗಿಯನ್ನು ತಮ್ಮಿಂದ ಆದಷ್ಟೂ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾರೆ, ಆದರೆ ಅವರು ನಿಮ್ಮ ಜೊತೆ ಮಾತನಾಡುವಾಗ ತುಂಬಾ ಬುದ್ಧಿವಂತಿಕೆಯಿಂದ ಮಾತನಾಡಿರುತ್ತಾರೆ, ಆದರೆ ಚಿಕಿತ್ಸಾ ವಿಷಯದಲ್ಲಿ ಅವರು ಅವರ ಪ್ರಯತ್ನ ಮಾಡಿರುತ್ತಾರೆ, ಆದರೆ ಅದು ನಮಗೆ ಗೊತ್ತಿರುವುದಿಲ್ಲ, ಇದರ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು.
ನಿಮ್ಮ ಪತ್ನಿ ಕ್ಯಾನ್ಸರ್ ಮುಕ್ತರಾಗಲು ಯಾರು ಕಾರಣ ಎಂದು ಹೇಳದೇ ಇದ್ದಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು. ವರಯಾಮ್ ಸಿಂಗ್ ಹಾಸ್ಪಿಟಲ್‌ನ ಯಮುನಾನಗರದ Dr. Rupinder Batra (Former Tata Memorial Oncologist) ನಿಮ್ಮ ಪತ್ನಿಗೆ ಚಿಕಿತ್ಸೆ ನೀಡಿದ್ದಾರೆ, ಅವರು ಅತ್ಯುತ್ತಮ ಚಿಕಿತ್ಸೆ ನೀಡಿರುವುದರಿಂದಲೇ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ, ಆರೋಗ್ಯದ ಬಗ್ಗೆ ಅನಕ್ಷರಸ್ಥರಾಗಿರುವ ನೀವುಯುಟ್ಯೂಬ್‌ನಲ್ಲಿ ನಾನ್‌ಸೆನ್ಸ್ ಡಯಟ್, ಕಹಿ ಬೇವಿನ ಎಲೆ ಅರಿಶಿಣ ಎಲ್ಲಾ ಸೇವಿಸಿ ಗುಣಮುಖರಾಗಿದ್ದಾರೆ ಎಂದು ಹೇಳಿರುವಿರಿ, ಆದರೆ ನಿಮ್ಮ ಪತ್ನಿ ಗುಣಮುಖರಾಗಲು ಏನು ಕಾರಣ ಎಂಬುವುದನ್ನು ಯೋಚಿಸಲೇ ಇಲ್ಲ.
ಆರೋಗ್ಯದ ವಿಷಯದಲ್ಲಿ ವಿಜ್ಞಾನವನ್ನು ಸ್ವೀಕರಿಸಿ, ಕ್ಯಾನ್ಸರ್ ರೋಗಿಗಳ ಆರೋಗ್ಯ ಸುಧಾರಿಸಲು ಸಹಾಯ ಮಾಡಿ, ಅದರ ಬದಲಿಗೆ ಆಯುರ್ವೇದ ಹಾಗೂ ಡಯಟ್ ಪ್ರಮೋಟ್ ಮಾಡಬೇಡಿ,
ಅಧ್ಯಯನದ ಪ್ರಕಾರ ಯಾರು ಕ್ಯಾನ್ಸರ್‌ಗೆ ಬೇರೆ ಚಿಕಿತ್ಸಾ ವಿಧಾನ ಸ್ವೀಕರಿಸುತ್ತಾರೋ ಅವರಿಗೆ ಸಾವು ಬರುವ ಸಾಧ್ಯತೆ ಹೆಚ್ಚು, https://bmj.com/content/358/bmj.j4006
https://advisory.com/daily-briefing/2018/10/12/alternative-medicine
ಹಾಗಾಗಿ ತಪ್ಪಾದ ಮಾಹಿತಿ ಹಂಚಿಕೊಳ್ಳುವುದರ ಮೂಲಕ ಜನರನ್ನು ದಾರಿ ತಪ್ಪಿಸಬೇಡಿ ಎಂದು ಸಿಧುಜೀ ನಡೆದುಕೊಂಡ ರೀತಿಯನ್ನು ಟೀಕಿಸಿದ್ದಾರೆ,
Hello, Sidhuji, I am happy that your wife is now in remission from cancer, and my best wishes to you and a healthy future for your family.
— TheLiverDoc (@theliverdr) November 22, 2024
But please stop behaving like a science and health illiterate. I know you are emotional and emotions make people's thoughts go blind. But… https://t.co/SkG8MaJNq9
My wife is clinically cancer free today ….. pic.twitter.com/x06lExML82
— Navjot Singh Sidhu (@sherryontopp) November 21, 2024
ಸಿಧುಜೀ ಪತ್ನಿ ಕ್ಯಾನ್ಸರ್ ಚಿಕಿತ್ಸೆ ಪಡೆದಿರುವುದು ಕೂಡ ಸತ್ಯ
ಕೆಲವೊಮ್ಮೆ ಔಷಧಿ ಪರಿಣಾಮ ಬೀರಿತಾ ಅಥವಾ ನಾವು ತೆಗೆದುಕೊಂಡ ಔಷಧ ಪರಿಣಾಮ ಬೀರಿತಾ ಎಂದು ಹೇಳುವುದು ಕಷ್ಟ, ಚಿಕಿತ್ಸೆ ಜೊತೆಗೆ ನಂಬಿಕೆಯೂ ಇದ್ದಾಗ ಹೆಚ್ಚು ಫಲ ಸಿಗುತ್ತದೆ. ಸಿಧುಜೀ ಅವರ ಪತ್ನಿ ಡಯಟ್ ಮೂಲಕ ಕ್ಯಾನ್ಸರ್ ರಿವರ್ಸ್ ಮಾಡಿದ್ದಾರೆ ಎಂಬುವುದಾಗಿ ಹೇಳಿದ್ದಾರೆ, ಆದರೆ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದರು ಎಂಬುವುದು ಕೂಡ ಅಷ್ಟೇ ಸತ್ಯ. ಹಾಗಾಗಿಸಿಧುಜೀ ಹೇಳಿರುವ ವಿಷಯ ಭಾರೀ ಚರ್ಚೆ ಹುಟ್ಟು ಹಾಕಿದೆ.
ಇವರು ಡಯಟ್‌ನಿಂದ ತನ್ನ ಪತ್ನಿ ಕ್ಯಾನ್ಸರ್ ಮುಕ್ತರಾದರು ಎಂದರೆ ಇದನ್ನು ಕೇಳಿ ಬಹುತೇಕರು ಚಿಕಿತ್ಸೆ ಬದಲಿಗೆ ಡಯಟ್ ಮೊರೆ ಹೋಗಿ ಸಾವು ಬೇಗ ತಂದುಕೊಳ್ಳುವ ಅಪಾಯಿರುವುದರಿಂದ ವೈದ್ಯರು ಈ ಬಗ್ಗೆ ಜಾಗ್ರತೆವಹಿಸುವಂತೆ ಹೇಳಿದ್ದಾರೆ.
ಸ್ಟೀವ್ ಜಾಬ್ಸ್ ಈ ರೀತಿ ಪರ್ಯಾಯ ಕ್ಯಾನ್ಸರ್ ಚಿಕಿತ್ಸಾ ಮೊರೆ ಹೋಗಿ ಸಾವನ್ನಪ್ಪಿದರು ಎಂದು CA Shreekant Bangera ಎಂಬುವರು ಕಮೆಂಟ್ ಮಾಡಿದ್ದಾರೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











