Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಧುಮೇಹಿಗಳು ತುಪ್ಪ ಸೇವಿಸಬಹುದೇ..? ಲಾಭವಿದ್ಯಾ? ಅಥವಾ ಹಾನಿಕಾರಕವೇ?
ಈಗ ನಾವು ಹೊಟ್ಟೆಗೆ ಏನಾದರು ಸವಿಯಬೇಕು ಅಂದರೆ ಯೋಚನೆ ಮಾಡಬೇಕಾದ ಸ್ಥಿತಿಯಲ್ಲಿದ್ದೇವೆ. ಏಕೆಂದರೆ ಸಣ್ಣ ವಯಸ್ಸಿನಲ್ಲೂ ಮಧುಮೇಹ, ಡಯೆಟ್ ಹೀಗೆ ಒಂದಲ್ಲಾ ಒಂದು ರೀತಿಯ ಅಲಿಖಿತ ನಿಯಮ ನಮ್ಮ ಸುತ್ತ ಇದ್ದೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ಮಧುಮೇಹ ಅತ್ಯಂತ ಹೆಚ್ಚಾಗಿ ಕಾಡುವ ಒಂದು ಸಮಸ್ಯೆಯಾಗಿದೆ. ಮಧುಮೇಹಿಗಳು ಸಾಮಾನ್ಯವಾಗಿ ಕಠಿಣ ನಿಯಮ ಪಾಲಿಸಬೇಕಾಗುತ್ತದೆ.
ಹಾಗೆ ಮಧುಮೇಹಿಗಳು ಏನು ಸವಿಯಬೇಕು ಏನು ಸವಿಯಬಾರದು ಎಂಬುದನ್ನು ತಿಳಿದಿರಬೇಕು. ಮಧುಮೇಹಿಗಳು ತಮ್ಮ ಆಹಾರದ ಮೇಲೆ ಎಚ್ಚರಿಕೆ ಇಡದಿದ್ದರೆ ಖಂಡಿತ ಅನಾರೋಗ್ಯ ಕಾಡುವುದು ಖಚಿತ. ಹಾಗೆ ನಮ್ಮ ಅಡುಗೆ ಮನೆಯಲ್ಲಿ ಯಾವೆಲ್ಲಾ ಆಹಾರಗಳು ಮಾಡಿದಾಗ ನಾವು ಅದರಿಂದ ದೂರ ಇರಬೇಕು ಎಂಬುದನ್ನು ಕೂಡ ತಿಳಿದಿರಬೇಕಾಗುತ್ತದೆ.

ಸಾಮಾನ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ಈ ರೀತಿ ಜ್ಞಾನದ ಕೊರತೆ ಕೂಡ ಅಪಾಯಕ್ಕೆ ದಾರಿಯಾಗುತ್ತಿದೆ. ಮಧುಮೇಹಿಗಳು ಯಾವ ರೀತಿಯ ಆಹಾರ ಪಾಲನೆ ಮಾಡಬೇಕು ಎಂಬ ವಿಚಾರ ತಿಳಿಯುವುದು ಮುಖ್ಯವಾಗುತ್ತದೆ. ಇನ್ನು ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವಂತಹ ತುಪ್ಪವನ್ನು ಮಧುಮೇಹಿಗಳು ಸೇವಿಸಬಹುದೇ ಅಥವಾ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಪ್ಪ ಹೆಚ್ಚು ಕೊಬ್ಬು ಹಾಗೂ ಕ್ಯಾಲೋರಿಯಿಂದ ತುಂಬಿರುವುದರಿಂದ ಇದು ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಉಂಟುಮಾಡಲಿದೆ. ತುಪ್ಪದಲ್ಲಿ ವಿಟಮಿನ್ ಎ, ಡಿ, ಕೆ ಸೇರಿ ಒಂದಿಷ್ಟು ವಿಟಮಿನ್ ನಾವು ನೋಡಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬು ಸಹ ಇದ್ದು ನಮ್ಮ ದೇಹಕ್ಕೆ ಇದರ ಅಗತ್ಯತೆ ಕೂಡ ಇದೆ.
ಮಧುಮೇಹದಿಂದ ಬಳಲುತ್ತಿರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯ್ರಂತ್ರಣದಲ್ಲಿಡುವುದು ಮುಖ್ಯವಾಗುತ್ತದೆ. ಹೀಗಾಗಿ ಸಕ್ಕರೆ ಅಂಶ ಕಡಿಮೆ ಇರುವಂತಹ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡುತ್ತಾರೆ. ತುಪ್ಪವು ಕಡಿಮೆ ಗ್ಲೈಸೆಮಿಕ್ ಪ್ರಮಾಣ ಹೊಂದಿದೆ - ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಕನಿಷ್ಠ ಪರಿಣಾಮವನ್ನು ಬೀರುತ್ತದೆ. ತುಪ್ಪ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಮೆದುಳು ಮತ್ತು ಕರುಳಿನ ಆರೋಗ್ಯದ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲದೆ ಆರೋಗ್ಯದ ಕಾಳಜಿ ವಹಿಸುವವರು ಇದನ್ನು ಸೇವಿಸಬಹುದು.
ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಒಂದು ಚಮಚ ತುಪ್ಪ ಸೇರಿಸುವುದು ಉತ್ತಮವೇ. ಇದರಲ್ಲಿರುವ ಕೊಬ್ಬಿನಾಮ್ಲಗಳು ಗ್ಲೂಕೋಸ್ ಚಯಾಪಚಯಕ್ಕೆ ಸಹಾಯ ಮಾಡುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಚಮಚ ತುಪ್ಪ ಸೇವನೆ ಅನಾರೋಗ್ಯ ಹೆಚ್ಚಿಸಬಹುದು. ಹಾಗೆ ನಿಯಮಿತ ವ್ಯಾಯಾಮ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಕೂಡ ಮಧುಮೇಹಿಗಳು ಮಾಡಬೇಕಾದ ಕೆಲಸವಾಗಿದೆ.
ತುಪ್ಪ ಸೇವನೆ ಜೀರ್ಣಕ್ರಿಯೆಗೆ ಬಹಳ ಉಪಕಾರಿ. ಹಾಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರಗೊಳಿಸುವುದು. ಇದು ಅಲ್ಸರ್ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗೆ ತುಪ್ಪವು ಬ್ಯುಟರಿಕ್ ಆಮ್ಲದಿಂದ ಕೂಡಿದೆ. ಇದು ಅನಾರೋಗ್ಯದ ವಿರುದ್ಧ ಹೋರಾಡುವ T ಜೀವಕೋಶಗಳ ದೇಹದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೂ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
