Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ನಿಗೂಢ ಕಾಯಿಲೆಗೆ ಮೂರು ಕುಟುಂಬದ 17 ಮಂದಿ ಮೃತ್ಯು..! ಆರೋಗ್ಯ ಇಲಾಖೆಗೆ ತಲೆನೋವು..!
ಹೊಸ ವರ್ಷದ ಆರಂಭದಿಂದಲೇ ಹೊಸ ಹೊಸ ವೈರಸ್‌ಗಳು, HMPV ಸೇರಿ ಹಲವು ರೀತಿ ಅನಾರೋಗ್ಯ ಉಂಟು ಮಾಡುವ ವೈರಸ್‌ಗಳು ಪತ್ತೆಯಾಗಿದ್ದವು. ಚೀನಾದಲ್ಲಿ ಹೆಚ್ಎಂಪಿವಿ ಹರಡುವಿಕೆ ಸೇರಿ ಭಾರತದಲ್ಲೂ ಈ ಪ್ರಕರಣಗಳು ವರದಿಯಾಗಿದ್ದವು. ಹಾಗೆ ಅಮೆರಿಕದಲ್ಲಿ ಹಕ್ಕಿ ಜ್ವರದ ಭೀತಿ ಉಂಟಾಗಿರುವುದು ಕೂಡ ನಾವು ನೋಡಬಹುದು. ಆದ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಚಿತ್ರ ಪ್ರಕರಣಗಳು ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಿಗೂಢ ರೀತಿಯಲ್ಲಿ 17 ಮಂದಿಯ ಮೃತ್ಯು ಈಗ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಇಲ್ಲಿನ ಬುಧಾಲ್ ತಹಶೀಲ್‌ನಲ್ಲಿ ಮೂರು ಕುಟುಂಬಗಳಲ್ಲಿ 17 ಮಂದಿ ಮೃತಪಟ್ಟಿರುವುದು ನಿಗೂಢ ವೈರಸ್‌ನ ಆತಂಕ ಹುಟ್ಟಿಸಿದೆ. ಈ ಸಾವುಗಳು ಕೇವಲ 45 ದಿನಗಳಲ್ಲಿ ವರದಿಯಾಗಿರುವುದು ಕೂಡ ಎಲ್ಲರಲ್ಲೂ ಭಯ ಹುಟ್ಟಿಸಿದೆ.

ಸದ್ಯ ಈಗ ಮೂರು ಕುಟುಂಬದಲ್ಲಿ ಉಳಿದಿರುವ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದ್ದು ಮನೆಯನ್ನು ಸೀಲ್ ಮಾಡಿ ಸ್ವಚ್ಚಗೊಳಿಸಲಾಗಿದೆ. ಹಾಗೆ ಅವರ ಪ್ರವಾಸದ ಇತಿಹಾಸ, ಆಹಾರ ಕ್ರಮದ ಮೇಲೆ ಪರಿಶೀಲನೆಗಳು ನಡೆಯುತ್ತಿದೆ. ಆದರೆ ಈವರೆಗೆ ಈ ನಿಗೂಢ ಸಾವಿಗೆ ಕಾರಣ ಮಾತ್ರ ತಿಳಿದುಬಂದಿಲ್ಲ.
ವೈದ್ಯಕೀಯ ಪ್ರಾಥಮಿಕ ಪರಿಶೀಲನೆಯಲ್ಲಿ ಈ ಸಾವುಗಳಿಗೆ ವೈರಸ್‌ಗಳು, ಬ್ಯಾಕ್ಟೀರಿಯಾ ಸೋಂಕು ಕಾರಣವಲ್ಲ ಬದಲಿಗೆ ನ್ಯೂರೋಟಾಕ್ಸಿನ್‌ಗಳ ಸಂಭಾವನೀಯ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಮೃತರಲ್ಲಿ ಜ್ವರ, ವಾಂತಿ, ನಿರ್ಜಲೀಕರಣ, ಹೊಟ್ಟೆ ನೋವು ಮತ್ತು ಪ್ರಜ್ಞಾಹೀನ ಸ್ಥಿತಿಗೆ ಹೋಗುವುದು ಸೇರಿ ಕೆಲವೊಂದು ಲಕ್ಷಣಳಿದ್ದವು ಎಂದು ತಿಳಿದುಬಂದಿದೆ.
ಈ ಸಮಸ್ಯೆಗೆ ಒಳಗಾದವರ ಸ್ಥಳದಿಂದ ರಕ್ತ, ಪ್ಲಾಸ್ಮಾ, ಆಹಾರ, ನೀರು ಮತ್ತು ಪರಿಸರದ ಮಾದರಿಗಳು ಸೇರಿ ಒಟ್ಟು 12,500 ಕ್ಕೂ ಹೆಚ್ಚು ಮಾದರಿಗಳನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಪರೀಕ್ಷಿಸಿವೆ ಎಂದು ತಿಳಿದುಬಂದಿದೆ. ಇಷ್ಟಾದರು ಈ ಸಾವುಗಳು ಸಂಭವಿಸಿರುವುದು ಏಕೆ ಎಂಬ ಕುರಿತು ಖಚಿತವಾಗಿ ಹೇಳಲಾಗಿಲ್ಲ. ಹಾಗೆ ಗ್ರಾಮದ ನೀರಿನ ಮೂಲಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ, ಅಲ್ಲಿನ ಬಾವಿ, ಕೆರೆ ನೀರಿನಲ್ಲಿ ಕೀಟನಾಶಕದಂತಹ ಅಂಶಗಳು ಪರೀಕ್ಷೆಯಲ್ಲಿ ಕಂಡುಬಂದಿದೆ ಹೀಗಾಗಿ ಈ ಜಲಮೂಲಗಳ ನೀರು ಬಳಸದಂತೆ ಸೂಚಿಸಲಾಗಿದೆ. ಆದರೆ ಅಲ್ಲಿನ ಸಾವುಗಳಿಗೆ ಇದು ಕಾರಣವಾಗಿದೆ ಎಂಬ ನಿರ್ಧಾರಕ್ಕೆ ಬಂದಿಲ್ಲ.
ಡಿಸೆಂಬರ್ 5ರಿಂದು ಮೊದಲ ಸಾವಿನ ಪ್ರಕರಣ ವರದಿಯಾಗಿದೆ. ಬುಧಾಲ್ ತಹಸಿಲ್ ನಿವಾಸಿ ಫಜಲ್ ಹುಸೇನ್ ಮತ್ತು ಕುಟುಂಬದ ಸದಸ್ಯರು ತಮ್ಮ ಹಿರಿಯ ಮಗಳ ವಿವಾಹದ ಸಮಯದಲ್ಲಿ ಊಟ ಮುಗಿಸಿದ ಬಳಿಕ ಅಸ್ವಸ್ಥರಾದರು. ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿತ್ತು, ಅವರನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟರು.
ಈ ಘಟನೆ ನಡೆದು ಒಂದು ತಿಂಗಳ ಬಳಿಕ ಜನವರಿ 12ರಂದು ಮತ್ತೊಂದು ಸಾಮೂಹಿಕ ಭೋಜನ ಕೂಟದಲ್ಲಿ ಆಹಾರ ಸೇವಿಸಿದ ಬಳಕ 10 ಮಂದಿ ಅಸ್ವಸ್ಥರಾದರು. ಈ ಘಟನೆಯಲ್ಲಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟರು. ಹಾಗೆ ನಿಧಾನವಾಗಿ ಈ ಸಂಖ್ಯೆ 17ಕ್ಕೆ ತಲುಪಿತು. ಮೂರು ಕುಟುಂಬದ ಒಟ್ಟು 17 ಮಂದಿ ಮೃತಪಟ್ಟರು.
ಒಟ್ಟು 3,500 ಕ್ಕೂ ಹೆಚ್ಚು ನಿವಾಸಿಗಳಿರುವ ಹಳ್ಳಿಯಲ್ಲಿ ಕೇವಲ ಮೂರು ಕುಟುಂಬದ ಮಂದಿ ಈ ಸಮಸ್ಯೆಗೆ ಒಳಗಾಗಿರುವುದು ಹೇಗೆ ಎಂಬ ಅಚ್ಚರಿ ಮೂಡಿಸಿದೆ. ಹಾಗೆ ಈ ಕುಟುಂಬಸ್ಥರು ಸೇರಿ ಉಳಿದೆಲ್ಲಾ ಜನರ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ವೈರಸ್ ಆಗಲಿ, ಸೋಂಕು ಇರುವುದಾಗಲಿ ಪತ್ತೆಯಾಗಿಲ್ಲ. ಸದ್ಯ ಕೇಂದ್ರ ಆರೋಗ್ಯ ಇಲಾಖೆ ಕೂಡ ಈ ನಿಗೂಢ ಸಾವುಗಳ ಕುರಿತು ಪರಿಶೀಲನೆಯಲ್ಲಿ ತೊಡಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications