Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಭಾದ್ರಪದ ಮಾಸದಲ್ಲಿ ಮೊಸರು ಸೇರಿದಂತೆ ಈ 4 ಆಹಾರಗಳನ್ನು ಸೇವಿಸಬಾರದು
ಕನ್ನಡ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದೆ. ಇದು ಕನ್ನಡ ಮಾಸದ ಆರನೇ ತಿಂಗಳು. ಈ ತಿಂಗಳಿನಲ್ಲಿ ಗಣೇಶ ಚತುರ್ಥಿ ಬರುತ್ತದೆ. ಅಲ್ಲದೆ ತಿಂಗಳು ಪೂಜಾ ಕಾರ್ಯಗಳನ್ನು ಮಾಡಿದರೆ ತುಂಬಾನೇ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ.
ಅದಲ್ಲದೆ ಈ ತಿಂಗಳಿನಲ್ಲಿ ಮೊಸರು ತಿನ್ನಬಾರದೆಂದು ಕೂಡ ಹೇಳಲಾಗುವುದು. ಭಾದ್ರಪದ ಮಾಸದಲ್ಲಿ ಏಕೆ ಮೊಸರು ತಿನ್ನಬಾರದು? ಆಯುರ್ವೇದ ಈ ಕುರಿತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಭಾದ್ರಪದ ಮಾಸದಲ್ಲಿ ಮೊಸರು ತಿನ್ನಬಾರದು ಏಕೆ?
ಭಾದ್ರಪದ ಮಾಸವೆಂದರೆ ಮಳೆಯ ಸಮಯ. ಈ ಸಮಯದಲ್ಲಿ ಕಾಯಿಲೆಗಳು ಅಧಿಕ, ಅಲ್ಲದೆ ಈ ಸೀಸನ್‌ನಲ್ಲಿ ಅಧಿಕ ಬ್ಯಾಕ್ಟಿರಿಯಾ ಚಟುವಟಿಕೆಗಳಿರುತ್ತದೆ. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟಿರಿಯಾ ಅಲ್ಲದೆ ಹಾನಿಕಾರಕ ಬ್ಯಾಕ್ಟಿರಿಯಾ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಇದರಿಂದ ಕರುಳಿಗೆ ಹಾನಿಯುಂಟಾಗುವುದು. ಇದರಿಂದಾಗಿ ಈ ಸಮಯದಲ್ಲಿ ಮಜ್ಜಿಗೆ, ಮೊಸರು ತಿನ್ನಬಾರದೆಂದು ಹೇಳಲಾಗುವುದು.
ಆರೋಗ್ಯಕ್ಕೆ ಒಳ್ಳೆಯದಲ್ಲ
ಮೊಸರಿನಲ್ಲಿರುವ ಬ್ಯಾಕ್ಟಿರಿಯಾ ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ ಈ ಬ್ಯಾಕ್ಟಿರಿಯಾ ಅಧಿಕವಾದಾಗ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಸರನ್ನು ಸೇವಿಸಿದರೆ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವುದು. ಮೊಸರನ್ನು ಈ ಸಮಯದಲ್ಲಿ ತಿನ್ನುವುದರಿಂದ ಗಂಟಲು ನೋವು , ಶೀತ ಈ ಬಗೆಯ ಸಮಸ್ಯೆ ಉಂಟಾಗುವುದು.
ಈ ಆಹಾರಗಳನ್ನು ತಿನ್ನಬಾರದೆಂದು ಹೇಳಲಾಗುವುದು
ಬೆಲ್ಲ: ಭಾದ್ರಪದ ಮಾಸದಲ್ಲಿ ಬೆಲ್ಲ ತಿನ್ನಬಾರದು, ಈ ಸಮಯದಲ್ಲಿ ಬೆಲ್ಲ ತಿನ್ನುವುದರಿಂದ ಹೊಟ್ಟೆ ಸಂಬಂಧಿತ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
ಎಳ್ಳು ತಿನ್ನಬಾರದು
ಎಳ್ಳು ಕೂಡ ಈ ಸಮಯದಲ್ಲಿ ತಿನ್ನಬಾರದು ಎಂದು ಹೇಳಲಾಗುವುದು, ಎಳ್ಳನ್ನು ನೈವೇದ್ಯಕ್ಕೆ ಕೂಡ ಈ ತಿಂಗಳಿನಲ್ಲಿ ಬಳಸುವುದಿಲ್ಲ.
* ಬೇರೆಯವರು ದಾನ ಮಾಡಿದ ಅಕ್ಕಿಯನ್ನು ಸೇವಿಸಬಾರದು: ಭಾದ್ರಪದ ಮಾಸದಲ್ಲಿ ಬೇರೆಯವರು ದಾನ ಮಾಡಿದ ಅಕ್ಕಿಯನ್ನು ತಿನ್ನಬಾರದು, ಇದರಿಂದ ದಾರಿದ್ರ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು.
* ಭಾದ್ರಪದ ಮಾಸದಲ್ಲಿ ತೆಂಗಿನೆಣ್ಣೆ ಅಡುಗೆಗೆ ಬಳಸಬಾರದು ಎಂದು ಹೇಳಲಾಗುವುದು.
ಭಾದ್ರಪದ ಮಾಸದ ಭಾನುವಾರ ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು
ಈ ದಿನ ಕೂದಲನ್ನು ಕತ್ತರಿಸಬಾರದು ಎಂದು ಹೇಳಲಾಗುವುದು. ಭಾದ್ರಪದ ಭಾನುವಾರ ಉಪ್ಪು ಬಳಸಬಾರದು, ಕಾಲಿಗೆ ಶೂ ಧರಿಸಬಾರದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
