Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
ಬೇಸಿಗೆಯಲ್ಲಿ ತೂಕ ಇಳಿಕೆಗೆ ಈ ಪಾನೀಯ ಒಳ್ಳೆಯದು
ಉಳಿದ ಎಲ್ಲಾ ಋತುಗಳಿಗಿಂತಲೂ ಬೇಸಿಗೆಯಲ್ಲಿ ಹೆಚ್ಚು ತೂಕ ಇಳಿಸಿಕೊಳ್ಳಲು ಸಾಧ್ಯ. ಯಾಕೆಂದರೆ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತದೆ ಇದರಿಂದ ಕ್ಯಾಲೋರಿ ಕರಗುತ್ತದೆ ಜೊತೆಗೆ ಸೇವಿಸಿದ ಆಹಾರ ಪದಾರ್ಥಗಳು ಕೂಡ ಬಹಳ ಬೇಗ ಜೀರ್ಣವಾಗುತ್ತವೆ.
ನಿಮ್ಮ ದಿನನಿತ್ಯದ ವ್ಯಾಯಾಮ, ಯೋಗ ಅಥವಾ ಇತರ ಚಟುವಟಿಕೆಗಳ ಜೊತೆಗೆ ನಿಮ್ಮ ಡಯಟ್ ಪ್ಲಾನಿಂಗ್ ಕೂಡ ತೂಕ ಇಳಿಕೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಪ್ರಮುಖ ಪಾನೀಯಗಳ ಬಗ್ಗೆ ಈ ಲೇಖನದಲ್ಲಿ ಇದೇ ಸಂಪೂರ್ಣ ಮಾಹಿತಿ.

ಬೇಸಿಗೆಯಲ್ಲಿ ಕ್ಯಾಲೋರಿ ಹೆಚ್ಚಾಗಿ ಕರಗಿಸಬಹುದು ಆದರೆ ಎನರ್ಜಿಯನ್ನೂ ಕೂಡ ಬೇಸಿಗೆಯಲ್ಲಿ ಹೆಚ್ಚು ಕಳೆದುಕೊಳ್ಳುತ್ತೇವೆ. ಆದ್ದರಿಂದ ದೇಹಕ್ಕೆ ಎನರ್ಜಿಯನ್ನು ನೀಡುವಂತಹ ಹಾಗೂ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವಂತಹ ಕೆಲವು ಪಾನೀಯಗಳನ್ನು ಸೇವಿಸಿದರೆ ತುಂಬಾನೆ ಒಳ್ಳೆಯದು. ಅದರಲ್ಲೂ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಈ ಕೆಲವು ಪಾನೀಯಗಳು ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯ.
ಎಳನೀರು:
ಎಳನೀರನ್ನು ಅಮೃತ ಎಂದೇ ಕರೆಯಬಹುದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಅತ್ಯಂತ ಸೂಕ್ತವಾದ ಪಾನೀಯ ಅಂದ್ರೆ ಅದು ಎಳನೀರು. ಆರೋಗ್ಯದ ವಿಷಯಕ್ಕೆ ಬಂದರೆ ಚಮತ್ಕಾರವನ್ನೇ ಮಾಡುವಂತಹ ಶಕ್ತಿ ಎಳನೀರಿನಲ್ಲಿದೆ. ಪೌಷ್ಟಿಕಾಂಶ ಭರಿತ ಹಾಗೂ ಕೊಬ್ಬು ಮುಕ್ತವಾಗಿರುವ ಎಳನೀರು ಹೈಡ್ರೇಟಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ನೀವು ನಿಯಮಿತವಾಗಿ ಎಳನೀರನ್ನು ಸೇವಿಸಿದರೆ ದೇಹದಲ್ಲಿ ನಿರ್ಜಲೀಕರಣ ಅಥವಾ ಡಿ ಹೈಡ್ರೇಶನ್ ಆಗುವುದಿಲ್ಲ.
ಇನ್ನು ಎಳನೀರಿನಲ್ಲಿ ಪ್ರೊಟೀನ್, ಪೊಟ್ಯಾಸಿಯಂ, ವಿಟಮಿನ್, ಖನಿಜಗಳು ಕೂಡ ಹೇರಳವಾಗಿರುತ್ತದೆ. ಇದರಲ್ಲಿ ಇರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಇದರಿಂದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಎಳನೀರು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನಿಂಬೆಹಣ್ಣು:
ನಿಂಬೆರಸ ತೂಕ ಇಳಿಕೆಯಲ್ಲಿ ಚಮತ್ಕಾರವನ್ನೇ ಮಾಡುತ್ತದೆ ಎನ್ನುವುದು ಹಲವರಿಗೆ ಗೊತ್ತು. ತೂಕ ಇಳಿಕೆಯ ಡಯಟ್ ಪ್ಲಾನ್ ಮಾಡುವವರ ಡಯಟ್ ನಲ್ಲಿ ಮೊದಲಿಗೆ ನಿಂಬೆಹಣ್ಣಿನ ರಸವೇ ಇರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ನಿಂಬೆಹಣ್ಣಿನ ರಸವನ್ನು ಸೇವಿಸುವುದು ತುಂಬಾನೇ ಒಳ್ಳೆಯದು.
ಇದು ದೇಹವನ್ನು ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳುತ್ತದೆ ದೇಹಕ್ಕೆ ತಂಪನ್ನು ಕೂಡ ನೀಡುತ್ತದೆ. ಇನ್ನು ವಿಟಮಿನ್ ಐ, ಸಿಟ್ರಿಕ್ ಆಮ್ಲ, ಆಂಟಿ ಅಕ್ಸಿಡೆಂಟ್, ಪ್ಲೇವನಾಯ್ಡ್ ಅಂಶಗಳು ದೇಹವನ್ನು ರಿಫ್ರೇಶ್ ಕೂಡ ಮಾಡುತ್ತದೆ. ಜೀರ್ಣಕ್ರಿಯೆ ಸರಿದೂಗಿಸುವಲ್ಲಿ ನಿಂಬೆಹಣ್ಣಿನ ಪಾತ್ರ ಬಹಳ ಮುಖ್ಯ.
ಒಂದು ಲೋಟ ನೀರಿಗೆ ಅರ್ಧದಷ್ಟು ನಿಂಬೆಹಣ್ಣಿನ ಹೋಳಿನ ರಸವನ್ನು ಹಿಂಡಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿದರೆ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ ಜೊತೆಗೆ ತೂಕವು ಇಳಿಕೆಯಾಗುತ್ತದೆ. ನಿಯಮಿತವಾಗಿ ಈ ಪಾನೀಯವನ್ನು ತಪ್ಪದೇ ಸೇವಿಸುತ್ತಾ ಬನ್ನಿ. ಇನ್ನು ಎಳನೀರು ಹಾಗೂ ನಿಂಬೆ ರಸವನ್ನು ನೈಸರ್ಗಿಕವಾಗಿ ಬಳಸಿಕೊಳ್ಳಬೇಕು, ಇದಕ್ಕೆ ಆಡೆಡ್ ಶುಗರ್, ಉಪ್ಪು ಮೊದಲಾದವುಗಳನ್ನು ಸೇರಿಸಬೇಡಿ.
ಜೀರಿಗೆ ನೀರು:
ದಿನವೂ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯಬೇಕು ಒಂದು ಗ್ಲಾಸ್ ನೀರಿಗೆ ಎರಡು ಚಮಚದಷ್ಟು ಜೀರಿಗೆಯನ್ನು ಹಾಕಿ ಕುದಿಸಿ ಆ ನೀರನ್ನು ಕುಡಿಯಬೇಕು. ಜೀರಿಗೆ ನೀರನ್ನು ಸ್ವಲ್ಪ ಬೆಚ್ಚಗೆಯೂ ಕುಡಿಯಬಹುದು ಅಥವಾ ಆರಿದ ನಂತರವೂ ಕುಡಿಯಬಹುದು ಇದು ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಹಸಿವನ್ನು ಕೂಡ ಕಡಿಮೆ ಮಾಡುತ್ತದೆ ಹಾಗಾಗಿ ನಿಮಗೆ ಮತ್ತೆ ಮತ್ತೆ ತಿನ್ನುವ ಬಯಕೆ ಆಗುವುದಿಲ್ಲ. ಹೆಚ್ಚು ದೇಹ ಡಿ ಹೈಡ್ರೇಟ್ ಕೂಡ ಆಗುವುದಿಲ್ಲ.
ಗ್ರೀನ್ ಟೀ:
ಗ್ರೀನ್ ಟೀ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯ ಎಂದು ಹೇಳಲಾಗಿದೆ, ನಿತ್ಯ ಒಂದೆರಡು ಬಾರಿ ಗ್ರೀನ್ ಟೀ ಕುಡಿದರೆ ಒಳ್ಳೆಯದು ಇದರಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಇರುವುದರಿಂದ ತೂಕ ನಷ್ಟಕ್ಕೆ ಒಳ್ಳೆಯದು. ಆದರೆ ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಷ್ಟು ಸೂಕ್ತವಲ್ಲ ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ.
ಸೌತೆಕಾಯಿ:
ಸೌತೆಕಾಯಿ ರಸ ಅಥವಾ ಜ್ಯೂಸ್ ರಿಫ್ರೆಶ್ಮೆಂಟ್ ಪಾನೀಯವಾಗಿದೆ. ನೀವು ದಿನದಲ್ಲಿ ವ್ಯಾಯಾಮ, ಜಾಕಿಂಗ್ ಮತ್ತಿತರ ಚಟುವಟಿಕೆಯ ನಂತರ ಸ್ವಲ್ಪ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಎನರ್ಜಿಯು ಸಿಗುತ್ತದೆ ಜೊತೆಗೆ ತೂಕ ಇಳಿಕೆಗೂ ಕೂಡ ಇದು ಪರಿಣಾಮಕಾರಿಯಾದ ಪಾನೀಯವಾಗಿದೆ.
ಮಜ್ಜಿಗೆ:
ಮಜ್ಜಿಗೆ ಬಡವರ ಬಂಧು. ಅದೆಷ್ಟೇ ಬಾಯಾರಿಕೆಯಾಗಿದ್ದರು ಒಂದು ಚಂಬು ಮಜ್ಜಿಗೆ ಕುಡಿದು ಬಿಟ್ಟರೆ ಎಂತಹ ಬಾಯಾರಿಕೆ, ಸುಸ್ತು ಇದ್ದರೂ ಕಡಿಮೆಯಾಗಿ ಬಿಡುತ್ತದೆ. ಹಳ್ಳಿಗಳಲ್ಲಿ ಈಗಲೂ ಮಜ್ಜಿಗೆ ಕುಡಿಯುವ ಪದ್ಧತಿ ಇದೆ. ಇದು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ತೆಳ್ಳನೆಯ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಕೊತ್ತಂಬರಿ ಸೊಪ್ಪನ್ನು ಹಾಕಿ ಕುಡಿದರೆ ತೂಕ ಇಳಿಕೆಗೆ ಬಹಳ ಒಳ್ಳೆಯದು ಅಲ್ಲದೆ ಗ್ಯಾಸ್ಟಿಕ್ ಸಮಸ್ಯೆಯನ್ನು ಕೂಡ ಇದು ನಿವಾರಣೆ ಮಾಡುತ್ತದೆ.
ಕಿತ್ತಲೆ ಹಣ್ಣಿನ ರಸ:
ಕಿತ್ತಳೆ ಹಣ್ಣು ಕೂಡ ಉತ್ತಮ ಡಿಟಾಕ್ಸ್ ಆಗಿದ್ದು, ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿದ್ದು ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ.
ಸೇಬು ಮತ್ತು ಚಕ್ಕೆ:
ಸೇಬು ಜ್ಯೂಸ್ ಕುಡಿಯುವುದು ಕೂಡ ಬಹಳ ಒಳ್ಳೆಯದು. ಆದರೆ ಇದು ಹೆಚ್ಚಾಗಿ ಕುಡಿದರೆ ತೂಕ ಇಳಿಕೆ ಆಗುವುದಿಲ್ಲ. ಏಕೆಂದರೆ ಸೇಬು ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಆದರೆ ನೀವು ಆಪಲ್ ಜ್ಯೂಸ್ ಮಾಡುವಾಗ ಅದಕ್ಕೆ ಅರ್ಧ ತುಂಡು ದಾಲ್ಚಿನಿ ಅಥವಾ ಚಕ್ಕೆಯನ್ನು ಹಾಕಿ ರುಬ್ಬಿ ಕುಡಿದರೆ ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇನ್ನು ಆಪಲ್ ಜ್ಯೂಸ್ ಕುಡಿದರೆ ಬೇಗ ಹಸಿವಾಗುವುದಿಲ್ಲ ಹಾಗಾಗಿ ನೀವು ಆಗಾಗ ಇತರ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ ಇದರಿಂದ ಸಹಜವಾಗಿಯೇ ತೂಕ ಇಳಿಕೆಯಾಗುತ್ತದೆ.
ಈ ಎಲ್ಲ ಪಾನೀಯಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ. ಬೇಸಿಗೆಯಲ್ಲಿ ದೇಹ ಡಿಹೈಡ್ರೇಟ್ ಅಥವಾ ನಿರ್ಜಲೀಕರಣ ಆಗುವುದರಿಂದ ನಾಲಿಗೆಗೆ ಬಾಯಾರಿಕೆ ಆಗದಿದ್ದರೂ ದೇಹಕ್ಕೆ ಅಗತ್ಯವಿರುವ ಕಾರಣ ಹೆಚ್ಚಾಗಿ ನೀರನ್ನು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












