Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಉತ್ತಮ ಸ್ನೇಹಿತರು ಮಾನಸಿಕ ಆರೋಗ್ಯಕ್ಕೆ ಮನೆಮದ್ದು ಇದ್ದಂತೆ.!! ಹೇಗೆ ಗೊತ್ತಾ?
ಸ್ನೇಹಿತರು ಇರದ ಮಾನವನೇ ಇಲ್ಲ. ಭೂಮಿಯ ಮೇಲೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಸಹ ಸ್ನೇಹಿತರನ್ನು ಸಂಪಾದಿಸಿರುತ್ತವೆ. ಸಕಲ ಜೀವ ಸಂಕುಲವು ಸ್ನೇಹಿತರು, ಜೊತೆಗಾರರು, ಸಂಗಾತಿಯ ಜೊತೆಯಾಗಿ ಬದುಕುತ್ತವೆ. ಈ ಸ್ನೇಹ, ಗೆಳೆತನ ಎಂಬುದು ಸುಮಧುರ ಬಾಂಧವ್ಯ. ಇದು ಕೆಲವರಿಗೆ ರಕ್ತ ಸಂಬಂಧವನ್ನೂ ಸಹ ಮೀರಿದ್ದು. ಕೆಲವರು ಕುಟುಂಬ, ಸಂಬಂಧಿಕರ ಬಳಿಕ ಹೇಳದ ವಿಚಾರಗಳನ್ನ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ.
ಇನ್ನು ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ ಎಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಒಬ್ಬ ಸ್ನೇಹಿತ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ದರಿಸಬಹುದು. ಆತನಿಂದ ವ್ಯಕ್ತಿಯ ಗುಣಗಳನ್ನು ಸಹ ನಿರ್ಧರಿಸಬಹುದು. ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ನಾಣ್ಣುಡಿ ಸಹ ನಮಗೆ ಗೊತ್ತಿದೆ. ಹೀಗಾಗಿ ನಮ್ಮ ಸಂಘದಲ್ಲಿ ಎಂತಹ ಸ್ನೇಹಿತರಿದ್ದಾರೆ ಎಂಬುದು ಮುಖ್ಯವಾಗಿದೆ.

ಇನ್ನು ಈ ಸ್ನೇಹಿತರ ಸಂಘ ಮಾಡುವುದು ನಾವು ಸಮಯ ಕಳೆಯಲು ಅಥವಾ ಯಾರ ಬಳಿಯೂ ಹೇಳಲಾದ ಸಮಸ್ಯೆಗಳ ಹೇಳಿಕೊಳ್ಳಲು. ನಮ್ಮ ಆಲೋಚನೆಗಳು ಯಾರ ಆಲೋಚನೆಯೊಂದಿಗೆ ಸರಿ ಹೊಂದುತ್ತದೆಯೋ ಅಂತವರ ಸಂಘ ಮಾಡುತ್ತೇವೆ. ನಿಮಗೆ ಗೊತ್ತಾ ಸ್ನೇಹಿತರ ಸಂಘದಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆಯಂತೆ.
ನಮಗೆ ನಿತ್ಯ ಕಣ್ಣಿಗೆ ಬೀಳುವ ಸಣ್ಣ ಸ್ನೇಹಿತರ ಸಂಘವಿರಬಹುದು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ಸ್ನೇಹಿತರಿರಬಹುದು. ಹಾಗೆ ಮೊಬೈಲ್ ಕರೆಗಳು, ಸಂದೇಶಗಳಲ್ಲಿ ಆಗಾಗ ಮಾತಿಗೆ ಸಿಗುವ ಸ್ನೇಹಿತರು ಸಹ ಇರಬಹುದು. ಇದೆಲ್ಲವು ನಮ್ಮ ಭಾವನೆಗಳ ಹೊರಹಾಕಲು ಇರುವ ಮಾಧ್ಯಮವಾಗಿದೆ.
ಸ್ನೇಹಿತರು ನಿಜವಾಗಲು ನಮ್ಮ ಮಾನಸಿಕ ಆರೋಗ್ಯಕ್ಕೆ ಹೇಗೆ ಸಹಾಯಕರು ಎಂಬುದನ್ನು ಅಧ್ಯಯನವು ತಿಳಿಸುತ್ತದೆ. ಜೀವನದ ಉದ್ದಕ್ಕೂ ಯಾರು ಸಹಾಯಕ್ಕೆ ನಿಂತಿರುತ್ತಾರೋ ಅಥವಾ ನಮ್ಮ ಬೆಂಬಲವಾಗಿ ನಿಂತಿರುತ್ತಾರೋ ಅಂತರು ಕಠಿಣ ಪರಿಸ್ಥಿತಿಯನ್ನ ಬಹಳ ಸರಳವಾಗಿ ಎದುರಿಸುತ್ತಾರೆ. ಸುಲಭದ ಪರಿಹಾರ ಪಡೆಯುತ್ತಾರೆ ಎಂಬುದು ಅಧ್ಯಯನಗಳಲ್ಲಿ ತಿಳಿದುಬಂದಿದೆ.
ಮನಶ್ಶಾಸ್ತ್ರಜ್ಞರ ಪ್ರಕಾರ, ಜೀವನದುದ್ದಕ್ಕೂ ಬೆಂಬಲ, ಸ್ಥಿತಿಸ್ಥಾಪಕತ್ವ ಮತ್ತು ಆಶಾವಾದಕ್ಕಾಗಿ ಉತ್ತಮ ಸ್ನೇಹ ಅಗತ್ಯವಂತೆ. ನಾವು ಉತ್ತಮ ಸ್ನೇಹಿತರ ಹೊಂದಿದ್ದರೆ ಅವರ ಜೀನವದಲ್ಲಿ ಯಶಸ್ಸಿನ ಜೊತೆಗೆ ನಮ್ಮ ಜೀವನವೂ ಬೆಳವಣಿಗೆ ಹೊಂದುತ್ತೇವೆ. ನಾವು ಭಾವನಾತ್ಮಕ ಮತ್ತು ಮಾನಸಿಕ ಬೆಂಬಲವನ್ನು ಅವರಿಂದ ಪಡೆಯುತ್ತೇವೆ. ನಾವು ಆತಂಕ ಅಥವಾ ಉದ್ವೇಗದಲ್ಲಿದ್ದಾಗ ನಮ್ಮನ್ನು ಪ್ರಚೋದಿಸಲು ಸ್ನೇಹಿತರಿಗಿಂತ ಉತ್ತಮ ಮಾಧ್ಯಮ ಮತ್ತೊಂದಿಲ್ಲ ಅವರಿಂದ ಸಿಗುವ ಸಲಹೆ, ಟಿಪ್ಪಣಿ ನಮ್ಮನ್ನು ಎಚ್ಚರಗೊಳಿಸುತ್ತದೆ.
ಒಂಟಿತನಕ್ಕೆ ಸ್ನೇಹಿತರೇ ಮದ್ದು
ಯಾವ ವ್ಯಕ್ತಿ ಒಂಟಿತನಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿರುತ್ತಾನೋ ಆತನಿಗೆ ಸ್ನೇಹಿತರ ಸಂಘವೇ ಚಿಕಿತ್ಸೆಯಂತೆ. ಸ್ನೇಹಿತರ ಸಂಘದಲ್ಲಿದ್ದರೆ ಒಂಟಿ ತನ ಕಾಡಲು ಸಾಧ್ಯವೇ ಇಲ್ಲ. ಆತ ಎಲ್ಲರನ್ನೂ ಕಳೆದುಕೊಂಡಿದ್ದರೂ ಸ್ನೇಹಿತರು ಆತ ಒಂಟಿ ಎಂಬ ಭಾವನೆ ಬಾರದಂತೆ ತಡೆಯುವ ಬಲಶಾಲಿಗಳಂತೆ. ಹೀಗಾಗಿ ಸ್ನೇಹಿತರ ಸಂಘವಿದ್ದವರು ಒಂಟಿತನ ಎದುರಿಸುವುದಿಲ್ಲ.
ಮನದ ದುಗುಡ ನಿವಾರಣೆ
ನಿಮ್ಮಲ್ಲಿ ಯಾವುದಾದರು ನೋವು, ದುಗುಡ ಇದ್ದರೆ ಅದನ್ನು ಸ್ನೇಹಿತರ ಬಳಿ ಹಂಚಿಕೊಂಡರೆ ಪ್ರಶಾಂತ ಭಾವನೆ ಉಂಟಾಗುತ್ತದೆ. ನೀವು ಸಹ ಇದನ್ನು ಸಹ ಅನುಭವಿಸಿರಬಹುದು. ನಿಮ್ಮ ಮನದಲ್ಲಿ ಯಾವುದಾದರು ನೋವು, ಸಂಕಟ ಇದ್ದು ಅದನ್ನು ಸ್ನೇಹಿತರ ಬಳಿ ಹೇಳಿಕೊಂಡರೆ ನಿಮ್ಮ ಮನಸ್ಸು ಹಗುರಾಗುತ್ತದೆ. ಅಲ್ಲದೆ ಅದಕ್ಕೊಂದು ಪರಿಹಾರವೂ ಸಿಗಬಹುದು. ಹೀಗಾಗಿ ಸ್ನೇಹಿತರ ಸಂಘ ನಿಮ್ಮ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸ್ನೇಹಿತರ ಸಖ್ಯ ಬಹಳ ಮುಖ್ಯವಂತೆ.
ಮಕ್ಕಳ ಸಾಮಾಜಿಕ ಬೆಳವಣಿಗೆ
ಸ್ನೇಹಿತರ ಸಂಘ ವಯಸ್ಕರಿಗಷ್ಟೇ ಅಲ್ಲ ಮಕ್ಕಳ ಸಾಮಾಜಿಕ ಬೆಳವಣಿಗೆಯಲ್ಲಿ ಅವರ ಸ್ನೇಹಿತರ ಸಂಘವು ನೆರವಾಗುತ್ತದೆ. ಹೀಗಾಗಿ ಮಕ್ಕಳೂ ಯಾರ ಜೊತೆ ತಮ್ಮ ಸಂಘ ಬೆಳೆಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕ್ಕಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿಯೂ ಈ ಸ್ನೇಹಿತರು ಪ್ರಮುಖರಾಗುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
