Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೃದ್ರೋಗಿಗಳಿಗೆ ಈ 6 ಬಗೆಯ ಆಹಾರಕ್ರಮ ತುಂಬಾ ಒಳ್ಳೆಯದು
ಹೃದ್ರೋಗಿಗಳು ತಮ್ಮ ಹೃದಯದ ಆರೋಗ್ಯದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಅಥವಾ ಸ್ಟೆಂಟ್ ಹಾಕಿದ್ದರೆ ಹೃದಯದ ಆರೋಗ್ಯವನ್ನು ತುಂಬಾ ಜೋಪಾನವಾಗಿ ಜಾಗ್ರತೆ ಮಾಡಬೇಕು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಷ್ಟ. ಹೃದ್ರೋಗಿಗಳು ಅಥವಾ ಹೃದಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವವರು ಆಹಾರಕ್ರಮದ ಕಡೆಗೆ ಗಮನಹರಿಸಬೇಕು.

ಹೃದಯದ ಆರೋಗ್ಯಕ್ಕಾಗಿ ಈ ಬಗೆಯ ಆಹಾರಕ್ರಮಗಳ ಕಡೆ ಗಮನಹರಿಸಿ.
1. ಬಣ್ಣದ ಆಹಾರ
ಬಣ್ಣದ ಆಹಾರ ಎಂದರೆ ಬಣ್ಣ ಹಾಕಿರುವ ಆಹಾರವಲ್ಲ, ಬದಲಿಗೆ ನಿಮ್ಮ ಆಹಾರದಲ್ಲಿ ಬಣ್ಣ-ಬಣ್ಣದ ತರಕಾರಿ-ಹಣ್ಣುಗಳನ್ನು ಸೇರಿಸಿ. ಸೊಪ್ಪು, ಬ್ರೊಕೋಲಿ, ಪಾಲಾಕ್, ವಿಟಮಿನ್ ಸಿ, ಇ, ಫೋಲೆಟ್ ಇರುವ ಆಹಾರಗಳಾದ ಕ್ಯಾರೆಟ್, ಸಿಹಿ ಗೆಣಸು ಈ ಬಗೆಯ ಆಹಾರಗಳು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಕಾರ್ಬ್ಸ್ ಕಡಿಮೆ ಬಳಸಿ ನಾರಿನಂಶವಿರುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಬಳಸಿ.
2. ಧಾನ್ಯಗಳು
ನೀವು ಧಾನ್ಯಗಳನ್ನು ಹೆಚ್ಚಾಗಿ ಬಳಸಿ. ಓಟ್ಸ್, ಜೋಳ, ರಾಗಿ, ಕೆಂಪಕ್ಕಿ ಇವುಗಳನ್ನು ಬಳಸಿ. ಇವುಗಳಲ್ಲಿ ವಿಟಮಿನ್ ಬಿ ಇರುವುದರಿಂದ ಹೃದಯಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತದೆ. ಈ ಬಗೆಯ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
3. ಬೀನ್ಸ್
ಬೀನ್ಸ್ ಕೂಡ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಆದರೆ ಇವುಗಳನ್ನು ಬಲಸುವಾಗ ಉಪ್ಪು ಸ್ವಲ್ಪ ಕಡಿಮೆ ಹಾಕಿ ಬಳಸಿ.
4. ಮೀನು
ಮೀನು ಕೂಡ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಆದರೆ ಮೀನನ್ನು ಫ್ರೈ ಮಾಡಿ ತಿನ್ನಬೇಡಿ ಬದಲಿಗೆ ಸಾರು ಮಾಡಿ ಅಥವಾ ಗ್ರಿಲ್ಡ್ ಮಾಡಿ ಸೇವಿಸಬಹುದು. ಸಾಲಮೋನ್, ಬೂತಾಯಿ, ತುನಾ ಈ ಬಗೆಯ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿರುತ್ತದೆ.
5. ಆರೋಗ್ಯಕರ ಎಣ್ಣೆಯನ್ನೇ ಬಳಸಿ
ನೀವು ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಕೂಡ ಗಮನಹರಿಸಬೇಕು. ಆಲೀವ್, ಸನ್‌ಪ್ಯೂರ್ ಈ ಬಗೆಯ ಎಣ್ಣೆ ಬಳಸಿ, ಹೊರಗಡೆ ಆಹಾರ ಸೇವಿಸುವಾಗ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬೇಡಿ.
6. ಗಿಡಮೂಲಿಕೆ ಬಳಸಿ
ಆಹಾರದಲ್ಲಿ ಉಪ್ಪಿನಂಶ ಕಡಿಮೆ ಬಳಸಿ. ಕರಿಬೇವು, ಬೆಳ್ಳುಳ್ಳಿ, ನಿಂಬೆಹಣ್ಣು, ದೊಡ್ಡಪತ್ರೆ , ಕೊತ್ತಂಬರಿ ಸೊಪ್ಪುಈ ಬಗೆಯ ಗಿಡಮೂಲಿಕೆಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ನಟ್ಸ್ ಸೇವಿಸಿ: ಇನ್ನು ನಟ್ಸ್ ತಿನ್ನುವುದು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವಾಲ್ನಟ್, ಗೋಡಂಬಿ, ಬಾದಾಮಿ ಈ ಬಗೆಯ ಬಟ್ಸ್ ಸೇವಿಸಿ. ಸ್ನ್ಯಾಕ್ಸ್ ಆಗಿ ಇದನನ್ನು ಬಳಸುವುದು ಒಳ್ಳೆಯದು.
ಇವುಗಳಿಂದ ದೂರವಿರಿ
* ಚೀಸ್, ಬೆಣ್ಣೆ, ಕ್ರೀಮ್ : ಇವುಗಳನ್ನು ದೂರವಿಡಿ
* ಉಪ್ಪಿನಂಶವಿರುವ ಕ್ಯಾಂಡಿಮೆಂಟ್ಸ್ ಹಾಗೂ ಸಾಸ್: ಸಾಸ್, ಕಾಂಡಿಮೆಂಟ್ಸ್ ಈ ಬಗೆಯ ಆಹಾರ ವಸ್ತುಗಳನ್ನು ಬಳಸಬೇಡಿ
* ಸಂಸ್ಕರಿಸಿದ ಮಾಂಸಾಹಾರ: ಈ ಬಗ್ಗೆ ತುಂಬಾನೇ ಗಮನಹರಿಸಬೇಕು, ಸಂಸ್ಕರಿಸಿದ ಮಾಂಸಾಹಾರ ಬಳಸಲೇಬೇಡಿ.
* ಸಿಹಿ ಪದಾರ್ಥ
* ಎಣ್ಣೆಯಲ್ಲಿ ಕರಿದ ಪದಾರ್ಥ
* ಮದ್ಯ
* ಸಿಗರೇಟ್
* ತಂಪು ಪಾನೀಯಗಳು: ನೀರು ಕೂಡ ಎಷ್ಟು ಕುಡಿದರೆ ಒಳ್ಳೆಯದು ನಿಮ್ಮ ವೈದ್ಯರ ಬಳಿ ಸಲಹೆ ಕೇಳಿ.
ಪ್ರತಿನಿತ್ಯ ವ್ಯಾಯಾಮ ಮಾಡಿ
* ದಿನಾ ಸ್ವಲ್ಪ ವಾರ್ಮ್‌ಅಪ್ ವ್ಯಾಯಾಮ ಮಾಡಿ
* ಲೈಟ್ ಏರೋಬಿಕ್ಸ್ ವ್ಯಾಯಾಮ ಮಾಡಿ
* ತುಂಬಾ ಹೆವಿ ವ್ಯಾಯಾಮ ಬೇಡ, ಲಘು ವ್ಯಾಯಾಮ ಮಾಡಿ
* ದಿನಾ ನಡೆಯುವುದು ಒಳ್ಳೆಯದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
