Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಗೆ ಆಯುರ್ವೇದ ನೀಡಿರುವ ಸಲಹೆಗಳಿವು
ಮಳೆಗಾಲದಲ್ಲಿ ಕೊಳಗಳು-ನದಿಗಳು, ಡ್ಯಾಂಗಳು ತುಂಬಿ ಹರಿಯುವುದನ್ನು ನೋಡಿ ಖುಷಿ ಪಡುವ ಮಳೆಗಾಲ ಅಂತು ಅಲ್ವೇ ಅಲ್ಲ ಈ ವರ್ಷ ಮಳೆ, ಹಲವು ಕಡೆ ಬರೆ ಕುಸಿತು, ಪ್ರವಾಹ, ನೆರೆ ಹೀಗೆ ಅನೇಕ ಸಮಸ್ಯೆಗಳು ಕಂಡು ಬರುತ್ತಿದೆ, ಇದರ ಜೊತೆಗೆ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿ ಕಂಡು ಬರುತ್ತಿದೆ, ಈ ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಆಯುರ್ವೇದದಲ್ಲಿ ಕೆಲವೊಂದು ಸಲಹೆಗಳಿವೆ, ಇದನ್ನು ಪಾಲಿಸುವುದರಿಂದ ಮಳೆಗಾಲದಲ್ಲಿ ಆರೋಗ್ಯ ಬೀಳುವುದನ್ನು ತಡೆಗಟ್ಟಬಹುದು:

ಹುದುಗು ಬರಿಸಿದ ಆಹಾರ ಸೇವಿಸಬೇಡಿ
ಇದರಲ್ಲಿ ವಿಜ್ಞಾನವೂ ಹುದುಗು ಬರಿಸಿದ ಆಹಾರ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಹೇಳುತ್ತದೆ, ಅದರೆ ಆಯುರ್ವೇದವು ಹುದುಗು ಬರಿಸಿದ ಅಹಾರ ಮಳೆಗಾಲದಲ್ಲಿ ಒಳ್ಳೆಯದಲ್ಲ, ಹುಳಿ ಪದಾರ್ಥಗಳು ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ ಎಂದು ಹೇಳುತ್ತದೆ.
ಸ್ವಲ್ಪ ಆಹಾರ ಸೇವಿಸಿ
ಮಳೆಗಾಲದಲ್ಲಿ ಜೀರ್ಣಕ್ರಿಯೆ ತುಂಬಾ ನಿಧಾನವಾಗಿ ನಡೆಯುತ್ತದೆ, ಹಾಗಾಗಿ ಅಲ್ಪ ಆಹಾರ ಸೇವನೆ ಒಳ್ಳೆಯದು, ಇಲ್ಲದಿದ್ದರೆ ಅಜೀರ್ಣ, ಹೊಟ್ಟೆಯಲ್ಲಿ ಸೋಂಕು ಈ ಬಗೆಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಅಯುರ್ವೇದ ಹೇಳುತ್ತದೆ.
ಖಾರ ಕಡಿಮೆ ಬಳಸಿ
ಮಳೆಗಾಲದಲ್ಲಿ ಪಿತ್ತ ಸ್ವಲ್ಪ ಹೆಚ್ಚಿರುತ್ತದೆ, ಇದರಿಂದಾಗಿ ಹೊಟ್ಟೆ ಉಬ್ಬಿವಿಕೆ, ಹೊಟ್ಟೆಯ ಹುಣ್ಣು ಈ ಬಗೆಯ ಸಮಸ್ಯೆಗಳು ಮಳೆಗಾಲದಲ್ಲಿ ಕಂಡು ಬರುವುದು, ಹಾಗಾಗಿ ಖಾರ ಕಡಿಮೆ ಸೇವಿಸಿದರೆ ಒಳ್ಳೆಯದು.
ಸೊಪ್ಪು ಸೇವಿಸಬೇಡಿ
ಸೊಪ್ಪು ತುಂಬಾ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಸೊಪ್ಪು ಸೇವನೆ ಒಳ್ಳೆಯದಲ್ಲ, ಏಕೆಂದರೆ ಮಳೆಯ ಸಮಯದಲ್ಲಿ ಕೀಟಗಳ ಎಲೆ ಕೆಳಭಾಗದಲ್ಲಿ ಮೊಟ್ಟೆ ಇಡುತ್ತದೆ, ಅಲ್ಲದೆ ಮಳೆಯಿಂದ ರಕ್ಷಣೆ ಎಲೆಯ ಕೆಳಭಾಗದಲ್ಲಿ ನಿಲ್ಲುತ್ತದೆ, ಎಲೆಗಳನ್ನು ತೊಳೆದರೂ ಕೆಲವೊಮ್ಮೆ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳಿರುತ್ತದೆ, ಅವುಗಳು ಹೊಟ್ಟೆಯನ್ನು ಸೇರಿದಾಗ ಆರೋಗ್ಯ ಸಮಸ್ಯೆ ಉಂಟಾಗುವುದು.
ಎಣ್ಣೆ ಪದಾರ್ಥ, ಮಾಂಸಾರ ಸೇವನೆ ಕಡಿಮೆ ಮಾಡಿ
ಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ತಿನ್ನಬೇಕೆಂದು ಕೂಡ ಅನಿಸುವುದು, ಅಲ್ಲದೆ ಮಾಂಸಾಹಾರ ಪ್ರಿಯರಿಗೆ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಮಾಡಬೇಕೆಂದು ಅನಿಸುವುದು, ಅದರೆ ಈ ಸಮಯದಲ್ಲಿ ಇಂಥ ಅಹಾರಗಳು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ, ಹಾಗಾಗಿ ಈ ಬಗೆಯ ಆಹಾರಗಳ ಸೇವನೆ ಕಡಿಮೆ ಮಾಡಿ.
ಅಹಾರ ಸೇವನೆಗೆ ಟಿಪ್ಸ್
ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ.
ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸಿದರೂ ಒಂದು 5 ನಿಮಿಷ ಮುಚ್ಚಳ ತೆಗೆದು ಬೇಯಿಸಿ.
ಆಹಾರದಲ್ಲಿ ಅರಿಶಿಣ ಸೇರಿಸಲು ಮರೆಯಬೇಡಿ.
ಮಳೆಗಾಲದಲ್ಲಿ ಆಹಾರಕ್ರಮ ಹೇಗಿರಬೇಕು?
ಆಹಾರವನ್ನು ಚೆನ್ನಾಗಿ ಬೇಯಿಸಿ ಬಿಸಿ ಬಿಸಿ ತಿನ್ನಿ
ಸಾಕಷ್ಟು ನೀರು ಕುಡಿಯಿರಿ
ನಿಮ್ಮ ಆಹಾರದಲ್ಲಿ ತುಪ್ಪ, ಧಾನ್ಯಗಳು, ಮೊಳಕೆಬರಿಸಿದ ಕಾಳುಗಳನ್ನು ಸೇವಿಸಿ.
ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications