Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಜನಿಕಾಂತ್‌ಗೆ ಮಹಾಪಧಮನಿಯ ಊತ..! ಇದು ಹೇಗೆ ಸಂಭವಿಸುತ್ತೆ? ಎಷ್ಟು ಅಪಾಯಕಾರಿ ಗೊತ್ತೆ?
ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವುದು ನಿಮಗೆಲ್ಲಾ ತಿಳಿದಿರಬಹುದು. ಎದೆನೋವು ಕಾಣಿಸಿಕೊಂಡ ಬಳಿಕ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಿಢೀರ್ ದಾಖಲಾಗಿದ್ದರಿಂದ ಆತಂಕ ಹುಟ್ಟಿಸಿತ್ತು. ಅವರ ಅಭಿಮಾನಿಗಳು ಇದರಿಂದ ಆತಂಕಕ್ಕೆ ಒಳಗಾಗಿದ್ದರು. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ತನ್ನ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿತ್ತು.
ರಜನಿಕಾಂತ್ ಅವರನ್ನು 30 ಸೆಪ್ಟೆಂಬರ್ 2024 ರಂದು ಗ್ರೀಮ್ಸ್ ರಸ್ತೆಯ ಅಪೋಲೋ ಹಾಸ್ಪಿಟಲ್ಸ್‌ಗೆ ದಾಖಲಿಸಲಾಯಿತು. ಅವರು ತಮ್ಮ ಹೃದಯದಿಂದ (ಅಯೋರ್ಟಾ) ಹೊರಡುವ ಮುಖ್ಯ ರಕ್ತನಾಳದಲ್ಲಿ ಊತ ಹೊಂದಿದ್ದರು, ಇದನ್ನು ಶಸ್ತ್ರಚಿಕಿತ್ಸೆಯಲ್ಲದ, ಟ್ರಾನ್ಸ್‌ಕ್ಯಾಥೆಟರ್ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ.

ನಮ್ಮ ಹೃದಯದಿಂದ ಆಮ್ಲಜನಕ ಹೊಂದಿರುವ ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯಲು ಇರುವ ಮಹಾಪಧಮನಿಯಲ್ಲಿ ಅವರು ಊತ ಕಂಡುಬಂದಿದೆ. ಇದು ದೇಹದ ಅತೀ ದೊಡ್ಡ ಅಪಧಮನಿಯಾಗಿದೆ. ಈ ಮೂಲಕವೇ ದೇಹದ ವಿವಿಧ ಭಾಗಕ್ಕೆ ರಕ್ತ ಸಂಚಾರ ಆಗಲಿದೆ.
ಮಹಾಪಧಮನಿಯಲ್ಲಿ ಊತ ಏಕೆ ಕಂಡುಬರುತ್ತದೆ
ಮಹಾಪಧಮನಿಯ ಉರಿಯೂತವು ಸೋಂಕು ಮತ್ತು ಸಂಧಿವಾತದ ಪರಿಸ್ಥಿತಿಗಳಿಂದ ಉಂಟಾಗಬಹುದು ಎಂದು ಹೇಳಲಾಗಿದೆ. ಅಪಧಮನಿಗಳಲ್ಲಿ ಊತವನ್ನು ಮೊದಲೇ ಪತ್ತೆ ಮಾಡಬಹುದು. ಹಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆಯ ಅಗತ್ಯತೆ ಇದ್ದೇ ಇರುತ್ತದೆ. ಮಹಾಪಧಮನಿಯು ರಕ್ತನಾಳವಾಗಿರುವುದರಿಂದ, ಮಹಾಪಧಮನಿಯ ಉರಿಯೂತವು ವ್ಯಾಸ್ಕುಲೈಟಿಸ್ ಅಥವಾ ರಕ್ತನಾಳದ ಉರಿಯೂತದ ಒಂದು ಸಂಭಾವ್ಯ ಅಭಿವ್ಯಕ್ತಿಯಾಗಿದೆ.
ಮಹಾಪಧಮನಿಯಲ್ಲಿ ಊತ ಉಂಟಾದರೆ ಏನಾಗುತ್ತದೆ?
ಅಪಧಮನಿಯಲ್ಲಿ ಊತ ಉಂಟಾದಾಗ ಎದೆ ನೋವು ಕಾಣಿಸಿಕೊಳ್ಳಬಹುದು. ವಿಪರೀತ ನೋವು, ಹಾಗೆ ಈ ಊತ ಉಳಿದ ಅಪಧಮನಿಗೂ ವಿಸ್ತರಿಸಬಹುದು. ಇಲ್ಲವೆ ನಿಮ್ಮ ಅಪಧಮನಿಯನ್ನು ಕಿರಿದಾಗಿಸಬಹುದು. ಇದರಿಂದ ರಕ್ತ ಸಂಚಾರದಲ್ಲಿ ಏರುಪೇರಾಗುವ ಕಾರಣ ಹೃದಯದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇರಲಿದೆ. ರಕ್ತ ಸಂಚಾರದಲ್ಲಿನ ವ್ಯತ್ಯಯವು ಪಾರ್ಶ್ವವಾಯು, ತಲೆ ನೋವು, ರಕ್ತ ಹೆಪ್ಪುಗಟ್ಟುವಿಕೆ ಅಂತಹ ಗಂಭೀರ ಸ್ವರೂಪದ ಸಮಸ್ಯೆಗೂ ದಾರಿಯಾಗಬಹುದು.
ಕಿಡ್ನಿ ವೈಫಲ್ಯ
ಸ್ಟ್ರೋಕ್
ಹೃದಯಾಘಾತ
ಹೃದಯ ವೈಫಲ್ಯ
ಮಹಾಪಧಮನಿಯ ನಾಳ ಒಡೆಯುವುದು
ಮಹಾಪಧಮನಿಯಲ್ಲಿ ಊತದ ಲಕ್ಷಣವೇನು?
ಯಾರಲ್ಲಿ ಈ ಉರಿಯೂತವಿದೆ ಎಂದು ಕಂಡುಕೊಳ್ಳಲು ಹಲವು ರೀತಿಯ ಲಕ್ಷಣಗಳು ನಮಗೆ ಗೋಚರವಾಗಲಿದೆ. ಅದರಲ್ಲಿ ಮುಖ್ಯವಾದ ಲಕ್ಷಣಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
ಎದೆ ನೋವು
ಹೊಟ್ಟೆ (ಹೊಟ್ಟೆ) ನೋವು
ಬೆನ್ನು ನೋವು
ತಲೆನೋವು
ದೃಷ್ಟಿ ಬದಲಾಗುತ್ತದೆ
ಜ್ವರ
ಉಸಿರಾಟದ ತೊಂದರೆ
ನಿಮ್ಮ ಕಾಲುಗಳಲ್ಲಿ ಊತ
ದಿಢೀರ್ ತೂಕ ಇಳಿಕೆ
ಹಸಿವಾಗದಿರುವುದು
ಸದ್ಯ ಈಗ ನಟ ರಜನಿಕಾಂತ್‌ಗೂ ಕೂಡ ಇದೇ ರೀತಿಯ ಮಹಾಪಧಮನಿಯ ಊತ ಉಂಟಾಗಿದೆ. ಅವರಲ್ಲಿ ಸೋಂಕಿನ ಕಾರಣದಿಂದಾಗಿ ಇದು ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಅವರು ಚಿಕಿತ್ಸೆ ಪಡೆಯುತ್ತಿದ್ದು ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಮುಖ್ಯ ರಕ್ತನಾಳದಲ್ಲಿ ಊತ ಹೊಂದಿದ್ದರು. ಇದನ್ನು ಶಸ್ತ್ರಚಿಕಿತ್ಸೆ ರಹಿತ ಟ್ರಾನ್ಸ್‌ಕ್ಯಾಥೆದರ್ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ. ಹೃದ್ರೋಗ ತಜ್ಞ ಡಾ ಸಾಯಿ ಸತೀಶ್ ಅವರ ನೇತೃತ್ವದ ವೈದ್ಯರ ತಂಡ ಸ್ಟೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ.
ಜೈಲರ್ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ವೆಟ್ಟೈಯಾನ್ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ. ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಿರುವ ಈ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಭಾರತದ ಚಿತ್ರರಂಗದ ಪ್ರಮುಖ ನಟರು ಇದ್ದಾರೆ. ಅಮಿತಾಬ್ ಬಚ್ಚನ್ ಕೂಡ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ನಟಿಸಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
