Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಲ್ಲಂಗಡಿ ಬೀಜ ಯಾವುದೇ ಕಾರಣಕ್ಕೆ ಬಿಸಾಡಬೇಡಿ: ಇದರಲ್ಲಿದೆ ಅಂಥ ಅಮೃತ ಗುಣ
ಬೇಸಿಗೆ ಬಂದಿದೆ, ಮಾರುಕಟ್ಟೆಗೆ ಹೋದಾಗ ಕಲ್ಲಂಗಡಿ ಕಂಡ ತಕ್ಷಣ ಅದನ್ನು ಮನೆಗೆ ತರದೆ ಹಾಗೇ ಬರಲು ಮನಸ್ಸಾಗಲ್ಲ, ಉರಿ ಬಿಸಿಲಿನಲ್ಲಿ ಕಲ್ಲಂಗಡಿ ತಿನ್ನಲು ತುಂಬಾನೇ ಖುಷಿಯಾಗುವುದು ಅಲ್ವಾ?
ಆದರೆ ನಾವು ಕಲ್ಲಂಗಡಿ ತಂದಾಗ ಅದನ್ನು ತಿನ್ನುವುದಕ್ಕಿಂತ ಅರ್ಧಕರ್ಧ ಕಲ್ಲಂಗಡಿ ವೇಸ್ಟ್ ಮಾಡುತ್ತೇವೆ, ಅದರ ಸಿಪ್ಪೆ, ಬೀಜ ಎಲ್ಲಾ ಬಿಸಾಡುತ್ತೇವೆ, ಆದರೆ ಕಲ್ಲಂಗಡಿಲ್ಲಿ ಬಿಸಾಡುವುದಕ್ಕೆ ಏನೂ ಇಲ್ಲ, ಬಹುತೇಕ ಪೋಷಕಾಂಶಗಳ ಅದರ ಸಿಪ್ಪೆಯಲ್ಲಿದೆ, ಇನ್ನು ಕಲ್ಲಂಗಡಿ ಬೀಜ ಇದೆಯಲ್ಲಾ ಅದು ಅಮೃತಕ್ಕೆ ಸಮ.

ಈ ಕಲ್ಲಂಗಡಿ ಬೀಜ ಹೇಗೆ ಬಳಸಬೇಕು ಎಂದು ನೋಡೋಣ:
ಕಲ್ಲಂಗಡಿ ಬೀಜ ಸಂಗ್ರಹಿಸಿ ಅದನ್ನು ನೆರಳಿನಲ್ಲಿ ಒಣಗಿಸಿ
ನಂತರ ಅದರ ಒಳಗಡೆ ಇರುವ ತಿರುಳು ತಿನ್ನಿ
ಕಲ್ಲಂಗಡಿ ಬೀಜದ ಗುಣಗಳು
ಕಲ್ಲಂಗಡಿ ಬೀಜದಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೀಲು ನೋವು,ಭುಜದ ನೋವು, ಕುತ್ತಿಗೆ ನೋವು ಈ ಬಗೆಯ ನೋವು ಕಡಿಮೆಯಾಗುವುದು.
ಕೆಲವರಿಗೆ ಮೂಳೆ ದುರ್ಬಲವಾಗಿ ನಡೆಯುವಾಗ ಶಬ್ದ ಬರುತ್ತದೆ ಅಂಥವರು ಇದನ್ನು ತಿನ್ನಬಹುದು
ಈ ಕ್ಯಾಲ್ಸಿಯಂ ಸಪ್ಲಿಮೆಂಟ್ ತಿನ್ನುವ ಬದಲಿಗೆ ಇಂಥ ಕ್ಯಾಲ್ಸಿಯಂ ಇರುವ ಆಹಾರ ತಿಂದರೆ ಒಳ್ಳೆಯದು
ಮಕ್ಕಳ ಆರೋಗ್ಯಕ್ಕೆ ಅವರ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶ ಕೂಡ ನೀಡುತ್ತದೆ.
ಕಲ್ಲಂಗಡಿ ಬೀಜದಲ್ಲಿ ಮೆಗ್ನಿಷ್ಯಿಯಂ ಇದೆ: ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ನರಗಳ ಆರೋಗ್ಯಕ್ಕೂ ಒಳ್ಳೆಯದು
ಫೋಲೆಟ್ ಇದೆ: ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಖಿನ್ನತೆ ತಡೆಗಟ್ಟಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು
ಇದರಲ್ಲಿರುವ ಪ್ರೊಟೀನ್ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಸತುವಿನಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ಅಮೈನೋ ಆಮ್ಲ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇದನ್ನು ಸ್ವಲ್ಪ ರೋಸ್ಟ್ ಮಾಡಿ ಸ್ವಲ್ಪ ಉಪ್ಪು,ಖಾರ ಉದುರಿಸಿದರೆ ರುಚಿಯಾದ ಸ್ನ್ಯಾಕ್ಸ್, ಇದನ್ನು ದಿನಾ ಒಂದು ಚಮಚ ತಿಂದರೆ ಆರೋಗ್ಯಕ್ಕೆ ಅಷ್ಟೊಂದು ಗುಣಗಳಿವೆ.
ಕಲ್ಲಂಗಡಿ ಸಿಪ್ಪೆಯಲ್ಲಿಯೂ ಅಷ್ಟೊಂದು ಗುಣಗಳಿವೆ, ಅದರ ಹಸಿರು ಭಾಗ ತೆಗೆದು ಒಳಗಡೆ ಬರುವ ಬಿಳಿ ತಿರುಳು ಮೊಸರು ಜೊತೆ ಹಾಕಿ ಸವಿಯಬಹುದು
ಪಲ್ಯ ಮಾಡಬಹುದು
ಸಿಪ್ಪೆ ಸಹಿತ ಒಣಗಿಸಿ ಸ್ನ್ಯಾಕ್ಸ್ ಮಾಡಿ ಸವಿಯಬಹುದು.
ಕಲ್ಲಂಗಡಿ ಸಿಪ್ಪೆಯಲ್ಲಿರುವ ಗುಣಗಳು
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಮೊಡವೆ ಈ ಬಗೆಯ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿ
ತೂಕ ಇಳಿಕೆಗೆ ಸಹಕಾರಿ
ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
