ಸ್ನಾನದ ನೀರಿಗೆ ಈ 5 ವಸ್ತುಗಳನ್ನು ಹಾಕಿದ್ರೆ ಯಾವುದೇ ಕಾಯಿಲೆ ಹತ್ತಿರವೂ ಸುಳಿಯಲ್ಲ!

ಭಾರತವು ಸಾವಿರಾರು ಆಚರಣೆ, ಸಂಸ್ಕೃತಿಗಳ ತವರು ನೆಲವಾಗಿದೆ. ಇಲ್ಲಿ ಅನುಸರಿಸುವ ಪ್ರತಿಯೊಂದು ಆಚರಣೆಗಳಿಗೆ ಒಂದು ನಿರ್ದಿಷ್ಟ ಕಾರಣಗಳಿದೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ಅದಕ್ಕೆ ಕೆಲವೊಂದು ಪರಿಹಾರಗಳನ್ನು ಮಾಡೋದ್ರ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಅದೇ ರೀತಿ ಯಶಸ್ಸು, ವರ್ಚಸ್ಸು, ಆರ್ಥಿಕ ಪ್ರಗತಿ, ಆರೋಗ್ಯ ವದ್ಧಿಸೋದಕ್ಕೂ ನಿರ್ದಿಷ್ಟ ಪೂಜೆ, ಪುನಸ್ಕಾರಗಳನ್ನು ಮಾಡಿದರೆ ಉತ್ತಮ ಎಂಬ ನಂಬಿಕೆಯೂ ಇದೆ.

ಅದೇ ರೀತಿ ನಾವು ಸ್ನಾನ ಮಾಡುವಾಗ ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನು ಹಾಕಿ ಸ್ನಾನ ಮಾಡೋದ್ರ ಮೂಲಕ ನಮ್ಮ ಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು. ಅಷ್ಟಕ್ಕು ಸ್ನಾನ ಮಾಡುವಾಗ ಯಾವ ವಸ್ತುಗಳನ್ನು ಹಾಕಿದರೆ ಉತ್ತಮ ಅನ್ನೋದನ್ನು ತಿಳಿಯೋಣ.

Add These 5 Ingredients in Bathing Water to Get Health Benefits in Kannada

1. ಶ್ರೀಗಂಧದ ಎಣ್ಣೆ

ಶ್ರೀಗಂಧ ಅತ್ಯಂತ ಸುವಾಸನೆಯುಕ್ತ ಒಂದು ವಸ್ತುವಾಗಿದೆ. ಜೊತೆಗೆ ಇದು ಅತ್ಯಂತ ಉಪಯೋಗಕಾರಿ ವಸ್ತು ಅಂತ ಹೇಳಿದ್ರು ತಪ್ಪಾಗೋದಿಲ್ಲ. ಇದನ್ನು ಧಾರ್ಮಿಕ ಸಮಾರಂಭಗಳು, ತ್ವಚೆ ಸೌಂದರ್ಯಕ್ಕಾಗಿ ಮತ್ತು ಅರೋಮಾಥೆರಪಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರೀಗಂಧವು ಯಶಸ್ಸು, ಸಂಪತ್ತು ಮತ್ತು ಖ್ಯಾತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಸ್ನಾನದ ನೀರಿಗೆ ಶ್ರೀಗಂಧದ ಎಣ್ಣೆ ಅಥವಾ ಶ್ರೀಗಂಧದ ಪುಡಿಯನ್ನು ಸೇರಿಸುವುದರಿಂದ ಮನಸ್ಸನ್ನು ಶಾಂತಗೊಳಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಧನಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನೂ ಇದು ನಮ್ಮ ದೇಹವನ್ನು ತಪ್ಪಾಗಿಡೋದಕ್ಕೂ ಸಹಕರಿಸುತ್ತದೆ.

2. ಗುಲಾಬಿ ದಳಗಳು

ಗುಲಾಬಿ ದಳಗಳ ಉಪಯೋಗವನ್ನು ಶತಮಾನಗಳಿಂದ ಮಾಡಲಾಗುತ್ತಿದೆ. ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲೂ ಬಳಕೆ ಮಾಡಲಾಗುತ್ತದೆ. ಜೊತೆಗೆ ತ್ವಚೆಗೂ ಇದ್ರಿಂದ ಅನೇಕ ಲಾಭಗಳಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುಲಾಬಿ ದಳಗಳು ಪ್ರೀತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತವೆ ಎಂದು ನಂಬಲಾಗಿದೆ.

ಇನ್ನೂ ಸ್ನಾನದ ನೀರಿಗೆ ಗುಲಾಬಿ ದಳಗಳನ್ನು ಸೇರಿಸುವುದರಿಂದ ಮನಸ್ಥಿತಿ ಉತ್ತಮವಾಗುತ್ತಂತೆ, ಒತ್ತಡವನ್ನು ಕಡಿಮೆಯಾಗುತ್ತಂತೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತಂತೆ. ಅಷ್ಟೇ ಅಲ್ಲದೇ, ಇದು ನಮ್ಮ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ಯಂತೆ.

3. ತುಳಸಿ

ತುಳಸಿಗೆ ಹಿಂದೂ ಧರ್ಮದಲ್ಲಿ ಮಹತ್ವವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳಿಗಾಗಿ ಆಯುರ್ವೇದದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ನಮ್ಮ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿಯು ಯಶಸ್ಸು ಮತ್ತು ಸಮೃದ್ಧಿಗೆ ಸಂಬಂಧಿಸಿದೆ.

ಇನ್ನೂ ಸ್ನಾನದ ನೀರಿಗೆ ತುಳಸಿ ಎಲೆಗಳು ಅಥವಾ ತುಳಸಿ ಎಣ್ಣೆಯನ್ನು ಸೇರಿಸುವುದು ಉತ್ತಮ. ಯಾಕೆಂದರೆ ಇದು ನಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಧನಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ಕಹಿಬೇವು

ಕಹಿಬೇವು ಒಂದು ರೀತಿ ಔಷಧೀಯ ಸಸ್ಯವಾಗಿದೆ. ಸಾಮಾನ್ಯವಾಗಿ ಇದನ್ನು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣ ಪಡಿಸಲು ಬಳಸಲಾಗುತ್ತದೆ. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಇದು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಹಿಬೇವು ದೇಹದಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ನೀವು ಸ್ನಾನ ಮಾಡುವ ನೀರಿಗೆ ಬೇವನ್ನು ಹಾಕಬಹುದು. ಬೆಚ್ಚಗಿನ ನೀರಿಗೆ ಕೆಲವು ಬೇವಿನ ಎಲೆಗಳನ್ನು ಹಾಕಬೇಕು. ಅಥವಾ ಬೇವಿನ ಪುಡಿಯನ್ನು ಬೇಕಾದರೂ ಸೇರಿಸಬಹುದು.

5. ಅರಶಿಣ

ಅರಶಿಣವನ್ನು ಸಾಮಾನ್ಯವಾಗಿ ಆಹಾರ ತಯಾರು ಮಾಡುವಾಗ ಬಳಕೆ ಮಾಡಲಾಗುತ್ತದೆ. ಇದರಿಂದ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು ಕೂಡ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನದ ನೀರಿಗೆ ಅರಿಶಿನವನ್ನು ಸೇರಿಸೋದ್ರಿಂದ ಅದೃಷ್ಟ ಮತ್ತು ಸಮೃದ್ಧಿಯನ್ನು ಹೆಚ್ಚು ಮಾಡುತ್ತೆ ಎಂದು ನಂಬಲಾಗಿದೆ. ನೀವು ಸ್ನಾನ ಮಾಡುವಾಗ ಬೆಚ್ಚಗಿನ ನೀರಿಗೆ ಸ್ವಲ್ಪ ಅರಶಿಣದ ಪುಡಿ ಹಾಕಿ ಸ್ನಾನ ಮಾಡಿದರೆ ಒಳ್ಳೆಯದು.

ಈ ಮೇಲಿನ ಸಾಮಾಗ್ರಿಗಳು ರಾಸಾಯನಿಕ ಮುಕ್ತವಾಗಿದ್ದು, ಯಾವುದೇ ರೀತಿ ಭಯ ಇಲ್ಲದೇ ಇದನ್ನು ಬಳಕೆ ಮಾಡಬಹುದು. ದೈಹಿಕ ಹಾಗೂ ಮಾನಸಿಕ ದೃಷ್ಟಿಯಿಂದಲೂ ಕೂಡ ಇದು ತುಂಬಾನೇ ಒಳ್ಳೆಯದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Add These 5 Ingredients in Bathing Water to Get Health Benefits in Kannada

These 5 Ingredients in Bathing Water to Get Health Benefits. Read More.
Story first published: Wednesday, June 14, 2023, 18:00 [IST]
X
Desktop Bottom Promotion