Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ತುಳುನಾಡಿನಲ್ಲಿ ಆಟಿ ಅಮವಾಸ್ಯೆಗೆ ಸೇವಿಸುವ ಕಷಾಯ ಕ್ಯಾನ್ಸರ್ ಸೇರಿ ಈ ಕಾಯಿಲೆಗಳಿಗೆ ರಾಮಬಾಣ
ಆಟಿ ಅಮವಾಸ್ಯೆ ತುಳು ನಾಡಿನಲ್ಲಿ ಆಟಿ ಕಷಾಯ ಅಂತ ಮಾಡಲಾಗುವುದು, ಈ ದಿನ ದೇವಾಲಯಕ್ಕೆ ಹೋದರೆ ನಿಮಗೆ ಆ ಕಷಾಯ ಪ್ರಸಾದದ ರೂಪದಲ್ಲಿ ನೀಡುತ್ತಾರೆ. ಈ ಕಷಾಯವನ್ನು ಆಟಿ ಅಮವಾಸ್ಯೆಯಂದು ಮಾತ್ರ ಮಾಡಲಾಗುವುದು, ಇನ್ನು ವರ್ಷದ ಯಾವುದೇ ದಿನದಲ್ಲಿ ದೊರೆಯುವುದಿಲ್ಲ. ಈ ಕಷಾಯ ಕೂಡ ಅಷ್ಟೇ ಔಷಧೀಯ ಗುಣಗಳನ್ನು ಹೊಂದಿದೆ.

ಈ ಕಷಾಯವನ್ನು ಎಲ್ಲರು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಮಳೆಗಾಲದ ಆರೋಗ್ಯ ಸಮಸ್ಯೆಯಿಂದ ದೇಹವನ್ನು ರಕ್ಷಣೆ ಮಾಡುವ ಗುಣ ಕಷಾಯಕ್ಕಿದೆ. ಹಾಗಾಗಿ ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ನಮ್ಮ ಹಿರಿಯರು ಕಂಡುಕೊಂಡ ಮದ್ದಾಗಿದೆ. ಈ ಆಟಿ ಕಷಾಯದ ಬಗ್ಗೆ ಮತ್ತಷ್ಟು ವಿವರ ನೊಡುವುದಾದರೆ....
ಸೂರ್ಯನು ಹುಟ್ಟುವ ಮೊದಲೇ ಹಾಲೇಮರದ ತೊಗಟೆ ತರಬೇಕು
ಹಿಂದಿನಕಾಲದಲ್ಲಿ ಬೆತ್ತಲೆಯಾಗಿ ಹೋಗಿ ಸೂರ್ಯ ಹುಟ್ಟುವ ಮೊದಲೇ ಈ ತೊಗಟೆ ತರುತ್ತಿದ್ದರು ಎಂದು ಹೇಳಲಾಗುವುದು. ಆದರೆ ಈಗ ಯಾರು ಆ ರೀತಿ ತರಲ್ಲ, ಸ್ನಾನ ಮಾಡಿ ಒಂದು ಟವಲ್ ಸುತ್ತಿಕೊಂಡು ಹೋಗಿ ತೊಗಟೆ ತರುತ್ತಾರೆ.
ನಂತರ ಅದಕ್ಕೆ ಕಾಳು ಮೆಣಸು, ಓಂ ಕಾಳು, ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ, ಅರಿಶಿಣ ಸೇರಿಸಿ ಕಷಾಯ ಮಾಡಿ, ಅ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುವುದು.
ಈ ಕಷಾಯ ಕಹಿ ಇರುತ್ತದೆ ಇದನ್ನು 50 ಮಿ.ಮೀನಷ್ಟು ಸೇವಿಸುತ್ತಾರೆ.
ಈ ಕಷಾಯ ಕುಡಿದರೆ ಸಿಗಲಿದೆ ಈ ಅದ್ಭುತ ಗುಣ:
ಮಳೆಗಾಲದಲ್ಲಿ ಕಾಡುವ ಜ್ವರ -ಶೀತದಂಥ ಸಮಸ್ಯೆ ತಡೆಗಟ್ಟುತ್ತದ. ಈಗ ಸುರಿಯುತ್ತಿರುವ ಮಳೆಯನ್ನು ನಾವು ಅಯ್ಯೋ ಮಳೆ ಅಂತೀವಿ ಆದರೆ ಹಿಂದಿನ ಕಾಲದಲ್ಲಿ ಇದಕ್ಕಿಂತ ಹೆಚ್ಚು ಮಳೆ ಸುರಿಯುತ್ತಿತ್ತು, ಹಿರಿಯರು ನೀರು ಹರಿಯುವ ಮಾರ್ಗವನ್ನು ಮುಚ್ಚಿರಲಿಲ್ಲ, ಬೆಟ್ಟ ಗುಡ್ಡಗಳಲ್ಲಿರುವ ಗಿಡಗಳನ್ನು ನಾಶ ಮಾಡಿರಲಿಲ್ಲ, ಹೀಗಾಗಿ ಪ್ರಕೃತಿ ವಿಕೋಪದಿಂದ ಜೀವ ನಷ್ಟವಾಗುತ್ತಿರಲಿಲ್ಲ, ಅಲ್ಲದೆ ಅತಿಯಾಗಿ ಸುರಿಯುವ ಮಳೆಯಿಂದಾಗಿ ಕಾಯಿಲೆ ತಡೆಗಟ್ಟಲು ಈ ರೀತಿಯ ಔಷಧಿಗಳನ್ನು ಕಂಡು ಕೊಂಡಿದ್ದರು.
ಕ್ಯಾನ್ಸರ್‌ನಂಥ ಕಾಯಿಲೆ ತಡೆಗಟ್ಟುತ್ತದೆ
ಈ ಕಷಾಯಕ್ಕೆ ಕ್ಯಾನ್ಸರ್ ತಡೆಗಟ್ಟುವ ಗಣವಿದೆ ಎಂದು ಹೇಳಲಾಗುವುದು, ಹಾಗಾಗಿ ಈ ಹಾಲೇಮರದ ತೊಗಟೆಯನ್ನು ತಂದು ಆಟಿ ಅಮವಾಸ್ಯೆಗೆ ಕಷಾಯ ಮಾಡಿ ಸೇವಿಸಲಾಗುವುದು. ಇದರಲ್ಲಿರುವ ಈ ಔಷಧೀಯ ಗುಣಗಳಿಂದಲೇ ಜಾತಿ-ಧರ್ಮ ಬೇಧವಿಲ್ಲದೆ ಎಲ್ಲರೂ ಇದನ್ನು ಸೇವಿಸುತ್ತಾರೆ.
ಹೊಟ್ಟೆನೋವು, ಅತಿಸಾರ, ಮಲೇರಿಯಾ, ವಾಂತಿ ಹೀಗೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಆರೋಗ್ಯ ಸಮಸ್ಯೆಯಿಂದಲೂ ರಕ್ಷಣೆ ನೀಡುತ್ತದೆ.
ನಿಮ್ಮ ಕಡೆಯಲ್ಲಿಯೂ ಈ ರೀತಿ ಆರೋಗ್ಯಕ್ಕೆ ಗುಣ ನೀಡುವ ಆಚರಣೆಗಳನ್ನು ಮಾಡುತ್ತಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications