Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಡೆಗಟ್ಟಲು 9 ಸೂತ್ರಗಳು
ಅಬ್ಬಾಬ್ಬಾ ಎಂಥ ಮಳೆ, ರಣ ಭೀಕರ ಮಳೆ, ಈ ಮಳೆಯಿಂದಾಗಿ ರಾಜ್ಯದಲ್ಲಿ ಹಲವು ಕಡೆ ಪ್ರವಾಹದ ಭೀತಿ, ಶಾಲಾ ಮಕ್ಕಳಿಗೆ ರಜೆ ನೀಡಲಾಗುತ್ತಿದೆ, ಹೊರಗಡೆ ಓಡಾಡುವುದಕ್ಕೆ ಕಷ್ಟವಾಗುತ್ತಿದೆ ಅಂಥ ಮಳೆ. ಒಂದು ಕಡೆ ತೀವ್ರ ಮಳೆ, ಮತ್ತೊಂದೆಡೆ ಡೆಂಗ್ಯೂ, ಸಾಮಾನ್ಯ ಶೀತ, ಕೆಮ್ಮು, ಜ್ವರ ಈ ಬಗೆಯ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ.

ಮಳೆಗಾಲದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ತಗೆದುಕೊಂಡರೆ ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು, ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಈ ಟಿಪ್ಸ್ ತುಂಬಾನೇ ಸಹಾಯ ಮಾಡುತ್ತದೆ.
1. ರೋಗ ನಿರೋಧಕ ಶಕ್ತಿ ಹೆಚ್ಚಿಸಿ: ಕಷಾಯ ಸೇವನೆ, ಮಳೆಗಾಲದಲ್ಲಿ ಮಾಡುವ ಕೆಲವೊಂದು ಮನೆಮದ್ದು ಗೊತ್ತಿದ್ದರೆ ಅದನ್ನು ಸೇವಿಸುವುದು, ಮೆಂತೆ ಗಂಜಿ, ಲೇಹ್ಯ, ಕಷಾಯ ಸೇವನೆ ಇವುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಸೂಪ್ ಕೂಡ ಮಾಡಿ ಕುಡಿಯಿರಿ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
2. ನೀರನ್ನು ಕಾಯಿಸಿ ಕುಡಿಯಿರಿ: ಕೆಲವರಿಗೆ ತಣ್ಣೀರು ಕುಡಿಯುವ ಅಭ್ಯಾಸವಿರುತ್ತದೆ, ಅದರೆ ಮಳೆಗಾಲದಲ್ಲಿ ನೀರನ್ನು ಕಾಯಿಸಿ ಕುಡಿಯುವುದು ಸುರಕ್ಷಿತ. ತಣ್ಣೀರು ಕುಡಿಯಲು ಇಷ್ಟಪಡುವವರು ನೀರನ್ನು ಕುದಿಸಿ ಆರಿಸಿ ಕುಡಿಯಿರಿ. ಅದರಲ್ಲಿಯೂ ಹೋಟೆಲ್‌ಗೆ ಹೋದಾಗ ಅವರು ಕೊಡುವ ನೀರಿನ ಬದಲಿಗೆ ಫಿಲ್ಟರ್ ನೀರು ಸುರಕ್ಷಿತ.
3. ಬೀದಿ ಬದಿಯ ಆಹಾರ ಸೇವಿಸಬೇಡಿ
ಬೀದಿ ಬದಿಯ ಆಹಾರ ಸೇವನೆಯಿಂದ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ. ಬೀದಿ ಬದಿಯ ಆಹಾರ ಸೇವನೆ ಮಾಡಿದರೆ ಒಂದು ವೇಳೆ ಆ ಆಹಾರಗಳಿಗೆ ಮಳೆ ನೀರು ಬೀಳುವುದು ಅಥವಾ ಫಿಲ್ಟರ್ ಮಾಡದ ನೀರು ಬಳಸಿದರೆ ಕಷ್ಟ. ನಿಮಗೆ ನಂಬಿಕೆ ಇರುವ ಕಡೆ ಮಾತ್ರ ಬೀದಿ ಬದಿಯ ಆಹಾರ ಸೇವಿಸಿ.
4. ಹೊಟ್ಟೆಯ ಆರೋಗ್ಯಕ್ಕಾಗಿ ಪ್ರೀಬಯೋಟಿಕ್ ಆಹಾರ ಸೇವಿಸಿ
ಮಳೆಗಾಲದಲ್ಲಿ ಅಜೀರ್ಣ, ಬೇಧಿ ಸಮಸ್ಯೆ ಕಾಡುವುದು. ನೀವು ಪ್ರೀಬಯೋಟಿಕ್ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆಯ ಆರೋಗ್ಯ ಚೆನ್ನಾಗಿರಲಿದೆ. ಮೊಸರು, ಯೋಗರ್ಟ್, ಮಜ್ಜಿಗೆ ಈ ಬಗೆಯ ಆಹಾರ ಒಳ್ಳೆಯದು. ಹುದುಗು ಬರಿಸಿದ ಆಹಾರ ಒಳ್ಳೆಯದು, ಇವು ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ.+
5. ಮಳೆಯಲ್ಲಿ ಒದ್ದೆಯಾಗಬೇಡಿ
ಹೊರಗಡೆ ಹೋಗುವಾಗ ಕೊಡೆ ಹಿಡಿದೇ ಹೋಗಿ, ಮಳೆ ನಿಂತಿದೆ ಎಂದು ಕೊಡೆ ಅಥವಾ ರೈನ್ ಕೋಟ್ ತೆಗೆಯದೆ ಹೋಗಿ ಒದ್ದೆಯಾಗಬೇಡಿ, ಮಳೆಯಲ್ಲಿ ಒದ್ದೆಯಾದರೆ ಆರೋಗ್ಯ ಸಮಸ್ಯೆ ಉಂಟಾಗುವುದು.
6.ಕೈಗಳನ್ನು ಆಗಾಗ ತೊಳೆಯಿರಿ
ಮಳೆಗಾಲದಲ್ಲಿ ಶುಚಿತ್ವ ಕಡೆಗೆ ಗಮನಹರಿಸಿ, ಕೈಗಳನ್ನು ಆಗಾಗ ತೊಳೆಯಿರಿ, ಇದರಿಂದ ಸೋಂಕಾಣುಗಳು ಹರಡುವುದನ್ನು ತಡೆಗಟ್ಟಬಹುದು.
7.ಪ್ರತಿದಿನ ವ್ಯಾಯಾಮ ಮಾಡಿ
ಮಳೆಗಾಲ ಎಂದು ವ್ಯಾಯಾಮ ಮಾಡದೆ ಇರಬೇಡಿ, ಮನೆಯೊಳಗಡೆ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಚೆನ್ನಾಗಿರಲಿದೆ.
8. ನಿದ್ದೆ ಸರಿಯಾಗಿ ಮಾಡಿ
ನೀವು ನಿದ್ದೆಕೆಡಬೇಡಿ, ದಿನಾ 8 ಗಂಟೆ ನಿದ್ದೆ ಅವಶ್ಯಕ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ಬೆಡ್‌ಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಿ, ಮೊಬೈಲ್ ದೂರವಿಡಿ.
9. ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ: ಈಗ ಡೆಂಗ್ಯೂ ಸಮಸ್ಯೆ ಹೆಚ್ಚಾಗಿ ಇರುವುದರಿಂದ ನೀವು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ. ಮನೆ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯೊಳಗಡೆ ಸೊಳ್ಳೆ ಬಾರದಂತೆ ವ್ಯವಸ್ಥೆ ಮಾಡಿ, ಸೊಳ್ಳೆ ಪರದೆಯೊಳಗಡೆ ನಿದ್ರಿಸಿ.
ಈ ರೀತಿಯ ಚಿಕ್ಕ-ಪುಟ್ಟ ಮುನ್ನೆಚ್ಚರಿಕೆ ಕಾಯಿಲೆ ಬೀಳುವುದನ್ನು ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
