Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಈ ರೀತಿಯ ಸುಗಂಧ ದ್ರವ್ಯಗಳ ಬಗ್ಗೆ ನಿಮಗೆ ಗೊತ್ತೇ?
ಸುಗಂಧ ದ್ರವ್ಯವು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ? ಇದನ್ನು ಪ್ರತಿಯೊಬ್ಬರೂ ಇಷ್ಟಪಡುವರು. ಅನಾದಿ ಕಾಲದಿಂದಲೂ ಸುಗಂಧ ದ್ರವ್ಯ ಬಳಸಿಕೊಂಡು ಬರಲಾಗುತ್ತಿದೆ. ಆದರೆ ಬದಲಾಗುತ್ತಿರುವ ಕಾಲದಲ್ಲಿ ರಾಜ, ರಾಣಿಯರು ಕೂಡ ಸುಗಂಧ ದ್ರವ್ಯ ಬಳಸಿಕೊಂಡು ಬಂದರು.

ಇದು ಮುಂದುವರಿದು ಇಂದು ಜನಸಾಮಾನ್ಯರು ಕೂಡ ಸುಗಂಧ ದ್ರವ್ಯ ಬಳಸವರು. ಅದರಲ್ಲೂ ಸುಗಂಧ ದ್ರವ್ಯವನ್ನು ಹೆಚ್ಚಾಗಿ ಮಹಿಳೆಯರು ಬಳಸುವುದನ್ನು ನಾವು ನೋಡಿದ್ದೇವೆ. ಮಾರುಕಟ್ಟೆಯಲ್ಲಿ ಕೂಡ ಇಂದು ವಿವಿಧ ಬಗೆಯ ಸುಗಂಧ ದ್ರವ್ಯಗಳು ಲಭ್ಯವಿದೆ.

ಸುಗಂಧ ದ್ರವ್ಯ ಎಂದರೇನು?
ಸುಗಂಧ ದ್ರವ್ಯವೆಂದರೆ ಅದು ಸುಗಂಧಿತ ಎಣ್ಣೆ, ಸುವಾಸನೆಯ ಸಂಯುಕ್ತ ಹಾಗೂ ಸ್ಥಿರೀಕರಣಗಳ ಮಿಶ್ರಣವು ಮನುಷ್ಯನಿಗೆ ಸುಗಂಧವನ್ನು ನೀಡುವುದು.
ವಿವಿಧ ರೀತಿಯ ಸುಗಂಧ ದ್ರವ್ಯಗಳು
ಸುಗಂಧ ದ್ರವ್ಯವು ವಿವಿಧ ಬಗೆಯಲ್ಲಿ ಲಭ್ಯವಿದೆ. ಇಂತಹ ವಿಧಗಳು ಯಾವುದು ಮತ್ತು ಅವುಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಎಂದು ನಾವು ತಿಳಿಯುವ.

ಹೂವಿನ ಸುಗಂಧ
ವಿಶ್ವದಲ್ಲಿ ಅತೀ ಹೆಚ್ಚು ಬಳಕೆ ಆಗುವಂತಹ ಸುಗಂಧ ದ್ರವ್ಯಗಳಲ್ಲಿ ಹೂವಿನ ಸುಗಂಧ ದ್ರವ್ಯ ಮೊದಲ ಸ್ಥಾನ ಪಡೆದಿದೆ. ಹೂವಿನ ಸುಗಂಧ ದ್ರವ್ಯವನ್ನು ಸುವಾಸನೆ ನೀಡುವಂತಹ ಹೂಗಳಾಗಿರುವಂತಹ ಗುಲಾಬಿ, ಮಲ್ಲಿಗೆ, ಕಿತ್ತಳೆ ಹೂ, ಗಾರ್ಡನಿಯಾ, ಕಾರ್ನೆಷನ್ ಹೂಗಳನ್ನು ಬಳಸಲಾಗುತ್ತದೆ.
ಹೂವಿನ ಸುಗಂಧವು ತುಂಬಾ ರೋಮ್ಯಾಂಟಿಕ್ ಮತ್ತು ಸುಗಂಧವು ಆಕರ್ಷಣೀಯವಾಗಿರುವುದು. ಇದನ್ನು ಒಂದೇ ಹೂ ಅಥವಾ ವಿವಿಧ ರೀತಿಯ ಹೂಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಹೂವಿನ ಸುಗಂಧವು ನೈಸರ್ಗಿಕವಾಗಿ ಸ್ರೀತತ್ವ ಹೊಂದಿರುವುದು. ಸ್ತ್ರೀತತ್ವ ಬೇಕಾಗಿರುವವರು ಇದನ್ನು ಬಳಸಬಹುದು.

ಸಿಟ್ರಸ್
ಸಿಟ್ರಸ್ ನಿಂದ ತಯಾರಿಸಲ್ಪಡುವಂತಹ ಸುಗಂಧ ದ್ರವ್ಯವು ತುಂಬಾ ಹುಳಿ ಭಾವನೆ ನೀಡುವುದು. ಈ ರೀತಿಯ ಸುಗಂಧ ದ್ರವ್ಯವು ತುಂಬಾ ಉಲ್ಲಾಸ ನೀಡುವುದು ಮತ್ತು ಚಂಚಲವಾಗಿರುವಂತಹವರಿಗೆ ಇದು ತುಂಬಾ ಒಳ್ಳೆಯದು. ಸಿಟ್ರಸ್ ಸುಗಂಧವನ್ನು ಲಿಂಬೆ, ಮೂಸಂಬಿ, ಹುಳಿ ಇತ್ಯಾದಿಗಳಿಂದ ತಯಾರಿಸಲಾಗುತ್ತದೆ. ಇದೆಲ್ಲವೂ ಹುಳಿಯಂತೆ ಭಾವನೆ ಉಂಟು ಮಾಡುವುದು. ಇದು ನೈಸರ್ಗಿಕವಾಗಿ ಉಲ್ಲಾಸವನ್ನು ಉಂಟು ಮಾಡುವುದು ಮತ್ತು ದಿನದಲ್ಲಿ ಇದನ್ನು ಬಳಕೆ ಮಾಡಬಹುದು. ಇದು ಒಳ್ಳೆಯ ರೀತಿಯಲ್ಲಿ ಬೆರೆಯುವುದು ಮತ್ತು ಮಹಿಳೆಯರಿಗೆ ಇದು ತುಂಬಾ ಮಿತವಾದ ಸುಗಂಧ ನೀಡುವುದು.

ಮರದ ಸುಗಂಧ
ಮರದ ಸುಗಂಧ ನೀಡಲು ಮರ ಮತ್ತು ಪಾಚಿಯ ಮಿಶ್ರಣವನ್ನು ಬಳಸಿಕೊಳ್ಳಲಾಗುತ್ತದೆ. ಹೆಚ್ಚಾಗಿ ಶ್ರೀಗಂಧದ ಮರವನ್ನು ಇದಕ್ಕೆ ಬಳಕೆ ಮಾಡುವರು. ಅದೇ ರೀತಿಯಾಗಿ ಓಕ್ ಪಾಚಿ, ಸಿಟ್ರಸ್, ಪ್ಯಾಚೌಲಿ ಮತ್ತು ಬೆರ್ಗಮಾಂಟ್ ಹೀಗೆ ಎಲ್ಲದರ ಮಿಶ್ರಣದಿಂದ ಸುಗಂಧವನ್ನು ತಯಾರು ಮಾಡುವರು. ಚಂದನದಿಂದ ತಯಾರಿಸಿಕೊಂಡ ಸುಗಂಧ ದ್ರವ್ಯವನ್ನು ಹೆಚ್ಚಾಗಿ ಮಹಿಳೆಯರು ಬಳಸುವರು. ಇನ್ನು ಕೆಲವೊಂದು ಸಂದರ್ಭದಲ್ಲಿ ಪುರುಷರು ಹಾಗು ಮಹಿಳೆಯರು ಇಬ್ಬರೂ ಬಳಕೆ ಮಾಡುವರು. ಆದರೆ ಇದು ನಿಜವಾಗಿಯೂ ಪುರುಷರಿಗೆ ಹೇಳಿದಲ್ಲ. ಇದು ತುಂಬಾ ಗಾಢ ಹಾಗೂ ಶಾಸ್ತ್ರೀಯ ಭಾವನೆ ಉಂಟು ಮಾಡುವುದು. ಇದನ್ನು ಹೆಚ್ಚಾಗಿ ಉದ್ಯಮ ಜಗತ್ತಿನವರು ಬಳಸುವರು.

ಓರಿಯಂಟಲ್
ಓರಿಯಂಟಲ್ ಸುಗಂಧ ದ್ರವ್ಯವು ಮಣ್ಣು ಮತ್ತು ಕಸ್ತೂರಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಓರಿಯಂಟಲ್ ಸುಗಂಧ ದ್ರವ್ಯಕ್ಕೆ ಹೆಚ್ಚಾಗಿ ಮಣ್ಣು, ಕಸ್ತೂರಿ ಮತ್ತು ಪ್ರಾಣಿಗಳ ಸುಗಂಧವನ್ನು ಬಳಸಲಾಗುತ್ತದೆ. ಯಾರನ್ನಾದರೂ ತುಂಬಾ ಆಕರ್ಷಿಸಲು ಅಥವಾ ಕಾಮಾಸಕ್ತಿ ಕೆರಳಿಸಲು ಇಂತಹ ಸುಗಂಧವು ತುಂಬಾ ಒಳ್ಳೆಯದು. ಇದನ್ನು ಡೇಟಿಂಗ್ ವೇಳೆ ಅಥವಾ ರೋಮ್ಯಾಂಟಿಕ್ ಸಮಯದಲ್ಲಿ ಬಳಸಬಹುದು.

ಹಣ್ಣಿನ ಸುಗಂಧ
ಹಣ್ಣಿನ ಸುಗಂಧ ದ್ರವ್ಯವು ಹೆಚ್ಚು ಆಹ್ಲಾದಕರ ಉಂಟು ಮಾಡುವ ಕಾರಣದಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಇದಕ್ಕೆ ಮಸಾಲೆ ಮತ್ತು ಹಣ್ಣುಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗುತ್ತದೆ. ಇದು ಡೇಟಿಂಗ್ ಮತ್ತು ರೋಮ್ಯಾಂಟಿಕ್ ಸಂದರ್ಭದಲ್ಲಿ ಉಪಯುಕ್ತ. ಸೇಬು, ಬೆರ್ರಿ, ಮಾವು, ಪೀಚ್ ಮತ್ತು ಇತರ ಕೆಲವು ಹಣ್ಣುಗಳನ್ನು ಬಳಸಿಕೊಂಡು ಈ ಸುಗಂಧ ದ್ರವ್ಯವನ್ನು ತಯಾರಿಸುವರು.

ಹಸಿರು
ಹಸಿರು ಸುಗಂಧ ದ್ರವ್ಯವು ಹಗಲಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತುಂಬಾ ಒಳ್ಳೆಯದು. ಈ ರೀತಿಯ ಸುಗಂಧ ದ್ರವ್ಯವನ್ನು ತಾಜಾ ಎಲೆಗಳು ಹಾಗೂ ಹುಲ್ಲುಗಳಿಂದ ತಯಾರಿ ಮಾಡಲಾಗುತ್ತದೆ. ಹಸಿರು ಸುಗಂಧವು ತುಂಬಾ ಕ್ರೀಡಾತ್ಮಕ ಭಾವನೆ ಉಂಟು ಮಾಡುವುದು. ಇದನ್ನು ಪುರುಷರು ಹಾಗೂ ಮಹಿಳೆಯರು ಬಳಸಬಹುದು. ಈ ಸುಗಂಧವು ತುಂಬಾ ಮಿತ ಸುವಾಸನೆ ಮತ್ತು ಸಾಮಾನ್ಯ ಕಾರ್ಯಕ್ರಮಗಳಿಗೆ ಇದನ್ನು ಬಳಸಬಹುದು.

ಸಾಗರ
ಸಾಗರ ಸುಗಂಧ ದ್ರವ್ಯವು ಒಂದು ಹೊಸ ರೀತಿಯ ಸುಗಂಧವಾಗಿದ್ದು, ಇದು ವಿಶೇಷ ಸುವಾಸನೆ ಹೊಂದಿದೆ. ಇದರಲ್ಲಿ ಪರ್ವತದ ಗಾಳಿ ಇತ್ಯಾದಿ ಸುಗಂಧವಿದೆ. ಇಂತಹ ಸುಗಂಧ ದ್ರವ್ಯವನ್ನು ಸಂದರ್ಶನ ಮತ್ತು ಕಚೇರಿ ಸಭೆಗಳಿಗೆ ಬಳಸಬಹುದು.

ಮಸಾಲೆ
ಈ ರೀತಿಯ ಸುಗಂಧ ದ್ರವ್ಯವು ನಾವು ಅಡುಗೆ ಮನೆಯಲ್ಲಿ ಬಳಸುವಂತಹ ದಾಲ್ಚಿನಿ, ಶುಂಠಿ, ಏಲಕ್ಕಿ, ಲವಂಗ, ಕರಿಮೆಣಸು ಇತ್ಯಾದಿಗಳಿಂದ ತಯಾರಿಸಲ್ಪಡುತ್ತದೆ. ಮಸಾಲೆಯ ಸುಗಂಧವು ಆಕರ್ಷಕ ಪರಿಮಳ ನೀಡುವಂತಹ ಸುಗಂಧವಾಗಿದ್ದು, ಇದು ಹಿಂದಿನ ಕಾಲದಲ್ಲಿ ತುಂಬಾ ಐಷಾರಾಮಿ ಸುಗಂಧ ದ್ರವ್ಯವೆಂದು ಪರಿಗಣಿಸಲಾಗಿತ್ತು. ಈ ಸುಗಂಧವನ್ನು ನೀವು ಸಾಮಾನ್ಯ ಕಾರ್ಯಕ್ರಮಗಳಿಗೆ ಬಳಸಬಹುದು.



Click it and Unblock the Notifications











