Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
IPLಹರಾಜಿನ ವೇಳೆ ನ್ಯಾಷನಲ್ ಕ್ರಷ್ ಆದ SRHನ ಒಡತಿಯ ಮೊದಲ ಇನ್ಸ್ಟಾ ಪೋಟೋ
2022ರ IPL ಹರಾಜು ನಡೆಯುತ್ತಿರುವಾಗ ಸನ್ ರೈಸಸ್ ಹೈದರಾಬಾದ್‌ನ ಓನರ್ ಕಾವ್ಯಾ ಮಾರನ್ ನ್ಯಾಷನಲ್ ಕ್ರಷ್ ಆಗಿ ಬಿಟ್ಟರು. ರೂಪವತಿಯೂ ಹಾಗೂ ಬುದ್ಧಿವಂತೆಯೂ ಆಗಿರುವ ಕಾವ್ಯಾ ಮಾರನ್ ಐಪಿಎಲ್ ಹರಾಜಿನ ಎರಡೂ ದಿನಗಳಲ್ಲೂ ಹೈಲೈಟ್ ಆಗಿದ್ದರು. ಅವರ ಡ್ರೆಸ್ಸಿಂಗ್ ಸ್ಟೈಲ್ ಹಾಗೂ ಮ್ಯಾನರಿಸಂಗೆ ಜನ ಆಕರ್ಷಿತರಾಗಿದ್ದರು.

ಇದೀಗ ಇನ್‌ಸ್ಟಾಗ್ರಾಮ್ ಜಗತ್ತಿಗೆ ಕಾಲಿಟ್ಟಿರುವ ಕಾವ್ಯಾಮಾರನ್ ಒಂದು ಸೆಲ್ವಾರ್‌ನಲ್ಲಿರುವ ಬ್ಯೂಟಿಫುಲ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದುವೇ ನನ್ನನಿಜವಾದ ಅಕೌಂಟ್, ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿದರೆ ಪರಿಣಾಮ ನೆಟ್ಟಿಗಿರಲ್ಲ ಎಂಬ ಎಚ್ಚರಿಕೆ ನೀಡುವ ಮೂಲಕ ಇನ್‌ಸ್ಟಾಗ್ರಾಮ್‌ಗೆ ಹಾಯ್ ಎಂದಿದ್ದಾರೆ.

ಕಪ್ಪು ಕಂಗಳ, ಕಪ್ಪು ಕೂದಲಿನ ಸುಂದರಿ
ಚುರುಕು ಕಪ್ಪು ಕಣ್ಣುಗಳು, ಭುಜದಿಂದ ಇಳಿಬಿಟ್ಟ ದಟ್ಟವಾದ ಕೂದಲು, ದುಂಡು ಮುಖದ ಕಾವ್ಯಾ ಮಾರನ್ ತಮ್ಮ ಅಪೂರ್ವ ಚೆಲುವಿನಿಂದ ನ್ಯಾಷನಲ್ ಕ್ರಷ್ ಆಗಿದ್ದಾರೆ. ಈಗ ಇವರ ಕುರಿತ ಅನೇಕ ಮೀಮ್ಸ್ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿಯಾಗಿರುವ ಕಾವ್ಯಾ ಮಾರನ್ ಸನ್ ಟಿವಿ ಗ್ರೂಪ್‌ನ ಒಡತಿ. ಸನ್ ಗ್ರೂಪ್ ಸನ್ ರೈಸಸ್ ಹೈದರಾಬಾದ್‌ನ ಒಡೆತನ ಹೊಂದಿದೆ, ಅದಕ್ಕೆ ಅದರಲ್ಲಿ ಕಾವ್ಯಾ ಮಾರನ್ ಕೋ -ಓನರ್ ಆಗಿದ್ದಾರೆ.

ಮಿಸ್ಟ್ರಿ ಗರ್ಲ್ ಎಂದು ಕರೆಸಿಕೊಂಡಿದ್ದ ಕಾವ್ಯಾ ಮಾರನ್
ಈ ಹಿಂದೆ ಐಪಿಎಲ್ ಹರಾಜಿನಲ್ಲಿ ಕಾವ್ಯಾ ಮಾರನ್ ಕಾಣಿಸಿಕೊಂಡಾಗ ಹೆಚ್ಚಿನವರಿಗೆ ಅವರು ಯಾರು ಎಂದು ಗೊತ್ತಿರಲಿಲ್ಲ, ಆದರೆ ಕ್ಯಾಮರಾ ಕಣ್ಣುಗಳು ಅವರತ್ತ ತಿರುಗಿದಾಗ ಯಾರಿವರು? ಎಂಬ ಕುತೂಹಲ ನೋಡುಗರಲ್ಲಿತ್ತು. ಅಲ್ಲದೆ ಈ ಹಿಂದೆ ನಡೆದ ಐಪಿಎಲ್ ಮ್ಯಾಚ್‌ಗಳಲ್ಲಿ ಹಳದಿ ಬಣ್ಣದ ಟೀ ಶರ್ಟ್ ತೊಟ್ಟು ಸನ್ ರೈಸಸ್ ಹೈದರಾಬಾದ್ ಟೀಂಗೆ ಸಪೋರ್ಟ್ ಮಾಡುತ್ತಿದ್ದ ಹುಡುಗಿ ಕ್ಯಾಮರಾ ಕಣ್ಣಿಗೆ ಬಿದ್ದಾಗ ವೀಕ್ಷಕರಿಗೆ ಯಾರಿವರು? ಎಂಬ ಕುತೂಹಲ ಇತ್ತು. ಹಾಗಾಗಿ ಮಿಸ್ಟ್ರಿ ಗರ್ಲ್ ಎಂದು ಕರೆಸಿಕೊಂಡಿದ್ದರು.

ಕುರ್ತಾ ಟಾಪ್ ಧರಿಸಿ ಪೋಸ್ ನೀಡಿರುವ ಫೋಟೋ ಶೇರ್
ಇವರು ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಈ ಐಪಿಎಲ್ ಹರಾಜಿನ ಸಮಯದಲ್ಲಿಯೇ ಓಪನ್ ಮಾಡಿದ್ದು ಅದರಲ್ಲಿ ಶೇರ್ ಮಾಡಿರುವುದು ಇದು ಒಂದೇ ಫೋಟೋ. ಪಲಾಜೊ ಪ್ಯಾಂಟ್, ಟಾಪ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ ಕಾವ್ಯಾ ಮಾರನ್.



Click it and Unblock the Notifications
