Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಮಿಂಚಿದ ಡಬ್ಲ್ಯೂಐಎಫ್‌ಡಬ್ಲ್ಯೂ
ನಾವೆಲ್ಲರೂ ವಿವಿಧ ಬಣ್ಣದ ಬೋಲ್ಡ್ ಲುಕ್‌ಗಳನ್ನು ವಿಲ್ಸ್ಇಂಡಿಯಾ ಫ್ಯಾಶನ್ ವೀಕ್ 2014 ರಲ್ಲಿ ನೋಡಲು ಕಾತರರಾಗಿದ್ದೇವೆ. ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಬುದ್ಧಿವಂತಿಕೆ ಹಾಗೂ ಬೆಡಗು ಮೇಳೈಸಿ ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ಎಲ್ಲರಿಗೂ ಮನರಂಜನೆಯನ್ನು ಉಂಟುಮಾಡಿತು. ವಿನ್ಯಾಸಗಾರ್ತಿ ವಿವಿಧ ಬಣ್ಣಗಳನ್ನು ವಿವಿಧ ಸ್ಟನ್ನಿಂಗ್ ಮಾದರಿಗಳಲ್ಲಿ ಹೊರತಂದಿದ್ದು ನಮ್ಮ ಮನಸ್ಸನ್ನು ಕಲಕುವಂತೆ ಮಾಡಿದ್ದು ಸುಳ್ಳಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ರಿನಾ ಧಾಕಾ ಕಮಾಲ್
ಪ್ರತಿಮಾ ವಿವಿಧ ಪ್ರಕಾರಗಳ ಬಟ್ಟೆಯನ್ನು ಬಳಸಿ ಫ್ಯಾಶನ್ ಹಬ್ಬವನ್ನು ಆಚರಿಸಿದ್ದಾರೆ ಎಂದೇ ಹೇಳಬಹದು. ಶೀರ್, ಕೋಟನ್, ವೆಲ್ವೇಟ್, ಹಾಗೂ ರಾ ಸಿಲ್ಕ್ ಅವರು ಬಳಸಿದ ಬಟ್ಟೆಗಳ ಪ್ರಕಾರವಾಗಿದೆ. ತನ್ನ ಎಲ್ಲಾ ವಿನ್ಯಾಸದ ಔಟ್‌ಫಿಟ್‌ಗಳಿಗೆ ಪ್ರತಿಮಾ ಗಾಢ ವರ್ಣಗಳನ್ನು ಆಯ್ದುಕೊಂಡಿದ್ದು ತಲೆಗೆ ಧರಿಸುವ ಆಭರಣಗಳನ್ನು ಮಾತ್ರ ರೂಪದರ್ಶಿಯರು ಇಲ್ಲಿ ತೊಟ್ಟುಕೊಂಡಿದ್ದಾರೆ.
ವಿವಿಧ ಶ್ರೇಣಿಗಳ ಔಟ್‌ಫಿಟ್ ಕಲೆಕ್ಷನ್‌ಗಳಾದ ಜಂಪ್‌ಸೂಟ್ಸ್, ಫ್ರಿಲ್ಡ್ ಗೌನ್ಸ್, ಹಾಗೂ ಸ್ಲೀಕ್ ಡ್ರೆಸ್‌ಗಳು ಫ್ಯಾಶನ್ ಪ್ರಿಯರ ಮನತಣಿಸಿದವು.
ಪ್ರತಿಮಾ ಪಾಂಡೆ ವಿನ್ಯಾಸದ ಇನ್ನಷ್ಟು ಮೆರುಗನ್ನು ನೋಡಲು ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಐಎಫ್‌ಡಬ್ಲ್ಯೂ 2014 ರಾಕೇಶ್ ಅಗರ್‌ವಾಲ್ ಚಮತ್ಕಾರ!

ಪೋಲ್ಕಾ ಸೂಟ್ಸ್:
ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರಲ್ಲಿ ಅತ್ಯುತ್ತಮವಾಗಿ ಕಂಡುಬಂದ ಸೂಟ್‌ಗಳಲ್ಲಿ ಪೋಲ್ಕಾ ಸೂಟ್ ಕೂಡ ಒಂದು.

ಕೆಂಪು ಬಣ್ಣಗಳ ವರ್ಣಮಾಲೆ:
ಕಣ್ಣು ಕೋರೈಸುವ ಕೆಂಪು ಬಣ್ಣಗಳ ಹಬ್ಬವೇ ರಾಂಪ್ ಮೇಲೆ ವಿನ್ಯಾಸಗಾರ್ತಿ ಪ್ರತಿಮಾ ಪಾಂಡೆಯಿಂದ ನಡೆದಿತ್ತು.

ಪೋಲ್ಕಾ ಡ್ರೆಸ್:
ವಿನ್ಯಾಸಗಾರ್ತಿ ಪ್ರತಿಮಾ ಪಾಂಡೆ ಪಿಂಕ್ ಬಣ್ಣವನ್ನು ರಾಂಪ್‌ನಲ್ಲಿ ಹೆಚ್ಚು ಬಳಸಿದ್ದು ಈ ಸಂದರ್ಭದಲ್ಲಿ ಗಮನ ಸೆಳೆಯಿತು.

ಕಪ್ಪು ವರ್ಣ:
ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರಲ್ಲಿ ಕಪ್ಪು ಬಣ್ಣ ರಾಂಪ್ ಮೇಲೆ ಹೆಚ್ಚು ಕಾರುಬಾರು ನಡೆಸಿತ್ತು.

ಫ್ರಿಲ್ ಉಳ್ಳ ಕಪ್ಪು ಅಂಗಿ:
ಕಪ್ಪು ವರ್ಣ ರಾಂಪ್ ಮೇಲೆ ಹೆಚ್ಚು ಕಂಡುಬಂದಿದ್ದರೂ ಪ್ರತಿಮಾ ಪಾಂಡೆ ಕಪ್ಪಿನೊಂದಿಗೆ ವಿವಿಧ ಬಣ್ಣಗಳನ್ನು ಬೆರೆಸಿ ಹೊಸ ಫ್ಯಾಶನ್ ಲೋಕವನ್ನು ತೆರೆದಿದ್ದಾರೆ.

ಫ್ಲೋರಲ್ ವೈಟ್ಸ್:
ಹೊಳೆಯುವ ಧಿರಿಸುಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಬಿಳಿ ಬಣ್ಣದ ಫ್ಲೋರಲ್ ಧಿರಿಸುಗಳನ್ನು ಪ್ರತಿಮಾ ಪಾಂಡೆ ರಾಂಪ್‌ನಲ್ಲಿ ಹೆಚ್ಚು ಪ್ರದರ್ಶಿಸಿದರು.

ಕೆಂಪು ಹಾಗೂ ಗೋಲ್ಡ್:
ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಹೆಚ್ಚು ಬಳಕೆಯಾದ ಬಣ್ಣಗಳೆಂದರೆ ಕೆಂಪು ಮತ್ತು ಗೋಲ್ಡ್.

ಕೆಂಪು ಫ್ಲೋರಲ್ಸ್:
ಈ ಲೇಯರ್ ಉಳ್ಳ ಕೆಂಪು ಡ್ರೆಸ್ ರಾಂಪ್‌ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಶೀರ್ ಸೂಟ್ಸ್:
ಪುರುಷರ ಔಟ್‌ಫಿಟ್‌ಗಳೂ ಕೂಡ ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ನವೀನವಾಗಿ ಹೊರಮೊಮ್ಮಿದ್ದವು. ಶೀರ್ ಸೂಟ್ಸ್‌ಗಳ ಪ್ರದರ್ಶನ ಹೆಚ್ಚು ಗಮನಸೆಳೆಯಿತು.

ವಿನ್ಯಾಸಗಾರ್ತಿ ಪ್ರತಿಮಾ ಪಾಂಡೆ:
ಬ್ಲಾಕ್ ಹಾಗೂ ವೈಟ್ ಸೀಕ್ವೆಲ್ ಧಿರಿಸಿನಲ್ಲಿ ವಿನ್ಯಾಸಗಾರ್ತಿ ಪ್ರತಿಮಾ ಪಾಂಡೆ ಅಂದವಾಗಿದ್ದರು.



Click it and Unblock the Notifications