Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಿಂಚನ್ನು ಹರಿಸಿದ ಬಾಲಿವುಡ್ ಕ್ಯಾಟಿ ಪ್ರಿಯಾಂಕ!
ಬಾಲಿವುಡ್ ತಾರೆ ಪ್ರಿಯಾಂಕ ತಮ್ಮ ಸುಂದರವಾದ ಮೇಕಪ್ ಹಾಗೂ ಡ್ರೆಸ್ ಸೆನ್ಸ್‌ನಲ್ಲೆ ತಮ್ಮ ಅಭಿಮಾನಿಗಳ ಮನವನ್ನು ಕದಿಯುತ್ತಾರೆ. ಮುಂಬೈನಲ್ಲಿ ನಡೆದ ನೋಕಿಯಾ ರೇಡಿಯೋ ಮಿಕ್ಸ್ ಈವೆಂಟ್‌ನಲ್ಲಿ ತಮ್ಮ ಆಲ್ಬಮ್ ಲಾಂಚ್ ಮಾಡಿದ ಕ್ಯಾಟಿ ತಮ್ಮ ಡ್ರೆಸ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು.
ಪ್ರಿಯಾಂಕ ಚೋಪ್ರ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೊಳೆಯುವ ನೆಟ್ಟೆಡ್ ಸ್ಕರ್ಟ್ ಹಾಗೂ ಬಿಳಿ ಶರ್ಟ್‌ನಲ್ಲಿ ಕಂಡುಬಂದ ಈ ಚೆಲುವೆ ನೆರೆದವರಲ್ಲಿ ಮಿಂಚನ್ನೇ ಹರಿಸಿದರು. ಆಕೆಯ ಇನ್ನಷ್ಟು ಸುಂದರ ನೋಟಗಳನ್ನು ನಿಮಗಾಗಿ ನಾವಿಲ್ಲಿ ನೀಡುತ್ತಿದ್ದೇವೆ.
ಎಮ್‌ಸಿಕ್ಯೂ ಡ್ರೆಸ್‌ನಲ್ಲಿ ಮೋಡಿ ಮಾಡಿದ ಪ್ರಿಯಾಂಕ

ಹೊಳೆಯುವ ಧಿರಿಸಿನಲ್ಲಿ:
ನೋಕಿಯಾ ರೇಡಿಯೋ ಮಿಕ್ಸ್ ಈವೆಂಟ್‌ನಲ್ಲಿ ಪ್ರಿಯಾಂಕ ಮಂತ್ರ ಮುಗ್ಧಗೊಳಿಸುವಂತಿದ್ದರು. ಆಕೆಯ ಕ್ಯಾಶುವಲ್ ಲುಕ್ ಪ್ರತಿಯೊಬ್ಬರನ್ನೂ ಬಿಟ್ಟ ಕಣ್ಣು ಬಿಡುವಂತೆ ಮಾಡಿತು.

ತೆಳುವಾದ ಸ್ಕರ್ಟ್:
ಆಕೆಯ ತೆಳುವಾದ ಸ್ಕರ್ಟ್ ನೆರೆದವರನ್ನು ದಂಗುಬಡಿಯುವಂತೆ ಮಾಡಿದ್ದಂತೂ ನಿಜ. ನೋಕಿಯಾ ರೇಡಿಯೋ ಮಿಕ್ಸ್ ಈವೆಂಟ್‌ನಲ್ಲಿ ಈ ಚೆಲುವೆ ಮಿಂಚಿನ ಸಂಚಾರವನ್ನೇ ಉಂಟು ಮಾಡಿದರು.

ಆಕೆಯ ಮೆಚ್ಚಿನ ಕಲೆ:
ಆಕೆಯ ಬಲಕೈ ಮಣಿಗಂಟಿನಲ್ಲಿ ಆಕೆ ಬರೆಸಿಕೊಂಡಿದ್ದ ಟ್ಯಾಟೂ "ಮೈ ಡ್ಯಾಡೀಸ್ ಲಿಟ್ಲ್ ಗರ್ಲ್" ಬೀ ಟೌನ್‌ನಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರವಾಗಿದೆ.

ಸ್ಟೈಲ್:
ಕೈಗೆ ಬಳೆಯನ್ನು ಧರಿಸಿದ್ದ ಚೆಲುವೆ ತುಂಬಾ ಡಿಫರೆಂಟಾಗಿ ಡ್ರೆಸ್ ಮಾಡಿಕೊಂಡಿದ್ದರು. ಒಟ್ಟಾರೆ ಡಿಫರೆಂಟ್ ಲುಕ್‌ನಲ್ಲಿ ಎಲ್ಲರನ್ನೂ ಮರಳು ಮಾಡಿದ್ದರು.

ಕೇಶವಿನ್ಯಾಸ:
ತನ್ನ ಇಳಿಬಿಟ್ಟ ಕೇಶವಿನ್ಯಾಸದಲ್ಲಿ ಪ್ರಿಯಾಂಕ ಮುದ್ದಾಗಿ ಕಾಣುತ್ತಿದ್ದರು. ಆಕೆಯ ಸ್ಟ್ರೈಟ್ ಮಾಡಿದ ಕೂದಲು ಭುಜದ ಎರಡೂ ಬದಿ ಚೆನ್ನಾಗಿ ಕಾಣುತ್ತಿದೆ.

ಮೇಕಪ್:
ಪಿಂಕ್ ಬ್ಲಶ್‌ಡ್ ಕೆನ್ನೆ ಹಾಗೂ ಗಾಢವಾದ ಪಿಂಕ್ ಲಿಪ್‌ಸ್ಟಿಕ್ ಆಕೆಯನ್ನು ರಾಕ್‌ಸ್ಟಾರ್‌ನ್ನಾಗಿಸಿದೆ.

ರೋಮನ್ ಸ್ಯಾಂಡಲ್ಸ್:
ರೋಮನ್ ಕಪ್ಪು ಸ್ಯಾಂಡಲ್ ಅನ್ನು ನಾವು ತುಂಬಾನೇ ಇಷ್ಟಪಟ್ಟಿದ್ದು ಇದು ಪ್ರಿಯಾಂಕಾರ ನೀಳವಾದ ಕಾಲಿಗೆ ಹೇಳಿ ಮಾಡಿಸಿದಂತಿದೆ.

ರಿಹಾನ್ನನೊಂದಿಗೆ ಸ್ಪರ್ಧೆ:
ರಿಹಾನ್ನ ಕೂಡ ಒಂದು ಈವೆಂಟ್‌ನಲ್ಲಿ ಸೀ ತ್ರೂ ಡ್ರೆಸ್ ಧರಿಸಿ ಬೆಚ್ಚಿ ಬೀಳಿಸಿದ್ದರು ಈಗ ಪ್ರಿಯಾಂಕಾರ ಸರದಿಯಾಗಿದೆ. ಆಕೆಯ ಧಿರಿಸು ಆಕೆಯ ಒಳಉಡುಪನ್ನೂ ಕೂಡ ಚೆನ್ನಾಗಿ ತೋರಿಸಿದೆ.



Click it and Unblock the Notifications
