Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಡಿ ಶಾಪ್ ಅಂಬಾಸಿಡರ್ ಆಗಿ ಜಾಕ್ವಲಿನ್ ಫೆರ್ನಾಂಡೀಸ್
ಬಾಡಿ ಶಾಪ್‌ನ ಹೊಸ ರಾಯಭಾರಿಯಾಗಿ ಜಾಕ್ವಲಿನ್ ಕಂಗೊಳಿಸಿದ್ದಾರೆ. ಮುಂಬಯಿಯ ಹೋಟೆಲ್ ಒಂದರಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಜಾಕ್ವಲಿನ್ ತುಂಬಾ ಚೆನ್ನಾಗಿ ಕಾಣುತ್ತಿದ್ದರು.
ಜಾಕ್ವಲಿನ್ ಅವರ ಇನ್ನಷ್ಟು ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀಲಂಕಾ ಚೆಲುವೆಯಾದ ಜಾಕ್ವಲಿನ್ ಬೇಸಿಗೆ ಉಡುಪಿನಲ್ಲಿ ಇನ್ನಷ್ಟು ಮನಮೋಹಕಿಯಾಗಿದ್ದರು. ಪ್ರಚಾರ ಕಾರ್ಯಕ್ರಮದಲ್ಲಿ ಜಾಕ್ವಲಿನ್ ಹೇಗೆ ಕಾಣುತ್ತಿದ್ದರು ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ವಿಶದವಾಗಿ ತೋರಿಸಿದ್ದು ನೋಡಿ ಆನಂದಿಸಿ...
ಸವ್ಯಸಾಚಿ ಅನಾರ್ಕಲಿ ಗೌನ್‌ನಲ್ಲಿ ಐಶ್ವರ್ಯಾ ಮೋಡಿ!

ದ್ರಸ್ಟಾ ಫ್ಲೋರಲ್:
ದ್ರಸ್ಟಾ ಫ್ಲೋರಲ್ ಸಂಗ್ರಹ ಧಿರಿಸಿನಲ್ಲಿ ಜಾಕ್ವಲಿನ್ ಅನುಪಮ ಬೆಡಗಿಯಾಗಿದ್ದರು. ಫ್ಲೋರಲ್ ಕ್ರಾಪ್ ಟಾಪ್ ಮತ್ತು ಸ್ಕರ್ಟ್ ಆಕೆಯನ್ನು ದೇವಕನ್ಯೆಯಾಗಿ ಮಾಡಿತ್ತು. ಇದು ಆಕೆಯ ಸೌಂದರ್ಯಕ್ಕೆ ಕಲಶಪ್ರಾಯದಂತಿತ್ತು.

ಆಭರಣಗಳು:
ಫ್ಲೋರಲ್ ಕಿವಿಯಾಭರಣಗಳು ಈ ಸುಂದರಿಯ ಬೆಡಗನ್ನು ಹೆಚ್ಚಿಸಿತ್ತು. ಅಷ್ಟೇನೂ ಆಭರಣಗಳನ್ನು ಧರಿಸಿದೆ ನಿರಾಭರಣವಾಗಿದ್ದ ಜಾಕ್ವಲಿನ್ ಮುದ್ದಾಗಿ ಕಾಣುತ್ತಿದ್ದರು.

ಸಹಜ ಸೌಂದರ್ಯ:
ಕಡಿಮೆ ಮೇಕಪ್‌ನಲ್ಲಿ ಚಿತ್ತ ಕದಡುವಂತಿದ್ದ ಜಾಕ್ವಲಿನ್ ಸಹಜ ಸುಂದರಿಯಾಗಿದ್ದರು. ಆಕೆಯ ಕೆನ್ನೆಯನ್ನು ಕೆಂಪನೆಯ ಬಣ್ಣದಿಂದ ತೆಳುವಾಗಿ ಬ್ಲಶ್ ಮಾಡಲಾಗಿತ್ತು ಮತ್ತು ಕಣ್ಣಿಗೆ ಕಪ್ಪು ಕಾಡಿಗೆಯನ್ನು ಹಚ್ಚಲಾಗಿತ್ತು.

ಸುಂದರವಾದ ಕೇಶವಿನ್ಯಾಸ:
ನಟಿ ಕಾರ್ಯಕ್ರಮಕ್ಕಾಗಿ ಸುಂದರವಾದ ಕೇಶ ವಿನ್ಯಾಸವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಟ್ರೈಟ್ ಮಾಡಿದ ಕೂದಲನ್ನು ಒಂದು ಕಡೆಗೆ ಒಪ್ಪವಾಗಿ ಇಳಿಬಿಟ್ಟ ಶೈಲಿ ಜಾಕ್ವಲಿನ್‌ಗೆ ಚೆನ್ನಾಗಿ ಒಪ್ಪುತ್ತಿತ್ತು.

ಸ್ಯಾಂಡಲ್ಸ್:
ಕ್ರೀಂ ಬಣ್ಣದ ದ್ರಸ್ಟಾ ಡ್ರೆಸ್‌ಗೆ ಅನುರೂಪವಾಗಿ ಆಕೆಯ ಸ್ಯಾಂಡಲ್ ಪರ್ಫೆಕ್ಟ್ ಮ್ಯಾಚ್ ಎಂದೇ ಹೇಳಬಹುದು. ಬಾಡಿ ಶಾಪ್ ಈವೆಂಟ್‌ನಲ್ಲಿ ಇದು ಈಡುಜೋಡಾಗಿದೆ ಎಂದೇ ಹೇಳಬಹುದು.

ಲಿಪ್‌ಸ್ಟಿಕ್ ಬಣ್ಣ:
ಚೆರ್ರಿ ಬಣ್ಣದ ಹಿತವಾದ ಲಿಪ್‌ಸ್ಟಿಕ್ ನಮ್ಮ ಗಮನವನ್ನು ಜಾಕ್ವಲಿನ್ ಕಡೆಗೆ ಹೆಚ್ಚು ಸೆಳೆಯಿತು. ಈವೆಂಟ್‌ನಲ್ಲಿ ಸರಳವಾಗಿ ಸುಂದರವಾಗಿ ಕಾಣುತ್ತಿದ್ದ ಈ ಚೆಲುವೆ ನಿರಾಭರಣವಾಗಿದ್ದರು. ಸರಳ ಮೇಕಪ್‌ನಿಂದ ಮಿಂಚಿದರು.



Click it and Unblock the Notifications
