Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗ್ರೇಝಿಯಾ ಯಂಗ್ ಫ್ಯಾಶನ್ ಅವಾರ್ಡ್ಸ್ 2014
ಗ್ರೇಝಿಯಾ ಯಂಗ್ ಫ್ಯಾಶನ್ 2014 ಕೆಂಪು ಹಾಸು ಹೊಳಪು ಮತ್ತು ಫ್ಯಾಶನ್ ಆಗಿತ್ತು. ಬಾಲಿವುಡ್‌ನ ಯುವ ಸೆಲೆಬ್ರಿಟಿಗಳು ಸ್ಟೈಲ್ ಐಕಾನ್‌ಗಳು ಗ್ರೇಝಿಯಾ ಯಂಗ್ ಫ್ಯಾಶನ್ 2014 ರಲ್ಲಿ ಭರ್ಜರಿಯಾಗಿ ಪಾಲ್ಗೊಂಡಿದ್ದರು.
ಸೋನಂ ಕಪೂರ್‌ನಿಂದ ಹಿಡಿದು ಲಿಸಾ ಹೇಡನ್‌ವರೆಗೆ, ಗ್ರೇಝಿಯಾ ಯಂಗ್ ಫ್ಯಾಶನ್ ಅವಾರ್ಡ್ಸ್‌ನಲ್ಲಿ ಪ್ರತಿಯೊಬ್ಬರೂ ಉಸಿರು ಬಿಗಿ ಹಿಡಿಯುವಂತೆ ಕಂಡುಬಂದಿದ್ದರು. ಉದಾಹರಣೆಗೆ, ಸೋನಂ ಟ್ರೆಂಡಿಂಗ್ ಸೂಟ್‌ನಲ್ಲಿ ಮನಸ್ಸನ್ನು ಆಕರ್ಷಿಸುವಂತೆ ಕಂಡು ಬಂದಿದ್ದರು.
ಡೀಪ್ ಕಟ್ ಉಳ್ಳ ಗೌನ್ ಸೋನಂಗೆ ಇನ್ನೂ ಚೆನ್ನಾಗಿ ಕಂಡುಬಂದಿತ್ತು. ಇನ್ನಷ್ಟು ಹೊಳೆಯುವ ಧಿರಿಸುಗಳನ್ನು ಧರಿಸಿದ್ದ ಸೆಲೆಬ್ರಿಟಿಗಳು ಕಣ್ಮನ ಸೆಳೆಯುವಂತೆ ಕಂಡುಬಂದಿದ್ದರು. ಕೆಲವು ಸೆಲೆಬ್ರಿಟಿಗಳಾದ ಶ್ರದ್ಧಾ ಕಪೂರ್ ಹಾಗೂ ರಿಚಾ ಚಡ್ಡ ರಾತ್ರಿಯುಡುಗೆಗಳಲ್ಲಿ ಇನ್ನೂ ಚೆನ್ನಾಗಿ ಮಿಂಚಿದ್ದರು.
ಅಮೇಜಿಂಗ್ ಲುಕ್‌ನಲ್ಲಿ ಹೃದಯ ಕದ್ದ ದೀಪಿಕಾ!

ಸೋನಂ ಕಪೂರ್:
ಕಪ್ಪು ಸ್ಟ್ರಿಪ್ಡ್ ಸೂಟ್‌ನಲ್ಲಿ ಸೋನಂ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದರು. ಗೋಲ್ಡನ್ ಕೊರಳ ಹಾರ ಮತ್ತು ಗೋಲ್ಡನ್ ಪಂಪ್ಸ್ ಆಕರ್ಷಕವಾಗಿತ್ತು.

ಶ್ರದ್ಧಾ ಕಪೂರ್:
ತೆಳುವಾದ ಪಂಕಜ್ ನಿಧಿಯವರ ಮೊಣಕಾಲುದ್ದದ ಫ್ಲೇರ್ ಡ್ರೆಸ್‌ನಲ್ಲಿ ಅದ್ಭುತ ಚೆಲುವೆಯಾಗಿ ಕಂಡುಬಂದರು.

ಸೋಫಿ ಚೌಧುರಿ:
ಸೋಫಿ ತೋಳಿಲ್ಲದ ನಮ್ರತಾ ಜೋಶಿಪುರ ಕಪ್ಪು ಗೌನ್‌ನಲ್ಲಿ ಮನಸೆಳೆಯುವಂತಿದ್ದರು.

ಸೋನಲ್ ಚೌಹಾನ್:
ಗೋಲ್ಡ್ ಪೋಂಚೋ ಸ್ಟೈಲ್ ನಿಶಿಕಾ ಲುಲ್ಲಾ ಜಂಪ್ ಸೂಟ್‌ನಲ್ಲಿ ಮನಮೋಹಕವಾಗಿದ್ದರು.

ನಿಶ್ಕಾ ಲುಲ್ಲಾ:
ವಿನ್ಯಾಸಗಾರ್ತಿ ನಿಶ್ಕಾ ಲುಲ್ಲಾ ತಮ್ಮದೇ ವಿನ್ಯಾಸದ ಉಡುಪಿನಲ್ಲಿ ಚಿಕ್ ಆಗಿ ಕಂಡುಬಂದಿದ್ದರು.

ಅದಿತಿ ರಾವ್ ಹೈದರಿ:
ಗೌರಿ ನೈನಿಕ ಡ್ರಾಪ್ ಜಂಪ್ ಸೂಟ್‌ನಲ್ಲಿ ಅದಿತಿ ಸೊಗಸಾಗಿ ಕಂಡುಬಂದಿದ್ದರು. ಮನೀಶ್ ಅರೋರಾ ಮತ್ತು ಆಮ್ರಪಾಲಿ ನೆಕ್ಲೇಸ್ ಅವರಿಗೆ ಇನ್ನಷ್ಟು ಚೆನ್ನಾಗಿ ಕಾಣುತ್ತಿದ್ದವು.

ರಿಚಾ ಚಡ್ಡಾ:
ನಿಯೋನ್ ಬಣ್ಣದ ಹೊಳೆಯುವ ಇಕ್ತಾ - ಪ್ರಿಂಟ್ ವೆಸ್ಟ್ ವೇರ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು.

ಪೂರ್ಣ ಜಗನ್ನಾಥನ್:
ಗೌರವ್ ಗುಪ್ತಾ ವಿನ್ಯಾಸದ ಲೇಮ್ ಗೌನ್‌ನಲ್ಲಿ ಪೂರ್ಣ ಕಂಡುಬಂದರು. ಪ್ಲಂಗಿಂಗ್ ನೆಕ್‌ಲೈನ್ ಗೌನ್‌ಗೆ ವಿಶೇಷತೆಯನ್ನು ತಂದುಕೊಟ್ಟಿದೆ.

ಇಶಾ ಗುಪ್ತಾ:
ಇಶಾ ಏಂಜಲೀನಾ ಜೋಲಿಯಂತೆ ಕಂಡುಬಂದಿದ್ದಾರೆ. ಹಾಲಿವುಡ್ ಸೆಲೆಬ್ರಿಟಿಯಂತೆ ಕಂಡುಬಂದಿರುವ ಇಶಾ ನಿಕಿಲ್ ಥಾಂಪಿಯ ತೊಡೆಯವರೆಗೆ ಸ್ಲಿಟ್ ಉಳ್ಳ ಗೌನ್‌ನಲ್ಲಿ ಸುಂದರಿಯಾಗಿದ್ದರು.

ಅರ್ಚನಾ ಅನಿಲ್ ಕುಮಾರ್:
ಅರ್ಚನಾ ವರ್ಷದ ಮಾಡೆಲ್ ಪ್ರಶಸ್ತಿಯನ್ನು ಪಡೆದವರಾಗಿದ್ದಾರೆ. ಕ್ಷಿತಿಜ್ ಕಂಕಾರಿಯಾ ಗೌನ್‌ನಲ್ಲಿ ಅರ್ಚನಾ ನೀಳಸುಂದರಿಯಾಗಿದ್ದರು.

ಲಿಸಾ ಹೇಡನ್:
ಬೋಲ್ಡ್ ಪ್ಲಂಗಿಂಗ್ ನೆಕ್‌ಲೈನ್ ಗೋಲ್ಡನ್ ಫ್ರಿಲ್ ಗೌನ್‌ನಲ್ಲಿ ಲಿಸಾ ಕಾರ್ಯಕ್ರಮದಲ್ಲಿ ಕಂಡುಬಂದರು.



Click it and Unblock the Notifications
