Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ 2014: ಎಂಟನೇ ದಿನದಂದು ಮಿಂಚಿದ ಸೆಲೆಬ್ರಿಟಿಗಳು
ಕೇನ್ಸ್ 2014 ರ ಎಂಟನೇ ದಿನದಂದು ಬಾಲಿವುಡ್ ಹಾಗೂ ಹಾಲಿವುಡ್ ಬೆಡಗಿಯರು ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಒನಪು ಒಯ್ಯಾರವನ್ನು ಪ್ರದರ್ಶಿಸಿದರು. ಭಾರತೀಯ ಬೆಡಗಿ ಐಶ್ ಕೂಡ ಕೇನ್ಸ್‌ನ ಎಂಟನೇ ದಿನವನ್ನು ಮರೆಯದಂತೆ ಬೆರಗುಗೊಳಿಸಿದರು.
ತಮ್ಮ ಅತ್ಯುತ್ತಮ ಧಿರಿಸುಗಳಲ್ಲಿ ಮನಸೆಳೆದ ಕೆಲವು ಸೆಲೆಬ್ರಿಟಿಗಳು ಅದ್ಭುತವಾಗಿ ಕಂಡು ಬರುತ್ತಿದ್ದರು. ತಮ್ಮ ಬಿಳಿ ಬಣ್ಣದ ಧಿರಿಸುಗಳಲ್ಲಿ ಕಣ್ಮನಸೆಳೆಯುವಂತಿದ್ದ ಈ ಸುಂದರಿಯರು ಕೇನ್ಸ್‌ಗೆ ಒಂದು ಸುಂದರ ಮೆರುಗನ್ನು ತಂದಿತ್ತಿದ್ದರು.
ಇನ್ನಷ್ಟು ಸುಂದರಿಯರ ಕಣ್ಣರಳಿಸುವ ನೋಟವನ್ನು ನಿಮಗೆ ನೋಡಬೇಕೆಂಬ ಆಸೆ ಇದ್ದಲ್ಲಿ ಈ ಸ್ಲೈಡ್‌ಗಳತ್ತ ಗಮನ ಹರಿಸಿ.
ಕೇನ್ಸ್ 2014ನಲ್ಲಿ ಐಶ್ವರ್ಯಾ ರೈ ಬೆಸ್ಟ್ ಲುಕ್‌ಗಳು

1. ರೋಬರ್ಟ್ ಕವ್ವಾಲಿಯಲ್ಲಿ ಐಶ್ವರ್ಯಾ ರೈ
ರೋಬರ್ಟ್ ಕವ್ವಾಲಿಯ ಬಿಳಿ ಗೌನ್‌ನಲ್ಲಿ ಮೋಡಿ ಮಾಡುವಂತೆ ಕಂಡುಬರುತ್ತಿದ್ದ ಐಶ್ ಸ್ಟನ್ನಿಂಗ್ ಆಗಿದ್ದರು. ಬಿಳಿ ಬಣ್ಣದ ಕಿವಿಯಾಭರಣ ಕೂಡ ಅವರಿಗೆ ಮೆರುಗನ್ನು ತಂದುಕೊಟ್ಟಿದೆ.

2. ಕಲ್ವಿನ್ ಕ್ಲೇನ್‌ನಲ್ಲಿ ಲಾರಾ ಸ್ಟೋನ್
ಕೇನ್ಸ್ 2014 ರ ಎಂಡನೇ ದಿನದಂದು ಲಾರಾ ಸ್ಟೋನ್ ನಿಯೋನ್ ಬಣ್ಣದ ಕಲ್ವಿನ್ ಕ್ಲೇನ್ ಗೌನ್‌ನಲ್ಲಿ ರೂಪಸಿಯಾಗಿದ್ದರು. ತಮ್ಮ ಈ ಸುಂದರತೆಯನ್ನು ಕಡಿಮೆ ಆಭರಣಗಳಲ್ಲಿ ತೋರಿಸಿರುವ ಈ ಸುಂದರಿ ಕೇನ್ಸ್‌ಗೆ ಮೆರುಗನ್ನು ನೀಡಿದ್ದಾರೆ.

3.ರೋಸಿ ಹಾಂಟಿಂಗ್‌ಟನ್ ಗುಸ್ಸಿಯಲ್ಲಿ
ಸುಂದರಿ ರೋಸಿ ಹಾಂಟಿಂಗ್‌ಟನ್ ಗುಸ್ಸಿ ಡ್ರೆಸ್‌ನಲ್ಲಿ ಇನ್ನಷ್ಟು ಸುಂದರಿಯಾಗಿ ಕಂಡುಬಂದಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಗುಸ್ಸಿಯಲ್ಲಿ ಕಂಡುಬಂದಿದ್ದಾರೆ.

4.ಶೇರನ್ ಸ್ಟೋನ್
ಕಪ್ಪು ಬಣ್ಣದ ಎಮಿಲಿಯೋ ಡ್ರೆಸ್‌ನಲ್ಲಿ ಶೇರನ್ ಮಿಂಚಿದ್ದಾರೆ. ಸ್ಟೈಲಿಶ್ ಗೋಲ್ಡ್ ಸ್ಯಾಂಡಲ್ಸ್ ಮತ್ತು ಚಿನ್ನದ ಬಣ್ಣದ ಮಿರರ್ ಅವಿಯೇಟರ್ಸ್‌ನಲ್ಲಿ ಇವರು ಮೋಡಿ ಮಾಡುವಂತಿದ್ದಾರೆ.

5.ಇರಿನಾ ಶ್ಯಾಕ್
ಕೇನ್ಸ್ ಎಂಟನೇ ದಿನದಂದು ಲಿಂಬೆ ಬಣ್ಣದ ಗೌನ್‌ನಲ್ಲಿ ಇರಿನಾ ಶ್ಯಾಕ್ ಮನಸೋಲುವಂತಿದ್ದರು.

6.ಮರೀನ್ ಕೊಟ್ಟಿಲಾರ್ಡ್
ಕೇನ್ಸ್‌ನ ಏಳನೇ ದಿನದಂದು ಮರೀನ್ ಫ್ರಾಕ್‌ನಲ್ಲಿ ಮನವನ್ನು ಕದ್ದರು. ಅವರ ಫ್ರಾಕ್ ನೆರಿಗೆಗಳನ್ನು ಹೊಂದಿದ್ದು ಸುಂದರವಾಗಿತ್ತು.

7.ಅರಾಯಾ
ಕಪ್ಪು ಬಣ್ಣದ ಹೊಳೆಯುವ ಗೌನ್‌ನಲ್ಲಿ ಅರಾಯಾ ಮನಮೋಹಕಿಯಾಗಿದ್ದರು. ಕೋಲ್ ರಿಮ್ ಕಣ್ಣುಗಳು ಮತ್ತು ಕೆಂಪು ತುಟಿಗಳು ಆಕೆಯ ಸೌಂದರ್ಯವನ್ನು ವೃದ್ಧಿಸಿದ್ದವು.

8.ಕಾರಾ ಡೆಲಿವಿಂಗೇನ್
ಎಂಟನೇ ದಿನದಂದು ಕಾರಾ ಡೆಲಿವಿಂಗೇನ್ ಸಣ್ಣ ಬಾಡಿ ಕೋನ್ ಡ್ರೆಸ್ ಅನ್ನು ಧರಿಸಿ ಕೇನ್ಸ್‌ನಲ್ಲಿ ಮಿಂಚಿದರು.

9.ಕ್ಲೊಟಿಲ್ಡ್ ಕೌರಾವ್
ಕೇನ್ಸ್ 2014 ರ ದಿನ ಎಂಟರಂದು ಕ್ಲೊಟಿಲ್ಡ್ ಮನಸೂರೆಗೊಳ್ಳುವರಂತೆ ಕಂಡುಬಂದರು. ಮ್ಯಾಕ್ಸಿ ಗೌನ್‌ನಲ್ಲಿ ಈಕೆ ನಮ್ಮನ್ನು ಹಿಡಿದುಬಿಟ್ಟಿದ್ದರು.

10.ಡಿಯೋರ್‌ನಲ್ಲಿ ರುತ್ ಕ್ರಿಲ್ಲಿ
ಡಿಯೋರ್ ಡ್ರೆಸ್‌ನಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕೇನ್ಸ್‌ನ ಎಂಟನೇ ದಿನವನ್ನು ಅದ್ಭುತಗೊಳಿಸಿದರು. ರುತ್ ಕ್ರಿಲ್ಲಿ ಕೂಡ ತಮ್ಮ ಸುಂದರ ದೇಹಸಿರಿಯನ್ನು ಕೇನ್ಸ್‌ನಲ್ಲಿ ಡಿಯೋರ್ ಅಥೈರ್‌ನಲ್ಲಿ ಪ್ರದರ್ಶಿಸಿದರು.



Click it and Unblock the Notifications
