Latest Updates
-
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು!
ಗೃಹಿಣಿಯರೇ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಈ ಟಿಪ್ಸ್ ಫಾಲೋ ಮಾಡಿ
ಮಹಿಳೆಯರಿಗೆ ಬೆಳಗ್ಗೆ ಎದ್ದ ತಕ್ಷಣ ನೂರಾರು ಕೆಲಸಗಳಿರುತ್ತೆ. ಕೆಲಸಕ್ಕೆ ಹೋಗುವವರಾದರೆ ಹೊರಡೋ ತರಾತುರಿ. ಗೃಹಿಣಿಯಾದರೆ ಗಂಡ-ಮಕ್ಕಳನ್ನು ರೆಡಿ ಮಾಡಿ ಕಳುಹಿಸೋದೆ ದೊಡ್ಡ ತಲೆನೋವು. ಇದರ ಮಧ್ಯೆ ತ್ವಚೆಯ ಆರೈಕೆಗೆ ಸಮಯವೇ ಸಿಗೋದಿಲ್ಲ.

ಆದರೆ ಎಷ್ಟೇ ಕೆಲಸಗಳಿದ್ದರೂ ಕೂಡ ಅದರ ಮಧ್ಯೆ ತ್ವಚೆಯ ಆರೈಕೆ ತುಂಬಾನೇ ಮುಖ್ಯವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ತಣ್ಣಿರಿನಿಂದ ಮುಖ ತೊಳೆದು ಫೇಸ್‌ವಾಷ್ ಮಾಡಿ ಮುಖದ ಮೇಲಿರೋ ಎಣ್ಣೆಯ ಅಂಶ, ಡೆಡ್ ಸ್ಕಿನ್, ಪೋರ್ಸ್, ಕೊಳಕುಗಳನ್ನು ತೊಲಗಿಸಿ. ಆನಂತರ ನಿಮ್ಮ ಮನೆಯಲ್ಲೇ ಲಭ್ಯವಾಗೋ ಈ ಮೂರು ವಸ್ತುಗಳನ್ನು ಬಳಸಿ ಹೊಳೆಯುವ, ಕಾಂತಿಯುತವಾದ ತ್ವಚೆ ನಿಮ್ಮದಾಗಿಸಿ.
ನಿತ್ಯವು ಈ ಮೂರು ವಸ್ತುಗಳನ್ನು ಮುಖಕ್ಕೆ ಹಚ್ಚುವುದರಿಂದ ಆರೋಗ್ಯಕರ ತ್ವಚೆ ನಿಮ್ಮದಾಗುತ್ತದೆ.
1.ಹಾಲಿನ ಮಸಾಜ್
ಬೆಳಗ್ಗೆ ಎದ್ದ ತಕ್ಷಣ ಮುಖ ಸ್ವಚ್ಛಗೊಳಿಸಿ ತಣ್ಣಗಿನ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಕೆಲ ಹೊತ್ತು ಹೊತ್ತು ಹಾಗೇ ಇಟ್ಟು ನಂತರ ತಣ್ಣಿರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖದ ಚರ್ಮ ಮೃದು ಮತ್ತು ಕೋಮಲವಾಗುತ್ತದೆ. ಇದಿಷ್ಟೇ ಅಲ್ಲ, ಹಾಲಿನ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳನ್ನು ತೊಲಗಿಸಲು ಕೂಡ ಸಹಾಯ ಮಾಡುತ್ತದೆ.
2. ಜೇನುತುಪ್ಪ
ಬೆಳಗ್ಗಿನ ಜಾವ ಜೇನುತುಪ್ಪದ ಮೂಲಕ ಮುಖಕ್ಕೆ ಸರಿಯಾಗಿ ಹದಿನೈದು ನಿಮಿಷ ಮಸಾಜ್ ಮಾಡಿ ನಂತರ ಹದಾ ಬಿಸಿನೀರಿನಿಂದ ಮುಖ ತೊಳೆಯಿರಿ. ಆನಂತರ ಒಂದು ತುಂಡು ಲಿಂಬೆಹನ್ಣನ್ನು ತೆಗೆದುಕೊಂಡು ಮುಖದ ತುಂಬಾ ಹಚ್ಚಿರಿ. ಆನಂತರ ಅದನ್ನು ಒಣಗಲು ಬಿಡಿ. ಜೇನುತುಪ್ಪವು ನಿಮ್ಮ ಮುಖದ ಬೇಡವಾದ ಕೂದಲನ್ನು ತೊಲಗಿಸುತ್ತದೆ. ಮತ್ತು ಚರ್ಮದ ಬಣ್ಣವನ್ನು ವೃದ್ಧಿಸುತ್ತದೆ.
3. ಸ್ಟ್ರಾಬೆರಿ ಹಣ್ಣು
ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕರ ಲಾಭಗಳಿದೆ. ಇದು ಚರ್ಮದ ಸುಕ್ಕು ಮತ್ತು ಕಣ್ಣಿನ ಸುತ್ತ ಇರುವ ಕಲೆಯನ್ನು ತೊಲಗಿಸುತ್ತದೆ. ಸ್ಟ್ರಾಬೆರಿಯನ್ನು ಹಾಗೇ ತಿನ್ನಲು ಜನ ಇಷ್ಟವಾಗುವುದಿಲ್ಲ. ಹೀಗಾಗಿ ಜ್ಯೂಸ್ ಅಥವಾ ಫ್ರೂಟ್ ಸಲಾಡ್ ಮುಖಾಂತರ ಸೇವಿಸಬಹುದು.
ಲಿಂಬೆಹಣ್ಣಿನಿಂದ ಅನೇಕ ಆರೋಗ್ಯಕರ ಲಾಭಗಳಿದೆ ಅನ್ನೋದು ನಮಗೆ ಗೊತ್ತಿದೆ. ಅದರ ಬದಲಿಗೆ ಟೊಮೆಟೋ ಹಣ್ಣಿನ ಜ್ಯೂಸ್ ಕೂಡ ನೀವು ಮುಖಕ್ಕೆ ಹಚ್ಚಬಹುದು. ಇದರಿಂದ ನಿಮ್ಮ ಚರ್ಮ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಆದರೆ ಸಿಟ್ರಿಕ್‌ಯುಕ್ತ ವಸ್ತುಗಳನ್ನು ಮುಖಕ್ಕೆ ಹಚ್ಚುವಾಗ ಹುಷಾರಾಗಿರಿ. ಯಾಕೆಂದರೆ ಕೆಲವು ಜನರ ಚರ್ಮಕ್ಕೆ ಇದು ಸೂಕ್ತವಲ್ಲ ಉರಿ, ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ.
ನೋಡಿದ್ರಲ್ಲ ಮನೆಯಲ್ಲ ಸಿಗುವ ವಸ್ತುಗಳಿಂದ ನಮ್ಮ ಅಂದವನ್ನು ಹೇಗೆ ಹೆಚ್ಚಿಸಬಹುದು ಅನ್ನೊದನ್ನ. ಯಾವುದೇ ವಸ್ತುವಾಗಲಿ ಬಳಸುವಾಗ ಜಾಗರೂಕತೆಯಿಂದರಿ ನಿಮ್ಮ ಚರ್ಮಕ್ಕೆ ಸೂಕ್ತ ಎನಿಸಿದರೆ ಮಾತ್ರ ಅದರ ಬಳಕೆಯನ್ನು ಮುಂದುವರಿಸಿ.



Click it and Unblock the Notifications



