Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಕಾಂತಿಯುತ ತ್ವಚೆಗೆ ಸರಳವಾಗಿ ಮನೆಯಲ್ಲಿಯೇ ಮಾಡಬಹುದಾದ ಹಣ್ಣಿನ ಫೇಸ್ ಪ್ಯಾಕ್‌ಗಳು
ಕಾಂತಿಯುತ ತ್ವಚೆ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸು ಆಗಿರುವುದು. ಇಂತಹ ತ್ವಚೆ ಪಡೆಯಲು ತುಂಬಾ ಪರಿಶ್ರಮ ಕೂಡ ಪಡಬೇಕು. ಕೇವಲ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಹಾಗು ಲೋಷನ್ ಗಳನ್ನು ಹಚ್ಚಿಕೊಂಡರೆ ಕಾಂತಿಯುತ ತ್ವಚೆಯು ಸಿಗದು. ಅದರೊಂದಿಗೆ ನಮ್ಮ ದೈನಂದಿನ ಜೀವನ ಕ್ರಮದಲ್ಲಿ ಕೆಲವು ಬದಲಾವಣೆ ಹಾಗೂ ಶಿಸ್ತನ್ನು ಪಾಲಿಸಬೇಕು. ಅದರಲ್ಲೂ ಆಹಾರ ಕ್ರಮವು ಆರೋಗ್ಯವಾಗಿ ಇದ್ದರೆ ಆಗ ಖಂಡಿತವಾಗಿಯೂ ಇದು ತ್ವಚೆಯ ಮೇಲೆ ಪರಿಣಾಮ ಬೀರುವುದು. ಕಾಂತಿಯುತ ತ್ವಚೆಯನ್ನು ನೈಸರ್ಗಿಕವಾಗಿ ಪಡೆಯಬೇಕಾದರೆ ಕೆಲವೊಂದು ಹಣ್ಣುಗಳನ್ನು ಬಳಸಿಕೊಂಡು ಮನೆಯಲ್ಲೇ ಫೇಶಿಯಲ್ ತಯಾರಿಸಿಕೊಳ್ಳಬಹುದು. ಹಣ್ಣುಗಳಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಇರುವುದು.

ಇದು ತ್ವಚೆಗೆ ತುಂಬಾ ಪರಿಣಾಮಕಾರಿ ಆಗಿರಲಿದೆ. ಹಣ್ಣುಗಳಿಂದ ಕಾಂತಿಯುತ ಹಾಗೂ ಆರೋಗ್ಯಕಾರಿ ತ್ವಚೆ ಪಡೆಯಬಹುದು. ಹಣ್ಣುಗಳ ಫೇಸ್ ಪ್ಯಾಕ್ ತಯಾರಿಸಿಕೊಂಡು ಬಳಸಿದರೆ ಅದು ತ್ವಚೆ ಮೇಲೆ ಅದ್ಭುತ ಪರಿಣಾಮ ಬೀರುವುದು. ನೀವು ಕೃತಕ ಫೇಸ್ ಪ್ಯಾಕ್ ಗಳ ಮೇಲೆ ನಂಬಿಕೆ ಇಡಬೇಡಿ. ಯಾಕೆಂದರೆ ಇದು ನಿಮಗೆ ಕಾಂತಿಯುತ ಹಾಗೂ ನಯವಾದ ಚರ್ಮದ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುವುದು. ತಾಜಾ ಹಣ್ಣುಗಳಿಂದ ತಯಾರಿಸಿಕೊಂಡ ಫೇಸ್ ಪ್ಯಾಕ್ ನಿಂದಾಗಿ ನೀವು ತ್ವಚೆಗೆ ಅತ್ಯಧಿಕ ಲಾಭ ಪಡೆದುಕೊಳ್ಳಬಹುದು. ಕೃತಕ ಫೇಸ್ ಪ್ಯಾಕ್ ನ್ನು ನೀವು ದೂರವಿಟ್ಟು, ಹಣ್ಣುಗಳಿಂದ ತಯಾರಿಸಿದ ಫೇಸ್ ಪ್ಯಾಕ್ ನ್ನು ನಿಮ್ಮದಾಗಿಸಿಕೊಳ್ಳಿ. ಚರ್ಮವು ಕಾಂತಿ ಪಡೆಯಲು ಬೇಕಾಗಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ನೈಸರ್ಗಿಕ ಹಣ್ಣಿನ ಫೇಸ್ ಪ್ಯಾಕ್ ನೀಡುವುದು. ನೀವು ಮನೆಯಲ್ಲೇ ತಯಾರಿಸಿಕೊಂಡು, ಬಳಸಬಹುದಾದ ಕೆಲವೊಂದು ಸುಲಭ ಹಾಗೂ ಅಗ್ಗದ ಫೇಸ್ ಪ್ಯಾಕ್ ಗಳನ್ನು ನೀಡಲಾಗಿದೆ. ಇದನ್ನು ನೀವು ಪ್ರಯತ್ನಿಸಿ ನೋಡಿ.

ಬಾಳೆಹಣ್ಣಿನ ಫೇಸ್ ಪ್ಯಾಕ್
ಬಾಳೆಹಣ್ಣು ನಿಮಗೆ ತುಂಬಾ ಸುಲಭವಾಗಿ ಸಿಗುವುದು. ತಾಜಾ ಬಾಳೆಹಣ್ಣುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ ಮತ್ತು ಇದು ಚರ್ಮಕ್ಕೆ ಕಾಂತಿ ಉಂಟು ಮಾಡುವುದು.
ಬಾಳೆಹಣ್ಣಿನ ಫೇಸ್ ಪ್ಯಾಕ್ ನ್ನು ತಯಾರಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳು
1.ಅರ್ಧ ಬಾಳೆಹಣ್ಣು
2.ಅರ್ಧ ಚಮಚ ಜೇನುತುಪ್ಪ
ತಯಾರಿಸಿಕೊಳ್ಳುವ ವಿಧಾನ
*ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪ ಹಾಕಿ.
*ಇದರ ಬಳಿಕ ಅದಕ್ಕೆ ಒಂದು ಚಮಚ ಲಿಂಬೆ ರಸ ಹಾಕಿಕೊಂಡು ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 20 ನಿಮಿಷಗಳ ಕಾಲ ಹಾಗೆ ಬಿಡಿ.
*ಇದರ ಬಳಿಕ ಮುಖವನ್ನು ಸರಿಯಾಗಿ ತೊಳೆಯಿರಿ.
*ಬಾಳೆಹಣ್ಣಿನ ಈ ಫೇಸ್ ಪ್ಯಾಕ್ ನಿಂದ ಮೊಡವೆಗಳು ನಿವಾರಣೆ ಆಗುವುದು ಮತ್ತು ನೈಸರ್ಗಿಕ ಕಾಂತಿ ಸಿಗುವುದು.

ಪಪ್ಪಾಯಿ ಫೇಸ್ ಪ್ಯಾಕ್
ಪಪ್ಪಾಯಿಯು ಚರ್ಮಕ್ಕೆ ಅದ್ಭುತ ಉಂಟು ಮಾಡುವಂತಹ ಒಂದು ಹಣ್ಣು. ಹೆಚ್ಚಿನ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಪಪ್ಪಾಯಿಯನ್ನು ಸೇರಿಸಲಾಗಿರುತ್ತದೆ. ಇದನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಂಡಾಗ ಅದರಿಂದ ಅದ್ಭುತವಾದ ಫಲಿತಾಂಶ ಪಡೆಯಬಹುದು. ತ್ವಚೆಗೆ ತಾಜಾತನ ನೀಡಲು ಪಪ್ಪಾಯಿಯ ಫೇಸ್ ಪ್ಯಾಕ್ ತುಂಬಾ ನೆರವಾಗುವುದು.
ಪಪ್ಪಾಯಿ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಎರಡು ಮಧ್ಯಮ ಗಾತ್ರದ ಪಪ್ಪಾಯಿ ತುಂಡುಗಳು
*ಇದನ್ನು ಸರಿಯಾಗಿ ರುಬ್ಬಿ ಪೇಸ್ಟ್ ಮಾಡಿ.
*ಈಗ ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ.
*ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳುವ ಮೊದಲು ಮುಖ ಸರಿಯಾಗಿ ತೊಳೆಯಿರಿ. ಮುಖವನ್ನು ಮೊದಲು ತೊಳೆದುಕೊಂಡು ಒರೆಸಿದ ಬಳಿಕ ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ.
*ಇದರ ಬಳಿಕ ಫೇಸ್ ಪ್ಯಾಕ್ ನ್ನು 20 ನಿಮಿಷ ಕಾಲ ಹಾಗೆ ಬಿಡಿ.
*20 ನಿಮಿಷ ಬಿಟ್ಟು ಮುಖವನ್ನು ಸರಿಯಾಗಿ ನೀರಿನಿಂದ ತೊಳೆಯಿರಿ.
*ಹಗುರ ಫೇಸ್ ವಾಶ್ ಬಳಸಿಕೊಂಡು ಮುಖ ತೊಳೆಯಿರಿ.
*ನಯ ಹಾಗೂ ಕಾಂತಿಯುತ ತ್ವಚೆ ಪಡೆಯಲು ಈ ಫೇಸ್ ಪ್ಯಾಕ್ ನ್ನು ನೀವು ನಿಯಮಿತವಾಗಿ ಬಳಸಿಕೊಳ್ಳಿ.

ಸೇಬು ಮತ್ತು ಕಿತ್ತಳೆ ಫೇಸ್ ಪ್ಯಾಕ್
ಈ ಎರಡು ಹಣ್ಣುಗಳಲ್ಲಿ ಅತ್ಯಧಿಕ ಮಟ್ಟದ ಪೋಷಕಾಂಶಗಳು ಇವೆ. ಇದನ್ನು ಜತೆಯಾಗಿ ಸೇರಿಸಿಕೊಂಡರೆ ಆಗ ಅದ್ಭುತವಾಗಿರುವಂತಹ ಪರಿಣಾಮ ತ್ವಚೆ ಮೇಲೆ ಆಗುವುದು. ಇದನ್ನು ಹೆಚ್ಚಿನ ಪ್ರಮಾಣದ ವಿಟಮಿನ್ ಗಳು ಮತ್ತು ಒಳ್ಳೆಯ ಸಿಟ್ರಿಕ್ ಆಮ್ಲವು ಕಿತ್ತಳೆ ಹಣ್ಣಿನಲ್ಲಿ ಇದೆ.
ಸೇಬು ಮತ್ತು ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್ ತಯಾರಿಗೆ ಬೇಕಾಗುವ ಸಾಮಗ್ರಿಗಳು
*ಸೇಬಿನ ಕೆಲವು ತುಂಡುಗಳನ್ನು ತೆಗೆದುಕೊಳ್ಳಿ.
*ಕಿತ್ತಳೆಯ ಕೆಲವು ತಿರುಳು.
*ಇದನ್ನು ಜತೆಯಾಗಿ ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.
*ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ.
*ಎರಡು ಚಿಟಿಕೆ ಅರಶಿನ ಕೂಡ ಬೆರೆಸಿ.
*ಪೇಸ್ಟ್‌ನ್ನು ಸ್ವಲ್ಪ ಮೆತ್ತಗೆ ಮಾಡಲು ಕೆಲವು ಹನಿ ಹಾಲು ಹಾಕಿಕೊಳ್ಳಬಹುದು.
*ಈಗ ಈ ಪೇಸ್ಟ್ ನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
*20 ನಿಮಿಷ ಕಾಲ ಹಾಗೆ ಬಿಡಿ.
*ಬಳಿಕ ಇದನ್ನು ನೀರಿನಿಂದ ಸರಿಯಾಗಿ ತೊಳೆಯಿರಿ.

ಮಾವಿನ ಹಣ್ಣಿನ ಫೇಸ್ ಪ್ಯಾಕ್
ಮಾವಿನ ಹಣ್ಣು ಮತ್ತು ಮೊಸರಿನ ಮಿಶ್ರಣವು ನಿಮ್ಮ ತ್ವಚೆಗೆ ಅದ್ಭುತವನ್ನು ಉಂಟು ಮಾಡಲಿದೆ. ಇದು ಕಾಂತಿಯು ತ್ವಚೆ ನೀಡುವುದು. ತ್ವಚೆಗೆ ಮಾವಿನ ಹಣ್ಣು ಮತ್ತು ಮೊಸರಿನ ಮಿಶ್ರಣವು ಅತ್ಯುತ್ತಮವಾಗಿ ಇರುವುದು.
ಮಾವಿನ ಹಣ್ಣಿನ ಫೇಸ್ ಪ್ಯಾಕ್ ತಯಾರಿಗೆ ಬೇಕಾಗುವ ಸಾಮಗ್ರಿಗಳು
*ಕೆಲವು ತುಂಡು ಮಾವಿನ ಹಣ್ಣು ತೆಗೆದುಕೊಳ್ಳಿ
*ಇದಕ್ಕೆ ಒಂದು ಚಮಚ ಮೊಸರು ಹಾಕಿ.
*ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈಗ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
*20 ರಿಂದ 30 ನಿಮಿಷ ಕಾಲ ಹಾಗೆ ಬಿಡಿ.
*ಬಳಿಕ ಮುಖವನ್ನು ಸರಿಯಾಗಿ ತೊಳೆಯಿರಿ.
*ಮುಖ ತೊಳೆದ ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.
ಕಾಂತಿಯುತ ತ್ವಚೆ ಪಡೆಯಲು ಈ ಹಣ್ಣುಗಳು ನಿಮಗೆ ಸ್ನೇಹಿತರಂತೆ ಕೆಲಸ ಮಾಡುವುದು. ತ್ವಚೆಯ ಆರೋಗ್ಯ ಕಾಪಾಡಲು ನೀವು ಆರೋಗ್ಯಕಾರಿ ಆಹಾರ ಸೇವನೆ ಮಾಡುವುದು ಕೂಡ ಅಗತ್ಯ. ನಿಮಗೆ ಈ ಮೇಲಿನ ಯಾವುದೇ ಹಣ್ಣಿನಿಂದ ಅಲರ್ಜಿ ಇದ್ದರೆ ಆಗ ನೀವು ಇದನ್ನು ಕಡೆಗಣಿಸಬಹುದು.



Click it and Unblock the Notifications