Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಳಿಗಾಲಕ್ಕೆ ಮನೆಯಲ್ಲಿಯೇ ಮಾಡಿ ನೋಡಿ-'ಹಣ್ಣಿನ ಫೇಸ್ ಪ್ಯಾಕ್'
ಚಳಿಗಾಲದಲ್ಲಿ ಸರಿಯಾದ ಕಾಳಜಿ ವಹಿಸದಿದ್ದಲ್ಲಿ ಒಣಚರ್ಮವಾಗುತ್ತದೆ.ಅದಕ್ಕೆ ಕೆಲವು ಮನೆಯಲ್ಲಿಯೇ ಮಾಡಬಹುದಾದ ಹಣ್ಣಿನ ಫೇಸ್ ಪ್ಯಾಕ್ ನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.ನೀವು ಮಾಡಿನೋಡಿ ಮತ್ತು ಸುಂದರವಾದ ತ್ವಚೆ ನಿಮ್ಮದಾಗಿಸಿಕೊಳ್ಳಿ....

ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಮಿಕ್ಸರ್ ನಲ್ಲಿ ಸರಿಯಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಓಟ್ ಮೀಲ್ ಪುಡಿಯನ್ನು ಕೂಡ ಬೆರೆಸಿ.ಒಂದೆರಡು ಹನಿ ಜೇನುತುಪ್ಪ ಮತ್ತು ಮೊಸರನ್ನು ಮಿಕ್ಸ್ ಮಾಡಿ.ಇದನ್ನು ನಿಮ್ಮ ಮುಖಕ್ಕೆ ಹಚ್ಚಿ.ಒಣಗಿದ ನಂತರ ತಣ್ಣೇರಿನಲ್ಲಿ ಮುಖ ತೊಳೆಯಿರಿ.

ಕಿತ್ತಳೆ ಸಿಪ್ಪೆ, ಅರಿಶಿನ ಮತ್ತು ಜೇನುತುಪ್ಪದ ಪ್ಯಾಕ್
ಈ ಪ್ಯಾಕ್ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದರ ಜತೆಗೆ ಚರ್ಮಕ್ಕೆ ಕಾಂತಿ ನೀಡುವುದು. ಒಂದು ಪಿಂಗಾಣಿಯಲ್ಲಿ ಒಂದು ಚಮಚ ಕಿತ್ತಳೆ ಸಿಪ್ಪೆ ಹುಡಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಎಲ್ಲವನ್ನು ಜತೆ ಸೇರಿಸಿಕೊಂಡು ಫೇಸ್ಟ್ ಮಾಡಿಕೊಳ್ಳಿ. ಮುಖ ತೊಳೆದ ಬಳಿಕ ಈ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸುಮಾರು 10-15 ನಿಮಿಷ ಕಾಲ ಹಾಗೆ ಒಣಗಲಿ. ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಮೊಡವೆಗಳಿದ್ದರೆ ಈ ಫೇಸ್ ಪ್ಯಾಕ್ ಬಳಸಬೇಡಿ.

ಸೇಬು ಹಣ್ಣು
ಸೇಬುವಿನ ಸಿಪ್ಪೆಯನ್ನು ತೆಗೆದು ತುರಿದಿಟ್ಟುಕೊಳ್ಳಿ.ಇದಕ್ಕೆ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ.ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಬಾಳೆಹಣ್ಣು
ಎರಡು ಬಾಳೆಹಣ್ಣನ್ನು ತೆಗೆದುಕೊಂಡು ಮ್ಯಾಶ್ ಮಾಡಿಕೊಳ್ಳಿ.ಇದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ.ಇದನ್ನು ಕಣ್ಣನ್ನು ಬಿಟ್ಟು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ.15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿಕೊಳ್ಳಿ.ಇದಕ್ಕೆ ಓಟ್ ಬಳಸಿ ಕೂಡ ಸ್ಕ್ರಬ್ ಮಾಡಿಕೊಳ್ಳಬಹುದು.

ಮಾಗಿದ ಅರ್ಧ ಬಾಳೆಹಣ್ಣು...
ಮಾಗಿದ ಅರ್ಧ ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಳ್ಳಿ. ಇದನ್ನು ನಿಮ್ಮ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನೈಸರ್ಗಿಕವಾಗಿ ಚರ್ಮಕ್ಕೆ ತೇವಾಂಶವನ್ನು ನೀಡುವುದಲ್ಲದೆ, ಚರ್ಮವು ಒಣ ಹಾಗೂ ಪೇಲವಗೊಂಡಿದ್ದರೆ ಜೇನುತುಪ್ಪ ಸೇರಿಸಿಕೊಂಡು ಹಚ್ಚಿಕೊಳ್ಳಿ. ಬಾಳೆಹಣ್ಣು ಕಪ್ಪು ಕಳೆಗಳನ್ನು ತೆಗೆದುಹಾಕುವುದು.

ಪಪ್ಪಾಯಿ ಹಣ್ಣು
ಸಾಮಾನ್ಯ ಗಾತ್ರದ ಹತ್ತು ಪಪ್ಪಾಯಿ ಹಣ್ಣಿನ ಹೋಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಸ್ವಲ್ಪ ನಿಂಬು ರಸವನ್ನು ಬೆರೆಸಿ.ಇದರಿಂದ ದೊರೆಯುವ ದಪ್ಪ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಒಣ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್
ಎರಡು ಸಣ್ಣ ತುಂಡು ಮಾಗಿದ ಪಪ್ಪಾಯಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನನ್ನು ಸೇರಿಸಿಕೊಂಡು ಮಿಶ್ರಣ ಮಾಡಿ. ಮಿಶ್ರಣವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ. ಇದು ತೇವಾಂಶವನ್ನು ನೀಡುವುದು.

ಟೊಮೇಟೊ
ಕಳಿತ ಟೊಮೇಟೊ ತೆಗೆದುಕೊಂಡು ಅದರಿಂದ ಬೀಜವನ್ನು ಬೇರ್ಪಡಿಸಿ ಉಳಿದದ್ದನ್ನು ಮ್ಯಾಶ್ ಮಾಡಿಕೊಳ್ಳಿ.ಇದಕ್ಕೆ ಒಂದು ಚಮಚ ಅರಿಶಿನವನ್ನು ಬೆರೆಸಿ.ಜೊತೆಗೆ ಮೊಸರನ್ನು ಕೂಡ ಸೇರಿಸಬಹುದು.ಇದನ್ನು ಮುಖಕ್ಕೆ ಬೆರೆಸಿ ಮತ್ತು ಒಣಗಿದ ನಂತರ ನೀರಿನಲ್ಲಿ ತೊಳೆಯಿರಿ.

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್
ಒಂದು ಟೊಮೆಟೊದ ತಿರುಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಟೊಮೆಟೊ, ಜೇನುತುಪ್ಪದ ಮಾಸ್ಕ್ ಒಣ ಚರ್ಮದವರಿಗೆ ತುಂಬಾ ಒಳ್ಳೆಯದು. ಟೊಮೆಟೊ ಮತ್ತು ಜೇನುತುಪ್ಪವು ಪೋಷಕಾಂಶಗಳನ್ನು ಹೊಂದಿರುವ ಕಾರಣದಿಂದ ಇದು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು.



Click it and Unblock the Notifications
