ಕೂದಲು ಮತ್ತು ತ್ವಚೆಯ ಸಮಸ್ಯೆಗೆ, 'ತುಳಸಿ ಎಲೆ'ಗಳನ್ನು ಬಳಸಿ ನೋಡಿ

Subscribe to Boldsky

ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸೌಂದರ್ಯ ಸಾಮಾಗ್ರಿಗಳು ಹೆಚ್ಚಿನ ರಾಸಾಯನಿಕಗಳನ್ನು ಒಳಗೊಂಡಿವೆ. ಆದರೂ ವಿಧಿಯಿಲ್ಲದೆ ನಾವು ಇವುಗಳನ್ನು ಬಳಸಿಕೊಳ್ಳಬೇಕಾಗುತ್ತಿದೆ. ಅದೂ ಅಲ್ಲದೆ ಕಲುಷಿತ ಮತ್ತು ಮಾಲಿನ್ಯದಿಂದ ತುಂಬಿರುವ ಈ ಪರಿಸರದಲ್ಲಿ ಕೃತಕ ಸೌಂದರ್ಯ ಪರಿಕರಗಳನ್ನು ಬಳಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಂದನ್ನು ನೈಸರ್ಗಿಕವಾಗಿ ಪಡೆದುಕೊಳ್ಳುತ್ತಿದ್ದರು ಮತ್ತು ಅವರು ಯಾವುದೇ ವಿಧವಾದ ಸೌಂದರ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಈಗ ಸಮಯ ಮತ್ತು ನೈಸರ್ಗಿಕ ವಸ್ತುಗಳ ಅಭಾವದಿಂದಾಗಿ ನಮ್ಮ ಸೌಂದರ್ಯ ಹದೆಗೆಡುತ್ತಿದೆ ಅಂತೆಯೇ ನಾವು ಹೆಚ್ಚು ಹೆಚ್ಚು ರಾಸಾಯನಿಕ ವಸ್ತುಗಳನ್ನೇ ಬಳಸುವಂತಾಗಿದೆ.

ಆದರೆ ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿರುವ ಒಂದು ಆಯುರ್ವೇದ ಔಷಧಿ ಖಂಡಿತವಾಗಿಯೂ ನಿಮಗೆ ದೊರೆಯಲಿದೆ ಹಾಗೂ ನಿಮ್ಮ ಹೆಚ್ಚಿನ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲಿದೆ. ಮನೆಯಂಗಳದಲ್ಲಿ ಬೆಳೆಯುವ ತುಳಸಿಯ ಬಗ್ಗೆಯೇ ನಾವು ಇಲ್ಲಿ ತಿಳಿಸುತ್ತಿದ್ದೇವೆ. ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳೆಸುವ ಸಸ್ಯವಾಗಿದೆ. ಅಧಿಕ ಪೋಷಣೆಯ ಅಗತ್ಯವಿಲ್ಲದೆ, ಆರಾಮವಾಗಿ ಈ ಸಸ್ಯವನ್ನು ಬೆಳೆದುಕೊಳ್ಳಬಹುದು. ಹಾಗೂ ಪ್ರತಿಯೊಬ್ಬರ ಮನೆಯಲ್ಲಿ ಕೂಡ ತುಳಸಿ ಇದ್ದೇ ಇರುತ್ತದೆ. ಪೂಜನೀಯ ಸಸ್ಯವಾಗಿ ಮಾತ್ರವಲ್ಲದೆ ತುಳಸಿಯು ಆರೋಗ್ಯಕಾರಿ ಅಂಶಗಳನ್ನು ತನ್ನಲ್ಲಿ ಬಹಳಷ್ಟು ಪಡೆದುಕೊಂಡಿದೆ. ಶೀತ, ಕೆಮ್ಮು ಮೊದಲಾದ ಕಾಯಿಲೆಗಳ ಸಮಯದಲ್ಲಿ ತುಳಸಿ ಕಷಾಯವನ್ನು ಸಿದ್ಧಪಡಿಸಿ ಸೇವಿಸಬಹುದು. ಇಂದಿನ ಲೇಖನದಲ್ಲಿ ತುಳಿಸಿಯಿಂದ ದೊರೆಯುವ ಸೌಂದರ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.

ತ್ವಚೆಗಾಗಿ ತುಳಸಿ

ತ್ವಚೆಗಾಗಿ ತುಳಸಿ

ವಯಸ್ಸಾಗುವುದನ್ನು ನಿಧಾನವಾಗಿಸುತ್ತದೆ. ತುಳಸಿಯು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಇದು ತ್ವಚೆಯನ್ನು ಪುನರುಜ್ಜೀವನಗೊಳಿಸುತ್ತದೆ, ಮತ್ತು ವಯಸ್ಸಾಗುವಿಕೆಯ ಕ್ರಿಯೆಯನ್ನು ನಿಧಾನವಾಗಿಸುತ್ತದೆ. ತುಳಸಿ ಎಲೆಗಳ ಪ್ರಯೋಜನವನ್ನು ಪಡೆಯಲು, ನೀವು ಕೆಲವು ಎಲೆಗಳನ್ನು ಸೇವಿಸಬಹುದು, ಅವುಗಳನ್ನು ಗ್ರೈಂಡ್ ಮಾಡಿಕೊಂಡು ಪೇಸ್ಟ್‌ನಂತೆ ನಿಮ್ಮ ಮುಖಕ್ಕೆ ಹಚ್ಚಿ ಮತ್ತು 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಅದನ್ನು ತೊಳೆದುಕೊಳ್ಳಿ.

Most Read: ಲೈಂಗಿಕ ಸಮಸ್ಯೆ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸಲು 'ಕಿತ್ತಳೆ ಹಣ್ಣು' ಸೇವಿಸಿ

ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ

ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ

ನಿಮ್ಮ ಮುಖಕ್ಕೆ ಮತ್ತು ಕತ್ತಿಗೆ ನೀವು ತುಳಿಸಿಯ ಫೇಸ್ ಪ್ಯಾಕ್ ಅನ್ನು ಬಳಸಿದಾಗ, ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ. ಒಣ ತುಳಸಿ ಎಲೆಗಳನ್ನು ಉಜ್ಜಿಕೊಂಡು ಅದನ್ನು ಪೌಡರ್ ಮಾಡಿ ನಂತರ ಇದನ್ನು ನಿಮ್ಮ ಮುಖ ಹಾಗೂ ಕತ್ತಿಗೆ ಹಚ್ಚಿ ನಂತರ ಅದನ್ನು ತೊಳೆದುಕೊಳ್ಳಿ. ಇದು ಕಪ್ಪು ಕಲೆ ಮತ್ತು ಮೊಡವೆಗಳನ್ನು ನಿವಾರಿಸುತ್ತದೆ. ತುಳಸಿಯನ್ನು ಹುಡಿಯನ್ನಾಗಿ ಮಾಡಿಕೊಂಡು ಅದಕ್ಕೆ ಹಾಲು ಮತ್ತು ಕೇನು ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿಕೊಳ್ಳಿ.

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ನಿಮ್ಮ ಮುಖದಲ್ಲಿರುವ ಮೊಡವೆಯನ್ನು ನಿವಾರಿಸಲು ತುಳಸಿ ಸಹಕಾರಿಯಾಗಿದೆ. ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶವನ್ನು ನಿವಾರಿಸಲು ತುಳಸಿ ಸಹಕಾರಿಯಾಗಿದ್ದು ಇದು ರೋಗನಿರೋಧಕ ಮತ್ತು ನಂಜುನಿವಾರಕ ಗುಣಗಳನ್ನು ಪಡೆದುಕೊಂಡಿದೆ. ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ರೋಸ್‌ವಾಟರ್‌ನೊಂದಿಗೆ ಕಲಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆಯೇ ಬಿಡಿ ನಂತರ ಅದನ್ನು ತೊಳೆದುಕೊಳ್ಳಿ.

ಸುಂದರ ತ್ವಚೆಗಾಗಿ

ಸುಂದರ ತ್ವಚೆಗಾಗಿ

ತುಳಸಿ ಅಥವಾ ಸೇವನೆಯ ನಿಯಮಿತ ಮತ್ತು ಸಾಮಯಿಕ ಬಳಕೆಯು ತ್ಬಚೆಯನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ದೋಷರಹಿತ ಬಣ್ಣವನ್ನು ನೀಡುತ್ತದೆ. ನೀವು ಕೇವಲ ತುಳಸಿ ಪೇಸ್ಟ್ ಮತ್ತು ಕೆಲವು ಗ್ರಾಂ ಹಿಟ್ಟು ಬಳಸಿ ಮುಖದ ಫೇಸ್‌ಪ್ಯಾಕ್ ತಯಾರಿಸಬಹುದು ಮತ್ತು 15 ನಿಮಿಷಗಳ ಕಾಲ ಅದನ್ನು ಒಣಗಿಸಿ ತಣ್ಣನೆಯ ನೀರಿನಿಂದ ತೊಳೆಯಿರಿ. ಈ ಮಿಶ್ರಣವು ನಿಮ್ಮ ತ್ವಚೆಯನ್ನು ಹಗುರಗೊಳಿಸುತ್ತದೆ ಮತ್ತು ನಿಮ್ಮ ಮುಖಕ್ಕೆ ಹೊಳಪನ್ನು ನೀಡುತ್ತದೆ.

ತ್ವಚೆಯ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ

ತ್ವಚೆಯ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ

ಇದು ವೈದ್ಯಕೀಯ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದ್ದು ಎಲ್ಲಾ ರೀತಿಯ ತ್ವಚೆಯ ದೋಷಗಳನ್ನು ನಿವಾರಿಸುತ್ತದೆ. ತುಳಸಿಯ ಎಲೆಯನ್ನು ನೀರಿನಲ್ಲಿ ಕಾಯಿಸಿ ಮತ್ತು ಇದಕ್ಕೆ ಕೆಲವು ಸೆಸಮೆ ಆಯಿಲ್ ಅನ್ನು ಮಿಶ್ರ ಮಾಡಿ ಸೋಂಕಿರುವ ಸ್ಥಳದಲ್ಲಿ ಇದನ್ನು ಹಚ್ಚಿಕೊಳ್ಳಿ.

Most Read: ತಲೆಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವಾಗ ಏನು ಮಾಡಬೇಕು? ಏನು ಮಾಡಬಾರದು?

ನಿಮ್ಮ ಚರ್ಮದ ಮೇಲಿನ ರಂಧ್ರಗಳನ್ನು ಬಿಗಿಗೊಳಿಸುತ್ತದೆ

ನಿಮ್ಮ ಚರ್ಮದ ಮೇಲಿನ ರಂಧ್ರಗಳನ್ನು ಬಿಗಿಗೊಳಿಸುತ್ತದೆ

ನಿಮ್ಮ ಚರ್ಮದ ಮೇಲೆ ದೊಡ್ಡ ತೆರೆದ ರಂಧ್ರಗಳಿಂದ ನೀವು ಚಿಂತಿತರಾಗಿದ್ದರೆ, ತುಳಸಿ ಎಲೆಗಳನ್ನು ಬಳಸುವುದಕ್ಕಿಂತ ಉತ್ತಮ ಚಿಕಿತ್ಸೆ ಇಲ್ಲ. ಅವು ಚರ್ಮವನ್ನು ಸೋಂಕು ತಗ್ಗಿಸುತ್ತವೆ, ರಂಧ್ರಗಳನ್ನು ಬಿಗಿಗೊಳಿಸುತ್ತವೆ ಮತ್ತು ಯಾವುದೇ ರೀತಿಯ ಚರ್ಮದ ಸೋಂಕನ್ನು ತಡೆಯುತ್ತವೆ. ನೀವು ತುಳಸಿ ಎಲೆಗಳ ಪೇಸ್ಟ್ ಮಾಡಲು ಮತ್ತು ಮುಖದ ಮುಖವಾಡವನ್ನು ರೂಪಿಸಲು ಮತ್ತು ಬೇಕಾದ ಫಲಿತಾಂಶಗಳಿಗಾಗಿ ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಅದನ್ನು ಬಳಸಿ ಬೇಕಿದ್ದರೆ ಮೊಟ್ಟೆಯನ್ನು ಸೇರಿಸಬಹುದು.

ಕೂದಲಿಗಾಗಿ ತುಳಸಿ

ಕೂದಲಿಗಾಗಿ ತುಳಸಿ

ತ್ವಚೆಯ ಪ್ರಯೋಜನಗಳಲ್ಲದೆ ತುಳಸಿಯು ನಿಮ್ಮ ಕೂದಲಿಗೆ ಕೂಡ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ:

ಕೂದಲುದುರುವುದನ್ನು ತಡೆಯುತ್ತದೆ

ನಿಮ್ಮ ತಲೆಬುಡಕ್ಕೆ ತುಳಸಿ ಎಲೆಯನ್ನು ಹಚ್ಚಿ ಇದರಿಂದ ಕೂದಲಿನ ಬೇರುಗಳಿಗೆ ಪುನರುಜ್ಜೀವನವುಂಟಾಗುತ್ತದೆ. ನಿಮ್ಮ ತಲೆಬುರುಡೆಯನ್ನು ಇದು ತಣ್ಣಗೆ ಇರಿಸುತ್ತದೆ ಮತ್ತು ರಕ್ತಸಂಚಾರವನ್ನು ವೃದ್ಧಿಗೊಳಿಸುತ್ತದೆ, ಇದರಿಂದ ಕೂದಲಿನ ಬೆಳವಣಿಗೆ ಉಂಟಾಗುತ್ತದೆ. ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಮತ್ತು ನಿಮ್ಮ ತಲೆಬುರುಡೆಗೆ ಹಚ್ಚಿ ಹೇರ್ ಪ್ಯಾಕ್‌ನಂತೆ ಬಳಸಿ, ಕೆಲವು ನಿಮಿಷ ಹಾಗೆಯೇ ಬಿಡಿ ನಂತರ ಇದನ್ನು ತೊಳೆದುಕೊಳ್ಳಿ.

ಡ್ಯಾಂಡ್ರಫ್ ನಿವಾರಣೆಗೆ

ಡ್ಯಾಂಡ್ರಫ್ ನಿವಾರಣೆಗೆ

ನಿಮ್ಮ ದೈನಂದಿನ ಎಣ್ಣೆಗೆ ತುಳಸಿಯ ಪೇಸ್ಟ್ ಅನ್ನು ಸೇರಿಸಿ ಮತ್ತು ಮಸಾಜ್ ಮಾಡಿಕೊಳ್ಳಿ ಇದು ಡ್ಯಾಂಡ್ರಫ್ ಅನ್ನು ನಿವಾರಿಸುತತದೆ. ನಿಮ್ಮ ಕೂದಲಿನಲ್ಲಿ ಡ್ಯಾಂಡ್ರಫ್ ಕಾರಣದಿಂದ ತುರಿಕೆ ಉಂಟಾಗುತ್ತಿದೆ ಎಂದರೆ ಇದನ್ನು ಬಳಸಿ ತುರಿಕೆಯಿಂದ ಮುಕ್ತಿ ಪಡೆದುಕೊಳ್ಳಬಹುದಾಗಿದೆ.

Most Read: ಆಲೂಗಡ್ಡೆ ಫೇಸ್ ಪ್ಯಾಕ್ ಬಳಸಿ ಹೊಳೆಯುವ ತ್ವಚೆ ಪಡೆದುಕೊಳ್ಳಿ

ನರೆಗೂದಲನ್ನು ತಡೆಗಟ್ಟುತ್ತದೆ

ನರೆಗೂದಲನ್ನು ತಡೆಗಟ್ಟುತ್ತದೆ

ನಿಮ್ಮ ಕೂದಲು ವಯಸ್ಸಾಗುವುದಕ್ಕಿಂತ ಮುಂಚೆಯೇ ಬಿಳಿಯಾಗಿದೆ ಎಂದಾದರೆ ತುಳಸಿ ಎಲೆಗಳನ್ನು ನೆಲ್ಲಿಕಾಯಿ ಪೌಡರ್‌ನೊಂದಿಗೆ ಮಿಶ್ರ ಮಾಡಿ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ರಾತ್ರಿ ಇದನ್ನು ಹಚ್ಚಿ ಮತ್ತು ಈ ಪ್ಯಾಕ್ ಅನ್ನು ಹಾಗೆಯೇ ಬಿಡಿ. ಬೆಳಗ್ಗೆ ಎಂದಿನಂತೆ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದು ಕೂದಲುದುರುವುದನ್ನು ತಡೆಯುತ್ತದೆ ಮತ್ತು ಕೂದಲು ತುಂಡಾಗುವುದನ್ನು ಕಡಿಮೆ ಮಾಡುತ್ತದೆ ಹಾಗೆಯೇ ಸೀಳು ಕೂದಲನ್ನು ನಿವಾರಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Benefits Of Tulsi For Skin & Hair problem

    Tulsi is widely known for its medicinal benefits. Apart from treating a number of disorders and boosting immunity, tulsi also offers a number of skin care and hair care benefits. Tulsi leaves are rich in antioxidants that rejuvenate your skin and add a glow to your skin along with treating a number of skin infections. It also treats dandruff and other hair problems.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more