Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಅಡುಗೆ ಮನೆಯ ರಾಣಿ-ಮೆಂತೆ ಕಾಳಿನ ಕಾರುಬಾರು ನೋಡಿ...
ಮೆಂತೆಕಾಳು ಆಹಾರದ ರುಚಿ ಹೆಚ್ಚಿಸಲು ಮಾತ್ರವಲ್ಲ, ಕೂದಲ ಪೋಷಣೆಗೂ ಉತ್ತಮವಾಗಿದೆ. ವಿಶೇಷವಾಗಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲು ಬೆಳೆಯಲು, ಶಿಥಿಲಗೊಂಡಿರುವ ಕೂದಲಬುಡಗಳನ್ನು ದೃಢಗೊಳಿಸಿ ಕೂದಲು ಉದುರುವುದನ್ನು ತಡೆಯಲು, ಕೂದಲು ಉದುರಿ ಖಾಲಿಯಾಗಿರುವ ಕೂದಲ ಬುಡದಲ್ಲಿ ಹೊಸ ಕೂದಲು ಉತ್ಪತ್ತಿಯಾಗುವಂತೆ ಮಾಡುವ ಶಕ್ತಿ ಈ ಮೆಂತೆಕಾಳಿಗಿದೆ.
ಅಷ್ಟೇ ಅಲ್ಲ, ಚರ್ಮದ ಆರೈಕೆಗೂ ಇದು ಉತ್ತಮವಾಗಿದ್ದು ವಿಶೇಷವಾಗಿ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಿ ಸಹಜಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಬಿಲಿಸಿಗೆ ಕಪ್ಪಾಗಿದ್ದ ಚರ್ಮ ಮತ್ತೆ ಸಹಜವರ್ಣ ಪಡೆಯಲು ಮತ್ತು ಕಲೆಗಳು ತಿಳಿಗೊಳ್ಳಲೂ ನೆರವಾಗುತ್ತದೆ. ಚರ್ಮದ ವ್ಯಾಧಿಗಳಾದ ಎಕ್ಸಿಮಾ, ಮೊಡವೆ, ಕೆಂಪಗಾಗಿರುವ ಚರ್ಮ, ತರಚು ಮೊದಲಾದ ತೊಂದರೆಗಳನ್ನು ಮೂಲದಿಂದ ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಸೂಕ್ಷ್ಮ ರಂಧ್ರಗಳ ಒಳಗೆ ಅಡಗಿ ಕುಳಿತಿದ್ದ ಕೊಳೆಯನ್ನೂ ಸೆಳೆದು ನಿವಾರಿಸಲು ಸಮರ್ಥವಾಗಿದೆ.
ಮೆಂತೆಯನ್ನು ಅರೆದು ತಯಾರಿಸಿದ ಮುಖಲೇಪದ ನಿಯಮಿತ ಬಳಕೆಯಿಂದ ಆರೋಗ್ಯಕರ ಚರ್ಮವನ್ನು ಪಡೆಯಲು ಸಾಧ್ಯವಾಗಿದ್ದು ಇದುವರೆಗೆ ಲಭ್ಯವಿರುವ ಅತ್ಯುತ್ತಮ ವಿಧಾನಗಳಲ್ಲೊಂದಾಗಿದೆ. ವಾರಕ್ಕೊಂದು ಬಾರಿ ಬಳಸಿದರೂ ಇದರ ಉತ್ತಮ ಗುಣಗಳನ್ನು ಪಡೆಯಬಹುದು. ಮೆಂತೆ ಚರ್ಮಕ್ಕೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ...

ಸೂಕ್ಷ್ಮರಂಧ್ರಗಳ ಕೊಳೆ ನಿವಾರಿಸಲು (Cleanser)
ನಮ್ಮ ಚರ್ಮದಲ್ಲಿರುವ ಸೂಕ್ಷ್ಮರಂಧ್ರಗಳ ಒಳಗಿರುವ ಕೊಳೆಯನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದನ್ನು ಸೆಳೆಯಲು ಪ್ರಬಲ ಸೋಪು ಬಳಸಿದರೆ ಇದು ಕೊಳೆಯ ಜೊತೆಗೇ ಚರ್ಮದ ಸೂಕ್ಷ್ಮರಂಧ್ರಗಳ ಒಳಭಾಗದಲ್ಲಿರುವ ಅಗತ್ಯ ತೈಲವನ್ನೂ ನಿವಾರಿಸಿಬಿಡಬಹುದು. ಆದ್ದರಿಂದ ತೈಲವನ್ನು ಮುಟ್ಟದೇ ಕೇವಲ ಕೊಳೆಯನ್ನು ಮಾತ್ರ ಸೆಳೆಯಬೇಕು. ಇದೇ ಕಾರಣಕ್ಕೆ ಮೈಸೋಪು ಅಥವಾ ಪ್ರಬಲ ರಾಸಾಯನಿಕ ಇರುವ ಪ್ರಸಾದನಗಳಿಂದ ಮುಖ ತೊಳೆಯಕೂಡದು ಎಂದು ತಜ್ಞರು ಸಲಹೆ ಮಾಡುತ್ತಾರೆ. ಆದರೆ ಮೆಂತೆ ಒಂದು ಸೌಮ್ಯ ನಿವಾರಕವಾಗಿದ್ದು ಕೊಳೆಯನ್ನು ಮಾತ್ರ ಸೆಳೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೂಕ್ಷ್ಮರಂಧ್ರಗಳ ಕೊಳೆ ನಿವಾರಿಸಲು (Cleanser)
ಉತ್ತಮ ಪರಿಣಾಮಕ್ಕಾಗಿ ಕೊಂಚ ಮೆಂತೆಕಾಳುಗಳನ್ನು ನೆನೆಸಿ ಅರೆದು ಈ ಮಿಶ್ರಣಕ್ಕೆ ಹಸಿ ಹಾಲು ಹಾಕಿ ದಪ್ಪನೆಯ ಲೇಪನ ತಯಾರಿಸಿ. ಲೇಪನವನ್ನು ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ಕಾಂತಿ ಹೆಚ್ಚಿಸಲು
ಮೇಲಿನ ವಿಧಾನದಂತೆಯೇ ಮೆಂತೆ ಮತ್ತು ಹಾಲಿನ ಲೇಪನ ತಯಾರಿಸಿ, ಹಸಿ ಹಾಲನ್ನು ಕೊಂಚ ಹೆಚ್ಚು ಹಾಕಿ ಸ್ವಲ್ಪ ತೆಳ್ಳಗಾಗಿಸಿ. ಈ ಲೇಪನವನ್ನು ಮುಖ, ಕುತ್ತಿಗೆ, ಕೈ, ಪಾದ, ಮೊಣಕಾಲುಗಳಿಗೆ ತೆಳ್ಳಗೆ ಹಚ್ಚಿ ಕೊಂಚಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮದ ಸಹಜವರ್ಣ ಪಡೆಯಲು
ಚರ್ಮ ಬೆಳ್ಳಗಾಗಲು ಈ ಪ್ರಸಾಧನ ಬಳಸಿ ಎಂಬ ಜಾಹೀರಾತಿಗೆ ಮರುಳಾಗಬೇಡಿ. ನಮ್ಮ ಚರ್ಮದ ಬಣ್ಣ ವಂಶವಾಹಿನಿಯಾಗಿದ್ದು ಬಿಸಿಲು ಬೀಳದೆಡೆ ಇರುವ ಬಣ್ಣವೇ ನಮ್ಮ ಸಹಜವರ್ಣವಾಗಿದೆ. ಬಿಸಿಲು ಮತ್ತು ಇತರ ಕಾರಣಗಳಿಂದ ಗಾಢವಾಗಿದ್ದರೆ ಇದನ್ನು ಸಹಜವರ್ಣಕ್ಕೆ ತರಬಹುದೇ ವಿನಹ ಅದಕ್ಕೂ ಹೆಚ್ಚು ಬಿಳಿಚಿಸಲು ಸಾಧ್ಯವಿಲ್ಲ, ಬಲವಂತವಾಗಿ ಬಿಳಿಚಿಸುವುದು ಆರೋಗ್ಯಕರವೂ ಅಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಸಹಜವರ್ಣ ಪಡೆಯಲು
ಸಹಜವರ್ಣ ಪಡೆಯಲು ಕೊಂಚ ಮೆಂತೆಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಬಿಸಿಲಿಗೆ ಒಡ್ಡಿದ್ದ ಭಾಗ, ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಸತ್ತ ಜೀವಕೋಶಗಳನ್ನು ನಿವಾರಿಸಲು
ಸತ್ತ ಜೀವಕೋಶಗಳು ಚರ್ಮಕ್ಕೆ ಅಂಟಿಕೊಂಡಿದ್ದು ಸುಲಭವಾಗಿ ಹೋಗಲಾರವು. ಇದಕ್ಕಾಗಿ ಕೊಂಚ ಮೆಂತೆಯನ್ನು ನೆನೆಸಿ ಅರೆದು ಜೇನಿನೊಂದಿಗೆ ಬೆರೆಸಿ ದಪ್ಪನಾದ ಲೇಪನ ತಯಾರಿಸಿ. ಇದನ್ನು ಚರ್ಮಕ್ಕೆ ತೆಳ್ಳಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತೊಳೆದುಕೊಳ್ಳಿ. ಇದರಿಂದ ಚರ್ಮದ ಹೊರಕವಚ ಸ್ವಚ್ಛಗೊಳ್ಳುವುದು ಮಾತ್ರವಲ್ಲ, ಮೊಡವೆ, ಬೆವರುಸಾಲೆ, ಕೀವುಗುಳ್ಳೆ, ಬ್ಲಾಕ್ ಹೆಡ್ ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತವೆ.

ವೃದ್ಧಾಪ್ಯವನ್ನು ದೂರವಾಗಿಸಲು
ಮುಖದಲ್ಲಿ ಬೀಳುವ ನೆರಿಗೆಗಳು ವೃದ್ಧಾಪ್ಯದ ಸೂಚನೆಗಳಾಗಿವೆ. ಇದನ್ನು ತಡವಾಗಿಸಿದಷ್ಟೂ ವೃದ್ಧಾಪ್ಯವನ್ನು ದೂರಾಗಿಸಿದಂತಾಗುತ್ತದೆ. ಇದಕ್ಕಾಗಿ ಕೊಂಚ ಮೆಂತೆಯನ್ನು ನೆನೆಸಿ ತಣ್ಣೀರಿನೊಂದಿಗೆ ಅರೆಯಿರಿ. ಇದಕ್ಕೆ ಕೊಂಚ ಜೇನು ಸೇರಿಸಿ ಮಿಶ್ರಣ ಮಾಡಿ ಮುಖದ ಮೇಲೆ, ವಿಶೇಷವಾಗಿ ನೆರಿಗೆಗಳು ಮೂಡುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ನೆರಿಗೆಗಳು ಮೂಡುವ ಪ್ರಕ್ರಿಯೆ ತಡವಾಗುತ್ತದೆ.

ಬಿಸಿಲಿಗೆ ಕಪ್ಪಗಾಗಿದ್ದ ವರ್ಣವನ್ನು ತಿಳಿಯಾಗಿಸಲು
ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗ ಕಪ್ಪಗಾಗಲು ನಮ್ಮ ಚರ್ಮದಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯ ಕಾರಣ. ಇದನ್ನು ಮತ್ತೊಮ್ಮೆ ಸಹಜವರ್ಣಕ್ಕೆ ತಿರುಗಿಸಲು ಅರ್ಧ ಕಪ್ ಮೆಂತೆಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ಸುಮಾರು ಎರಡರಿಂದ ಮೂರು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣಿದ ಬಳಿಕ ಫ್ರಿಜ್ಜಿನಲ್ಲಿರಿಸಿ. (ಬಿಸಿ ಇದ್ದುದನ್ನೇ ಫ್ರಿಜ್ಜಿನಲ್ಲಿ ನೇರವಾಗಿಡಬೇಡಿ, ಇದರಿಂದ ಮೆಂತೆಯ ಪೋಷಕಾಂಶಗಳು ನೀರಿಗೆ ಬರುವುದಿಲ್ಲ) ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿಲಿಗೆ ಕಪ್ಪಗಾಗಿದ್ದ ವರ್ಣವನ್ನು ತಿಳಿಯಾಗಿಸಲು
ಮರುದಿನದಿಂದ ಕೊಂಚಕೊಂಚವಾಗಿ ಈ ನೀರಿನಲ್ಲಿ ಅದ್ದಿದ ಹತ್ತಿಯುಂಡೆಯನ್ನು ಬಿಸಿಲಿಗೆ ಕಪ್ಪಗಾಗಿರುವ ಚರ್ಮದ ಭಾಗವನ್ನು ಮಲಗುವ ಮುನ್ನ ಹಚ್ಚಿಕೊಂಡು ಒಣಗಲು ಬಿಡಿ. ಮರುದಿನ ಸ್ನಾನದ ಸಮಯದಲ್ಲಿ ತೊಳೆದುಕೊಳ್ಳಿ.



Click it and Unblock the Notifications