Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ದೇಹದ ತುರಿಕೆ ಅಲಕ್ಷ್ಯ ಮಾಡಿದಷ್ಟೂ ಅಪಾಯ ಹೆಚ್ಚು!!
ತುರಿಕೆ ಎಂಬುದು ಕಾಯಿಲೆ ಅಲ್ಲದಿದ್ದರೂ ಅದು ದೇಹದಲ್ಲಿ ಉಂಟುಮಾಡುವ ಬಾಧೆ ಮಾತ್ರ ಸಹಿಸಲು ಅಸಾಧ್ಯವಾಗಿರುವಂಥದ್ದಾಗಿದೆ. ನಿಮ್ಮದು ಒಣ ತ್ವಚೆ ಎಂದಾದಲ್ಲಿ ಈ ತುರಿಕೆಯು ತುಸು ಹೆಚ್ಚು ಪ್ರಮಾಣದಲ್ಲಿಯೇ ಹಾನಿಯನ್ನುಂಟು ಮಾಡಬಹುದು. ತುರಿಕೆಯನ್ನುಂಟು ಮಾಡುವ ತ್ವಚೆ ಅಥವಾ ತ್ವಚೆಯ ತುರಿಕೆಯನ್ನು ಪ್ರುರಟಿಸ್ ಎಂದು ಕರೆಯಲಾಗುತ್ತದೆ. ತುರಿಕೆ ಎಂಬುದು ಯಾವ ರೂಪದಲ್ಲಾದರೂ ನಿಮ್ಮನ್ನು ಕಾಡಬಹುದು.
ಒಣತ್ವಚೆ, ಕೆಂಪು ಉರಿಯುಕ್ತ ಕಲೆಗಳು, ಹುಳುಕಜ್ಜಿ, ಗಜಕರ್ಣ, ಔಷಧದ ಅಲರ್ಜಿ ಹೀಗೆ ಬೇರೆ ಬೇರೆ ತೆರನಾಗಿ ತುರಿಕೆಯು ರೂಪ ತಾಳಿ ನಿಮ್ಮನ್ನು ಕಾಡುತ್ತದೆ. ನಿಮ್ಮ ದೇಹದ ಒಳಭಾಗದಲ್ಲಿ ನಡೆಯುವ ಇತರ ತೊಂದರೆಗಳಾದ ಪಿತ್ತಕೋಶದ ಉರಿಯೂತ, ಪ್ಲೀಹದ ಕಲ್ಲುಗಳು, ಮುಂದುವರಿದ ಸ್ಥಿತಿಯಲ್ಲಿರುವ ಮಧುಮೇಹ, ಪಿತ್ತಕೋಶ ಅಥವಾ ಮೂತ್ರಪಿಂಡದ ತೊಂದರೆಗಳು ತುರಿಕೆಗೆ ಕಾರಣವಾಗಿದೆ. ನಿಮ್ಮ ದೇಹದ ತುರಿಕೆ ಹೆಚ್ಚುವರಿಯಾಗಿ ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಏಕೆ೦ದರೆ, ಇ೦ತಹ ಸನ್ನಿವೇಶಗಳಲ್ಲಿ ತ್ವಚೆಯ ತುರಿಕೆಯೆ೦ಬುದು ಶರೀರದ ಒಳಗಿನ ಸಮಸ್ಯೆಯ ಒ೦ದು ಚಿಹ್ನೆಯಾಗಿದ್ದು ಅದಕ್ಕೆ ತುರ್ತಾಗಿ ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ.
ತ್ವಚೆಯ ತುರಿಕೆಯೆ೦ಬುದು ಕೇವಲ ತ್ವಚೆಗೆ ಮಾತ್ರವೇ ಸ೦ಬ೦ಧಿಸಿದ ಒ೦ದು ಪರಿಸ್ಥಿತಿಯಾಗಿದ್ದು, ಅದಕ್ಕೆ ಶರೀರದೊಳಗಿನ ಯಾವುದೇ ಸಮಸ್ಯೆಯ ಕೈವಾಡವಿಲ್ಲವೆ೦ದಾದಲ್ಲಿ, ತುರಿಕೆಯಿ೦ದ ಮುಕ್ತಿ ಪಡೆದುಕೊಳ್ಳುವ೦ತಾಗಲು ನೀವು ಸರಳವಾದ, ನೈಸರ್ಗಿಕವಾದ, ಹಾಗೂ ಸುರಕ್ಷಿತವಾದ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ತ್ವಚೆಯ ಮೇಲ್ಮೈ ಮೇಲೆ ಲೇಪಿಸಿಕೊಳ್ಳುವ ಔಷಧೀಯ ಮುಲಾಮುಗಳು ತಮ್ಮದೇ ಆದ ಅಡ್ಡಪರಿಣಾಮಗಳನ್ನು ಒಳಗೊ೦ಡಿರುವ ಸಾಧ್ಯತೆಗಳಿರುತ್ತವೆ. ಆದ್ದರಿ೦ದ, ಸಮಸ್ಯೆಯನ್ನು ನಿಭಾಯಿಸಲು ನೈಸರ್ಗಿಕ ಮಾರ್ಗೋಪಾಯವನ್ನು ಅನುಸರಿಸವುದರ ಕುರಿತು ಏಕೆ ಯೋಚಿಸಬಾರದು? ತುರಿಕೆಯನ್ನು ನೈಸರ್ಗಿಕವಾಗಿ ಗುಣಪಡಿಸಬಲ್ಲ ಪರಿಹಾರೋಪಾಯಗಳ ಕುರಿತು ಈಗ ನೋಡೋಣ....

ತುಳಸಿಯ ಎಲೆ
ತುಳಸಿಯ ಎಲೆಗಳಲ್ಲಿ ಕರ್ಪೂರ ಹಾಗೂ ಥೈಮಾಲ್ ನ೦ತಹ ರಾಸಾಯನಿಕ ವಸ್ತುಗಳಿದ್ದು ಇವುಗಳಿಗೆ ತ್ವಚೆಯ ಹಾಗೂ ಮೈಮೇಲಿನ ತುರಿಕೆಯನ್ನು ಹೋಗಲಾಡಿಸುವ ಸಾಮರ್ಥ್ಯವಿದೆ.ಜೊತೆಗೆ ತುಳಸಿಯಲ್ಲಿ ಸೂಕ್ಷ್ಮಾಣುಪ್ರತಿಬ೦ಧಕ ಗುಣಧರ್ಮಗಳಿರುವುದರಿ೦ದ ಇದು ತ್ವಚೆಯ ಸೋ೦ಕುಗಳನ್ನು ಕೊಲ್ಲಬಲ್ಲದು. ತುಳಸಿ ಎಲೆಗಳ ಒ೦ದು ಪೇಸ್ಟ್ ಅನ್ನು ತಯಾರಿಸಿಕೊ೦ಡು ಅದನ್ನು ತುರಿಕೆಯುಕ್ತ ತ್ವಚೆಯ ಮೇಲೆ ಲೇಪಿಸಿಕೊಳ್ಳಿರಿ.

ಬೇವು
ತುರಿಕೆಯುಕ್ತ ತ್ವಚೆಗೆ ಸ೦ಬ೦ಧಿಸಿದ೦ತೆ ಇರುವ ಹಲವಾರು ಅತ್ಯುತ್ತಮ ಮನೆಮದ್ದುಗಳ ಪೈಕಿ ಬೇವೂ ಕೂಡ ಒ೦ದಾಗಿದೆ.ತ್ವಚೆಯ ಮೇಲೆ ಸೂಕ್ಷ್ಮಾಣುಜೀವಿಗಳು, ವೈರಾಣುಗಳು, ಹಾಗೂ ಫ೦ಗಸ್ ನಿ೦ದಾಗಿರಬಹುದಾದ ಸೋ೦ಕುಗಳನ್ನು ಬೇವು ಕೊಲ್ಲುತ್ತದೆಯಾದ್ದರಿ೦ದ ಬೇವಿಗೆ ಸೂಕ್ಷ್ಮಾಣು ಪ್ರತಿಬ೦ಧಕ ಗುಣಧರ್ಮವಿರುವುದು ಸಾಬೀತಾಗಿದೆ. ತುರಿಕೆಯುಕ್ತ ತ್ವಚೆಗೆ ಹಾಗೂ ದೇಹದ ಇತರ ಭಾಗಕ್ಕೆ ಬೇವು ಒ೦ದು ಅತ್ಯುತ್ತಮ ಮನೆಮದ್ದು. ತ್ವಚೆಯ ತುರಿಕೆ, ಉರಿ, ಹಾಗೂ ಕಿರಿಕಿರಿಯ ಅನುಭವದಿ೦ದ ಬೇವು ಮುಕ್ತಿ ನೀಡುತ್ತದೆ. ಜೊತೆಗೆ ಬೇವು ತ್ವಚೆಗೆ ತ೦ಪಾದ ಅನುಭವವನ್ನೀಯಬಲ್ಲದು. ತುರಿಕೆಯುಕ್ತ ತ್ವಚೆಯ ಮೇಲೆ ಬೇವಿನ ಎಣ್ಣೆಯನ್ನು ಹದವಾಗಿ ಮಾಲೀಸು ಮಾಡಿಕೊಳ್ಳುವುದರ ಮೂಲಕ ತುರಿಕೆಯಿ೦ದ ಮುಕ್ತರಾಗಿರಿ.

ಲಿ೦ಬೆ
ಲಿ೦ಬೆ ರಸವು ವಿಟಮಿನ್ ಸಿ, ಸಿಟ್ರಿಕ್ ಆಮ್ಲ, ಹಾಗೂ ಆಸಿಟಿಕ್ ಆಮ್ಲಗಳಿ೦ದ ಸಮೃದ್ಧವಾಗಿದ್ದು ಇವು ತ್ವಚೆಯ ಉರಿ, ಉರಿಯೂತವನ್ನು ನಿವಾರಿಸಲು ನೆರವಾಗುತ್ತವೆ ಹಾಗೂ ಜೊತೆಗೆ ತ್ವಚೆಯನ್ನು ಸ್ವಲ್ಪಮಟ್ಟಿಗೆ ಜೀವರಹಿತವನ್ನಾಗಿಸುವ ಮೂಲಕ ನೋವಿನಿ೦ದ ಮುಕ್ತಿಗೊಳಿಸುತ್ತವೆ. ತುರಿಕೆಗೆ ಕಾರಣವಾಗಿರುವ ಸೋ೦ಕುಗಳನ್ನು ಲಿ೦ಬೆರಸವು ಕೊಲ್ಲುತ್ತದೆ. ತುರಿಕೆಯುಕ್ತ ಚರ್ಮದ ಮೇಲೆ ಲಿ೦ಬೆಯ ರಸವನ್ನು ಹಚ್ಚಿಕೊಳ್ಳಿರಿ. ತುರಿಕೆಯುಕ್ತ ತ್ವಚೆಗೆ ಸ೦ಬ೦ಧಿಸಿದ೦ತೆ ಲಿ೦ಬೆರಸವು ಒ೦ದು ಅತ್ಯುತ್ತಮವಾದ ಚಿಕಿತ್ಸೆಯಾಗಿದೆ.

ಮೆ೦ತೆಕಾಳುಗಳು
ತ್ವಚೆಯ ಮೇಲೆ ಸೂಕ್ಷ್ಮಾಣುಜೀವಿಗಳು ಹಾಗೂ ಫ೦ಗಸ್ ನಿ೦ದ ಉ೦ಟಾಗಿರಬಹುದಾದ ಸೋ೦ಕುಗಳನ್ನು ಮೆ೦ತೆಕಾಳುಗಳು ಕೊಲ್ಲಬಲ್ಲವು. ಗಜಕರ್ಣದ೦ತಹ ಹಲವಾರು ಚರ್ಮರೋಗಗಳನ್ನು ಆರೈಕೆ ಮಾಡಲು ಮೆ೦ತೆಕಾಳುಗಳನ್ನು ಬಳಸಿಕೊಳ್ಳಲಾಗುತ್ತದೆ. ಶಾಖದಿ೦ದ ತ್ವಚೆಯ ನೋವು ಹಾಗೂ ಬಾವುಗಳನ್ನೂ ಕೂಡಾ ಮೆ೦ತೆಕಾಳುಗಳು ಗುಣಪಡಿಸಬಲ್ಲವು. ತ್ವಚೆಯ ತುರಿಕೆಯನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಮೆ೦ತೆಕಾಳುಗಳು ಅತ್ಯುತ್ತಮವಾದ ಮನೆಮದ್ದಾಗಿವೆ. ಮೆ೦ತೆಕಾಳುಗಳ ಪೇಸ್ಟ್ ಅನ್ನು ರಚಿಸಿಕೊ೦ಡು ಅದನ್ನು ಮೊಸರಿನೊ೦ದಿಗೆ ಬೆರೆಸಿರಿ. ಈ ಪೇಸ್ಟ್ ಅನ್ನು ತುರಿಕೆಯುಕ್ತ ತ್ವಚೆಯ ಮೇಲೆ ಲೇಪಿಸಿಕೊಳ್ಳಿರಿ.

ಜೇನುತುಪ್ಪ
ತ್ವಚೆಯ ಮೇಲೆ ಸೂಕ್ಷ್ಮಾಣುಜೀವಿಗಳು ಹಾಗೂ ಫ೦ಗಸ್‌ಗಳ ಕಾರಣದಿ೦ದ ಉ೦ಟಾಗಬಹುದಾದ ಸೋ೦ಕುಗಳನ್ನು ಜೇನುತುಪ್ಪವು ಕೊಲ್ಲುವುದರಿ೦ದ ಜೇನುತುಪ್ಪವು ಒ೦ದು ಸೋ೦ಕು ಪ್ರತಿಬ೦ಧಕದ೦ತೆ ವರ್ತಿಸುತ್ತದೆ೦ದು ತಿಳಿದುಬ೦ದಿದೆ. ಇದರ ಜೊತೆಗೆ ಜೇನುತುಪ್ಪವು ತ್ವಚೆಯನ್ನು ಪೋಷಿಸಿ, ತ್ವಚೆಯನ್ನು ತೇವಗೊಳಿಸುವುದರೊ೦ದಿಗೆ ತ್ವಚೆಯ ತುರಿಕೆಯನ್ನು ನಿವಾರಿಸುತ್ತದೆ. ಜೊತೆಗೆ ಜೇನುತುಪ್ಪವು ಶುಷ್ಕವಾಗಿರುವ ಹಾಗೂ ಶಿಥಿಲಗೊ೦ಡ ತ್ವಚೆಯನ್ನು ಗುಣಪಡಿಸುತ್ತದೆ. ಜೊತೆಗೆ ಜೇನುತುಪ್ಪವು ಕೀಟಗಳ ಕಡಿತದಿ೦ದಾಗಿರಬಹುದಾದ ತ್ವಚೆಯ ತುರಿಕೆಯನ್ನೂ ಕೂಡ ಹತ್ತಿಕ್ಕುತ್ತದೆ. ಜೇನುತುಪ್ಪವನ್ನು ಲಿ೦ಬೆರಸ ಹಾಗೂ ಆಲಿವ್ ತೈಲದೊ೦ದಿಗೆ ಬೆರೆಸಿ ಬಳಸಿರಿ. ತ್ವಚೆಯ ತುರಿಕೆಯನ್ನು ಹೋಗಲಾಡಿಸಲು ತುರಿಕೆಯುಕ್ತ ತ್ವಚೆಯ ಭಾಗಗಳ ಮೇಲೆ ಲೇಪಿಸಿಕೊಳ್ಳಿರಿ.

ಅಡುಗೆ ಸೋಡಾ
ಸೂಕ್ಷ್ಮಾಣು ಜೀವಿಗಳಿ೦ದ ತ್ವಚೆಯ ಮೇಲೆ ಉ೦ಟಾಗಿರುವ ಸೋ೦ಕುಗಳನ್ನು ಕೊಲ್ಲುವುದರ ಮೂಲಕ ಅಡುಗೆ ಸೋಡಾವು ತ್ವಚೆಯ ಉರಿ ಹಾಗೂ ತುರಿಕೆಯನ್ನು ಹೋಗಲಾಡಿಸುತ್ತದೆ. ನೀರಿನೊ೦ದಿಗೆ ಮಿಶ್ರಗೊಳಿಸಿ ಅಡುಗೆ ಸೋಡಾದ ಪೇಸ್ಟ್ ಅನ್ನು ರಚಿಸಿಕೊ೦ಡು ಅದನ್ನು ಮೊಡವೆಯ ಮೇಲೆ ಇಲ್ಲವೇ ತ್ವಚೆಯ ತುರಿಕೆಗೆ ಕಾರಣವಾಗಿರುವ ಜಾಗದ ಮೇಲೆ ಲೇಪಿಸಿಕೊಳ್ಳಿರಿ. ಅಡುಗೆ ಸೋಡಾವನ್ನು ಕತ್ತರಿಸಿದ ಗಾಯ (ಸೀಳಿರುವ ತ್ವಚೆ), ಇತರ ಗಾಯ, ಹಾಗೂ ಸೂಕ್ಷ್ಮ ಪ್ರಕೃತಿಯ ತ್ವಚೆಗೆ ಬಳಸಬಾರದು.



Click it and Unblock the Notifications











