Latest Updates
-
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ
ಮುಖದ ಅಂದ ಹೆಚ್ಚಿಸುವ ಫೇಸ್ ಪ್ಯಾಕ್, ಒಮ್ಮೆ ಪ್ರಯತ್ನಿಸಿ
ತಾರುಣ್ಯವನ್ನು ಕಾಪಾಡುವ ಯಾವುದೇ ವಸ್ತುವಾಗಲಿ ಅದು ಎಲ್ಲರಿಗೂ ಪ್ರಿಯವಾದದ್ದು. ತಮ್ಮ ಸೌಂದರ್ಯದ ಲಾವಣ್ಯದಲ್ಲಿ ಸ್ವಲ್ಪ ಕೊರತೆಯುಂಟಾದರೂ ಅದನ್ನು ಹೆಚ್ಚಿನವರು ಸಹಿಸಲಾರರು. ಇನ್ನು ಮುಖದ ಮೇಲೆ ಕಪ್ಪು ಕಲೆಗಳು, ಸಣ್ಣ ಗೆರೆಗಳು, ಸುಕ್ಕುಗಳು ಉಂಟಾದರಂತೂ ಹೊರಗಡೆ ಅವರ ಮುಖವನ್ನು ಯಾರಿಗೂ ತೋರಿಸಲಾರದಷ್ಟು ನಿರಾಸೆ ಹೊಂದುವ ಲಕ್ಷಣ ಈಗಿನ ಕಾಲದ ಯುವತಿಯರಲ್ಲಿ ಹೆಚ್ಚಿದೆ.
ಆದರೆ ಸೌಂದರ್ಯದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರ ಚರ್ಮವೂ ಕೂಡ ಒಂದೇ ರೀತಿಯಾಗಿರುವುದಿಲ್ಲ. ಒಬ್ಬೊಬ್ಬರ ಚರ್ಮ ಒಂದೊಂದು ರೀತಿಯಲ್ಲಿರುತ್ತದೆ. ಕೆಲವರದ್ದು ಜಿಡ್ಡಿನಾಂಶವಿರುವ ಚರ್ಮವಾದರೆ ಇನ್ನು ಕೆಲವರದ್ದು ಒಣ ಚರ್ಮವಾಗಿರುತ್ತದೆ. ಒಣ ಚರ್ಮವಿರುವವರಲ್ಲಿ ಗೆರೆಗಳು, ಒಡೆಯುವುದು, ನೆರಿಗೆ, ವಯಸ್ಸಾದಂತೆ ಕಾಣುವುದು ಮತ್ತು ಕೆಲವೊಮ್ಮೆ ಚರ್ಮದ ಸಿಪ್ಪೆ ಏಳುವುದು ಎಲ್ಲಾ ಸಾಮಾನ್ಯ, ಇದರಿಂದಾಗಿ ಚರ್ಮವು ಒಡೆಯುವುದರಿಂದ ಚರ್ಮದ ಜೀವಕೋಶಗಳು ದುರ್ಬಲವಾಗಬಹುದು ಸಹಜ.
ಹಾಗಂತ, ಇದನ್ನೇ ಜೀವನದ ದೊಡ್ಡ ಸಮಸ್ಯೆ ಎಂಬಂತೆ ಇಲ್ಲಸಲ್ಲದ ಮಾರುಕಟ್ಟೆಯ ಸೌಂದರ್ಯ ವರ್ಧಕಗಳನ್ನು ಬಳಸುವುದಕ್ಕಿಂತ, ಮನೆಯಲ್ಲಿಯೇ ಸಿಗುವಂತಹ ನೈಸರ್ಗಿಕ ಪದಾರ್ಥಗಳಿಂದಲೇ ಈ ಎಲ್ಲಾ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಬನ್ನಿ ಈ ಲೇಖನದಲ್ಲಿ ನಿಮಗೆ ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಕೆಲ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ...

ಮುಖದ ಸೌಂದರ್ಯಕ್ಕೆ...
ತ್ವಚೆಯು ಯಾವುದೇ ಪ್ರಕಾರದ್ದಾಗಿರಲಿ, ಗೌರವರ್ಣದ ತ್ವಚೆಯನ್ನು ಹ೦ಬಲಿಸುತ್ತಿರುವವರಿಗಾಗಿ ಇದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಒ೦ದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದಲ್ಲಿ ಹಾಗೆಯೇ ಸುಮ್ಮನೆ ಶ್ರೀ ಗ೦ಧದೆಣ್ಣೆಯನ್ನು ಬಳಸಿರಿ. ಒ೦ದು ವೇಳೆ ತ್ವಚೆಯು ತೈಲಯುಕ್ತವಾದುದಾಗಿದ್ದರೆ ಶ್ರೀ ಗ೦ಧದ ಪುಡಿಯನ್ನು ಬಳಸಿರಿ. ಒ೦ದು ಟೇಬಲ್ ಚಮಚದಷ್ಟು ಕಾಳಿನ ಹಿಟ್ಟು, ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಅಥವಾ ಎಣ್ಣೆ, ಒ೦ದು ಟೀ ಚಮಚದಷ್ಟು ಅರಿಶಿನದ ಪುಡಿ ಹಾಗೂ ಪನ್ನೀರು ಇವುಗಳನ್ನು ಬಳಸಿಕೊ೦ಡು ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖದ ಸೌಂದರ್ಯಕ್ಕೆ...
ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊ೦ಡು ಅದನ್ನು ಹಾಗೆಯೇ ಮುಖದ ಮೇಲೆಯೇ ಒಣಗಲು ಅವಕಾಶ ಕಲ್ಪಿಸಿ. ನಿಮ್ಮ ಮುಖವನ್ನು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿರಿ. ಕಾ೦ತಿಯುಕ್ತ ಹಾಗೂ ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಿರಿ.

ಪಪ್ಪಾಯಿ ಹಣ್ಣು
ಮಾರುಕಟ್ಟೆಯಲ್ಲಿಯಂತೂ ಪಪ್ಪಾಯಿ ಹಣ್ಣು ಧಾರಳವಾಗಿ ಸಿಗುತ್ತಿದೆ, ನೀವು ಮಾಡಬೇಕಾದದು ಇಷ್ಟೇ ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

ನುಗ್ಗೆ ಸೊಪ್ಪಿನ ಎಲೆ
ಆಯುರ್ವೇದದಲ್ಲಿ ನುಗ್ಗೆಗಿಡದ ಎಲ್ಲಾ ಭಾಗಗಳು- ಅಂದರೆ ಎಲೆ, ಕಾಂಡ, ತೊಗಟೆ, ಬೇರು ಎಲ್ಲವೂ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಕರಿಬೇವಿನ ಎಲೆ
ಇ೦ದಿನ ದಿನಮಾನಗಳಲ್ಲಿ ಇನ್ನೂ ಇಪ್ಪತ್ತರ ಹರೆಯಕ್ಕೆ ಕಾಲಿಡುತ್ತಿರುವ ಲಲನಾಮಣಿಗಳೂ ಕೂಡ ಬೂದುಬಣ್ಣದ ಕೇಶರಾಶಿಯುಳ್ಳವರಾಗಿರುವುದನ್ನು ನಾವಿ೦ದು ಕಾಣುತ್ತಿದ್ದೇವೆ. ಇದಕ್ಕೆಂದೇ ಒಂದು ಸರಳವಾದ ಮನೆಮದ್ದನ್ನು ಸೂಚಿಸಿದ್ದೇವೆ, ಅದೇ ಕರಿಬೇವಿನ ಎಲೆಯ ಮಾಸ್ಕ್. ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್
ಒಂದು ವೇಳೆ ನಿಮ್ಮ ತ್ವಚೆಯ ಚರ್ಮದಲ್ಲಿ ಎಣ್ಣೆಯಂಶ ಕೊಂಚ ಹೆಚ್ಚಾಗಿದ್ದರೆ ಅರಿಶಿನದೊಂದಿಗೆ ಚಂದನದ ಪುಡಿ ಅಥವಾ ತೇದಿದ ದ್ರವವನ್ನು ಸೇರಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದಕ್ಕಾಗಿ ಅರಿಶಿನದ ಒಣ ಕೊಂಬು, ಚಂದನದ ಕೊರಡನ್ನು ಕಲ್ಲಿನ ಮೇಲೆ ತೇದಿ ಸಮಪ್ರಮಾಣದಲ್ಲಿ ಲೇಪನವನ್ನು ತಯಾರಿಸಿ. ಇದಕ್ಕೆ ದ್ರವವಾಗಿ ಹಸಿಹಾಲನ್ನು ಬಳಸಿ. ಈ ಲೇಪನ ಸಾಕಷ್ಟು ದಟ್ಟನೆ ಇರಬೇಕು, ಅಂದರೆ ಮುಖದ ಮೇಲೆ ಹಚ್ಚಿಕೊಂಡಾಗ ದ್ರವವಾಗಿ ನೀರಿನಂತೆ ಇಳಿಯಬಾರದು, ಅಷ್ಟು ಘನವಾಗಿರಲಿ. ರಾತ್ರಿ ಮಲಗುವ ಮುನ್ನ ಈಗ ತಾನೇ ತೊಳೆದುಕೊಂಡ ಮುಖಕ್ಕೆ, ತುಟಿಗಳನ್ನು ಬಿಟ್ಟು ಇಡಿಯ ಮುಖ ಆವರಿಸುವಂತೆ ತೆಳುವಾಗಿ ಕೆಳಗಿನಿಂದ ಮೇಲಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಮಸಾಜ್ ಮಾಡುತ್ತಾ ಹಚ್ಚಿ. ಸ್ವತಃ ಹಚ್ಚುವುದಕ್ಕಿಂತ ಇನ್ನೊಬ್ಬರ ಸಹಾಯ ಪಡೆಯುವುದು ಲೇಸು. ಇದು ಕೊಂಚ ಉರಿ ತರಿಸಬಹುದು. ಬರೆಯ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಎಣ್ಣೆಚರ್ಮದವರಿಗೂ ಸೂಕ್ತವಾದ ವಿಧಾನವಾಗಿದ್ದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸಬಹುದಾಗಿದೆ. ಈ ಲೇಪದಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ಎಣ್ಣೆಯಂಶವೂ ಕಡಿಮೆಯಾಗುವುದು.

ಬಾಳೆಹಣ್ಣಿನ ಪ್ಯಾಕ್
ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ.

ಕುಂಬಳಕಾಯಿ ಫೇಸ್ ಪ್ಯಾಕ್
ಮೊದಲಿಗೆ ಕುಂಬಳಕಾಯಿಯನ್ನು ಸಣ್ಣದಾಗಿ ಹೋಳುಗಳಾಗಿ ಕತ್ತರಿಸಿಕೊಂಡು, ಕುಕ್ಕರಿನಲ್ಲಿ ಎರಡು ಅಥವಾ ಮೂರು ವಿಸಿಲ್ ಹಾಕಿ, ಬೇಯಿಸಿಕೊಂಡು, ದಪ್ಪ ಪೇಸ್ಟಿನಂತೆ ಮಾಡಿಕೊಳ್ಳಿ. ಎರಡು ಚಮಚ ಕುಂಬಳಕಾಯಿ ದ್ರವ್ಯವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದಕ್ಕೆ ಎರಡು ಚಮಚ ಮಲಾಯಿ ಕ್ರೀಮ್ ಮತ್ತು ಸ್ವಲ್ಪ ಜೇನನ್ನು ಬೆರೆಸಿ. ಮಲಾಯಿ ಕ್ರೀಮ್ ನಲ್ಲಿ ಹೆಚ್ಚು ಸತ್ವಯುಕ್ತ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಹೇರಳವಾಗಿದ್ದು, ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೇಲಿನ ಮಿಶ್ರಣಕ್ಕೆ 4 ಚಮಚ ಸಕ್ಕರೆಯನ್ನು ಬೆರೆಸಿ. ಸಕ್ಕರೆಯಲ್ಲಿರುವ ವಿಶಿಷ್ಟ ಗುಣವು ಚರ್ಮದ ಮೇಲಿರುವ ಸತ್ತ ಜೀವ ಕೋಶಗಳನ್ನು ಹೊರಹಾಕುತ್ತದೆ. ಈ ಮಿಶ್ರಣವನ್ನು ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ ಮುಖಕ್ಕೆ ನಯವಾಗಿ ಹಚ್ಚಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

ತ್ವಚೆಯಲ್ಲಿ ಮೊಡವೆಗೆ - ಬೆಳ್ಳುಳ್ಳಿ ಪೇಸ್ಟ್
ಮೊಡವೆಗಳನ್ನು ಕಡಿಮೆಗೊಳಿಸಲು ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳನ್ನು ತಡೆಗಟ್ಟಲು ಮತ್ತು ಇರುವ ಮೊಡವೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ನೇರವಾಗಿ ಮೊಡವೆಯ ಮೇಲೆ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆದುಕೊಂಡರಾಯಿತು. ಕೊಂಚ ಉರಿಯುವ ಕಾರಣ ತಳುವಾಗಿ ಮೊದಲು ಹಚ್ಚಿ ಉರಿ ಕಡಿಮೆಯಾದ ಬಳಿಕ ಸ್ವಲ್ಪ ದಪ್ಪನಾಗಿ ಹಚ್ಚಬೇಕು



Click it and Unblock the Notifications











