Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆವರಿನಿಂದ ತ್ವಚೆಯ ಆರೋಗ್ಯ ವೃದ್ಧಿ! ಕೇಳಿ ಆಶ್ಚರ್ಯವಾಯಿತೇ?
ಪ್ರಾಮಾಣಿಕತೆಯಿಂದ ದುಡಿದ ಫಲವನ್ನು ಹೆಸರಿಸಲು ಹೆಚ್ಚಿನವರು 'ಬೆವರು ಸುರಿಸಿ ದುಡಿದ ದುಡಿಮೆ' ಎಂಬ ಉತ್ಪ್ರೇಕ್ಷೆಯನ್ನು ಬಳಸುತ್ತಾರೆ. ಹಿಂದೆ ಕೃಷಿಯೇ ಪ್ರಧಾನವಾಗಿದ್ದ ಸಮಯದಲ್ಲಿ ದೈಹಿಕ ಶ್ರಮ, ಅದಕ್ಕೆ ಬೆವರು ಹರಿಯುವುದು ಅನಿವಾರ್ಯವಾದುದರಿಂದ ಈ ಸುಭಾಷಿತ ಮೂಡಿಬಂದಿದೆ. ವಾಸ್ತವವಾಗಿ ಬೆವರಲು ದುಡಿಮೆಗಿಂತಲೂ ಹೆಚ್ಚಿನ ಇತರ ಕಾರಣಗಳಿವೆ. ಬೆವರಿನ ಪ್ರಥಮ ಕಾರ್ಯ ದೇಹದ ತಾಪಮಾನವನ್ನು ಒಂದೇ ಮಟ್ಟದಲ್ಲಿ ಕಾಪಾಡಲು ನೆರವಾಗುವುದು.
ದೈಹಿಕ ಚಟುವಟಿಕೆಗಳಿಂದ ಬಿಸಿಯಾದ ದೇಹದ ತಾಪಮಾನವನ್ನು ಬೆವರುವ ಮೂಲಕ, ಬೆವರು ಆರಲು ಈ ತಾಪಮಾನವನ್ನು ಬಳಸಿಕೊಳ್ಳುವುದರಿಂದ ತಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ತುಂಬಿಕೊಂಡಿದ್ದ ಧೂಳು ಮತ್ತಿತರ ಕಣಗಳನ್ನು ಹೊರಹಾಕಲು ನೆರವಾಗುವ ಜೊತೆ ದೇಹದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.
ಬೆವರುವ ಮೂಲಕ ಹೊರಹರಿವ ನೀರು ಕೆಲವು ಗ್ರಂಥಿಗಳು ಸ್ರವಿಸಿದ ದ್ರವವನ್ನೂ ಕರಗಿಸಿಕೊಂಡಿರುವುದರಿಂದ ಕೊಂಚ ಕಮಟು ವಾಸನೆಯನ್ನೂ ಹೊಂದಿರುತ್ತದೆ. ಇದು ಬಟ್ಟೆಯಲ್ಲಿ ಹೀರಿಕೊಳ್ಳುವ ಮೂಲಕ, ಮೇಕಪ್ ಕರಗಿಸುವ ಮೂಲಕ, ಕೂದಲಲ್ಲಿ ತೊಟ್ಟಿಕ್ಕುವ ಮೂಲಕ ಅಸಮಾಧಾನಕ್ಕೆ ಕಾರಣವಾಗುತ್ತದೆ. ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?
ಆದರೆ ಬೆವರು ಹೊರಹರಿಯುವುದು ಆರೋಗ್ಯಕರವಾಗಿದ್ದು ಸೌಂದರ್ಯವನ್ನು ವೃದ್ಧಿಸಲು ನೆರವಾಗುತ್ತದೆ. ಚರ್ಮದ ಸೌಂದರ್ಯ ಮತ್ತು ಕಾಂತಿಯನ್ನು ಉಳಿಸಿಕೊಳ್ಳಲು ಬೆವರುವುದು ಅತ್ಯಗತ್ಯವಾಗಿದೆ. ಇದು ಅತ್ಯಂತ ಸುಲಭವಾದ ಮತ್ತು ಅಗ್ಗವಾದ ಆರೈಕೆಯೂ ಹೌದು. ಅಚ್ಚರಿ ಎಂದರೆ ಈ ಬೆವರಿನ ಮಹತ್ವವನ್ನು ತಿಳಿದ ಸೌಂದರ್ಯ ಸಂಸ್ಥೆಗಳು ಬೆವರಲೆಂದೇ ವಿವಿಧ ಚಿಕಿತ್ಸೆಗಳನ್ನು ಪ್ರಸ್ತುತಪಡಿಸುತ್ತಿವೆ!
ಮುಖದ ಕಪ್ಪುಚುಕ್ಕೆಗಳನ್ನು ನಿವಾರಿಸಲು ಹಬೆಯಲ್ಲಿ ಮುಖವನ್ನು ಒಡ್ಡುವ ಚಿಕಿತ್ಸೆಯೂ ವಾಸ್ತವವಾಗಿ ಒಳಗಿನಿಂದ ಬೆವರು ಕಿತ್ತುಕೊಂಡು ಬರಲಿ ಎಂದೇ ಮಾಡಲಾಗುತ್ತದೆ. ಬೆವರು ಏಕೆ ಒಳ್ಳೆಯದು ಎಂಬುದನ್ನು ತಿಳಿಯಲು ಈ ಕೆಳಗಿನ ಸ್ಲೈಡ್‌ಗಳನ್ನು ನೋಡಿ.

ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ
ನಮ್ಮ ಚರ್ಮದಲ್ಲಿ ಲಕ್ಷಾಂತರ ಸೂಕ್ಷ್ಮರಂಧ್ರಗಳಿವೆ. ಇದರಲ್ಲಿ ಗಾಳಿಯಲ್ಲಿದ್ದ ಧೂಳು, ಪರಾಗ ಮತ್ತಿತರ ಸೂಕ್ಷ್ಮಕಣಗಳು ತುಂಬಿಕೊಳ್ಳುತ್ತಿರುತ್ತವೆ. ಬೆವರಿನ ಮೂಲಕ ಈ ರಂಧ್ರಗಳು ಒಳಗಿನಿಂದ ತೆರೆಯಲ್ಪಟ್ಟು ಬೆವರು ಹೊರಹರಿಯುವ ಮೂಲಕ ತಮ್ಮೊಂದಿಗೆ ಈ ಕಣಗಳನ್ನು ದೇಹದಿಂದ ಹೊರಹಾಕುತ್ತವೆ.

ಚರ್ಮ ಒಣಗುವುದರಿಂದ ರಕ್ಷಿಸುತ್ತದೆ
ಚರ್ಮದ ಆರೈಕೆಗೆ ನೀರಿನ ಪಸೆ ಅಥವಾ ಆರ್ದತೆ ಅತ್ಯಗತ್ಯವಾಗಿದೆ. ಬೆವರಿನ ಮೂಲಕ ಈ ಅಗತ್ಯತೆ ಪೂರ್ಣವಾಗುತ್ತದೆ. ಸತತವಾಗಿ ನೀರಿನ ಪೂರೈಕೆಯಾಗಿರುವ ಚರ್ಮ ತನ್ನ ಸೆಳೆತವನ್ನು ಬಹಳ ವರ್ಷಗಳವರೆಗೆ ಉಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಬಹಳ ವರ್ಷಗಳವರೆಗೆ ಚರ್ಮ ತನ್ನ ಸಹಜ ಕಾಂತಿ ಮತ್ತು ಸೆಳೆತವನ್ನು ಉಳಿಸಿಕೊಳ್ಳುವುದರಿಂದ ನೆರಿಗೆಗಳಿಂದ ಮುಕ್ತವಾಗಿರುತ್ತದೆ. ಅಲ್ಲದೇ ಮೃದುವಾಗಿಯೂ ಕೋಮಲವಾಗಿಯೂ ಇರುತ್ತದೆ.

ಮೊಡವೆಗಳಿಂದ ರಕ್ಷಿಸುತ್ತದೆ
ಮೊಡವೆಗಳಿಗೆ ಪ್ರಮುಖ ಕಾರಣ ಚರ್ಮದ ರಂಧ್ರಗಳು ಕಿರಿದಾಗಿದ್ದು ಚರ್ಮದೊಳಗೆ ಅಲ್ಲಲ್ಲಿ ಸಂಗ್ರಹವಾಗುವ ಕೀವು ಅಥವಾ ಚರ್ಮದೊಳಗಣ ಸ್ರಾವ ಹೊರಬರಲು ಸಾಧ್ಯವಾಗದೇ ಗಟ್ಟಿಯಾಗುತ್ತಾ ಹೋಗಿ ಮೇಲಿನ ಪದರವನ್ನು ಒತ್ತುವುದು. ಹೀಗೆ ಒಳಗಿನಿಂದ ಒತ್ತಿರುವ ಚರ್ಮ ಹೊರಗಿನಿಂದ ಮೊಡವೆಯ ರೂಪ ಪಡೆದಿರುತ್ತದೆ. ಬೆವರಿನಿಂದ ಗಟ್ಟಿಯಾಗಿದ್ದ ಈ ಕೀವು ಕರಗಿ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ. ಆದ್ದರಿಂದ ಮೊಡವೆಗಳ ಆರೈಕೆಗೆ ಬೆವರುವುದು ಅಗತ್ಯವಾಗಿದೆ.

ಒಣಚರ್ಮವನ್ನು ನಿವಾರಿಸುತ್ತದೆ
ಚರ್ಮದ ಹೊರಪದರ ತೆಳುವಾಗಿದ್ದು ಕಾಲಕಾಲಕ್ಕೆ ಒಣಗುತ್ತಾ ಒಣಗಿದ ಜೀವಕೋಶಗಳು ಉದುರುತ್ತಾ ಇರುತ್ತವೆ. ಇದು ಹೊಸ ಜೀವಕೋಶಗಳ ಹುಟ್ಟಿಗೆ ಕಾರಣವಾಗುತ್ತದೆ. ಒಂದು ವೇಳೆ ಈ ಒಣಗಿದ ಚರ್ಮ ಉದುರದೇ ಇದ್ದರೆ ಚರ್ಮಕ್ಕೆ ಅಂಟಿಕೊಂಡು ಪದರವಾಗಿರುತ್ತದೆ. ಇದು ತುರಿಕೆ ಮೊದಲಾದ ತೊಂದರೆಗಳಿಗೆ ಕಾರಣವಾಗುತ್ತದೆ. (ತಲೆಯ ಮೇಲಿನ ಚರ್ಮ ಉದುರಿ ತಲೆಹೊಟ್ಟಾಗುತ್ತದೆ). ಬೆವರಿನ ಮೂಲಕ ಈ ಪದರ ಸುಲಭವಾಗಿ ಕಳಚಿಕೊಳ್ಳುತ್ತದೆ. ಅಲ್ಲದೇ ಬೆವರಿನಲ್ಲಿ ಯೂರಿಯಾ ಮತ್ತು ಯೂರಿಕ್ ಆಮ್ಲಗಳೂ ಇದ್ದು ಚರ್ಮ ಒಣಗುವುದನ್ನು ಮತ್ತು ಡರ್ಮಿಟೈಟಿಸ್ ಎಂಬ ಚರ್ಮರೋಗ ಬರುವುದನ್ನು ತಪ್ಪಿಸುತ್ತದೆ.



Click it and Unblock the Notifications