Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಯಾ ಪೈಸೆ ಖರ್ಚಿಲ್ಲದೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!
ಕಲೆಗಳು ಮುಖದ ಸೌಂದರ್ಯವನ್ನೇ ಕಳೆಗುಂದಿಸುವುದರಿಂದ ಹೆಚ್ಚಿನ ತರುಣ ತರುಣಿಯರು ಮಾನಸಿಕವಾಗಿ ಕುಗ್ಗುತ್ತಾರೆ. ಈ ಕಲೆಗಳಿಂದ ಮುಕ್ತರಾಗಲು ಹಲವು ವಿಧಾನಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ದುಬಾರಿ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಹಣ ಸುರಿಯುತ್ತಾರೆ. ಆದರೂ ಪ್ರತಿಬಾರಿ ಉತ್ತಮ ಪರಿಣಾಮ ಪಡೆಯಲು ವಿಫಲರಾಗುತ್ತಾರೆ. ಆದರೆ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಚಿಕಿತ್ಸೆಗಳಿಂದ ಹೆಚ್ಚಿನ ಖರ್ಚಿಲ್ಲದೇ ಉತ್ತಮ ಪರಿಣಾಮ ಪಡೆಯಬಹುದು.
ತ್ವಚೆಯ ಮೇಲೆ ಕಂಡುಬರುವ ಯಾವುದೇ ರೀತಿಯ ಕಲೆಗಳಾಗಲಿ ಅದನ್ನು ನೈಸರ್ಗಿಕ ಮದ್ದಿನ ಮೂಲಕ ಸ್ವಲ್ಪ ಮಾಸುವಂತೆ ಅಥವಾ ಸಂಪೂರ್ಣವಾಗಿ ಹೋಗಲಾಡಿಸುವಂತೆ ಮಾಡಬಹುದು. ನಿಮಗೆ ಕಲೆಗಳಾಗಿ ಅದು ಕಡಿಮೆ ಆಗಬಹುದು ಎಂಬ ಸೂಚನೆ ಇಲ್ಲದಿದ್ದಲ್ಲಿ ತಕ್ಷಣ ವೈದ್ಯರು ಅಥವಾ ಚರ್ಮ ತಜ್ಞರನ್ನು ಭೇಟಿ ನೀಡಿ ಸಲಹೆ ಪಡೆಯಿರಿ. ತ್ವಚೆಯ ಕಾಂತಿ, ಕೋಮಲತೆಗಾಗಿ- ಕೊಬ್ಬರಿ ಎಣ್ಣೆ

ಮೂಲಂಗಿ ಬೀಜ
ಮೂಲಂಗಿ ಬೀಜಗಳನ್ನು ನುಣ್ಣಗೆ ಪುಡಿಮಾಡಿ ನೀರಿನೊಂದಿಗೆ ಮಿಶ್ರಣ ಮಾಡಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ತೆಳುವಾಗಿ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು. ದಿನದ ಸಮಯದಲ್ಲಿ ದಪ್ಪನಾದ ಮಿಶ್ರಣವನ್ನು ಇಪ್ಪತ್ತು ನಿಮಿಷಗಳವರೆಗೆ ದಿನಕ್ಕೆರಡು ಬಾರಿ ಹಚ್ಚಿಕೊಳ್ಳಬೇಕು.
ಆಲುಗಡ್ಡೆ
ಸೀಬೆಕಾಯಿಯ ಎಲೆ
ಸೀಬೆಕಾಯಿಯ ಕೆಲವು ಎಲೆಗಳನ್ನು ತೆಗೆದುಕೊಳ್ಳಿ.ಎಟೊಪಿಕ್ ಡರ್ಮಟೈಟಿಸ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸುವುದಾದರೆ ಒಣಗಿದ ಎಲೆಗಳನ್ನು ಬಳಸಿ. ಇದನ್ನು ಹುಡಿ ಮಾಡಿ ಬಿಸಿ ನೀರಿನ ಒಂದು ಪಾತ್ರೆಗೆ ಹಾಕಿ. ನೀರನ್ನು ಸರಿಯಾಗಿ ಕುದಿಸಿ ಮತ್ತು ನೀರು ಕಂದು ಬಣ್ಣಕ್ಕೆ ತಿರುಗುವ ತನಕ ಅದು ಕುದಿಯುತ್ತಾ ಇರಲಿ.
ಇದನ್ನು ತಂಪಾಗಲು ಬಿಡಿ ಮತ್ತು ಹತ್ತಿಯ ಉಂಡೆ ಮಾಡಿ ಅದನ್ನು ಈ ನೀರಿನಲ್ಲಿ ಮುಳುಗಿಸಿ ನಿಮ್ಮ ಮುಖ ಅಥವಾ ಯಾವ ಭಾಗಕ್ಕೆ ಚಿಕಿತ್ಸೆ ನೀಡಲು ಬಯಸುತ್ತೀರೋ ಅಲ್ಲಿಗೆ ಹಚ್ಚಿ. ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಹಾಗೆ ಇರಲಿ. ಇದರ ಬಳಿಕ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡುವುದರಿಂದ ಫಲಿತಾಂಶ ಪಡೆಯಬಹುದು.
ನುಗ್ಗೆ ಎಲೆಗಳು
ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.
ಆಲಿವ್ ಎಣ್ಣೆ
ಕಲೆ ಇರುವ ಜಾಗದಲ್ಲಿ ಅಪ್ಪಟ ಆಲಿವ್ ಎಣ್ಣೆಯನ್ನು ನಯವಾಗಿ ತಿಕ್ಕಿ ಹದವಾದ ನೀರಾವಿಗೆ ಚರ್ಮವನ್ನು ಒಡ್ಡಿಕೊಳ್ಳಬೇಕು. ಇದರಿಂದಾಗಿ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಆಲಿವ್ ಎಣ್ಣೆ ಗಾಢವಾಗಿದ್ದ ಚರ್ಮದ ಮೆಲನಿನ್ ವರ್ಣದ್ರವ್ಯವನ್ನು ಕಡಿಮೆಗೊಳಿಸಿ ಕಲೆಯನ್ನು ಕಡಿಮೆ ಮಾಡುತ್ತದೆ.
ಹರ್ಬಲ್ ಟೀ ಕುಡಿಯಿರಿ
ಇಂದು ಹರ್ಬಲ್ ಟೀ ಎಂದು ವಿವಿಧ ಗಿಡಮೂಲಿಕೆಗಳನ್ನು ಟೀ ಪುಡಿಯಲ್ಲಿ ಸೇರಿಸಿರುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ. ಹಾಲಿಲ್ಲದ ಈ ಟೀ ಚರ್ಮಕ್ಕೆ ಉತ್ತಮವಾಗಿದೆ. ರುಚಿಗಾಗಿ ಕೊಂಚ ಲಿಂಬೆ ಅಥವಾ ಶುಂಠಿಯನ್ನು ಸಹಾ ಸೇರಿಸಬಹುದು. ಇದರ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲದೇ ನೀರಿನಂಶವನ್ನು ಚರ್ಮದ ಜೀವಕೋಶಗಳು ಹೀರಿಕೊಳ್ಳಲು ಸಹಕರಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುವ ಮೂಲಕ ಸಹಜ ಕಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications



