Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ತ್ವಚೆಯ ಅಂದ ಕೆಡಿಸುವ ನೆರಿಗೆಗಳಿಗೆ ಮನೆಮದ್ದೇ ಸರಿ
ಚಿರತಾರುಣ್ಯಕ್ಕಾಗಿ ಏನು ಮಾಡುತ್ತಾರೆ ಎಂಬುದನ್ನು ಇತಿಹಾಸದಲ್ಲಿ ನೋಡಬಹುದು. ನಡುವಯಸ್ಸು ದಾಟುತ್ತಿದ್ದಂತೆ ಕಾಣಿಸಿಕೊಳ್ಳುವ ಚರ್ಮದ ನೆರಿಗೆಗಳು ವೃದ್ಧಾಪ್ಯ ಸಮೀಪಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಆದರೆ ಈ ವಯಸ್ಸಿಗೂ ಮೊದಲೇ ಆರೈಕೆಯ ಕೊರತೆಯಿಂದಾಗಿ ಚರ್ಮ ತನ್ನ ಸಹಜವಾದ ಕಾಂತಿ ಮತ್ತು ಸೆಳೆತವನ್ನು ಕಳೆದುಕೊಂಡರೂ ನೆರಿಗೆಗಳು ಕಾಣತೊಡಗುತ್ತವೆ.
ಇದು ನಿಮ್ಮ ವಯಸ್ಸನ್ನು ಇದ್ದುದಕ್ಕಿಂತ ಹತ್ತು ವರ್ಷ ಹೆಚ್ಚಿಸುತ್ತದೆ. ಯಾರಿಗೂ ಬೇಡವಾದ ಈ ಮೆಚ್ಚುಗೆಯನ್ನು ಪಡೆಯದಿರಲು ಇಂದು ಹಲವು ಸೌಂದರ್ಯ ಪ್ರಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಈ ಪ್ರಸಾಧನಗಳು ಅತಿ ದುಬಾರಿಯಾಗಿಯೂ ಸುಲಭವಾಗಿ ಲಭ್ಯವಿಲ್ಲದ್ದೂ ಆಗಿರುತ್ತವೆ. ಅಲ್ಲದೇ ಯಾವುದೇ ಪ್ರಸಾಧನ ನಿಮ್ಮ ಚರ್ಮಕ್ಕೆ ಅಲರ್ಜಿಯುಂಟುಮಾಡುವುದಿಲ್ಲ ಎಂಬುದನ್ನು ದೇಹದ ಬೇರೆ ಭಾಗಕ್ಕೆ ಮೊದಲು ಹಚ್ಚಿ ಖಚಿತಪಡಿಸಿಕೊಳ್ಳುವುದು ಅಗತ್ಯ.

ಒಂದು ವೇಳೆ ಅಲರ್ಜಿಕಾರಕ ಎಂದು ಗೊತ್ತಾದರೆ ಇದನ್ನು ಮರಳಿಸಲು ಸಾಧ್ಯವಿಲ್ಲ, ಅಲ್ಲದೇ ತೆರೆದಿರುವ ಈ ಡಬ್ಬಿಯನ್ನು ಅಂಗಡಿಯವರು ವಾಪಸ್ ತೆಗೆದುಕೊಳ್ಳುವುದೂ ಇಲ್ಲ. ಅಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಯಿತು. ಬದಲಿಗೆ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳಿಂದಲೇ ಈ ಮುಖಲೇಪವನ್ನು ತಯಾರಿಸಿಕೊಳ್ಳಬಹುದು. ಇದರಿಂದ ನಿಮ್ಮ ಮುಖದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಆರೈಕೆ ದೊರೆತು ಸಹಜ ಕಾಂತಿ ಮತ್ತು ಸೆಳೆತವನ್ನು ಹಿಂದೆ ಪಡೆಯುತ್ತದೆ. ಬನ್ನಿ ಅಂತಹ ತ್ವಚೆಯ ಲೇಪನ ಯಾವುದು ಎಂಬುದನ್ನು ನೋಡೋಣ..
ಆಲಿವ್ ಎಣ್ಣೆ
ವಿಟಮಿನ್ ಸಿ:(ಲಿಂಬೆ ಅಥವಾ ಕಿತ್ತಳೆಯ ರಸ)
ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದ ಇತರ ಭಾಗಗಳೊಡನೆ ಚರ್ಮವೂ ತನ್ನ ಸಹಜ ಕಾಂತಿಯನ್ನು ಪಡೆದುಕೊಳ್ಳುತ್ತದೆ. ಮುಖದ ಚರ್ಮದ ನೆರಿಗೆಗೆ ಲಿಂಬೆರಸವೂ ಉತ್ತಮ ಪರಿಣಾಮ ಬೀರಬಲ್ಲುದು. ಇದಕ್ಕಾಗಿ ಲಿಂಬೆಹಣ್ಣಿನ ರಸದ ಕೆಲವು ಹನಿಗಳನ್ನು ಮುಖದ ಮೇಲೆ ಸವರಿ. (ಕಣ್ಣುಗಳಿಗೆ ತಾಕದಂತೆ ಅತ್ಯಂತ ಹೆಚ್ಚಿನ ಎಚ್ಚರಿಕೆ ವಹಿಸಬೇಕು) ಲಿಂಬೆರಸದಲ್ಲಿ ಅದ್ದಿದ ಹತ್ತಿಯ ಉಂಡೆ ಬಳಸುವುದು ಉತ್ತಮ. ಐದರಿಂದ ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಬಳಸಬಾರದು).
ಈ ವಿಧಾನವನ್ನು ದಿನಕ್ಕೊಂದು ಸಲ ಅನುಸರಿಸಬಹುದು. ನಿಮ್ಮ ಚರ್ಮ ದೇಹದ ಒಳಗಿನಿಂದಲೂ, ಹೊರಗಿನಿಂದಲೂ ಪೋಷಣೆ ಪಡೆಯುವುದರಿಂದ ಶೀಘ್ರವೇ ನೆರಿಗೆಗಳಿಂದ ಮುಕ್ತವಾಗುತ್ತದೆ. ಈ ವಿಧಾನ ಎಣ್ಣೆಚರ್ಮದವರಿಗೆ ಸೂಕ್ತ. ಒಣಚರ್ಮದವರು ಬಳಸುವುದು ತರವಲ್ಲ
ಅಲೋವೇರಾ
ತ್ವಚೆಯ ಹೊಳಪನ್ನು ವೃದ್ಧಿಸುವಲ್ಲಿ ಅಲೋವೇರಾ ಪ್ರಮುಖ ಪಾತ್ರವಹಿಸುತ್ತದೆ. ನೀವು ಅಲೋವೇರಾವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿರುವಂತೆ ತ್ವಚೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ನಿಮಗೆ ಗಮನಿಸಬಹುದು. ಮುಖದಲ್ಲಿನ ವಿಷಯುಕ್ತ ಅಂಶಗಳನ್ನು ಇದರಲ್ಲಿನ ಲೋಳೆ ರಸ ಹೊರಹಾಕಿ ಮುಖವನ್ನು ಶುಭ್ರಗೊಳಿಸುತ್ತದೆ. ಅಲೋವೇರಾ ಬಳಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿ
ಜೇನು



Click it and Unblock the Notifications


