Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಒಣ ತ್ವಚೆಯ ಸೌಂದರ್ಯಕ್ಕಾಗಿ 10 ಸೂಕ್ತ ಮನೆ ಮದ್ದುಗಳು
ನಾವು ಹೊಂದಿರುವ ಅಸಂಖ್ಯಾತ ತ್ವಚೆಯ ಬಗೆಗಳಲ್ಲಿ ಒಣ ತ್ವಚೆಯು ಅತ್ಯಂತ ಸಮಸ್ಯೆಯನ್ನೊಡ್ಡುವ ಬಗೆಯದಾಗಿರುತ್ತದೆ. ಇದಕ್ಕೆ ನಿರಂತರವಾಗಿ ಪ್ರತಿನಿತ್ಯ ಮೊಯಿಶ್ಚರೈಸಿಂಗ್ ಒದಗಿಸುತ್ತಿರಬೇಕಾಗುತ್ತದೆ. ಈ ಮೊಯಿಶ್ಚರೈಸರ್ ಆದಷ್ಟು ಜಿಡ್ಡಿನಿಂದ ಕೂಡಿರಬೇಕಾಗುತ್ತದೆ, ಇಲ್ಲವಾದಲ್ಲಿ ತ್ವಚೆಯು ಬೇಗ ಒಣಗಿ ಹೋಗುವ ಸಾಧ್ಯತೆ ಇರುತ್ತದೆ. ಈ ತ್ವಚೆಯ ಮೇಲೆ ಬಳಸುವ ಸೋಪ್‍ಗಳ ಮೇಲೆ ಸಹ ನಿಗಾವಹಿಸಬೇಕು,
ಏಕೆಂದರೆ ಸೋಪ್‍ಗಳು ಸಹ ತ್ವಚೆಯನ್ನು ಒಣಗಿಸಿ ಬಿಡುತ್ತವೆ ಮತ್ತು ಇದಕ್ಕಾಗಿ ಹೈಡ್ರೇಟಿಂಗ್ ಫೇಸ್ ವಾಶ್‍ಗಳೇ ಏಕ ಮಾತ್ರ ಆಯ್ಕೆಯಾಗಿರುತ್ತವೆ. ಒಣ ತ್ವಚೆಗಳು ಚಳಿಗಾಲದಲ್ಲಿ ವಿಶೇಷವಾಗಿ ಸಮಸ್ಯೆಗೆ ಗುರಿಯಾಗುತ್ತವೆ, ಏಕೆಂದರೆ ಆಗ ಇದು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ತ್ವಚೆಯು ಒಣಗಿದಂತೆಲ್ಲ, ತ್ವಚೆಯ ಮೇಲಿನ ನಿರ್ಜೀವ ಪದರಗಳು ಒಡೆಯುವ ಅಥವಾ ಸುಲಿದು ಹೋಗುವ ಸಮಸ್ಯೆಯುಂಟಾಗಬಹುದು.

ಒಣ ತ್ವಚೆಗೆ ಬಳಸುವ ಉತ್ಪನ್ನಗಳಲ್ಲಿ ಬಹುತೇಕವು ತುಂಬಾ ದುಬಾರಿಯಾಗಿರುತ್ತವೆ ಏಕೆಂದರೆ ಇವುಗಳು ಫೊರ್ಟಿಫೈಯಿಂಗ್ ಆಯಿಲ್‍ಗಳ ಜೊತೆಯಲ್ಲಿ ಬರುತ್ತವೆ. ಅದಕ್ಕಾಗಿ ಮನೆಯಲ್ಲಿಯೇ ತಯಾರಿಸಿದ ಮನೆ ಮದ್ದುಗಲು ಇದಕ್ಕೆ ಒಳ್ಳೆಯದು. ಇದು ಕೇವಲ ಹಣಕಾಸಿನ ವಿಚಾರದಲ್ಲಷ್ಟೇ ಅಲ್ಲ, ಲಭ್ಯತೆ, ದಕ್ಷತೆ ಮತ್ತು ಪುನರ್ಬಳಕೆಯ ದೃಷ್ಟಿಯಿಂದ ಸಹ ಒಳ್ಳೆಯದು. ಈ ಅಂಕಣದಲ್ಲಿ ಮನೆಯಲ್ಲಿಯೆ ಒಣ ತ್ವಚೆಯನ್ನು ಸುಧಾರಿಸುವ 10 ಮನೆ ಮದ್ದುಗಳ ಕುರಿತಾಗಿ ತಿಳಿಯೋಣ.
ಕ್ಲೀನ್ಸಿಂಗ್ ಆಯಿಲ್
ಕ್ಲೀನಿಂಗ್ ಅಂಶಗಳನ್ನು ಒಳಗೊಂಡಿರುವ ಎಣ್ಣೆಯು ತ್ವಚೆಗೆ ತುಂಬಾ ಪ್ರಯೋಜನಕಾರಿ.ಇದನ್ನು ಮೂರು ಭಾಗದಷ್ಟು ಆಲಿವ್ ಎಣ್ಣೆ, ಒಂದು ಭಾಗದಷ್ಟು ಹರಳೆಣ್ಣೆಯೊಂದಿಗೆ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿ, ಒಡೆದ ಮತ್ತು ಒಣಗಿದ ತ್ವಚೆಯು ಸರಿ ಹೋಗಲು ಬಿಡಿ. ಇದನ್ನು ಬಳಸುವ ಮೊದಲು ಸ್ವಲ್ಪ ಬೆಚ್ಚಗೆ ಮಾಡಿದರೆ ಮತ್ತೂ ಒಳ್ಳೆಯದು. ಇದನ್ನು ಲೇಪಿಸಿಕೊಂಡ ನಂತರ ಇದನ್ನು ಟವೆಲ್‍ನಿಂದ ಒರೆಸಿ ಮತ್ತು ಬೆಚ್ಚಗೆ ಆಗಲು ಬಿಡಿ. ಆನಂತರ ಇದನ್ನು ಹಾಗೆಯೇ ಬಿಡಿ, ತ್ವಚೆಯು ಎಣ್ಣೆಯನ್ನೆಲ್ಲ ಹೀರಿಕೊಳ್ಳಲು. ಇದು ನಿಮ್ಮ ತ್ವಚೆಗೆ ಮೃದುತ್ವವನ್ನು ನೀಡುತ್ತದೆ. ಹರಳೆಣ್ಣೆಯು ತ್ವಚೆಯ ಮೂರೂ ಪದರಗಳನ್ನು ತಲುಪುತ್ತದೆ. ಈ ರೀತಿ ಇನ್ಯಾವ ಎಣ್ಣೆಯು ಸಹ ತಲುಪುವುದಿಲ್ಲ.
ಜೇನಿನ ಪ್ಯಾಕ್
ಜೇನು ಒಣ ತ್ವಚೆಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ. ಜೇನು ನಿಮ್ಮ ತ್ವಚೆಯಲ್ಲಿನ ಸುಕ್ಕುಗಳನ್ನು ನಿವಾರಿಸುತ್ತದೆ ಮತ್ತು ಇದನ್ನು ರೇಷ್ಮೆಯಂತೆ ಮೃದುಗೊಳಿಸುತ್ತದೆ. ಜೇನು ತುಪ್ಪ ಮತ್ತು ಕಿತ್ತಳೆ ಹಣ್ಣಿನ ರಸವನ್ನು ತ್ವಚೆಯ ಮೇಲೆ ಉಜ್ಜಿ 10 ನಿಮಿಷ ಬಿಡುವುದರಿಂದ ತ್ವಚೆಗೆ ಒಳ್ಳೆಯ ಮೃದುತ್ವ ದೊರೆಯುತ್ತದೆ. ನಂತರ ಇದನ್ನು ನೀರಿನಿಂದ ತೊಳೆಯಬೇಕು.
ಎಗ್ ಪ್ಯಾಕ್
ಮೊಟ್ಟೆಗಳು ಪ್ರೋಟಿನ್‍ನ ಸಮೃದ್ಧ ಮೂಲಗಳು ಮತ್ತು ಆರೋಗ್ಯಕರ ತ್ವಚೆಗಾಗಿ ಮೊಟ್ಟೆಯ ಪ್ಯಾಕ್ ಅತ್ಯಾವಶ್ಯಕ. ಇದು ತ್ವಚೆಗೆ ಅತ್ಯುತ್ತಮವಾದ ಮನೆಮದ್ದಾಗಿದೆ. ಇದನ್ನು ತಯಾರಿಸಲು ಮೊಟ್ಟೆಯ ಬಿಳಿ ಭಾಗ ಮತ್ತು ಹಳದಿ ಭಾಗವನ್ನು ಬೇರ್ಪಡಿಸಿ. ಅದಾದ ನಂತರ ಮೊಟ್ಟೆಯ ಲೋಳೆಯನ್ನು ತೆಗೆದುಕೊಂಡು, ಒಂದು ಚಮಚ ಕಿತ್ತಳೆ ಹಣ್ಣಿನ ರಸ, ಒಂದು ಟೀ ಸ್ಪೂನ್ ಹರಳೆಣ್ಣೆ, ಒಂದು ಟೀ ಸ್ಪೂನ್ ಆಲಿವ್ ಎಣ್ಣೆ, ಸ್ವಲ್ಪ ರೋಸ್ ವಾಟರ್, ಒಂದು ಸ್ಪೂನ್ ಜೇನು ತುಪ್ಪ ಮತ್ತು ಕೆಲವು ಹನಿಗಳಷ್ಟು ತಾಜಾ ಆಗಿ ಹಿಂಡಿದ ನಿಂಬೆರಸವನ್ನು ಬೆರೆಸಿ. ಈ ಮಿಶ್ರಣವನ್ನು ಸ್ನಾನಕ್ಕೆ ಮೊದಲು ಲೇಪಿಸಿ, ನಂತರ ತೊಳೆಯಿರಿ.
ಚಾಕೊಲೇಟ್ ಪ್ಯಾಕ್
ಚಾಕೊಲೇಟ್ ಒಂದು ಸಿಹಿ ಪದಾರ್ಥಕ್ಕಿಂತ ಮಿಗಿಲಾದ ವಸ್ತುವಾಗಿದೆ. ತ್ವಚೆಯ ಮೇಲೆ ಚಾಕೊಲೇಟನ್ನು ಲೇಪಿಸಿದರೆ, ತ್ವಚೆಯನ್ನು ಮೃದುಗೊಳಿಸುವುದರ ಜೊತೆಗೆ, ಒಣ ತ್ವಚೆಯನ್ನು ಹೋಗಲಾಡಿಸಿ, ಕಾಂತಿಯನ್ನು ಸಹ ತಂದು ನೀಡುತ್ತದೆ. ಚಾಕೊಲೇಟ್ ಪ್ಯಾಕ್ ಮಡಲು ಐದು ಟೇಬಲ್ ಸ್ಪೂನ್‍ಗಳಷ್ಟು ಕೊಕೊ ಪೌಡರ್ , ಐದು ಟೇಬಲ್ ಸ್ಪೂನ್ ಜೇನು, ಎರಡು ಟೇಬಲ್ ಸ್ಪೂನ್ ಮೆಕ್ಕೆ ಜೋಳದ ಹಿಟ್ಟು ಮತ್ತು ಎರಡು ಟೇಬಲ್ ಚಮಚಗಳಷ್ಟು ಪೂರ್ತಿಯಾಗಿ ರುಬ್ಬಿದ ಅವೊಕ್ಯಾಡೊಗಳನ್ನು ತೆಗೆದುಕೊಳ್ಳಿ. ಈ ಪ್ಯಾಕನ್ನು ಒಣ ತ್ವಚೆಗೆ ಪ್ರತಿನಿತ್ಯ ಲೇಪಿಸಬಹುದು ಮತ್ತು ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬಹುದು.
ಮೊಡವೆ ಕಲೆಗಳ ನಿವಾರಣೆಗೆ ನೈಸರ್ಗಿಕ ಉಪಾಯಗಳು
ಕಡಲೆ ಹಿಟ್ಟಿನ ಪ್ಯಾಕ್
ಕಡಲೆ ಹಿಟ್ಟು ಒಣ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಹಾಗು ಸುಕ್ಕು ಮತ್ತು ಗೆರೆಗಳನ್ನು ನಿವಾರಿಸುತ್ತದೆ. ಈ ಪ್ಯಾಕನ್ನು ತಯಾರಿಸಲು ಎರಡು ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಒಂದು ಟೀ ಸ್ಪೂನ್ ಅರಿಶಿಣ, ಒಂದು ಟೀ ಚಮಚ ಜೇನು ತುಪ್ಪ ಮತ್ತು ಸ್ವಲ್ಪ ಹಾಲನ್ನು ತೆಗೆದುಕೊಳ್ಳಿ. ಇದರ ಜೊತೆಗೆ ಸ್ವಲ್ಪ ನಿಂಬೆ ರಸವನ್ನು ಸಹ ಇದಕ್ಕೆ ಬೆರೆಸಿ, ನಂತರ ಮುಖದ ಮೇಲೆ ಲೇಪಿಸಿ, ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.
ಮಾವಿನ ಹಣ್ಣಿನ ಪ್ಯಾಕ್
ಚೆನ್ನಾಗಿ ಹಣ್ಣಾದ ಮಾವಿನ ಹಣ್ಣನ್ನು ತೆಗೆದುಕೊಳ್ಳಿ, ಇದನ್ನು ಸಿಪ್ಪೆಯಿಂದ ಬೇರ್ಪಡಿಸಿ. ಈಗ ಹಣ್ಣಿನ ಪಲ್ಪ್ ಅನ್ನು ಮಿಕ್ಸಿಯಲ್ಲಿ ಹಾಕಿಕೊಂಡು ಚೆನ್ನಾಗಿ ರುಬ್ಬಿ. ಇದಕ್ಕೆ ಎರಡು ಟೇಬಲ್ ಸ್ಪೂನ್ ಜೇನು ತುಪ್ಪ ಮತ್ತು ಮೂರು ಟೀ ಸ್ಪೂನ್ ಆಲಿವ್ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೊಯಿಶ್ಚರೈಸ್ ಮಾಡಿ, ಕಾಂತಿಯನ್ನು ನೀಡುತ್ತದೆ.
ಮೊಟ್ಟೆ ಮತ್ತು ಆಯಿಲ್ ಮಾಸ್ಕ್
ಒಂದು ಮೊಟ್ಟೆಯನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಟೀ ಚಮಚ ಜೇನನ್ನು ಬೆರೆಸಿ. ಆನಂತರ ಸ್ವಲ್ಪ ರೋಸ್ ವಾಟರ್ ಮತ್ತು ಕೆಲವು ಹನಿಗಳಷ್ಟು ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣವು ಗಟ್ಟಿಯಾಗದಂತೆ ಎಚ್ಚರವಹಿಸಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಒಣಗಲು ಬಿಡಿ. ನಂತರ ಇದನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ, ಇದರ ನಂತರ ಕರ್ಡ್ ಪ್ಯಾಕ್ ಮಾಡಿಕೊಳ್ಳಿ.
ಬಾಳೆಹಣ್ಣಿನ ಮಾಸ್ಕ್
ಎರಡು ಬಾಳೆಹಣ್ಣನ್ನು ತೆಗೆದುಕೊಳ್ಳಿ, ಸಿಪ್ಪೆ ಸುಲಿದು ಅದನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ಒಂದು ಗಂಟೆ ಬಿಟ್ಟು ಬೆಚ್ಚನೆಯ ನೀರಿನಿಂದ ತೊಳೆಯಿರಿ.
ಅವೊಕ್ಯಾಡೊ ಮಾಸ್ಕ್
ಒಂದು ಅವೊಕ್ಯಾಡೊದಿಂದ ರಸವನ್ನು ಹಿಂಡಿಕೊಳ್ಳಿ ಮತ್ತು ಅದಕ್ಕೆ ಮೊಸರನ್ನು ಹಾಕಿ. ನಂತರ ಅದಕ್ಕೆ ಒಂದು ಟೀ ಚಮಚ ಜೇನು ತುಪ್ಪವನ್ನು ಬೆರೆಸಿ. ಇದನ್ನು ತ್ವಚೆಗೆ ಲೇಪಿಸಿ ಮತ್ತು ಸ್ವಲ್ಪ ಸಮಯದ ನಂತರ ತೊಳೆಯಿರಿ.
ಮೊಸರಿನ ಪ್ಯಾಕ್
ಎರಡು ಚಮಚ ಮೊಸರನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿ ಹಾಗು ಒಂದು ಗಂಟೆ ಬಿಟ್ಟು ನಂತರ ತೊಳೆಯಿರಿ.



Click it and Unblock the Notifications