Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೊಡವೆ ರಹಿತ ತ್ವಚೆಗೆ ಸರಳ ಮದ್ದು
ಬೇಸಿಗೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗಿರುತ್ತದೆ. ಮೊಡವೆ ಅನೇಕ ಕಾರಣಗಳಿಂದ ಬರುತ್ತದೆ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದಾಗ, ಕ್ರೀಮ್ ನಮ್ಮ ತ್ವಚೆಗೆ ಹೊಂದದಿದ್ದರೆ, ದೂಳು, ಆಹಾರ ಇವುಗಳಿಂದ ಮೊಡವೆ ಉಂಟಾಗುತ್ತದೆ.
ನಿಮ್ಮ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಿದೆಯಾ, ಅದು ಕೂಡ ಬೇಸಿಗೆ ಕಾಲದಲ್ಲಿ. ಇದು ಮಹಿಳೆಯರಿಗೆ ನಿರೀಕ್ಷಿತ. ಸಾಮಾನ್ಯವಾಗಿ ಅವರು ವೈದ್ಯರಲ್ಲಿಗೆ ಚಿಕಿತ್ಸೆಗೆ ಹೋಗುತ್ತಾರೆ ಮತ್ತು ಮದ್ದಿಗೆ ಲೆಕ್ಕವಿಲ್ಲದಷ್ಟು ಹಣ ವ್ಯಯಿಸುತ್ತಾರೆ. ಮೊಡವೆ ಮುಕ್ತ ತ್ವಚೆಗೆ ನೀವು ಕೆಲವೊಂದು ಸರಳ ಟಿಪ್ಸ್ ಗಳನ್ನು ಪಾಲಿಸಿದರೆ ನಿಮ್ಮ ಹಣ ಉಳಿಸಬಹುದು. ಮೊಡವೆ ಸಮಸ್ಯೆಯನ್ನು ಮನೆಯಲ್ಲೇ ನಿವಾರಿಸಲು ಇಲ್ಲಿ ಕೆಲವೊಂದು ಉಪಯುಕ್ತ ವಿಧಾನಗಳಿವೆ.
ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಿ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ಪರಿಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅವುಗಳು ನಿಮ್ಮ ತ್ವಚೆಯ ಮೊಡವೆ ಸಮಸ್ಯೆಯನ್ನು ನಿವಾರಿಸಿ ಉತ್ತಮ ಪರಿಹಾರವನ್ನು ನಿಮಗೆ ನೀಡುತ್ತವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

ಆಗಾಗ ಮುಖ ತೊಳೆಯಿರಿ:
ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ತೈಲ ಗ್ರಂಥಿಗಳು ಹೆಚ್ಚು ಕೆಲಸ ಮಾಡುವ ಪರಿಣಾಮ ನಿಮ್ಮ ಮುಖದಲ್ಲಿ ಎಣ್ಣೆಯಾಂಶ ಕಂಡುಬರಬಹುದು. ಇದು ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಮೊದಲ ಕಾರಣ. ಯಾವುದಾದರೂ ಒಳ್ಳೆಯ ಕ್ಲೀನ್ಸರ್ ನಿಂದ ಮುಖವನ್ನು ದಿನದಲ್ಲಿ ಎರಡು ಸಲವಾದರೂ ತೊಳೆಯಿರಿ. ಒಮ್ಮೆ ತೊಳೆದರೂ ಇದು ಕೆಲಸ ಮಾಡಬಹುದು. ದಿನದಲ್ಲಿ ಎಷ್ಟು ಸಲ ಮುಖ ತೊಳೆಯಬೇಕೆಂದು ನೀವು ನೋಡಲು ಪ್ರಯತ್ನಿಸಿ.
ಮೇಕಪ್ ತೆಗೆಯಿರಿ:
ಮೇಕಪ್ ಅನ್ನು ಮುಖದಿಂದ ಸರಿಯಾಗಿ ತೆಗೆಯದಿದ್ದರೆ ಮೊಡವೆ ತ್ವಚೆ ನಿಮ್ಮದಾಗುತ್ತದೆ. ನೀವು ಮಲಗುವ ಮುನ್ನ ಯಾವಾಗಲೂ ಮೇಕಪ್ ಅನ್ನು ತೆಗೆಯಿರಿ. ಸುಂದರವಾಗಿ ಕಾಣಿಸಿಕೊಳ್ಳಲು ಮಹಿಳೆಯರು ಮೇಕಪ್ ಮೊರೆ ಹೋಗುವುದು ಹೊಸತೇನಲ್ಲ. ಇದನ್ನು ಸರಿಯಾದ ರೀತಿ ನಿಭಾಯಿಸದಿದ್ದರೆ ಆಗ ಮೊಡವೆ ಉಂಟಾಗಬಹುದು. ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹೀಗೆ ಮಾಡದಿದ್ದರೆ ನೀವು ಉದ್ದೇಶಪೂರ್ವಕವಾಗಿ ಮುಖದಲ್ಲಿ ಮೊಡವೆಗಳನ್ನು ಆಹ್ವಾನಿಸುತ್ತಿದ್ದೀರಿ.
ಧೂಮಪಾನ ನಿಲ್ಲಿಸಿ:
ಮೊಡವೆಗಳಿಂದ ಮುಕ್ತಿ ನಿಮಗೆ ಸಿಗಬೇಕೆಂದರೆ ನೀವು ಧೂಮಪಾನವನ್ನು ತ್ಯಜಿಸಲೇಬೇಕು. ಧೂಮಪಾನ ಕೂಡ ಮೊಡವೆ ಸಮಸ್ಯೆಯನ್ನು ತಂದೊಡ್ಡುತ್ತವೆ.
ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ.
ನೈಸರ್ಗಿಕ ಫೇಶಿಯಲ್:
ರಾಸಾಯನಿಕ ಫೇಶಿಯಲ್‌ಗಳನ್ನು ಮುಖದ ಅಂದಕ್ಕಾಗಿ ಮಾಡಿಕೊಳ್ಳುವುದರಿಂದ ತಾಜಾ ತರಕಾರಿ ಹಾಗೂ ಹಣ್ಣುಗಳ ಫೇಸ್ ಪ್ಯಾಕ್ ,ಫೇಶಿಯಲ್ ನಿಮ್ಮದಾಗಿಸಿಕೊಳ್ಳಿ.
ತ್ವಚೆಯಲ್ಲಿ ಮೊಡವೆಗಳಿಲ್ಲದೆ ನೀವು ಜನರ ಮಧ್ಯೆ ತುಂಬಾ ಆತ್ಮವಿಶ್ವಾಸದಿಂದ ತಿರುಗಾಡಲು ಇದು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಸಲಹೆಗಳು. ಇಲ್ಲಿ ನೀಡಲಾಗಿರುವ ಕೆಲವೊಂದು ಟಿಪ್ಸ್‌ಗಳನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುತ್ತಾರೆ. ಯಾಕೆಂದರೆ ಅವರಿಗೆ ಇದರಿಂದ ಹೆಚ್ಚು ಪರಿಣಾಮವಾಗುವುದಿಲ್ಲವೆಂದು ಭಾವಿಸುತ್ತಾರೆ. ಹೀಗಿದ್ದರೆ ಅದು ತಪ್ಪು. ಈ ಟಿಪ್ಸ್ ಗಳನ್ನು ಪಾಲಿಸಿದರೆ ಬೇಸಿಗೆ ಕಾಲದಲ್ಲಿ ನೀವು ಮೊಡವೆ ಮುಕ್ತ ತ್ವಚೆ ಪಡೆಯಬಹುದು.



Click it and Unblock the Notifications
