Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು
ಮೊಡವೆ ಇರುವ ತ್ವಚೆ ನಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಇದರಿಂದ ಮುಕ್ತಿ ಪಡೆಯಲು ನಾವು ಹಲವಾರು ವೈದ್ಯರನ್ನು ಕಾಣುತ್ತೇವೆ, ಹಲವಾರು ಆರೈಕೆಗಳನ್ನು ಮಾಡುತ್ತೇವೆ. ಎಷ್ಟೇ ಪ್ರಯತ್ನಪಟ್ಟರೂ ಫಲ ಮಾತ್ರ ಶೂನ್ಯವಾಗಿರುತ್ತದೆ.
ಬೇಸಿಗೆಯಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗಿರುತ್ತದೆ. ಮೊಡವೆ ಅನೇಕ ಕಾರಣಗಳಿಂದ ಬರುತ್ತದೆ, ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದಾಗ, ಕ್ರೀಮ್ ನಮ್ಮ ತ್ವಚೆಗೆ ಹೊಂದದಿದ್ದರೆ, ದೂಳು, ಆಹಾರ ಇವುಗಳಿಂದ ಮೊಡವೆ ಉಂಟಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು
ಮೊಡವೆಯ ಸಮಸ್ಯೆಯನ್ನು ತಡೆಯಲು ನಾವು ದುಬಾರಿ ಕಾಸ್ಮೆಟಿಕ್ ಅಥವಾ ರಾಸಾಯನಿಕ ಚಿಕಿತ್ಸೆಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ ಇದು ಅನಿವಾರ್ಯವಲ್ಲ. ಮನೆಮದ್ದು ಕೂಡ ಮೊಡವೆಗೆ ಪರಿಹಾರ ಒದಗಿಸಬಲ್ಲದು. ನಿಮ್ಮ ತ್ವಚೆ ಕೂಡ ಉಸಿರಾಡುತ್ತದೆ ಮತ್ತು ಅದಕ್ಕೂ ಜೀವವಿದೆ.
ತ್ವಚೆಯನ್ನು ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಿ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ಪರಿಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅವುಗಳು ನಿಮ್ಮ ತ್ವಚೆಯ ಮೊಡವೆ ಸಮಸ್ಯೆಯನ್ನು ನಿವಾರಿಸಿ ಉತ್ತಮ ಪರಿಹಾರವನ್ನು ನಿಮಗೆ ನೀಡುತ್ತವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಕ್ಕು ರಹಿತ ಚರ್ಮಕ್ಕಾಗಿ ಸೆಲ್ಫಿಲ್ ಪ್ಲಾಸ್ಮಾ ಫೇಸ್‍ಲಿಫ್ಟ್

ನಿಮ್ಮ ಮೇಕಪ್ ಅನ್ನು ತೆಗೆಯಿರಿ:
ತಾವು ಅಂದವಾಗಿ ಕಾಣಬೇಕೆಂದು ಹೆಚ್ಚಿನ ಮಹಿಳೆಯರು ಮೇಕಪ್‌ನ ಮೊರೆ ಹೋಗುತ್ತಾರೆ. ಮೇಕಪ್ ಅನ್ನು ಮುಖದಿಂದ ಸರಿಯಾಗಿ ತೆಗೆಯದಿದ್ದರೆ ಮೊಡವೆ ತ್ವಚೆ ನಿಮ್ಮದಾಗುತ್ತದೆ. ನೀವು ಮಲಗುವ ಮುನ್ನ ಯಾವಾಗಲೂ ಮೇಕಪ್ ಅನ್ನು ತೆಗೆಯಿರಿ.

ದಯವಿಟ್ಟು ಧೂಮಪಾನ ತ್ಯಜಿಸಿ:
ಮೊಡವೆಗಳಿಂದ ಮುಕ್ತಿ ನಿಮಗೆ ಸಿಗಬೇಕೆಂದರೆ ನೀವು ಧೂಮಪಾನವನ್ನು ತ್ಯಜಿಸಲೇಬೇಕು. ಧೂಮಪಾನ ಕೂಡ ಮೊಡವೆ ಸಮಸ್ಯೆಯನ್ನು ತಂದೊಡ್ಡುತ್ತವೆ.

ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ:
ಆಗಾಗ್ಗೆ ಮುಖವನ್ನು ತೊಳೆದುಕೊಳ್ಳುವುದೂ ಕೂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಸ್ವಚ್ಛ ಎಣ್ಣೆ ಪಸೆ ಇಲ್ಲದ ಮುಖ ನೀವು ಪಡೆಯಬೇಕೆಂದರೆ ಮುಖದ ಸ್ವಚ್ಛತೆ ಅತೀ ಆವಶ್ಯಕ.

ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ.

ನೈಸರ್ಗಿಕ ಫೇಶಿಯಲ್:
ರಾಸಾಯನಿಕ ಫೇಶಿಯಲ್‌ಗಳನ್ನು ಮುಖದ ಅಂದಕ್ಕಾಗಿ ಮಾಡಿಕೊಳ್ಳುವುದರಿಂದ ತಾಜಾ ತರಕಾರಿ ಹಾಗೂ ಹಣ್ಣುಗಳ ಫೇಸ್ ಪ್ಯಾಕ್ ,ಫೇಶಿಯಲ್ ನಿಮ್ಮದಾಗಿಸಿಕೊಳ್ಳಿ.



Click it and Unblock the Notifications
